iPhone ಅನ್ನು CarPlayಗೆ ಕನೆಕ್ಟ್ ಮಾಡಿ
ನಿಮ್ಮ ವಾಹನದ USB ಪೋರ್ಟ್ ಅಥವಾ ಅದರ ವಯರ್ಲೆಸ್ ಸಾಮರ್ಥ್ಯವನ್ನು ಬಳಸಿಕೊಂಡು ನಿಮ್ಮ iPhone ಮತ್ತು ನಿಮ್ಮ ವಾಹನವನ್ನು ಕನೆಕ್ಟ್ ಮಾಡುವ ಮೂಲಕ CarPlayಯನ್ನು ಸೆಟಪ್ ಮಾಡಿ.
ನಿಮ್ಮ ಕಾರನ್ನು ಸ್ಟಾರ್ಟ್ ಮಾಡಿ, ನಂತರ Siri ಆನ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮ iPhone ಅನ್ನು ನಿಮ್ಮ ಕಾರ್ಗೆ ಕನೆಕ್ಟ್ ಮಾಡಿ:
USB ಕೇಬಲ್ ಮೂಲಕ ನಿಮ್ಮ ಕಾರ್ CarPlayಯನ್ನು ಬೆಂಬಲಿಸಿದರೆ: ನಿಮ್ಮ ಕಾರಿನ USB ಪೋರ್ಟ್ಗೆ ನಿಮ್ಮ iPhone ಅನ್ನು ಪ್ಲಗ್ ಮಾಡಿ. USB ಪೋರ್ಟ್ ಅನ್ನು CarPlay ಐಕಾನ್ ಅಥವಾ ಸ್ಮಾರ್ಟ್ಫೋನ್ ಐಕಾನ್ ಮೂಲಕ ಲೇಬಲ್ ಮಾಡಿರಬಹುದು. Apple USB ಕೇಬಲ್ ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ವಯರ್ಲೆಸ್ ಮತ್ತು USB ಕೇಬಲ್ ಮೂಲಕ ನಿಮ್ಮ ಕಾರ್ CarPlayಯನ್ನು ಬೆಂಬಲಿಸಿದರೆ: ನಿಮ್ಮ ಕಾರಿನ USB ಪೋರ್ಟ್ಗೆ ನಿಮ್ಮ iPhone ಅನ್ನು ಪ್ಲಗ್ ಮಾಡಿ. ಮುಂದಿನ ಬಾರಿ ನಿಮ್ಮ iPhone ಅನ್ನು CarPlayಗೆ ಕನೆಕ್ಟ್ ಮಾಡಲು ನೀವು ಪ್ರಯತ್ನಿಸಿದಾಗ, ನಿಮ್ಮ iPhoneನಲ್ಲಿನ ಅಲರ್ಟ್ ನಿಮಗೆ ವಯರ್ಲೆಸ್ ಆಗಿ ಕನೆಕ್ಟ್ ಮಾಡಲು ಅನುಮತಿಸುತ್ತದೆ.
ನಿಮ್ಮ ಕಾರು ವೈರ್ಲೆಸ್ CarPlayಯನ್ನು ಮಾತ್ರ ಬೆಂಬಲಿಸಿದರೆ: ನಿಮ್ಮ ಸ್ಟೀರಿಂಗ್ ವೀಲ್ನಲ್ಲಿ ವಾಯ್ಸ್ ಕಮಾಂಡ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ. ನಿಮ್ಮ ಸ್ಟೀರಿಯೊ ವಯರ್ಲೆಸ್ ಅಥವಾ Bluetood ಮೋಡ್ನಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ ನಿಮ್ಮ iPhoneನಲ್ಲಿ, ಸೆಟ್ಟಿಂಗ್ಸ್ > Wi-Fiಗೆ ಹೋಗಿ ಮತ್ತು Wi-Fi ಕೂಡ ಆನ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. CarPlay ನೆಟ್ವರ್ಕ್ ಅನ್ನು ಟ್ಯಾಪ್ ಮಾಡಿ ಮತ್ತು ಸ್ವಯಂ-ಸೇರಿಕೊಳ್ಳಿ ಎಂಬುದನ್ನು ಆನ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ. ನಂತರ, ಸೆಟ್ಟಿಂಗ್ಸ್ > ಸಾಮಾನ್ಯ > CarPlay ಎಂಬಲ್ಲಿಗೆ ಹೋಗಿ ಮತ್ತು ನಿಮ್ಮ ಕಾರ್ ಅನ್ನು ಆಯ್ಕೆಮಾಡಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಕಾರ್ ಮ್ಯಾನ್ಯುಯಲ್ ಅನ್ನು ನೋಡಿ.
ಗಮನಿಸಿ: ಕೆಲವೊಂದು ಎಲೆಕ್ಟ್ರಿಕ್ ವಾಹನಗಳಲ್ಲಿ CarPlayಗೆ ಕನೆಕ್ಟ್ ಆದ ನಂತರ, EV ರೂಟಿಂಗ್ಗಾಗಿ ವಾಹನವನ್ನು ಗುರುತಿಸಲು ನಕ್ಷೆ ಆ್ಯಪ್ ಅನ್ನು ಬಳಸಿ. ನೋಡಿ iPhoneನಲ್ಲಿನ ನಕ್ಷೆ ಆ್ಯಪ್ನಲ್ಲಿ ಎಲೆಕ್ಟ್ರಿಕ್ ವಾಹನದ ರೂಟಿಂಗ್ ಅನ್ನು ಸೆಟಪ್ ಮಾಡುವುದು.
ಕೆಲವು ವಾಹನ ಮಾಡಲ್ಗಳಲ್ಲಿ, ನೀವು iPhone ಅನ್ನು ಕನೆಕ್ಟ್ ಮಾಡಿದಾಗ CarPlay Home ಸ್ವಯಂಚಾಲಿತವಾಗಿ ಕಾಣಿಸಿಕೊಳ್ಳುತ್ತದೆ.
CarPlay ಹೋಮ್ ಕಾಣಿಸದಿದ್ದರೆ, ನಿಮ್ಮ ವಾಹನದ ಡಿಸ್ಪ್ಲೇಯಲ್ಲಿರುವ CarPlay ಲೋಗೊವನ್ನು ಆಯ್ಕೆಮಾಡಿ.
