ನಿಮ್ಮ ಮಗುವಿನ Apple Watchನಲ್ಲಿ ಸ್ಕೂಲ್ಟೈಮ್ ಅನ್ನು ಬಳಸಲು ಪ್ರಾರಂಭಿಸುವುದು
ಸ್ಕೂಲ್ಟೈಮ್ ಎಂಬುದು ಶಾಲಾ ಅವಧಿಯಂತಹ, ನೀವು ಆರಿಸುವ ದಿನಗಳು ಮತ್ತು ಸಮಯಗಳಲ್ಲಿ ನಿಮ್ಮ ಮಗುವಿನ Apple Watchನಲ್ಲಿ ನೋಟಿಫಿಕೇಷನ್ಗಳು ಮತ್ತು ಆ್ಯಪ್ ಬಳಕೆಯನ್ನು ಬ್ಲಾಕ್ ಮಾಡುತ್ತದೆ. ಅದು ಸಕ್ರಿಯವಾಗಿರುವಾಗ, ಅವರ ವಾಚ್ ಫೇಸ್ನಲ್ಲಿ ಹಳದಿ ಬಣ್ಣದ ವೃತ್ತವು ಕಾಣಿಸಿಕೊಳ್ಳುತ್ತದೆ ಮತ್ತು “ಅಡಚಣೆ ಮಾಡಬೇಡಿ” ಎಂಬುದು ಆನ್ ಆಗುತ್ತದೆ. ನಿಮ್ಮ ಮಗು ಸಂದೇಶಗಳನ್ನು ಪರಿಶೀಲಿಸಲು ಅಥವಾ ತುರ್ತು ಸೇವೆಗಳಿಗೆ ಕರೆ ಮಾಡಲು ತಾತ್ಕಾಲಿಕವಾಗಿ ಸ್ಕೂಲ್ಟೈಮ್ನಿಂದ ನಿರ್ಗಮಿಸಬಹುದು ಮತ್ತು ಅವರು ಹಾಗೆ ಮಾಡಿದ ಪ್ರತಿ ಬಾರಿ ನೀವು ನೋಟಿಫಿಕೇಷನ್ ಸ್ವೀಕರಿಸುತ್ತೀರಿ. ನಿಮ್ಮ ಮಗು ತಮ್ಮ ಮಣಿಕಟ್ಟನ್ನು ಕೆಳಕ್ಕೆ ಇಳಿಸಿದಾಗ ಸ್ಕೂಲ್ಟೈಮ್ ಮತ್ತೆ ಆನ್ ಆಗುತ್ತದೆ.
ಗಮನಿಸಿ: ನಿಮ್ಮ ಮಕ್ಕಳಿಗಾಗಿ Apple Watch ಎಂಬುದು ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. ಬೆಂಬಲಿತ ನೆಟ್ವರ್ಕ್ ಪೂರೈಕೆದಾರರನ್ನು ಒಳಗೊಂಡಂತೆ ಲಭ್ಯತೆಯ ಕುರಿತ ಮಾಹಿತಿಗಾಗಿ, Apple Watch GPS + Cellular ಎಂಬುದನ್ನು ನೋಡಿ.
ನೀವು ಪ್ರಾರಂಭಿಸುವ ಮೊದಲು
ಕುಟುಂಬ ಸದಸ್ಯರ Apple Watchನಲ್ಲಿ ಸ್ಕೂಲ್ಟೈಮ್ ವೇಳಾಪಟ್ಟಿಗಳನ್ನು ಬಳಸಲು, ಮೊದಲು ನಿಮ್ಮ ಮಗುವಿಗಾಗಿ Apple Watch ಅನ್ನು ಸೆಟಪ್ ಮಾಡಿ. ಇದಕ್ಕೆ watchOS 7 ಅಥವಾ ನಂತರದ ಆವೃತ್ತಿಯನ್ನು ಹೊಂದಿರುವ ಈ Apple Watch ಮಾಡಲ್ಗಳಲ್ಲಿ ಒಂದು ಬೇಕಾಗುತ್ತದೆ:
ಮೊಬೈಲ್ ಸೇವೆ ಹೊಂದಿರುವ Apple Watch Series 6 ಅಥವಾ ನಂತರದ ಮಾಡಲ್ಗಳು
ಮೊಬೈಲ್ ಸೇವೆ ಹೊಂದಿರುವ Apple Watch SE (1ನೇ ಜನರೇಷನ್) ಅಥವಾ ನಂತರದ ಮಾಡಲ್ಗಳು
Apple Watch Ultra, Apple Watch Ultra 2 ಅಥವಾ ನಂತರದ ಮಾಡಲ್ಗಳು
ಆರಂಭಿಕ watch ಸೆಟಪ್ಗಾಗಿ ನಿಮಗೆ iOS 14 ಅಥವಾ ನಂತರದ ಆವೃತ್ತಿಯನ್ನು ಹೊಂದಿರುವ iPhone 6s ಅಥವಾ ನಂತರದ ಮಾಡಲ್ನ ಅಗತ್ಯವಿದೆ. ನಿಮ್ಮ ಸ್ವಂತ Apple Watchನಲ್ಲಿ ಸ್ಕೂಲ್ಟೈಮ್ ಅನ್ನು ಬಳಸಲು, ನಿಮಗೆ watchOS 7 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ.
ಗಮನಿಸಿ: ಕುಟುಂಬ ಸದಸ್ಯರಿಗಾಗಿ Apple Watch ಅನ್ನು ಸೆಟಪ್ ಮಾಡಲು ಮೊಬೈಲ್ ಸೇವೆ ಪ್ಲ್ಯಾನ್ನ ಅಗತ್ಯವಿಲ್ಲ, ಆದರೆ ಕೆಲವು ಫೀಚರ್ಗಳಿಗೆ ಅದು ಅಗತ್ಯವಾಗಿರುತ್ತದೆ.
ಸ್ಕೂಲ್ಟೈಮ್ ಅನ್ನು ಸೆಟಪ್ ಮಾಡುವುದು
ವಾಚ್ ಅನ್ನು ನಿರ್ವಹಿಸಲು ಬಳಸುವ iPhoneನಲ್ಲಿ Apple Watch ಆ್ಯಪ್ಗೆ
ಹೋಗಿ.
ನನ್ನ ವಾಚ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಕುಟುಂಬದ ವಾಚ್ಗಳು ಎಂಬುದರ ಕೆಳಗಿರುವ ವಾಚ್ ಅನ್ನು ಟ್ಯಾಪ್ ಮಾಡಿ.
ಅನ್ನು ಟ್ಯಾಪ್ ಮಾಡಿ, ನಂತರ ಸ್ಕೂಲ್ಟೈಮ್ ಎಂಬುದನ್ನು ಟ್ಯಾಪ್ ಮಾಡಿ.
ಸ್ಕೂಲ್ಟೈಮ್ ಎಂಬುದನ್ನು ಆನ್ ಮಾಡಿ, ನಂತರ ವೇಳಾಪಟ್ಟಿಯನ್ನು ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ವಾಚ್ನಲ್ಲಿ ಸ್ಕೂಲ್ಟೈಮ್ ಸಕ್ರಿಯವಾಗಿರಬೇಕೆಂದು ನೀವು ಬಯಸುವ ದಿನಗಳು ಮತ್ತು ಸಮಯಗಳನ್ನು ಆರಿಸಿ.
ಗಮನಿಸಿ: ಅನೇಕ ದಿನಗಳಿಗಾಗಿ ವೇಳಾಪಟ್ಟಿಗಳನ್ನು ಸೆಟ್ ಮಾಡಲು, ದಿನಗಳನ್ನು ಕಸ್ಟಮೈಸ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ನೀವು ಒಂದೇ ದಿನದಲ್ಲಿ ಹಲವು ವೇಳಾಪಟ್ಟಿಗಳನ್ನು ಸೆಟಪ್ ಮಾಡಲು ಬಯಸಿದರೆ, “ಸಮಯವನ್ನು ಸೇರಿಸಿ” ಎಂಬುದನ್ನು ಟ್ಯಾಪ್ ಮಾಡಿ.
ಸ್ಕೂಲ್ಟೈಮ್ನಿಂದ ನಿರ್ಗಮಿಸುವುದು
ನಿಮ್ಮ ಮಗು ತಾತ್ಕಾಲಿಕವಾಗಿ ಸ್ಕೂಲ್ಟೈಮ್ನಿಂದ ನಿರ್ಗಮಿಸಬಹುದು.
ಡಿಸ್ಪ್ಲೇಯನ್ನು ಟ್ಯಾಪ್ ಮಾಡಿ, ನಂತರ Digital Crown ಅನ್ನು ಒತ್ತಿ ಹಿಡಿದುಕೊಳ್ಳಿ.
ನಿರ್ಗಮಿಸಿ ಎಂಬುದನ್ನು ಟ್ಯಾಪ್ ಮಾಡಿ.
ನಿಮ್ಮ ಮಗು ನಿಗದಿಗೊಳಿಸಿದ ಅವಧಿಯಲ್ಲಿ ಸ್ಕೂಲ್ಟೈಮ್ನಿಂದ ನಿರ್ಗಮಿಸಿದರೆ, ಅವರು ತಮ್ಮ ಮಣಿಕಟ್ಟನ್ನು ಕೆಳಕ್ಕೆ ಇಳಿಸಿದಾಗ ಸ್ಕೂಲ್ಟೈಮ್ ವಾಚ್ ಫೇಸ್ ಹಿಂತಿರುಗುತ್ತದೆ. ನಿಗದಿಗೊಳಿಸದ ಸಮಯಗಳಲ್ಲಿ, ಮುಂದಿನ ನಿಗದಿಗೊಳಿಸಿದ ಪ್ರಾರಂಭದ ಸಮಯದವರೆಗೆ ಅಥವಾ ನಿಮ್ಮ ಮಗು ಕಂಟ್ರೋಲ್ ಸೆಂಟರ್ನಲ್ಲಿ ಸ್ಕೂಲ್ಟೈಮ್ ಎಂಬುದನ್ನು ಟ್ಯಾಪ್ ಮಾಡುವವರೆಗೆ ಸ್ಕೂಲ್ಟೈಮ್ ನಿಷ್ಕ್ರಿಯವಾಗಿರುತ್ತದೆ.
ಸ್ಕೂಲ್ಟೈಮ್ ಅನ್ನು ಯಾವಾಗ ಅನ್ಲಾಕ್ ಮಾಡಲಾಗಿತ್ತು ಎಂಬುದನ್ನು ನೋಡುವುದು
ವಾಚ್ ಅನ್ನು ನಿರ್ವಹಿಸಲು ಬಳಸುವ iPhoneನಲ್ಲಿ Apple Watch ಆ್ಯಪ್ಗೆ
ಹೋಗಿ.
ನನ್ನ ವಾಚ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಕುಟುಂಬದ ವಾಚ್ಗಳು ಎಂಬುದರ ಕೆಳಗಿರುವ ವಾಚ್ ಅನ್ನು ಟ್ಯಾಪ್ ಮಾಡಿ.
ಅನ್ನು ಟ್ಯಾಪ್ ಮಾಡಿ, ನಂತರ ಸ್ಕೂಲ್ಟೈಮ್ ಅನ್ನು ಅನ್ಲಾಕ್ ಮಾಡಿದ್ದ ದಿನಗಳು, ಸಮಯಗಳು ಮತ್ತು ಅವಧಿಗಳ ವರದಿಗಳನ್ನು ನೋಡಲು ಸ್ಕೂಲ್ಟೈಮ್ ಎಂಬುದನ್ನು ಟ್ಯಾಪ್ ಮಾಡಿ.
ವರದಿಯು Apple Watchನಲ್ಲಿಯೂ ಕಾಣಿಸಿಕೊಳ್ಳುತ್ತದೆ. ಅದನ್ನು ನೋಡಲು, Apple Watchನಲ್ಲಿನ ಸೆಟ್ಟಿಂಗ್ಸ್ ಆ್ಯಪ್ಗೆ
ಹೋಗಿ, ನಂತರ ಸ್ಕೂಲ್ಟೈಮ್ ಎಂಬುದನ್ನು ಟ್ಯಾಪ್ ಮಾಡಿ.
ಡಿಸ್ಪ್ಲೇ ಸ್ಲೀಪ್ ಮೋಡ್ಗೆ ಹೋದಾಗ ಸ್ಕೂಲ್ಟೈಮ್ ಮತ್ತೆ ಆನ್ ಆಗುತ್ತದೆ.
ಸಲಹೆ: ಸ್ಕೂಲ್ಟೈಮ್ ಸಕ್ರಿಯವಾಗಿಲ್ಲದಿದ್ದಾಗ, ನಿಮ್ಮ ಮಗು ಅದನ್ನು ಆನ್ ಮಾಡಬಹುದು. ಉದಾಹರಣೆಗೆ, ಅವರು ನಿಗದಿಗೊಳಿಸದ ಸಮಯದಲ್ಲಿ ನಡೆಯುವ ಶಾಲಾ ನಂತರದ ಅಧ್ಯಯನ ಗುಂಪನ್ನು ಸೇರಿದ್ದರೆ ಮತ್ತು ತಮಗೆ ಅಡಚಣೆಯಾಗಬಾರದೆಂದು ಅವರು ಬಯಸಿದರೆ. ಸೈಡ್ ಬಟನ್ ಅನ್ನು ಒತ್ತಿ, ನಂತರ ಕಂಟ್ರೋಲ್ ಸೆಂಟರ್ನಲ್ಲಿ ಅನ್ನು ಟ್ಯಾಪ್ ಮಾಡಿ. ಸ್ಕೂಲ್ಟೈಮ್ನಿಂದ ನಿರ್ಗಮಿಸಲು Digital Crown ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ನಿರ್ಗಮಿಸಿ ಎಂಬುದನ್ನು ಟ್ಯಾಪ್ ಮಾಡಿ.
ಮುಂದೇನು?
ನಿಮ್ಮ ಕುಟುಂಬ ಹಂಚಿಕೆ ಗುಂಪು Apple Music ಕುಟುಂಬ ಸಬ್ಸ್ಕ್ರಿಪ್ಶನ್ ಅನ್ನು ಹೊಂದಿದ್ದರೆ, ನಿಮ್ಮ ಮಗು Wi-Fi ಅಥವಾ ಮೊಬೈಲ್ ಡೇಟ ಕನೆಕ್ಷನ್ ಅನ್ನು ಹೊಂದಿರುವವರೆಗೆ Apple Music ಅನ್ನು ಆಲಿಸಬಹುದು. ಅವರು ಪಾಡ್ಕಾಸ್ಟ್ಗಳನ್ನು ಫಾಲೋ ಮಾಡಬಹುದು ಮತ್ತು ಸ್ಟ್ರೀಮ್ ಮಾಡಬಹುದು. ಪ್ರಾರಂಭಿಸಲು, ನಿಮ್ಮ ಮಗುವಿನ Apple Watchನಲ್ಲಿ ಸಂಗೀತ ಆ್ಯಪ್ ಅಥವಾ ಪಾಡ್ಕಾಸ್ಟ್ಸ್ ಆ್ಯಪ್
ಅನ್ನು ತೆರೆಯಿರಿ.