iPhoneನಲ್ಲಿ iCloud ಹಂಚಿಕೊಂಡ ಫೋಟೋ ಲೈಬ್ರರಿಯನ್ನು ಸೆಟಪ್ ಮಾಡಿ ಅಥವಾ ಸೇರಿಕೊಳ್ಳಿ
iCloud ಹಂಚಿಕೊಂಡ ಫೋಟೋ ಲೈಬ್ರರಿ ಫೀಚರ್ ಬಳಸಿ, ಐದು ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ನೀವು ಹಂಚಿಕೊಂಡ ಲೈಬ್ರರಿಯನ್ನು ಸೆಟಪ್ ಮಾಡಬಹುದು ಅಥವಾ ಸೇರಿಕೊಳ್ಳಬಹುದು. ನೀವು ಮತ್ತು ನಿಮ್ಮ ಹತ್ತಿರದವರು ಫೋಟೋ ಸಂಗ್ರಹದಲ್ಲಿ ಕೊಲಾಬೊರೇಟ್ ಮಾಡಬಹುದು ಮತ್ತು ಇನ್ನಷ್ಟು ಸಂಪೂರ್ಣ ನೆನಪುಗಳನ್ನು ಒಂದೇ ಸ್ಥಳದಲ್ಲಿ ಆನಂದಿಸಬಹುದು. ನೀವು ಒಂದು ಸಮಯದಲ್ಲಿ ಹಂಚಿಕೊಂಡ ಒಂದು ಲೈಬ್ರರಿಗೆ ಮಾತ್ರ ಸೇರಬಹುದು.

ನೀವು ಹಂಚಿಕೊಂಡ ಲೈಬ್ರರಿಗೆ ಸೇರಿಕೊಂಡಾಗ, ನೀವು ಸೇರಿಸುವ ಫೋಟೋಗಳು ಮತ್ತು ವೀಡಿಯೊಗಳು ನಿಮ್ಮ ವೈಯಕ್ತಿಕ ಲೈಬ್ರರಿಯಿಂದ ಹಂಚಿಕೊಂಡ ಲೈಬ್ರರಿಗೆ ಮೂವ್ ಆಗುತ್ತವೆ ಮತ್ತು ಲೈಬ್ರರಿಯ ಎಲ್ಲಾ ಸದಸ್ಯರು ಅವುಗಳನ್ನು ನೋಡಬಹುದು, ಎಡಿಟ್ ಮಾಡಬಹುದು ಮತ್ತು ಡಿಲೀಟ್ ಮಾಡಬಹುದು. ಹಂಚಿಕೊಂಡ ಲೈಬ್ರರಿ ಫೋಟೋಗಳು ಮತ್ತು ವೀಡಿಯೊಗಳನ್ನು ನಿಮ್ಮ ವೈಯಕ್ತಿಕ ಕಂಟೆಂಟ್ ಜೊತೆಗೆ ಫೋಟೋಸ್ ಆ್ಯಪ್ನಲ್ಲಿ ತಡೆರಹಿತವಾಗಿ ಸಂಯೋಜಿಸಲಾಗುತ್ತದೆ, ತ್ವರಿತವಾಗಿ ವೈಯಕ್ತಿಕ ಮತ್ತು ಹಂಚಿಕೊಂಡ ಲೈಬ್ರರಿಗಳ ನಡುವೆ ಬದಲಿಸಲು ನೀವು ಫಿಲ್ಟರ್ ಅನ್ನು ಬಳಸಬಹುದು.
ಗಮನಿಸಿ: iOS 16.1, iPadOS 16.1, macOS 13, ಅಥವಾ ನಂತರದ ಆವೃತ್ತಿಗಳು iCloud ಹಂಚಿಕೊಂಡ ಫೋಟೋ ಲೈಬ್ರರಿಯನ್ನು ಬಳಸಲು ಬೇಕಾದ ಕನಿಷ್ಠ ಸಿಸ್ಟಮ್ ಅವಶ್ಯಕತೆಗಳಾಗಿವೆ. ಹಂಚಿಕೊಂಡ ಲೈಬ್ರರಿಗೆ ಸೇರಿಸಲಾದ ಫೋಟೋಗಳು ಮತ್ತು ವೀಡಿಯೊಗಳು ಸಾಫ್ಟ್ವೇರ್ನ ಹಿಂದಿನ ಆವೃತ್ತಿಗಳನ್ನು ಹೊಂದಿರುವ ಸಾಧನಗಳಲ್ಲಿ ಲಭ್ಯವಿರುವುದಿಲ್ಲ.
ನೀವು ಪ್ರಾರಂಭಿಸುವ ಮೊದಲು
ನೀವು iCloud ಹಂಚಿಕೊಂಡ ಫೋಟೋ ಲೈಬ್ರರಿಯನ್ನು ಸೆಟಪ್ ಮಾಡುವ ಮೊದಲು ಅಥವಾ ಸೇರಿಕೊಳ್ಳುವ ಮೊದಲು, ನೀವು iCloud ಫೋಟೋಗಳನ್ನು ಆನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಸೆಟ್ಟಿಂಗ್ಸ್ > [ನಿಮ್ಮ ಹೆಸರು] > iCloud > ಫೋಟೋಸ್ಗೆ ಹೋಗಿ, ಈ iPhone ಅನ್ನು ಸಿಂಕ್ ಮಾಡಿ ಎಂಬುದು ಆನ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಗಮನಿಸಿ: ಹಂಚಿಕೊಂಡ ಲೈಬ್ರರಿಯನ್ನು ಸೆಟಪ್ ಮಾಡಿ ಎಂಬುದು ಆನ್ ಆಗಿದ್ದರೆ ನೀವು ಕುಟುಂಬ ಹಂಚಿಕೆ ಎಂಬುದನ್ನು ಆನ್ ಮಾಡಬೇಕಿಲ್ಲ.
iCloud ಹಂಚಿಕೊಂಡ ಫೋಟೋ ಲೈಬ್ರರಿಯನ್ನು ಸೆಟಪ್ ಮಾಡಿ
ಹಂಚಿಕೊಂಡ ಲೈಬ್ರರಿಯನ್ನು ಸೆಟಪ್ ಮಾಡಿದ ವ್ಯಕ್ತಿಯು ವ್ಯವಸ್ಥಾಪಕರಾಗಿರುತ್ತಾರೆ.
ನಿಮ್ಮ iPhoneನಲ್ಲಿರುವ ಫೋಟೋಸ್ ಆ್ಯಪ್ಗೆ
ಹೋಗಿ.
ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಖಾತೆಯನ್ನು ಟ್ಯಾಪ್ ಮಾಡಿ.
ಹಂಚಿಕೊಂಡ ಲೈಬ್ರರಿ ಅನ್ನು ಟ್ಯಾಪ್ ಮಾಡಿ, ನಂತರ ಭಾಗವಹಿಸುವವರನ್ನು ಸೇರಿಸಲು ಮತ್ತು ಹಂಚಿಕೊಂಡ ಲೈಬ್ರರಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಮೂವ್ ಮಾಡಲು ಸ್ಕ್ರೀನ್ನಲ್ಲಿ ಕಾಣಿಸುವ ಸೂಚನೆಗಳನ್ನು ಅನುಸರಿಸಿ.
ಗಮನಿಸಿ: ಹಂಚಿಕೊಂಡ ಲೈಬ್ರರಿಗೆ ನೀವು ಸೇರಿಸುವ ಫೋಟೋಗಳು ಮತ್ತು ವೀಡಿಯೊಗಳು ನಿಮ್ಮ ವೈಯಕ್ತಿಕ ಲೈಬ್ರರಿಯಲ್ಲಿ ಕಾಣಿಸುವುದಿಲ್ಲ; ನಿಮ್ಮ iCloud ಹಂಚಿಕೊಂಡ ಫೋಟೋ ಲೈಬ್ರರಿ ಮತ್ತು ವೈಯಕ್ತಿಕ ಲೈಬ್ರರಿಯನ್ನು ನೋಡುವುದರ ನಡುವೆ ಬದಲಿಸಿ ಅನ್ನು ನೋಡಿ.
ನೀವು ಹಂಚಿಕೊಂಡ ಲೈಬ್ರರಿಗೆ ಸೇರಿಸುವ ಫೋಟೋಗಳು ಮತ್ತು ವೀಡಿಯೊಗಳ ಪ್ರಿವ್ಯೂವನ್ನು ನೋಡಬಹುದು ಮತ್ತು ಸಂದೇಶ ಅಥವಾ ವೆಬ್ ಲಿಂಕ್ ಬಳಸಿ ಭಾಗವಹಿಸುವವರನ್ನು ಆಹ್ವಾನಿಸುವ ಮೊದಲು ಬದಲಾವಣೆಗಳನ್ನು ಮಾಡಬಹುದು.
iCloud ಹಂಚಿಕೊಂಡ ಫೋಟೋ ಲೈಬ್ರರಿಗೆ ಸೇರಿಕೊಳ್ಳಿ
iCloud ಹಂಚಿಕೊಂಡ ಫೋಟೋ ಲೈಬ್ರರಿಗೆ ಸೇರಿಕೊಳ್ಳಲು, ವ್ಯವಸ್ಥಾಪಕರು ಕಳುಹಿಸಿದ ಆಹ್ವಾನವನ್ನು ಟ್ಯಾಪ್ ಮಾಡಿ, ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ. ಸೆಟಪ್ ಸಮಯದಲ್ಲಿ, ನೀವು ವ್ಯವಸ್ಥಾಪಕರಂತೆಯೇ ಹಂಚಿಕೊಂಡ ಲೈಬ್ರರಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಸೇರಿಸಬಹುದು (iCloud ಹಂಚಿಕೊಂಡ ಫೋಟೋ ಲೈಬ್ರರಿಯನ್ನು ಸೆಟಪ್ ಮಾಡಿ ಅನ್ನು ನೋಡಿ).
ನೀವು ಹಂಚಿಕೊಂಡ ಲೈಬ್ರರಿಗೆ ಸೇರಿಕೊಂಡ ನಂತರ, ನೀವು ಅದಕ್ಕೆ ಹಲವಾರು ರೀತಿಯಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಸೇರಿಸಬಹುದು ಹಾಗೂ ವ್ಯವಸ್ಥಾಪಕರು ಮತ್ತು ಇತರ ಭಾಗವಹಿಸುವವರಂತೆ ನೀವೂ ಕೂಡ ಆ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಬಹುದು. iCloud ಹಂಚಿಕೊಂಡ ಫೋಟೋ ಲೈಬ್ರರಿಗೆ ಕಂಟೆಂಟ್ ಅನ್ನು ಸೇರಿಸಿ ಅನ್ನು ನೋಡಿ.
iCloud ಹಂಚಿಕೊಂಡ ಫೋಟೋ ಲೈಬ್ರರಿಗೆ ಭಾಗವಹಿಸುವವರನ್ನು ಸೇರಿಸಿ
iCloud ಹಂಚಿಕೊಂಡ ಫೋಟೋ ಲೈಬ್ರರಿಯನ್ನು ಸೆಟಪ್ ಮಾಡುವ ವ್ಯಕ್ತಿಯು (ವ್ಯವಸ್ಥಾಪಕರು) ಹಂಚಿಕೊಂಡ ಲೈಬ್ರರಿಗೆ ಹೊಸ ಭಾಗವಹಿಸುವವರನ್ನು ಸೇರಿಸಬಹುದು.
ನಿಮ್ಮ iPhoneನಲ್ಲಿರುವ ಫೋಟೋಸ್ ಆ್ಯಪ್ಗೆ
ಹೋಗಿ.
ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಖಾತೆಯನ್ನು ಟ್ಯಾಪ್ ಮಾಡಿ.
ಹಂಚಿಕೊಂಡ ಲೈಬ್ರರಿಯ ಬಲಭಾಗದಲ್ಲಿರುವ ‘ನಿರ್ವಹಿಸಿ’ ಎಂಬುದನ್ನು ಟ್ಯಾಪ್ ಮಾಡಿ, ನಂತರ ಭಾಗವಹಿಸುವವರನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.
ಗಮನಿಸಿ: ಹಂಚಿಕೊಂಡ ಲೈಬ್ರರಿಯು ವ್ಯವಸ್ಥಾಪಕರನ್ನು ಒಳಗೊಂಡಂತೆ ಗರಿಷ್ಠ ಆರು ಭಾಗವಹಿಸುವವರನ್ನು ಒಳಗೊಂಡಿರುತ್ತದೆ; ನೀವು ಒಂದು ಸಮಯದಲ್ಲಿ ಒಂದು ಹಂಚಿಕೊಂಡ ಲೈಬ್ರರಿಗೆ ಮಾತ್ರ ಸೇರಬಹುದು.
iCloud ಹಂಚಿಕೊಂಡ ಫೋಟೋ ಲೈಬ್ರರಿಯನ್ನು ಡಿಲೀಟ್ ಮಾಡಿ ಅಥವಾ ಬಿಟ್ಟುಬಿಡಿ
ನೀವು iCloud ಹಂಚಿಕೊಂಡ ಫೋಟೋ ಲೈಬ್ರರಿಯ ವ್ಯವಸ್ಥಾಪಕರಾಗಿದ್ದರೆ, ನೀವು ಅದನ್ನು ಡಿಲೀಟ್ ಮಾಡಬಹುದು. ನೀವು ವ್ಯವಸ್ಥಾಪಕರಲ್ಲದಿದ್ದರೆ, ನೀವು ಹಂಚಿಕೊಂಡ ಲೈಬ್ರರಿಯನ್ನು ಬಿಟ್ಟು ಹೋಗಬಹುದು.
ನಿಮ್ಮ iPhoneನಲ್ಲಿರುವ ಫೋಟೋಸ್ ಆ್ಯಪ್ಗೆ
ಹೋಗಿ.
ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಖಾತೆಯನ್ನು ಟ್ಯಾಪ್ ಮಾಡಿ.
ಹಂಚಿಕೊಂಡ ಲೈಬ್ರರಿಯ ಬಲಭಾಗದಲ್ಲಿರುವ ‘ನಿರ್ವಹಿಸಿ’ ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಟ್ಯಾಪ್ ಮಾಡಿ:
ಹಂಚಿಕೊಂಡ ಲೈಬ್ರರಿಯನ್ನು ಡಿಲೀಟ್ ಮಾಡಿ: ಹಂಚಿಕೊಂಡ ಲೈಬ್ರರಿಯನ್ನು ಡಿಲೀಟ್ ಮಾಡಿದಾಗ, 7 ದಿನಗಳಿಗಿಂತಲೂ ಹೆಚ್ಚಿನ ದಿನಗಳಿಂದ ಹಂಚಿಕೊಂಡ ಲೈಬ್ರರಿಯ ಸದಸ್ಯರಾಗಿರುವ ಭಾಗವಹಿಸುವವರು, ಹಂಚಿಕೊಂಡ ಲೈಬ್ರರಿಯಲ್ಲಿರುವ ಎಲ್ಲವನ್ನೂ ತಮ್ಮ ಸ್ವಂತ ಲೈಬ್ರರಿಗಳಿಗೆ ಕಾಪಿ ಮಾಡಿಕೊಳ್ಳಬಹುದು. 7ಕ್ಕಿಂತ ಕಡಿಮೆ ದಿನಗಳಿಂದ ಸದಸ್ಯರಾಗಿರುವ ಭಾಗವಹಿಸುವವರು ತಾವು ಸೇರಿಸಿದ ಕಂಟೆಂಟ್ ಅನ್ನು ಮಾತ್ರ ಕಾಪಿ ಮಾಡಬಹುದು.
ಹಂಚಿಕೊಂಡ ಲೈಬ್ರರಿಯನ್ನು ಬಿಟ್ಟುಬಿಡಿ: ನೀವು ಹಂಚಿಕೊಂಡ ಲೈಬ್ರರಿಯನ್ನು ತೊರೆದಾಗ, ಹಂಚಿಕೊಂಡ ಲೈಬ್ರರಿಯಲ್ಲಿರುವ ಎಲ್ಲವನ್ನೂ ನಿಮ್ಮ ಸ್ವಂತ ಲೈಬ್ರರಿಗೆ ಅಥವಾ ನೀವು ಸೇರಿಸಿದ ಕಂಟೆಂಟ್ಗೆ ಮಾತ್ರ ಕಾಪಿ ಮಾಡಬಹುದು.
ಹಂಚಿಕೊಂಡ ಲೈಬ್ರರಿಗೆ ಸೇರಿಸಲಾದ ಎಲ್ಲಾ ಕಂಟೆಂಟ್, ಲೈಬ್ರರಿ ವ್ಯವಸ್ಥಾಪಕರ iCloud ಸಂಗ್ರಹ ಸ್ಥಳವನ್ನು ಕಡಿಮೆ ಮಾಡುತ್ತದೆ. ನಿಮ್ಮ iCloud ಹಂಚಿಕೊಂಡ ಫೋಟೋ ಲೈಬ್ರರಿಗೆ ಸಂಗ್ರಹಣಾ ಸ್ಥಳವನ್ನು ಸೇರಿಸಿ ಅನ್ನು ನೋಡಿ.