ನಿಮ್ಮ iPhone ಕ್ಯಾಮರಾ ಬಳಸಿ ProRes ವೀಡಿಯೊಗಳನ್ನು ರೆಕಾರ್ಡ್ ಮಾಡಿ
ಬೆಂಬಲಿತ ಮಾಡಲ್ಗಳಲ್ಲಿ, ProResನಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಮತ್ತು ಎಡಿಟ್ ಮಾಡಲು ನಿಮ್ಮ iPhone ಕ್ಯಾಮರಾವನ್ನು ನೀವು ಬಳಸಬಹುದು, ಇದು ಹೆಚ್ಚಿನ ಬಣ್ಣದ ಫಿಡೆಲಿಟಿ ಮತ್ತು ಕಡಿಮೆ ಕಂಪ್ರೆಷನ್ ಅನ್ನು ನೀಡುತ್ತದೆ.
ಮುಂಬದಿ ಕ್ಯಾಮರಾ ಸೇರಿದಂತೆ ಎಲ್ಲಾ ಕ್ಯಾಮರಾಗಳಲ್ಲಿ ProRes ಲಭ್ಯವಿದೆ. ಸಿನಿಮ್ಯಾಟಿಕ್, ಟೈಮ್-ಲ್ಯಾಪ್ಸ್ ಅಥವಾ ಸ್ಲೋ ಮೋಷನ್ ಮೋಡ್ನಲ್ಲಿ ProRes ಬೆಂಬಲಿತವಾಗಿಲ್ಲ.
ಗಮನಿಸಿ: ProRes ವೀಡಿಯೊಗಳು ದೊಡ್ಡ ಗಾತ್ರದ ಫೈಲ್ಗಳನ್ನು ಹೊಂದಿರುತ್ತವೆ.
ProRes ಅನ್ನು ಸೆಟಪ್ ಮಾಡಿ
ProRes ಅನ್ನು ಸೆಟಪ್ ಮಾಡಲು, ಸೆಟ್ಟಿಂಗ್ಸ್ ಆ್ಯಪ್ > ಕ್ಯಾಮರಾ > ಫಾರ್ಮ್ಯಾಟ್ಗಳು ಎಂಬಲ್ಲಿಗೆ ಹೋಗಿ, ನಂತರ Apple ProRes ಅನ್ನು ಆನ್ ಮಾಡಿ.
ProRes ಸಹಾಯದಿಂದ ವೀಡಿಯೊ ರೆಕಾರ್ಡ್ ಮಾಡಿ
ನಿಮ್ಮ iPhoneನಲ್ಲಿ ಕ್ಯಾಮರಾ ಆ್ಯಪ್
ಅನ್ನು ತೆರೆಯಿರಿ.
ವೀಡಿಯೊ ಮೋಡ್ ಅನ್ನು ಆಯ್ಕೆಮಾಡಿ, ನಂತರ ProRes ಅನ್ನು ಆನ್ ಮಾಡಲು
ಅನ್ನು ಟ್ಯಾಪ್ ಮಾಡಿ.
ರೆಕಾರ್ಡ್ ಮಾಡುವುದನ್ನು ಪ್ರಾರಂಭಿಸಲು, ರೆಕಾರ್ಡ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ, ವಾಲ್ಯೂಮ್ ಬಟನ್ ಅನ್ನು ಒತ್ತಿ ಅಥವಾ ಕ್ಯಾಮರಾ ಕಂಟ್ರೋಲ್ ಅನ್ನು ಕ್ಲಿಕ್ ಮಾಡಿ (ಬೆಂಬಲಿತ ಮಾಡಲ್ಗಳಲ್ಲಿ).
ಹಿಂಬದಿ ಕ್ಯಾಮರಾ ಬಳಸಿ ರೆಕಾರ್ಡ್ ಮಾಡುವಾಗ, ಝೂಮ್ ಇನ್ ಅಥವಾ ಝೂಮ್ ಔಟ್ ಮಾಡಲು ನೀವು ಪಿಂಚ್ ಮಾಡಬಹುದು. ಲೆನ್ಸ್ಗಳ ನಡುವೆ ಬದಲಾಯಿಸಲು .5x, 1x, 2x, 3x, ಮತ್ತು 5x (ನಿಮ್ಮ ಮಾಡಲ್ ಅನ್ನು ಅವಲಂಬಿಸಿ) ಅನ್ನು ಟ್ಯಾಪ್ ಮಾಡಿ ಅಥವಾ ಲೆನ್ಸ್ ಚೂಸರ್ ಅನ್ನು ಒತ್ತಿ ಹಿಡಿದಿಟ್ಟುಕೊಳ್ಳಿ, ನಂತರ ಹೆಚ್ಚು ನಿಖರವಾದ ಝೂಮ್ ಕಂಟ್ರೋಲ್ಗಾಗಿ ಡಯಲ್ ಅನ್ನು ಸ್ಲೈಡ್ ಮಾಡಿ.
ರೆಕಾರ್ಡ್ ಮಾಡುವುದನ್ನು ನಿಲ್ಲಿಸಲು, ರೆಕಾರ್ಡ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ, ವಾಲ್ಯೂಮ್ ಬಟನ್ ಅನ್ನು ಒತ್ತಿ ಅಥವಾ ಕ್ಯಾಮರಾ ಕಂಟ್ರೋಲ್ ಅನ್ನು ಕ್ಲಿಕ್ ಮಾಡಿ (ಬೆಂಬಲಿತ ಮಾಡಲ್ಗಳಲ್ಲಿ).
ನೀವು ProRes ಅನ್ನು ಆಫ್ ಮಾಡಲು ಬಯಸಿದಾಗ
ಅನ್ನು ಟ್ಯಾಪ್ ಮಾಡಿ.
30 fpsನಲ್ಲಿ 4Kವರೆಗೆ ರೆಕಾರ್ಡ್ ಮಾಡಲು ProRes ಲಭ್ಯವಿದೆ. iPhone 15 Pro ಮತ್ತು iPhone 15 Pro Max ಎರಡೂ ಕಂಪ್ಯಾಟಿಬಲ್ ಬಾಹ್ಯ ಸಂಗ್ರಹ ಸಾಧನಕ್ಕೆ ಕನೆಕ್ಟ್ ಆದಾಗ 60 fpsನಲ್ಲಿ 4K ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು. iPhone 16 Pro ಮತ್ತು iPhone 16 Pro Max ಎರಡೂ ಕಂಪ್ಯಾಟಿಬಲ್ ಬಾಹ್ಯ ಸಂಗ್ರಹ ಸಾಧನಕ್ಕೆ ಕನೆಕ್ಟ್ ಆದಾಗ 60 fpsನಲ್ಲಿ 4K ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.
128 GB ಇರುವ iPhone 15 Pro ಮತ್ತು iPhone 16 Pro ಮಾಡಲ್ಗಳಲ್ಲಿ, ಆಂತರಿಕ ಸಂಗ್ರಹಣೆಗೆ ಮಾಡಬಹುದಾದ 1080p ರೆಕಾರ್ಡಿಂಗ್ 30 fpsನಲ್ಲಿ ಮಾತ್ರ ಲಭ್ಯವಿದೆ, ಆದರೆ iPhone 15 Pro ಮಾಡಲ್ಗಳಲ್ಲಿ, 4K ವೀಡಿಯೊವನ್ನು 60 fpsವರೆಗೆ, iPhone 16 ಮತ್ತು iPhone 16 Plus ಮಾಡಲ್ಗಳಲ್ಲಿ 120 fpsವರೆಗೆ ನೀವು ರೆಕಾರ್ಡ್ ಮಾಡಬಹುದು. iPhoneನಲ್ಲಿ Apple ProRes ಬಗ್ಗೆ ಎಂಬ Apple ಬೆಂಬಲ ಲೇಖನವನ್ನು ನೋಡಿ.
ನಿಮ್ಮ ProRes ರೆಕಾರ್ಡಿಂಗ್ಗಳಿಗಾಗಿ ಬಣ್ಣದ ಎನ್ಕೋಡಿಂಗ್ ಆಯ್ಕೆಗಳನ್ನು ಆಯ್ಕೆಮಾಡಿ
iPhone 15 Pro, iPhone 15 Pro Max, iPhone 16 Pro, ಮತ್ತು iPhone 16 Pro Maxನಲ್ಲಿ ನೀವು ProResನಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡುವಾಗ HDR, SDR, ಅಥವಾ ಲಾಗ್ ಕಲರ್ ಎನ್ಕೋಡಿಂಗ್ ನಡುವೆ ನಿಮಗೆ ಬೇಕಾದ ಆಯ್ಕೆಯನ್ನು ಮಾಡಬಹುದು.
ಸೆಟ್ಟಿಂಗ್ಸ್ ಆ್ಯಪ್
> ಕ್ಯಾಮರಾ > ಫಾರ್ಮ್ಯಾಟ್ಗಳು ಎಂಬಲ್ಲಿಗೆ ಹೋಗಿ, ನಂತರ Apple ProRes ಅನ್ನು ಆನ್ ಮಾಡಿ.
ProRes ಎನ್ಕೋಡಿಂಗ್ ಎಂಬುದನ್ನು ಟ್ಯಾಪ್ ಮಾಡಿ, ನಂತರ HDR, SDR ಅಥವಾ ಲಾಗ್ ಎಂಬುದನ್ನು ಟ್ಯಾಪ್ ಮಾಡಿ.