ನಿಮ್ಮ ಮಗುವಿನ ಸಾಧನದಲ್ಲಿ ಸೂಕ್ಷ್ಮ ಚಿತ್ರಗಳು ಮತ್ತು ವೀಡಿಯೊಗಳಿಗಾಗಿ ಪರಿಶೀಲಿಸುವುದು
ಸಂವಹನ ಸುರಕ್ಷತೆಯೊಂದಿಗೆ, ನಿಮ್ಮ ಮಗುವನ್ನು ಸೂಕ್ಷ್ಮವಾದ ಚಿತ್ರಗಳು ಮತ್ತು ವೀಡಿಯೊಗಳನ್ನು ನೋಡುವುದರಿಂದ ಅಥವಾ ಹಂಚಿಕೊಳ್ಳುವುದರಿಂದ ರಕ್ಷಿಸಲು ನೀವು ಸಹಾಯ ಮಾಡಬಹುದು. ಕಳುಹಿಸಿದ ಅಥವಾ ಸ್ವೀಕರಿಸಿದ ಚಿತ್ರಗಳು ಅಥವಾ ವೀಡಿಯೊಗಳು ನಗ್ನತೆಯನ್ನು ಒಳಗೊಂಡಿವೆ ಎಂದು ಸಂವಹನ ಸುರಕ್ಷತೆಯು ಪತ್ತೆಮಾಡಿದರೆ, ಅದು ಅವುಗಳನ್ನು ಬ್ಲರ್ ಮಾಡುತ್ತದೆ ಮತ್ತು ಸಹಾಯವನ್ನು ಪಡೆಯುವ ಆಯ್ಕೆಗಳೊಂದಿಗೆ ಅವರಿಗೆ ಎಚ್ಚರಿಕೆ ನೀಡುತ್ತದೆ. ಸಂವಹನ ಸುರಕ್ಷತೆಯು ಸಾಧನವನ್ನು ಅವಲಂಬಿಸಿ ಸಂದೇಶ, AirDrop ಮತ್ತು ಸಂಪರ್ಕದಂತಹ ಆ್ಯಪ್ಗಳಲ್ಲಿ ಕೆಲಸ ಮಾಡುತ್ತದೆ. ಹಂಚಿಕೊಂಡ ಚಿತ್ರಗಳು ಮತ್ತು ವೀಡಿಯೊಗಳಲ್ಲಿ ಯಾವುದೇ ರಕ್ತಪಾತ ಅಥವಾ ಹಿಂಸಾತ್ಮಕ ಕಂಟೆಂಟ್ ಕಂಡುಬಂದಲ್ಲಿ ಅದನ್ನು ಸಹ ಬ್ಲರ್ ಮಾಡಲಾಗುತ್ತದೆ.
ಗಮನಿಸಿ: ಸಂವಹನ ಸುರಕ್ಷತೆಯು 18 ವರ್ಷದೊಳಗಿನ ಮಕ್ಕಳಿಗೆ ಡಿಫಾಲ್ಟ್ ಆಗಿ ಆನ್ ಆಗಿರುತ್ತದೆ (ದೇಶ ಅಥವಾ ಪ್ರದೇಶಕ್ಕೆ ಅನುಗುಣವಾಗಿ ವಯಸ್ಸಿನಲ್ಲಿ ವ್ಯತ್ಯಾಸವಾಗುತ್ತದೆ). ಸಂವಹನ ಸುರಕ್ಷತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಮಗುವಿನ Apple ಸಾಧನದಲ್ಲಿ ಸಂವಹನ ಸುರಕ್ಷತೆಯ ಕುರಿತು ಎಂಬ Apple ಬೆಂಬಲ ಲೇಖನವನ್ನು ನೋಡಿ.
ನಿಮ್ಮ ಮಗುವಿನ ಸೆಟ್ಟಿಂಗ್ಸ್ ಅನ್ನು ತೆರೆಯಿರಿ:
iPhone ಅಥವಾ iPadನಲ್ಲಿ: ಸೆಟ್ಟಿಂಗ್ಸ್ ಆ್ಯಪ್ಗೆ ಹೋಗಿ, ಕುಟುಂಬ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಮಗುವಿನ ಹೆಸರನ್ನು ಟ್ಯಾಪ್ ಮಾಡಿ.
Macನಲ್ಲಿ: ಸಿಸ್ಟಂ ಸೆಟ್ಟಿಂಗ್ಸ್ಗೆ ಹೋಗಿ, ಕುಟುಂಬ ಎಂಬುದನ್ನು ಕ್ಲಿಕ್ ಮಾಡಿ, ನಂತರ ನಿಮ್ಮ ಮಗುವಿನ ಹೆಸರನ್ನು ಕ್ಲಿಕ್ ಮಾಡಿ.
ಸಂವಹನ ಸುರಕ್ಷತೆ ಎಂಬುದನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ, ನಂತರ ಅದನ್ನು ಆನ್ ಅಥವಾ ಆಫ್ ಮಾಡಿ. ನಿಮ್ಮ ಮಗುವಿನ ಸ್ಕ್ರೀನ್ ಟೈಮ್ ಪಾಸ್ಕೋಡ್ ಅನ್ನು ನೀವು ನಮೂದಿಸಬೇಕಾಗಬಹುದು.
ಅನಾಲಿಟಿಕ್ಸ್ ಮತ್ತು ಬಳಕೆಯ ಡೇಟವನ್ನು ಹಂಚಿಕೊಳ್ಳುವ ಮೂಲಕ ಸಂವಹನ ಸುರಕ್ಷತೆಯನ್ನು ಸುಧಾರಿಸಲು ನೀವು Appleಗೆ ಸಹಾಯ ಮಾಡಬಹುದು. Appleನೊಂದಿಗೆ ಯಾವುದೇ ಸಂದೇಶಗಳು ಅಥವಾ ಮೀಡಿಯಾವನ್ನು ಹಂಚಿಕೊಳ್ಳಲಾಗುವುದಿಲ್ಲ. ಸಂವಹನ ಸುರಕ್ಷತೆಯನ್ನು ಸುಧಾರಿಸಿ ಎಂಬುದನ್ನು ಆನ್ ಮಾಡಿ.
ಸಲಹೆ: ಡಿಜಿಟಲ್ ಸುರಕ್ಷತೆ ಮತ್ತು ಸೆಕ್ಸ್ಟಿಂಗ್ ಹಾಗೂ ನಗ್ನ ಚಿತ್ರಗಳಂತಹ ವಿಷಯಗಳ ಕುರಿತು ನಿಮ್ಮ ಮಗುವಿನೊಂದಿಗೆ ಹೇಗೆ ಮಾತನಾಡಬೇಕು ಎಂಬುದರ ಕುರಿತು ನೀವು ಮಾಹಿತಿಯ ಮೂಲಗಳನ್ನು ನೋಡಬಹುದು. ಮಕ್ಕಳ ಸುರಕ್ಷತಾ ಸಂಪನ್ಮೂಲಗಳನ್ನು ನೋಡಿ ಎಂಬುದನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ.