ಎರಡು iPhone ಸಾಧನಗಳನ್ನು ಒಟ್ಟಿಗೆ ಹಿಡಿದುಕೊಳ್ಳುವ ಮೂಲಕ SharePlay ಅನ್ನು ಪ್ರಾರಂಭಿಸಿ
SharePlay ಮೂಲಕ, ನಿಮ್ಮ ಸ್ನೇಹಿತರ iPhoneನ ಸಮೀಪ ನಿಮ್ಮ iPhone ಅನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಸ್ನೇಹಿತರೊಂದಿಗೆ ಸಿಂಕ್ ಆಗಿ ಬೆಂಬಲಿತ ಕಂಟೆಂಟ್ ಅನ್ನು ನೀವು ಕೂಡಲೇ ಸ್ಟ್ರೀಮ್ ಮಾಡಬಹುದು, ಸಂಗೀತವನ್ನು ಆಲಿಸಬಹುದು, ಗೇಮ್ಗಳನ್ನು ಆಡಬಹುದು ಮತ್ತು ಇನ್ನೂ ಹೆಚ್ಚಿನದನ್ನು ಮಾಡಬಹುದು.
SharePlay ಅನ್ನು ಪ್ರಾರಂಭಿಸಿ
ನಿಮ್ಮ iPhoneನಲ್ಲಿ, SharePlayಯನ್ನು ಬೆಂಬಲಿಸುವ ಆ್ಯಪ್ನಲ್ಲಿ, ನೀವು ಹಂಚಿಕೊಳ್ಳಲು ಬಯಸುವ ಕಂಟೆಂಟ್ ಅನ್ನು ಟ್ಯಾಪ್ ಮಾಡಿ.
ನೀವು ಹಂಚಿಕೊಳ್ಳಲು ಬಯಸುವ ವ್ಯಕ್ತಿಯ iPhoneನ ಪಕ್ಕದಲ್ಲಿ ನಿಮ್ಮ iPhone ಅನ್ನು ಹಿಡಿದುಕೊಳ್ಳಿ.
ಅವರು ನಿಮ್ಮ ಸಂಪರ್ಕಗಳಲ್ಲಿ ಇಲ್ಲದಿದ್ದರೆ (ಅಥವಾ ಅವರ ಸಂಪರ್ಕಗಳಲ್ಲಿ ನೀವು ಇಲ್ಲದಿದ್ದರೆ), ನೀವು ಮೊದಲು ನಿಮ್ಮ ಸಂಪರ್ಕ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳಬೇಕು. iPhoneನಲ್ಲಿ NameDrop ಅನ್ನು ಬಳಸಿ ಅನ್ನು ನೋಡಿ.
SharePlay ಅನ್ನು ಟ್ಯಾಪ್ ಮಾಡಿ.
ನೀವು ಹಂಚಿಕೊಳ್ಳಲು ಬಯಸುವ ವ್ಯಕ್ತಿಯು ನಿಮ್ಮ SharePlay ಆಹ್ವಾನವನ್ನು ಸ್ವೀಕರಿಸಬಹುದು ಅಥವಾ ನಿರಾಕರಿಸಬಹುದು.
ಗಮನಿಸಿ: ಎರಡೂ iPhone ಸಾಧನಗಳಲ್ಲಿ iOS 17 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ. AirDrop ಅನ್ನು ಆನ್ ಮಾಡಿರಬೇಕು ಮತ್ತು ಕಳುಹಿಸುವವರು ಮತ್ತು ಸ್ವೀಕರಿಸುವವರು ಪರಸ್ಪರರ ಸಂಪರ್ಕಗಳಲ್ಲಿ ಸೇರಿಕೊಂಡಿರಬೇಕು. SharePlayಯನ್ನು ಬೆಂಬಲಿಸುವ ಕೆಲವು ಆ್ಯಪ್ಗಳಿಗೆ ಸಬ್ಸ್ಕ್ರಿಪ್ಶನ್ ಅಗತ್ಯವಿರುತ್ತದೆ. ಚಲನಚಿತ್ರ ಅಥವಾ ಟಿವಿ ಶೋವನ್ನು ಒಟ್ಟಿಗೆ ವೀಕ್ಷಿಸಲು, ಪ್ರತಿಯೊಬ್ಬ ಸಹಭಾಗಿಯು ಕನಿಷ್ಠ ಸಿಸ್ಟಂ ಅವಶ್ಯಕತೆಗಳನ್ನು ಪೂರೈಸುವ ಸಾಧನವನ್ನು ಹೊಂದಿರಬೇಕು ಮತ್ತು ತಮ್ಮ ಸ್ವಂತ ಸಾಧನದಿಂದ ಕಂಟೆಂಟ್ಗೆ ಸಬ್ಸ್ಕ್ರಿಪ್ಶನ್ ಅಥವಾ ಖರೀದಿಯ ಮೂಲಕ ಆ್ಯಕ್ಸೆಸ್ ಹೊಂದಿರಬೇಕು. SharePlay ವಿವಿಧ ದೇಶಗಳು ಅಥವಾ ಪ್ರದೇಶಗಳಲ್ಲಿ ಕೆಲವು ಚಲನಚಿತ್ರಗಳು ಅಥವಾ ಟಿವಿ ಶೋಗಳನ್ನು ಹಂಚಿಕೊಳ್ಳುವುದನ್ನು ಬೆಂಬಲಿಸುವುದಿಲ್ಲ.