iOS 18
CarPlay ಮೂಲಕ ಪಾಡ್ಕಾಸ್ಟ್ಗಳನ್ನು ಪ್ಲೇ ಮಾಡಿ
ನಿಮ್ಮ iPhoneನಲ್ಲಿರುವ ಪಾಡ್ಕಾಸ್ಟ್ಗಳನ್ನು ಪ್ಲೇ ಮಾಡಲು CarPlayಯನ್ನು ಬಳಸಿ.
ಪಾಡ್ಕಾಸ್ಟ್ಗಳನ್ನು ತೆರೆಯಲು ಮತ್ತು ಪಾಡ್ಕಾಸ್ಟ್ಗಳನ್ನು ಆಯ್ಕೆ ಮಾಡಿ ಅದನ್ನು ಪ್ಲೇ ಮಾಡಲು ನಿಮ್ಮ ವಾಹನಗಳ ಬಿಲ್ಟ್ ಇನ್ ಕಂಟ್ರೋಲರ್ಗಳನ್ನು ನೀವು ಬಳಸಬಹುದು.
ಗಮನಿಸಿ: ನೀವು CarPlay ಡ್ಯಾಶ್ಬೋರ್ಡ್ ಅನ್ನು ನೋಡುತ್ತಿದ್ದರೆ, ಪಾಡ್ಕಾಸ್ಟ್ಗಳು ಸೇರಿದಂತೆ ನಿಮ್ಮ ಎಲ್ಲಾ CarPlay ಆ್ಯಪ್ಗಳ ಪುಟಗಳನ್ನು ನೋಡಲು ಅನ್ನು ಟ್ಯಾಪ್ ಮಾಡಿ.
ಪಾಡ್ಕಾಸ್ಟ್ ಪ್ಲೇಬ್ಯಾಕ್ ಅನ್ನು ನಿಯಂತ್ರಿಸಲು ನೀವು ನಿಮ್ಮ ವಾಹನದ ಸ್ಟೀರಿಂಗ್ ವೀಲ್ನಲ್ಲಿರುವ ಕಂಟ್ರೋಲ್ಗಳು, ಈಗ ಪ್ಲೇ ಆಗುತ್ತಿರುವ ಸ್ಕ್ರೀನ್ ಮೇಲಿನ ಬಟನ್ಗಳು ಮತ್ತು CarPlay ಡ್ಯಾಶ್ಬೋರ್ಡ್ ಅನ್ನು ಸಹ ಬಳಸಬಹುದು.
ಬಟನ್ | ವಿವರಣೆ | ||||||||||
---|---|---|---|---|---|---|---|---|---|---|---|
![]() | ಪ್ಲೇ ಮಾಡಿ | ||||||||||
![]() | ವಿರಾಮಗೊಳಿಸಿ | ||||||||||
![]() | 15 ಸೆಕೆಂಡ್ಗಳಷ್ಟು ಹಿಂದೆ ಹೋಗಿ | ||||||||||
![]() | 30 ಸೆಕೆಂಡ್ಗಳಷ್ಟು ಮುಂದಕ್ಕೆ ಹೋಗಿ | ||||||||||
![]() | ವೇಗವಾದ ಅಥವಾ ನಿಧಾನವಾದ ಪ್ಲೇಬ್ಯಾಕ್ ವೇಗವನ್ನು ಆರಿಸಿ |
ಇದನ್ನು ಸಹ ನೋಡಿCarPlayನೊಂದಿಗೆ ಆಡಿಯೊಬುಕ್ಗಳನ್ನು ಪ್ಲೇ ಮಾಡಿ