iPhone ಅನ್ನು Bluetooth ಆಕ್ಸೆಸರಿಗಳಿಗೆ ಕನೆಕ್ಟ್ ಮಾಡಿ
ಸಂಗೀತ ಮತ್ತು ವೀಡಿಯೊಗಳನ್ನು ಸ್ಟ್ರೀಮ್ ಮಾಡಲು, ಗೇಮ್ಗಳನ್ನು ಆಡಲು, ಕೀಬೋರ್ಡ್ಗಳನ್ನು ಕನೆಕ್ಟ್ ಮಾಡಲು ಮತ್ತು ಇನ್ನೂ ಹೆಚ್ಚಿನವುಗಳಿಗಾಗಿ ನಿಮ್ಮ iPhone ಅನ್ನು Bluetooth® ಆಕ್ಸೆಸರಿಗಳಿಗೆ ಕನೆಕ್ಟ್ ಮಾಡಿ.
Bluetooth ಆ್ಯಕ್ಸೆಸರಿಯೊಂದಿಗೆ ನಿಮ್ಮ iPhone ಅನ್ನು ಪೇರ್ ಮಾಡಿ
ನಿಮ್ಮ Bluetooth ಆಕ್ಸೆಸರಿಯನ್ನು ಡಿಸ್ಕವರಿ ಮೋಡ್ನಲ್ಲಿ ಇರಿಸಿ. ಅದನ್ನು ಹುಡುಕಲು ಸಾಧ್ಯವಾಗುವಂತೆ ಮಾಡುವುದು ಹೇಗೆಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಆ್ಯಕ್ಸೆಸರಿಯೊಂದಿಗೆ ದೊರೆತ ಸೂಚನೆಗಳನ್ನು ನೋಡಿ.
iPhoneನಲ್ಲಿ, ಸೆಟ್ಟಿಂಗ್ಸ್ ಆ್ಯಪ್
> Bluetooth ಎಂಬಲ್ಲಿಗೆ ಹೋಗಿ ಮತ್ತು Bluetooth ಅನ್ನು ಆನ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಆ್ಯಕ್ಸೆಸರಿಯು ಸ್ಕ್ರೀನ್ನ ಮೇಲೆ, ಸಾಧನಗಳ ಪಟ್ಟಿಯ ಕೆಳಗೆ ಕಾಣಿಸಿಕೊಂಡಾಗ ಅದರ ಹೆಸರನ್ನು ಟ್ಯಾಪ್ ಮಾಡಿ.
ನೀವು ಆ್ಯಕ್ಸೆಸರಿ PIN ಅಥವಾ ಪಾಸ್ಕೋಡ್ ಅನ್ನು ನಮೂದಿಸಬೇಕಾಗಬಹುದು. ನಿಮ್ಮ ಆ್ಯಕ್ಸೆಸರಿಯೊಂದಿಗೆ ಬಂದ ಸೂಚನೆಗಳನ್ನು ಪರಿಶೀಲಿಸಿ.
ಗಮನಿಸಿ: iPhone ಪೇರ್ ಆಗಲು Bluetooth ಆಕ್ಸೆಸರಿಯಿಂದ ಸುಮಾರು 33 ಅಡಿ (10 ಮೀಟರ್) ಅಂತರದಲ್ಲಿರಬೇಕು.
ನಿಮ್ಮ ಆ್ಯಕ್ಸೆಸರಿಯನ್ನು ಪೇರ್ ಮಾಡುವಲ್ಲಿ ನಿಮಗೆ ತೊಂದರೆಯಾಗಿದ್ದರೆ, ನಿಮ್ಮ iPhone ಅಥವಾ iPadಗೆ Bluetooth ಆಕ್ಸೆಸರಿಯನ್ನು ಕನೆಕ್ಟ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ಎಂಬ Apple ಬೆಂಬಲ ಲೇಖನವನ್ನು ನೋಡಿ.
Bluetooth ಆ್ಯಕ್ಸೆಸರಿಯನ್ನು ಅನ್ಪೇರ್ ಮಾಡಿ
ನಿಮ್ಮ iPhoneನಲ್ಲಿ, ಸೆಟ್ಟಿಂಗ್ಸ್
> Bluetooth ಎಂಬಲ್ಲಿಗೆ ಹೋಗಿ.
ನೀವು ಅನ್ಪೇರ್ ಮಾಡಲು ಬಯಸುವ ಆ್ಯಕ್ಸೆಸರಿಯ ಮುಂದಿರುವ
ಅನ್ನು ಟ್ಯಾಪ್ ಮಾಡಿ, ನಂತರ ಈ ಸಾಧನವನ್ನು ಮರೆತುಬಿಡಿ ಎಂಬುದನ್ನು ಟ್ಯಾಪ್ ಮಾಡಿ.
ಖಚಿತಪಡಿಸಲು ಸಾಧನವನ್ನು ಮರೆತುಬಿಡಿ ಎಂಬುದನ್ನು ಟ್ಯಾಪ್ ಮಾಡಿ.
ನಿಮಗೆ ಸಾಧನಗಳ ಪಟ್ಟಿಯು ಕಾಣಿಸದಿದ್ದರೆ, Bluetooth ಅನ್ನು ಆನ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ಗಮನಿಸಿ: ನೀವು AirPods ಅನ್ನು ಅನ್ಪೇರ್ ಮಾಡಿದರೆ, ನೀವು ನಿಮ್ಮ Apple ಖಾತೆಗೆ ಸೈನ್ ಇನ್ ಆಗಿರುವ ಇತರ ಸಾಧನಗಳಿಂದ ಅವುಗಳನ್ನು ಸ್ವಯಂಚಾಲಿತವಾಗಿ ಅನ್ಪೇರ್ ಮಾಡಲಾಗುತ್ತದೆ.
ಎಲ್ಲಾ Bluetooth ಆ್ಯಕ್ಸೆಸರಿಗಳಿಂದ ಡಿಸ್ಕನೆಕ್ಟ್ ಮಾಡಿ
Bluetooth ಆಫ್ ಮಾಡದೆಯೇ ಎಲ್ಲಾ Bluetooth ಆ್ಯಕ್ಸೆಸರಿಗಳು ಮತ್ತು ಸಾಧನಗಳಿಂದ ನಿಮ್ಮ iPhone ಅನ್ನು ತ್ವರಿತವಾಗಿ ಡಿಸ್ಕನೆಕ್ಟ್ ಮಾಡಬೇಕಾದರೆ, ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ, ನಂತರ ಅನ್ನು ಟ್ಯಾಪ್ ಮಾಡಿ. ನಿಮ್ಮ Bluetooth ಆ್ಯಕ್ಸೆಸರಿಗಳು ಮತ್ತು ಸಾಧನಗಳು ನಿಮ್ಮ iPhoneನಿಂದ ಮುಂದಿನ ದಿನದವರೆಗೆ ಡಿಸ್ಕನೆಕ್ಟ್ ಆಗುತ್ತವೆ.
ಗಮನಿಸಿ: iPhoneನೊಂದಿಗೆ ಕೆಲವು ಆ್ಯಕ್ಸೆಸರಿಗಳ ಬಳಕೆಯು ವೈರ್ಲೆಸ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಎಲ್ಲಾ iOS ಅಥವಾ iPadOS ಆ್ಯಕ್ಸೆಸರಿಗಳು iPhoneನೊಂದಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುವುದಿಲ್ಲ. ಏರ್ಪ್ಲೇನ್ ಮೋಡ್ ಅನ್ನು ಆನ್ ಮಾಡುವುದರಿಂದ iPhone ಮತ್ತು ಆ್ಯಕ್ಸೆಸರಿಯ ನಡುವಿನ ಆಡಿಯೊ ಇಂಟರ್ಫರೆನ್ಸ್ ಅನ್ನು ತೆಗೆದುಹಾಕಬಹುದು. iPhone ಅನ್ನು ರೀಓರಿಯೆಂಟ್ ಮಾಡುವುದರಿಂದ ಅಥವಾ ಸ್ಥಳಾಂತರಿಸುವುದರಿಂದ ಮತ್ತು ಕನೆಕ್ಟ್ ಮಾಡಲಾದ ಆ್ಯಕ್ಸೆಸರಿಯಿಂದ ವೈರ್ಲೆಸ್ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು.