iPhoneನಲ್ಲಿ ನಿಮ್ಮ ಬಗ್ಗೆ Siriಗೆ ಹೇಳುವುದು
ನಿಮ್ಮ ಮನೆ ಮತ್ತು ಕೆಲಸದ ವಿಳಾಸಗಳು ಮತ್ತು ನಿಮ್ಮ ಸಂಬಂಧಗಳಂತಹ ವಿಷಯಗಳ ಬಗ್ಗೆ—ನೀವು Siriಗೆ ಮಾಹಿತಿಯನ್ನು ಒದಗಿಸಬಹುದು. ಹೆಚ್ಚು ವೈಯಕ್ತಿಕಗೊಳಿಸಿದ ಅನುಭವಕ್ಕಾಗಿ “Give me driving directions home” ಮತ್ತು “FaceTime mom.” ಈ ರೀತಿ ಏನಾದರೂ ಹೇಳಿ.
ನೀವು ಯಾರು ಎಂಬುದನ್ನು Siriಗೆ ತಿಳಿಸುವುದು
ಸಂಪರ್ಕ ಆ್ಯಪ್
ಅನ್ನು ತೆರೆಯಿರಿ, ನಂತರ ನಿಮ್ಮ ಸಂಪರ್ಕ ಮಾಹಿತಿಯನ್ನು ಭರ್ತಿ ಮಾಡಿ.
ಸೆಟ್ಟಿಂಗ್ಸ್
> Siri (ಅಥವಾ Apple Intelligence ಮತ್ತು Siri) > ನನ್ನ ಮಾಹಿತಿ ಎಂಬಲ್ಲಿಗೆ ಹೋಗಿ, ನಂತರ ನಿಮ್ಮ ಹೆಸರನ್ನು ಟ್ಯಾಪ್ ಮಾಡಿ.
ನಿಮ್ಮ ಹೆಸರನ್ನು ಹೇಗೆ ಹೇಳಬೇಕು ಎಂಬುದನ್ನು Siriಗೆ ತಿಳಿಸಿ
ಸಂಪರ್ಕ ಆ್ಯಪ್
ಅನ್ನು ತೆರೆಯಿರಿ, ನಂತರ ನಿಮ್ಮ ಸಂಪರ್ಕ ಕಾರ್ಡ್ ಅನ್ನು ಟ್ಯಾಪ್ ಮಾಡಿ.
ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ, ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು ಫೀಲ್ಡ್ ಅನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ಉಚ್ಚಾರಣೆಯ ಹೆಸರಿನ ಫೀಲ್ಡ್ ಅನ್ನು ಆಯ್ಕೆಮಾಡಿ, ನಂತರ ನಿಮ್ಮ ಹೆಸರನ್ನು ಹೇಗೆ ಹೇಳಬೇಕೆಂದು ಟೈಪ್ ಮಾಡಿ.
ಸಂಪರ್ಕಗಳಲ್ಲಿ ನೀವು ಯಾವುದೇ ಇತರ ಸಂಪರ್ಕ ಕಾರ್ಡ್ಗೆ ಉಚ್ಚಾರಣೆಯನ್ನು ಸೇರಿಸಬಹುದು. ಸಂಪರ್ಕಗಳನ್ನು ಎಡಿಟ್ ಮಾಡಿ ಎಂಬುದನ್ನು ನೋಡಿ.
ಸಂಬಂಧದ ಕುರಿತು Siriಗೆ ಹೇಳುವುದು
“Hey Siri, Eliza Block is my wife” ಅಥವಾ “Hey Siri, Ashley Kamin is my mom.” ಈ ರೀತಿ ಏನಾದರೂ ಹೇಳಿ
ನಿಮ್ಮ Apple ಸಾಧನಗಳಲ್ಲಿ Siriಗೆ ನಿಮ್ಮ ಮಾಹಿತಿಗಳನ್ನು ಅಪ್ ಟು ಡೇಟ್ ಆಗಿರಿಸುವುದು
ಪ್ರತಿಯೊಂದು ಸಾಧನದಲ್ಲಿ, ಸೆಟ್ಟಿಂಗ್ಸ್ ಆ್ಯಪ್ ಗೆ ಹೋಗಿ, ನಂತರ ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಿ
ನೀವು iCloud ಅನ್ನು ಬಳಸುತ್ತಿದ್ದರೆ, ನಿಮ್ಮ Siri ಸೆಟ್ಟಿಂಗ್ಸ್ ನಿಮ್ಮ Apple ಸಾಧನಗಳಲ್ಲಿ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಬಳಸಿಕೊಂಡು ಅಪ್ ಟು ಡೇಟ್ ಆಗಿರುತ್ತವೆ.
Siri ವೈಯಕ್ತೀಕರಣವು, iPhone ಮತ್ತು ನಿಮ್ಮ ಇತರ ಸಾಧನಗಳಲ್ಲಿ ಅಪ್-ಟು-ಡೇಟ್ ಆಗುವುದನ್ನು ನೀವು ಬಯಸದಿದ್ದರೆ, ನೀವು iCloud ಸೆಟ್ಟಿಂಗ್ಸ್ಗೆ ಹೋಗುವ ಮೂಲಕ Siriಯನ್ನು ಆಫ್ ಮಾಡಬಹುದು.
ಸೆಟ್ಟಿಂಗ್ಸ್
> [ನಿಮ್ಮ ಹೆಸರು] > iCloud ಎಂಬಲ್ಲಿಗೆ ಹೋಗಿ.
ಎಲ್ಲವನ್ನೂ ನೋಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ Siriಯನ್ನು ಆಫ್ ಮಾಡಿ.
ಗಮನಿಸಿ: ನೀವು ಸ್ಥಳ ಸೇವೆಗಳನ್ನು ಆನ್ ಮಾಡಿದರೆ, ನೀವು ವಿನಂತಿಯನ್ನು ಮಾಡಿದಾಗ ನಿಮ್ಮ ಸಾಧನದ ಸ್ಥಳವನ್ನು Appleಗೆ ಕಳುಹಿಸಿಲಾಗುತ್ತದೆ ಮತ್ತು ನಿಮ್ಮ ವಿನಂತಿಗಳಿಗೆ ಅದರ ಪ್ರತಿಕ್ರಿಯೆಗಳ ನಿಖರತೆಯನ್ನು ಸುಧಾರಿಸಲು Siriಗೆ ಸಹಾಯ ಮಾಡುತ್ತದೆ. ಸಂಬಂಧಿತ ಪ್ರತಿಕ್ರಿಯೆಗಳನ್ನು ನೀಡಲು, Apple ನಿಮ್ಮ ಇಂಟರ್ನೆಟ್ ಕನೆಕ್ಷನ್ನ IP ವಿಳಾಸವನ್ನು ಭೌಗೋಳಿಕ ಪ್ರದೇಶಕ್ಕೆ ಹೊಂದಿಸುವ ಮೂಲಕ ನಿಮ್ಮ ಸ್ಥಳವನ್ನು ಅಂದಾಜು ಮಾಡಲು ಬಳಸಬಹುದು. ನೀವು ಹಂಚಿಕೊಳ್ಳುವ ಸ್ಥಳದ ಮಾಹಿತಿಯನ್ನು ನಿಯಂತ್ರಿಸಿ ಎಂಬುದನ್ನು ನೋಡಿ.