iPhoneನಲ್ಲಿರುವ ಮತ್ತೊಂದು ಬ್ರೌಸರ್ಗೆ Safari ಡೇಟವನ್ನು ಎಕ್ಸ್ಪೋರ್ಟ್ ಮಾಡುವುದು
iOS 18.2 ಅಥವಾ ನಂತರದ ಆವೃತ್ತಿಯಲ್ಲಿ, ನೀವು ಆಯ್ದ ಡೇಟವನ್ನು Safariಯಿಂದ ಎಕ್ಸ್ಪೋರ್ಟ್ ಮಾಡಬಹುದು ಮತ್ತು ಆ ಡೇಟವನ್ನು ಬೇರೆೊಂದು ಬ್ರೌಸರ್ಗೆ ಇಂಪೋರ್ಟ್ ಮಾಡಬಹುದು.
Safariಯಿಂದ ನೀವು ಎಕ್ಸ್ಪೋರ್ಟ್ ಮಾಡಬಹುದಾದ ಡೇಟ ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
ಬುಕ್ಮಾರ್ಕ್ಗಳು
ಇತಿಹಾಸ
ಎಕ್ಸ್ಟೆನ್ಶನ್ಗಳು
ಕ್ರೆಡಿಟ್ ಕಾರ್ಡ್ಗಳು
ಪಾಸ್ವರ್ಡ್ಗಳು
ಎಚ್ಚರಿಕೆ: ನಿಮ್ಮ ಎಕ್ಸ್ಪೋರ್ಟ್ ಮಾಡಲಾದ ಡೇಟವನ್ನು ಎನ್ಕ್ರಿಪ್ಟ್ ಮಾಡಲಾಗಿಲ್ಲ ಮತ್ತು ಫೈಲ್ ಅನ್ನು ಆ್ಯಕ್ಸೆಸ್ ಮಾಡಬಹುದಾದ ಯಾರಿಗಾದರೂ ಇದು ಗೋಚರಿಸುತ್ತದೆ. ನೀವು ಡೇಟವನ್ನು ಮತ್ತೊಂದು ಬ್ರೌಸರ್ಗೆ ಇಂಪೋರ್ಟ್ ಮಾಡಿದ ನಂತರ, ನೀವು ಎಕ್ಸ್ಪೋರ್ಟ್ ಮಾಡಿದ ಫೈಲ್ ಅನ್ನು ಡಿಲೀಟ್ ಮಾಡಿ.

ಸೆಟ್ಟಿಂಗ್ಸ್
> ಆ್ಯಪ್ಗಳು > Safari ಎಂಬಲ್ಲಿಗೆ ಹೋಗಿ.
ಇತಿಹಾಸ ಮತ್ತು ವೆಬ್ಸೈಟ್ ಡೇಟದ ಕೆಳಗೆ, ಎಕ್ಸ್ಪೋರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಎಕ್ಸ್ಪೋರ್ಟ್ ಮಾಡಲು ಡೇಟವನ್ನು ಆಯ್ಕೆಮಾಡಿ.
ನಿಮ್ಮ ಬ್ರೌಸಿಂಗ್ಗಾಗಿ ನೀವು Safariಯಲ್ಲಿ ಪ್ರೊಫೈಲ್ಗಳನ್ನು ರಚಿಸಿದರೆ, ನೀವು ಡೇಟವನ್ನು ಎಕ್ಸ್ಪೋರ್ಟ್ ಮಾಡಲು ಬಯಸುವ ಪ್ರೊಫೈಲ್ ಅನ್ನು ಆಯ್ಕೆಮಾಡಿ ಅಥವಾ ಎಲ್ಲಾ ಪ್ರೊಫೈಲ್ಗಳನ್ನು ಆಯ್ಕೆಮಾಡಿ.
ಪ್ರತಿಯೊಂದು ಪ್ರೊಫೈಲ್ ತನ್ನದೇ ಆದ ಇತಿಹಾಸ ಮತ್ತು ಎಕ್ಸ್ಟೆನ್ಶನ್ಗಳ ಡೇಟವನ್ನು ಹೊಂದಿದೆ. ಬುಕ್ಮಾರ್ಕ್ಗಳು, ಕ್ರೆಡಿಟ್ ಕಾರ್ಡ್ಗಳು ಮತ್ತು ಪಾಸ್ವರ್ಡ್ಗಳ ಡೇಟ ಎಲ್ಲಾ ಪ್ರೊಫೈಲ್ಗಳಲ್ಲಿ ಒಂದೇ ಆಗಿರುತ್ತದೆ.
ಡೌನ್ಲೋಡ್ ಮಾಡಲು ಸೇವ್ ಎಂಬುನ್ನು ಟ್ಯಾಪ್ ಮಾಡಿ.
ಪೂರ್ಣಗೊಂಡಿದೆ ಎಂಬುದನ್ನು ಟ್ಯಾಪ್ ಮಾಡಿ.
ಎಕ್ಸ್ಪೋರ್ಟ್ ಮಾಡಲಾದ ಡೇಟವನ್ನು ನಿಮ್ಮ ಡೌನ್ಲೋಡ್ಗಳ ಫೋಲ್ಡರ್ಲ್ಲಿ .zip ಫೈಲ್ ಆಗಿ ಸೇವ್ ಮಾಡಲಾಗಿದೆ.