iPhoneನಲ್ಲಿನ ವಾಲೆಟ್ ಆ್ಯಪ್ನಲ್ಲಿ ನಿಮ್ಮ Apple ಖಾತೆಯ ಬ್ಯಾಲೆನ್ಸ್ ಅನ್ನು ನೋಡುವುದು
ವಾಲೆಟ್ ಆ್ಯಪ್ನಲ್ಲಿ, ನಿಮ್ಮ Apple ಖಾತೆಯ ಬ್ಯಾಲೆನ್ಸ್ ಅನ್ನು ನೀವು ನೋಡಬಹುದು, ಹಣವನ್ನು ಸೇರಿಸಬಹುದು ಮತ್ತು Apple Gift Cardಗಳನ್ನು ರಿಡೀಮ್ ಮಾಡಬಹುದು. ಉತ್ಪನ್ನಗಳು, ಆ್ಯಕ್ಸೆಸರಿಗಳು, ಗೇಮ್ಗಳು, ಆ್ಯಪ್ಗಳು, ಸಬ್ಸ್ಕ್ರಿಪ್ಶನ್ಗಳಾದಂತಹ iCloud+ ಮತ್ತು Apple Music ಮತ್ತು ಇನ್ನಷ್ಟನ್ನು ಖರೀದಿಸಲು ನಿಮ್ಮ Apple ಖಾತೆಯ ಬ್ಯಾಲೆನ್ಸ್ ಅನ್ನು ಬಳಸಿ. Apple Store (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ) ಅಥವಾ apple.com ನಲ್ಲಿ ಪಾವತಿಸಲು ನಿಮ್ಮ Apple ಖಾತೆಯ ಬ್ಯಾಲೆನ್ಸ್ ಅನ್ನು ತ್ವರಿತ, ಅನುಕೂಲಕರ ಮಾರ್ಗವಾಗಿ ಸಹ ನೀವು ಬಳಸಬಹುದು.
Apple ಖಾತೆಯನ್ನು Apple ವಾಲೆಟ್ಗೆ ಸೇರಿಸುವುದು ಮತ್ತು ಖಾತೆಯ ಬ್ಯಾಲೆನ್ಸ್ ಅನ್ನು ನೋಡುವುದು
ನಿಮ್ಮ iPhoneನಲ್ಲಿ ವಾಲೆಟ್
ಆ್ಯಪ್ಗೆ ಹೋಗಿ.
ಅನ್ನು ಟ್ಯಾಪ್ ಮಾಡಿ, ನಂತರ Apple ಖಾತೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.
ಕಾರ್ಡ್ನ ಕೆಳಗೆ ಖಾತೆಯ ಬ್ಯಾಲೆನ್ಸ್ ಕಾಣುತ್ತದೆ.
ನಿಮ್ಮ Apple ಖಾತೆ ಬ್ಯಾಲೆನ್ಸ್ಗೆ ಹಣವನ್ನು ಸೇರಿಸುವುದು
ನಿಮ್ಮ iPhoneನಲ್ಲಿ ವಾಲೆಟ್
ಆ್ಯಪ್ಗೆ ಹೋಗಿ.
Apple ಖಾತೆ ಎಂಬುದನ್ನು ಟ್ಯಾಪ್ ಮಾಡಿ, ನಂತರ ಹಣವನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.
ಮೊತ್ತವನ್ನು ಆರಿಸಿ, ನಂತರ ಪಾವತಿಯನ್ನು ಪೂರ್ಣಗೊಳಿಸಲು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.
Apple Gift Card ಅಥವಾ ಕೋಡ್ ಅನ್ನು ರಿಡೀಮ್ ಮಾಡುವುದು
ನೀವು Apple Gift Card ಅಥವಾ ಕೋಡ್ ಅನ್ನು ಸ್ವೀಕರಿಸಿದಾಗ, ನಿಮ್ಮ Apple ಖಾತೆಯ ಬ್ಯಾಲೆನ್ಸ್ಗೆ ನೀವು ಹಣವನ್ನು ಸೇರಿಸಬಹುದು.
ನಿಮ್ಮ iPhoneನಲ್ಲಿ ವಾಲೆಟ್
ಆ್ಯಪ್ಗೆ ಹೋಗಿ.
Apple ಖಾತೆ ಎಂಬುದನ್ನು ಟ್ಯಾಪ್ ಮಾಡಿ,
ಅನ್ನು ಟ್ಯಾಪ್ ಮಾಡಿ, ನಂತರ ರಿಡೀಮ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಕ್ಯಾಮರಾ ಬಳಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಫ್ರೇಮ್ನಲ್ಲಿ ಗಿಫ್ಟ್ ಕಾರ್ಡ್ ಕಾಣಿಸುವಂತೆ iPhone ಅನ್ನು ಇರಿಸಿ.
ಪರ್ಯಾಯವಾಗಿ, ನೀವು ಕೋಡ್ ಅನ್ನು ಹಸ್ತಚಾಲಿತವಾಗಿ ನಮೂದಿಸಿ ಎಂಬುದನ್ನು ಟ್ಯಾಪ್ ಮಾಡಬಹುದು, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಬಹುದು.
Apple Storeನಲ್ಲಿ ನಿಮ್ಮ Apple ಖಾತೆಯ ಬ್ಯಾಲೆನ್ಸ್ ಅನ್ನು ಬಳಸುವುದು
Apple Storeನಲ್ಲಿ ಚೆಕ್ಔಟ್ ಸಮಯದಲ್ಲಿ (ಎಲ್ಲಾ ದೇಶಗಳು ಮತ್ತು ಪ್ರದೇಶಗಳಲ್ಲಿ ಲಭ್ಯವಿಲ್ಲ), Apple Pay ಮೂಲಕ ನೀವು Apple ಖಾತೆ ಬ್ಯಾಲೆನ್ಸ್ ಬಳಸಿ ಪಾವತಿಸಬಹುದು.
ನಿಮ್ಮ iPhoneನಲ್ಲಿ ವಾಲೆಟ್
ಆ್ಯಪ್ಗೆ ಹೋಗಿ.
Apple ಖಾತೆಯನ್ನು ಟ್ಯಾಪ್ ಮಾಡಿ, ನಂತರ ಸೈಡ್ ಬಟನ್ ಅನ್ನು ಡಬಲ್-ಕ್ಲಿಕ್ ಮಾಡಿ.
Face ID, Touch ID ಅಥವಾ ನಿಮ್ಮ ಪಾಸ್ಕೋಡ್ ಮೂಲಕ ದೃಢೀಕರಿಸಿ.
ಸ್ಕ್ರೀನ್ ಮೇಲೆ ಮುಗಿದಿದೆ ಎಂಬುದು ಅಥವಾ ಚೆಕ್ಮಾರ್ಕ್ ಕಾಣಿಸುವವರೆಗೆ ನಿಮ್ಮ iPhoneನ ಮೇಲ್ಭಾಗವನ್ನು ಕಾರ್ಡ್ ರೀಡರ್ ಸಮೀಪ ಹಿಡಿದುಕೊಳ್ಳಿ.