iPhoneನಲ್ಲಿ ಕಾಗ್ನಿಟಿವ್ ಆ್ಯಕ್ಸೆಸಬಿಲಿಟಿ ಫೀಚರ್ಗಳು
iPhone ನಿಮ್ಮ ಅಥವಾ ನೀವು ಕಾಳಜಿವಹಿಸುವವರ ಕಾಗ್ನಿಟಿವ್ ಅಗತ್ಯತೆಗಳಿಗೆ ಸರಿಹೊಂದುವಂತೆ ಬಿಲ್ಟ್-ಇನ್ ಆಯ್ಕೆಗಳೊಂದಿಗೆ ಬರುತ್ತದೆ.
iPhoneನಲ್ಲಿ ಆ್ಯಕ್ಸೆಸಬಿಲಿಟಿ ಫೀಚರ್ಗಳನ್ನು ಎಕ್ಸ್ಪ್ಲೋರ್ ಮಾಡಲು, ಸೆಟ್ಟಿಂಗ್ಸ್ > ಆ್ಯಕ್ಸೆಸಬಿಲಿಟಿ ಎಂಬಲ್ಲಿಗೆ ಹೋಗಿ.
ನೀವು ಕಾಳಜಿವಹಿಸುವ ಯಾರಿಗಾದರೂ iPhone ಅನ್ನು ಬದಲಾಯಿಸಿ
![]() iPhone ಅನ್ನು ಸರಳವಾಗಿರಿಸಿಕೊಳ್ಳಿ ನೀವು ಕಾಳಜಿ ವಹಿಸುವ ಯಾರಾದರೂ ಕಾಗ್ನಿಟಿವ್ ವೈಕಲ್ಯತೆಯನ್ನು ಹೊಂದಿದ್ದರೆ, ಸರಳೀಕೃತ ಇಂಟರ್ಫೇಸ್ನೊಂದಿಗೆ iPhone ಅನ್ನು ಸೆಟಪ್ ಮಾಡಿ. ಅವರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಕೋರ್ ಫೀಚರ್ಗಳನ್ನು ಆರಿಸಿ ಮತ್ತು ಕಸ್ಟಮೈಸ್ ಮಾಡಿ. | ![]() iPhone ಅನ್ನು ಒಂದು ಆ್ಯಪ್ಗೆ ಲಾಕ್ ಮಾಡಿ ನಿಮ್ಮ iPhone ಅನ್ನು ಬಳಸಲು ನೀವು ಮಗುವಿಗೆ ಅವಕಾಶ ನೀಡಿದಾಗ, ಅವರ ಆ್ಯಕ್ಸೆಸ್ ಅನ್ನು ಒಂದೇ ಆ್ಯಪ್ಗೆ ಸೀಮಿತಗೊಳಿಸಿ. iPhone ಅನ್ನು ಗೈಡೆಡ್ ಆ್ಯಕ್ಸೆಸ್ನೊಂದಿಗೆ ಒಂದು ಆ್ಯಪ್ಗೆ ಲಾಕ್ ಮಾಡಿ |
ನೀವು ಸ್ಕ್ರೀನ್ನಿಂದ ಸೆನ್ಸರಿ ಉತ್ತೇಜಕವನ್ನು ಸಹ ಕಡಿಮೆ ಮಾಡಬಹುದು—ಉದಾಹರಣೆಗೆ, ಫ್ಲ್ಯಾಷಿಂಗ್ ಅಥವಾ ಸ್ಟ್ರೋಬಿಂಗ್ ಲೈಟ್ಗಳನ್ನು ತೋರಿಸುವ ಕಂಟೆಂಟ್ನ ಡಿಸ್ಪ್ಲೇಯನ್ನು ಸ್ವಯಂಚಾಲಿತವಾಗಿ ಡಿಮ್ ಮಾಡಬಹುದು ಮತ್ತು GIF ರೀತಿಯ ಕ್ಷಿಪ್ರ ಆ್ಯನಿಮೇಟೆಡ್ ಚಿತ್ರಗಳ ಡಿಸ್ಪ್ಲೇಯನ್ನು ವಿರಾಮಗೊಳಿಸಬಹುದು. ಸ್ಕ್ರೀನ್ ಮೇಲಿನ ಚಲನೆಯನ್ನು ನಿಲ್ಲಿಸಿ ಅಥವಾ ಕಡಿಮೆ ಮಾಡಿ ಎಂಬುದನ್ನು ನೋಡಿ.
ಫೋಕಸ್, ಡಿಕ್ಟೇಷನ್, ಮಾತಿನಲ್ಲಿ ಹೇಳುವ ಕಂಟೆಂಟ್ ಮತ್ತು ಲೈವ್ ಕ್ಯಾಪ್ಶನ್ಗಳು ರೀತಿಯ ಫೀಚರ್ಗಳ ಮೂಲಕ ಗಮನವನ್ನು ಕೇಂದ್ರೀಕರಿಸಲು, ಪಠ್ಯ ನಮೂದಿಸುವುದನ್ನು ಸುಲಭಗೊಳಿಸಲು ಅಥವಾ ನೀವು ಓದುತ್ತಿರುವ ಅಥವಾ ಆಲಿಸುತ್ತಿರುವುದನ್ನು ಅನುಸರಿಸುವುದಕ್ಕೆ ಸಹಾಯ ಮಾಡಲು iPhone ಹಲವು ಹೆಚ್ಚುವರಿ ಟೂಲ್ಗಳನ್ನು ಒದಗಿಸುತ್ತದೆ.
ಹೆಚ್ಚಿನ ಮಾಹಿತಿಯ ಮೂಲಗಳಿಗಾಗಿ, Apple ಕಾಗ್ನಿಟಿವ್ ಆಕ್ಸೆಸಬಿಲಿಟಿ ವೆಬ್ಪುಟಕ್ಕೆ ಭೇಟಿ ನೀಡಿ.
ಸಲಹೆ: ಬಟನ್ನ ಕ್ಲಿಕ್ ಮೂಲಕ ಅಥವಾ ಕಂಟ್ರೋಲ್ ಸೆಂಟರ್ನಿಂದ ನೀವು ಹೆಚ್ಚು ಬಳಸುವ ಆ್ಯಕ್ಸೆಸಬಿಲಿಟಿ ಫೀಚರ್ಗಳು ಮತ್ತು ಸೆಟ್ಟಿಂಗ್ಸ್ ಅನ್ನು ನಿಯಂತ್ರಿಸಿ. ಆ್ಯಕ್ಸೆಸಬಿಲಿಟಿ ಶಾರ್ಟ್ಕಟ್ ಮೂಲಕ ಫೀಚರ್ಗಳನ್ನು ತ್ವರಿತವಾಗಿ ತೆರೆಯಿರಿ ಎಂಬುದನ್ನು ನೋಡಿ.