iPhoneನಲ್ಲಿ Siri ಏನೆಲ್ಲಾ ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವುದು
ಮಾಹಿತಿಯನ್ನು ಪಡೆಯಲು ಮತ್ತು ಕಾರ್ಯಗಳನ್ನು ನಿರ್ವಹಿಸಲು iPhoneನಲ್ಲಿ Siriಯನ್ನು ಬಳಸಿ. ನೀವು ಪ್ರಸ್ತುತ ಏನನ್ನು ಮಾಡುತ್ತಿದ್ದೀರೋ ಅದರ ಮೇಲೆ Siri ಮತ್ತು ಅದರ ಪ್ರತಿಕ್ರಿಯೆಯು ಕಾಣಿಸಿಕೊಳ್ಳುತ್ತದೆ, ಇದು ನಿಮಗೆ ಸ್ಕ್ರೀನ್ ಮೇಲಿನ ಮಾಹಿತಿಯನ್ನು ನೋಡಲು ಅನುವು ಮಾಡಿಕೊಡುತ್ತದೆ.
Siri ಸಂವಹನಾತ್ಮಕವಾಗಿದೆ. Siriಯು ವೆಬ್ ಲಿಂಕ್ ಅನ್ನು ಡಿಸ್ಪ್ಲೇ ಮಾಡಿದಾಗ, ನಿಮ್ಮ ಡಿಫಾಲ್ಟ್ ವೆಬ್ ಬ್ರೌಸರ್ನಲ್ಲಿ ಹೆಚ್ಚಿನ ಮಾಹಿತಿಯನ್ನು ನೋಡಲು ನೀವು ಅದನ್ನು ಟ್ಯಾಪ್ ಮಾಡಬಹುದು. Siriಯಿಂದ ಸ್ಕ್ರೀನ್ ಮೇಲಿನ ಪ್ರತಿಕ್ರಿಯೆಯು ಬಟನ್ಗಳು ಅಥವಾ ನಿಯಂತ್ರಣಗಳನ್ನು ಒಳಗೊಂಡಿರುವಾಗ, ಮುಂದಿನ ಕ್ರಮವನ್ನು ತೆಗೆದುಕೊಳ್ಳಲು ನೀವು ಅವುಗಳನ್ನು ಟ್ಯಾಪ್ ಮಾಡಬಹುದು. ಮತ್ತು ಮತ್ತೊಂದು ಪ್ರಶ್ನೆಯನ್ನು ಕೇಳಲು ಅಥವಾ ನಿಮಗಾಗಿ ಹೆಚ್ಚುವರಿ ಕಾರ್ಯವನ್ನು ಮಾಡಲು ನೀವು Siriಯನ್ನು ಮತ್ತೊಮ್ಮೆ ಟ್ಯಾಪ್ ಮಾಡಬಹುದು.
ಯಾವೆಲ್ಲಾ ಕಾರ್ಯಗಳನ್ನು ನಿರ್ವಹಿಸಲು ನೀವು Siriಯನ್ನು ಬಳಸಬಹುದು ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ. ಈ ಮಾರ್ಗದರ್ಶಿಯಲ್ಲಿ ಹೆಚ್ಚುವರಿ ಉದಾಹರಣೆಗಳು ಕಾಣಿಸಿಕೊಳ್ಳುತ್ತವೆ. ನಿಮ್ಮ iPhone ಮತ್ತು ಆ್ಯಪ್ಗಳಲ್ಲಿ “What can I do here?” ಎಂದು ಕೇಳುವ ಮೂಲಕ ನೀವು Siriಯ ಸಾಮರ್ಥ್ಯಗಳನ್ನು ಸಹ ಕಂಡುಕೊಳ್ಳಬಹುದು
ಪ್ರಶ್ನೆಗಳಿಗೆ ಉತ್ತರಿಸಲು Siriಯನ್ನು ಬಳಸಿ
ವಾಸ್ತವಾಂಶಗಳನ್ನು ತ್ವರಿತವಾಗಿ ಪರಿಶೀಲಿಸಲು, ಲೆಕ್ಕಾಚಾರಗಳನ್ನು ಮಾಡಲು ಅಥವಾ ವಾಕ್ಯವೊಂದನ್ನು ಮತ್ತೊಂದು ಭಾಷೆಗೆ ಅನುವಾದಿಸಲು Siriಯನ್ನು ಬಳಸಿ. Siriಯ ಗಮನವನ್ನು ಸೆಳೆಯಿರಿ, ನಂತರ ಈ ರೀತಿ ಏನಾದರೂ ಹೇಳಿ:
“What causes a rainbow?”
“What does a cat sound like?”
“What’s the derivative of cosine x?”
“Who made the first rocket that went to space?”
“How do you say Thank You in Mandarin?”
ಆ್ಯಪ್ಗಳ ಜೊತೆಗೆ Siriಯನ್ನು ಬಳಸುವುದು
ನಿಮ್ಮ ವಾಯ್ಸ್ ಜೊತೆಗೆ ಆ್ಯಪ್ಗಳನ್ನು ನಿಯಂತ್ರಿಸಲು ನೀವು Siriಯನ್ನು ಬಳಸಬಹುದು. Siri ಸಕ್ರಿಯಗೊಂಡಾಗ, ಈ ರೀತಿ ಏನಾದರೂ ಹೇಳಿ:
“Set up a meeting with Gordon at 9” ಕ್ಯಾಲೆಂಡರ್ ಆ್ಯಪ್ನಲ್ಲಿ ಇವೆಂಟ್ ಅನ್ನು ರಚಿಸಲು.
ರಿಮೈಂಡರ್ಸ್ ಆ್ಯಪ್ಗೆ ಐಟಮ್ ಅನ್ನು ಸೇರಿಸಲು “Add artichokes to my groceries list”.
ಸಂದೇಶ ಆ್ಯಪ್ ಬಳಸಿ ಪಠ್ಯವನ್ನು ಕಳುಹಿಸಲು “Send a message to PoChun saying love you heart emoji”
“What’s my update?” ನಿಮ್ಮ ಪ್ರದೇಶದ ಹವಾಮಾನ, ಸುದ್ದಿ, ನಿಮ್ಮ ರಿಮೈಂಡರ್ಗಳು ಮತ್ತು ಕ್ಯಾಲೆಂಡರ್ ಇವೆಂಟ್ಗಳು ಮತ್ತು ಇನ್ನೂ ಹೆಚ್ಚಿನವುಗಳ ಬಗ್ಗೆ ಅಪ್ಡೇಟ್ ಅನ್ನು ಪಡೆಯಲು.
ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ನೋಡಿ:
ಸಂಪರ್ಕಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು Siriಯನ್ನು ಬಳಸಿ
ಫೋಟೋಗಳು, ವೆಬ್ಪುಟಗಳು, Apple ಸಂಗೀತ ಅಥವಾ Apple ಪಾಡ್ಕಾಸ್ಟ್ನ ಕಂಟೆಂಟ್, ನಕ್ಷೆಗಳ ಸ್ಥಳಗಳು ಮತ್ತು ಇನ್ನೂ ಹೆಚ್ಚಿನವುಗಳಂತಹ ಸ್ಕ್ರೀನ್ ಮೇಲಿನ ಐಟಂಗಳನ್ನು ನಿಮ್ಮ ಸಂಪರ್ಕದಲ್ಲಿರುವ ಜನರೊಂದಿಗೆ ನೀವು ಹಂಚಿಕೊಳ್ಳಬಹುದು.
ಉದಾಹರಣೆಗೆ, ನಿಮ್ಮ ಫೋಟೋ ಲೈಬ್ರರಿಯಲ್ಲಿ ಫೋಟೋವನ್ನು ನೋಡುತ್ತಿರುವಾಗ, ಫೋಟೋದೊಂದಿಗೆ ಹೊಸ ಸಂದೇಶವನ್ನು ರಚಿಸಲು Siriಯನ್ನು ಸಕ್ರಿಯಗೊಳಿಸಿ ಮತ್ತು “Send this to mom” ಈ ರೀತಿ ಏನಾದರೂ ಹೇಳಿ.

Siriಯೊಂದಿಗೆ ನಿಮ್ಮ ಅನುಭವವನ್ನು ವೈಯಕ್ತೀಕರಿಸಿ
ನೀವು Siriಯನ್ನು ಹೆಚ್ಚು ಬಾರಿ ಬಳಸಿದಷ್ಟು, ನಿಮ್ಮ ಅಗತ್ಯತೆಗಳನ್ನು Siriಯು ಉತ್ತಮವಾಗಿ ಅರಿತುಕೊಳ್ಳುತ್ತದೆ. ನಿಮ್ಮ ಬಗ್ಗೆ ನೀವು Siriಗೆ ಹೇಳಬಹುದು ಮತ್ತು Siri ಹೇಗೆ ಮತ್ತು ಯಾವಾಗ ಪ್ರತಿಕ್ರಿಯಿಸಬೇಕು ಎಂಬುದನ್ನು ನೀವು ಬದಲಾಯಿಸಬಹುದು. ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ನೋಡಿ:
ನಿಮ್ಮ ಮಾಹಿತಿಯನ್ನು ರಕ್ಷಿಸಲು ಮತ್ತು ನೀವು ಏನನ್ನು ಹಂಚಿಕೊಳ್ಳಬೇಕು ಎಂಬುದನ್ನು ಆಯ್ಕೆಮಾಡಲು ನಿಮಗೆ ನೆರವಾಗುವಂತೆ Siriಯನ್ನು ವಿನ್ಯಾಸಗೊಳಿಸಲಾಗಿದೆ. ಇನ್ನಷ್ಟು ತಿಳಿಯಲು, Siriಗೆ ಕೇಳಿ, ಡಿಕ್ಟೇಷನ್ ಮತ್ತು ಗೌಪ್ಯತೆಯ ವೆಬ್ಸೈಟ್ ಎಂಬುದನ್ನು ನೋಡಿ.