ನಿಮ್ಮ ಮಗುವಿನ ಸಾಧನದಲ್ಲಿ ಪೋಷಕರು ಹೇರುವ ನಿಯಂತ್ರಣಗಳನ್ನು ಎಕ್ಸ್ಪ್ಲೋರ್ ಮಾಡುವುದು
ನಿಮ್ಮ ಮಗುವಿನ Apple ಸಾಧನಗಳು ಪೋಷಕರು ಹೇರುವ ನಿಯಂತ್ರಣಗಳೊಂದಿಗೆ ಬರುತ್ತವೆ ಹಾಗೂ ನಿಮ್ಮ ಮಗು ಸಾಧನಗಳನ್ನು ಯಾವಾಗ ಬಳಸಬಹುದು, ಅವರು ಏನನ್ನು ನೋಡಬಹುದು ಮತ್ತು ಡೌನ್ಲೋಡ್ ಮಾಡಬಹುದು, ಮತ್ತು ಅವರು ಬೆಂಬಲಿತ ಆ್ಯಪ್ಗಳು ಮತ್ತು ಸೇವೆಗಳ ಮೂಲಕ ಯಾರೊಂದಿಗೆ ಸಂವಹನ ನಡೆಸಬಹುದು ಎಂಬುದನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತವೆ. ನೀವು ನಿಮ್ಮ ಸ್ವಂತ iPhone, iPad ಅಥವಾ Macನಿಂದ ಪೋಷಕರು ಹೇರುವ ನಿಯಂತ್ರಣಗಳನ್ನು ಸೆಟಪ್ ಮಾಡಬಹುದು ಮತ್ತು ನಿರ್ವಹಿಸಬಹುದು. ನಿಮ್ಮ ಬೆಂಬಲಿತ ಪೋಷಕರು ಹೇರುವ ನಿಯಂತ್ರಣ ಸೆಟ್ಟಿಂಗ್ಸ್, ಪ್ರತಿ ಸಾಧನದಲ್ಲಿನ ಫೀಚರ್ ಲಭ್ಯತೆಯ ಆಧಾರದ ಮೇಲೆ ನಿಮ್ಮ ಮಗುವಿನ ಎಲ್ಲಾ ಸಾಧನಗಳಿಗೆ ಸ್ವಯಂಚಾಲಿತವಾಗಿ ಸಿಂಕ್ ಆಗುತ್ತವೆ.
ಗಮನಿಸಿ: ನೀವು ಪ್ರಾರಂಭಿಸುವ ಮೊದಲು, ನಿಮ್ಮ ಮಗುವಿಗೆ ನಿಮ್ಮ ಕುಟುಂಬ ಹಂಚಿಕೆ ಗುಂಪಿನಲ್ಲಿ ಅವರದೇ ಆದ ಮಗುವಿನ ಖಾತೆಯ ಅಗತ್ಯವಿದೆ, ಇದರಿಂದ ನೀವು ನಿಮ್ಮ ಸ್ವಂತ ಸಾಧನದಿಂದ ಅವರ ಸಾಧನದ ಸೆಟ್ಟಿಂಗ್ಸ್ ಅನ್ನು ನಿರ್ವಹಿಸಬಹುದು. ನಿಮ್ಮ ಮಗುವಿನ ವಯಸ್ಸಿನ ಆಧಾರದ ಮೇಲೆ ಕೆಲವು “ಪೋಷಕರು ಹೇರುವ ನಿಯಂತ್ರಣಗಳು” ಡಿಫಾಲ್ಟ್ ಆಗಿ ಆನ್ ಆಗಿರುತ್ತವೆ. ನೀವು ನಿಮ್ಮ ಮಗುವಿಗಾಗಿ iPhone ಅಥವಾ iPad, Mac ಅಥವಾ Apple Watch ಅನ್ನು ಸೆಟಪ್ ಮಾಡುತ್ತಿದ್ದರೆ ಅಥವಾ ಮೊದಲ ಬಾರಿಗೆ ಪೋಷಕರು ಹೇರುವ ನಿಯಂತ್ರಣಗಳನ್ನು ಸೆಟಪ್ ಮಾಡುತ್ತಿದ್ದರೆ, ಸೆಟಪ್ ಪ್ರಕ್ರಿಯೆಯಲ್ಲಿ ನಿಮಗೆ ಮಾರ್ಗದರ್ಶನ ನೀಡಲಾಗುತ್ತದೆ.
ಅವರು ತಮ್ಮ ಸಾಧನವನ್ನು ಯಾವಾಗ ಬಳಸಬಹುದು ಎಂಬುದನ್ನು ಆರಿಸಿ
ಆ್ಯಪ್ಗಳು ಯಾವಾಗ ಲಭ್ಯವಿರುತ್ತವೆ ಎಂಬುದನ್ನು ಸೆಟ್ ಮಾಡಲು ವೇಳಾಪಟ್ಟಿಗಳು ನಿಮಗೆ ಅನುವುಮಾಡಿಕೊಡುತ್ತವೆ ಮತ್ತು ನಿಮ್ಮ ಮಗು ಅವುಗಳನ್ನು ಎಷ್ಟು ಸಮಯದವರೆಗೆ ಬಳಸಬಹುದು ಎಂಬುದನ್ನು ಸೆಟ್ ಮಾಡಲು ಸಮಯದ ಅನುಮತಿಗಳು ನಿಮಗೆ ಅವಕಾಶ ನೀಡುತ್ತವೆ. ನೀವು ಮನರಂಜನೆ, ಗೇಮ್ಸ್ ಮತ್ತು ಸಾಮಾಜಿಕ ಮಾಧ್ಯಮದಂತಹ ವರ್ಗಗಳಿಗೆ ಸಮಯದ ಅನುಮತಿಗಳನ್ನು ಸೆಟ್ ಮಾಡಬಹುದು. ಮಕ್ಕಳ ಬೆಳವಣಿಗೆಯ ತಜ್ಞರು ನೀಡುವ ವಯಸ್ಸನ್ನು ಆಧರಿಸಿದ ಮಾರ್ಗದರ್ಶನವು ಸೂಕ್ತ ನಿರ್ಧಾರ ಕೈಗೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ನೀವು ಯಾವಾಗಲೂ ಅನುಮತಿಸುವ ಆ್ಯಪ್ಗಳು ಮತ್ತು ಸಂಪರ್ಕಗಳು ಎಲ್ಲಾ ಸಮಯಗಳಲ್ಲೂ ಲಭ್ಯವಿರುತ್ತವೆ.
ಸ್ಕ್ರೀನ್ ಟೈಮ್ ವೇಳಾಪಟ್ಟಿಗಳು ಮತ್ತು ಸಮಯದ ಅನುಮತಿಗಳನ್ನು ಸೆಟಪ್ ಮಾಡಿ
ಅವರು ಏನನ್ನು ಆ್ಯಕ್ಸೆಸ್ ಮಾಡಬಹುದು ಎಂದು ಆರಿಸುವುದು
ನಿಮ್ಮ ಮಗುವಿಗಾಗಿ ನಿರ್ದಿಷ್ಟ ಆ್ಯಪ್ಗಳು ಮತ್ತು ವೆಬ್ಸೈಟ್ಗಳನ್ನು ಆಯ್ಕೆಮಾಡುವ ಮೂಲಕ ನೀವು ಪ್ರಾರಂಭಿಸಬಹುದು, ನಂತರ ಅವರು ಸಿದ್ಧರಾದಂತೆ ಇನ್ನಷ್ಟು ಸೇರಿಸಬಹುದು. “ಖರೀದಿಸಲು ಕೇಳಿ” ಮತ್ತು “ಬ್ರೌಸ್ ಮಾಡಲು ಕೇಳಿ” ಎಂಬ ಆಯ್ಕೆಗಳೊಂದಿಗೆ, ನಿಮ್ಮ ಮಗು ಹೊಸದಾಗಿ ಏನನ್ನಾದರೂ ಖರೀದಿಸುವ ಅಥವಾ ಡೌನ್ಲೋಡ್ ಮಾಡುವ ಮೊದಲು ಅಥವಾ Safariಯಲ್ಲಿ ಹೊಸ ವೆಬ್ಸೈಟ್ಗೆ ಭೇಟಿ ನೀಡುವ ಮೊದಲು ನಿಮ್ಮ ಅನುಮತಿಯನ್ನು ಕೇಳುತ್ತದೆ. ಈ ಎರಡರಲ್ಲಿ ಯಾವುದೇ ವಿನಂತಿಯಾದರೂ ನಿಮಗೆ ಸಂದೇಶ ಆ್ಯಪ್ನಲ್ಲಿ ಬರುತ್ತದೆ ಮತ್ತು ಅಲ್ಲಿ ನೀವು ಅದನ್ನು ಅನುಮೋದಿಸುವ ಮೊದಲು ಪರಿಶೀಲಿಸಬಹುದು. ನೀವು Apple ಮೀಡಿಯಾ ಸೇವೆಗಳು ಎಂಬಲ್ಲಿ ಚಲನಚಿತ್ರಗಳು, ಸಂಗೀತ, ಪುಸ್ತಕಗಳು ಮತ್ತು ಮುಂತಾದವುಗಳಿಗೆ ವಯಸ್ಸನ್ನು ಆಧರಿಸಿದ ನಿರ್ಬಂಧಗಳನ್ನು ಸಹ ಸೆಟ್ ಮಾಡಬಹುದು.
ನಿಮ್ಮ ಮಗುವಿನ ಸಾಧನದಲ್ಲಿ ಆ್ಯಪ್ಗಳು ಮತ್ತು ವೆಬ್ಸೈಟ್ಗಳಿಗೆ ಆ್ಯಕ್ಸೆಸ್ ಅನ್ನು ಬ್ಲಾಕ್ ಮಾಡಿ ಅಥವಾ ಅನುಮತಿಸಿ
ಅವರು ಬೆಂಬಲಿತ ಆ್ಯಪ್ಗಳಲ್ಲಿ ಯಾರೊಂದಿಗೆ ಸಂವಹನ ನಡೆಸಬಹುದು ಎಂಬುದನ್ನು ಆರಿಸುವುದು
ನಿಮ್ಮ ಮಗು ಯಾರಿಗೆ ಕರೆ ಮಾಡಬಹುದು, ಸಂದೇಶ ಕಳುಹಿಸಬಹುದು ಮತ್ತು FaceTime ಮಾಡಬಹುದು ಎಂಬುದನ್ನು ನಿರ್ಧರಿಸಿ ಮತ್ತು ಯಾವುದೇ ಹೊಸ ವ್ಯಕ್ತಿಯೊಂದಿಗೆ ಕನೆಕ್ಟ್ ಆಗುವ ಮೊದಲು ಅವರು ನಿಮ್ಮನ್ನು ಕೇಳುವಂತೆ ಮಾಡಿ. ಸಂವಹನ ಸುರಕ್ಷತೆಯು ನಿಮ್ಮ ಮಗು ಹಂಚಿಕೊಂಡ ಫೋಟೋಗಳು ಮತ್ತು ವೀಡಿಯೊಗಳಲ್ಲಿ ಪತ್ತೆಯಾದ ನಗ್ನತೆ ಅಥವಾ ರಕ್ತಪಾತವನ್ನು ನೋಡುವ ಅಥವಾ ಅವುಗಳನ್ನು ಕಳುಹಿಸುವ ಮೊದಲೇ ಬ್ಲರ್ ಮಾಡುತ್ತದೆ ಮತ್ತು ಸಹಾಯವನ್ನು ಪಡೆಯುವ ಮಾರ್ಗಗಳನ್ನು ಅವರಿಗೆ ತೋರಿಸುತ್ತದೆ.
ನಿಮ್ಮ ಮಗು ತಮ್ಮ ಸಾಧನದಲ್ಲಿ ಯಾರೊಂದಿಗೆ ಸಂವಹನ ನಡೆಸಬಹುದು ಎಂಬುದನ್ನು ಆರಿಸಿ
ನಿಮ್ಮ ಮಗುವಿನ ಸಾಧನದಲ್ಲಿ ಸೂಕ್ಷ್ಮ ಚಿತ್ರಗಳು ಮತ್ತು ವೀಡಿಯೊಗಳನ್ನು ಪರಿಶೀಲಿಸಿ
ಅವರ ಚಟುವಟಿಕೆಯನ್ನು ಪರಿಶೀಲಿಸುವುದು ಮತ್ತು ಹೊಂದಾಣಿಕೆಗಳನ್ನು ಮಾಡುವುದು
ನಿಮ್ಮ ಮಗು ತಮ್ಮ ಸಾಧನವನ್ನು ಹೇಗೆ ಬಳಸುತ್ತಿದ್ದಾರೆ ಮತ್ತು ಅವರು ಹೆಚ್ಚು ಬಳಸುವ ಆ್ಯಪ್ಗಳು ಯಾವುವು ಎಂಬುದರ ಕುರಿತು ವಾರದ ಸಾರಾಂಶವನ್ನು ನೋಡಿ. ನಿಮ್ಮ ಕುಟುಂಬದ ಅಗತ್ಯಗಳು ಬದಲಾದರೆ ನೀವು ಸಾಧನದ ಬಳಕೆಯನ್ನು ತ್ವರಿತವಾಗಿ ವಿರಾಮಗೊಳಿಸಬಹುದು, ಅನಿಯಮಿತ ಸಾಧನದ ಬಳಕೆಯನ್ನು ಅನುಮತಿಸಬಹುದು ಅಥವಾ ಅವರ ವೇಳಾಪಟ್ಟಿಯನ್ನು ಸರಿಹೊಂದಿಸಬಹುದು.
ನಿಮ್ಮ ಮಗುವಿನ ಸ್ಕ್ರೀನ್ ಟೈಮ್ ಚಟುವಟಿಕೆಯನ್ನು ಪರಿಶೀಲಿಸಿ
ನಿಮ್ಮ ಮಗುವಿನ ಸ್ಕ್ರೀನ್ ಟೈಮ್ ಸೆಟ್ಟಿಂಗ್ಸ್ ಅನ್ನು ತ್ವರಿತವಾಗಿ ಸರಿಹೊಂದಿಸಿ
ಮತ್ತಷ್ಟು ಪೋಷಕರು ಹೇರುವ ನಿಯಂತ್ರಣಗಳು
ಫೀಚರ್ಗಳು ಮತ್ತು ಬದಲಾವಣೆಗಳನ್ನು ಬ್ಲಾಕ್ ಮಾಡುವುದು ನಿಮ್ಮ ಮಗು Siri ಮತ್ತು Apple Intelligence ಅಥವಾ AirDrop ರೀತಿಯ ಯಾವ ಬಿಲ್ಟ್-ಇನ್ ಫೀಚರ್ಗಳನ್ನು ಬಳಸಬಹುದು ಎಂದು ಆರಿಸಿ, ಮತ್ತು ಅವರು ತಮ್ಮ ಖಾತೆಯ ವಿವರಗಳಂತಹ ಸೆಟ್ಟಿಂಗ್ಸ್ ಅನ್ನು ಬದಲಾಯಿಸದಂತೆ ತಡೆಯಿರಿ. | ಸ್ಕ್ರೀನ್ ಟೈಮ್ ಪಾಸ್ಕೋಡ್ ಅನ್ನು ಸೆಟ್ ಮಾಡಿ ನಿಮ್ಮ ಮಗು ತಮ್ಮ ಪೋಷಕರು ಹೇರುವ ನಿಯಂತ್ರಣಗಳನ್ನು ಬದಲಾಯಿಸದಂತೆ ತಡೆಯುವ ಪಾಸ್ಕೋಡ್ ಅನ್ನು ಸೆಟ್ ಮಾಡಿ ಮತ್ತು ನೀವು ಅದನ್ನು ಮರೆತರೆ ರೀಸೆಟ್ ಮಾಡಿ. ನಿಮ್ಮ ಮಗುವಿನ ಸಾಧನದಲ್ಲಿ ಸ್ಕ್ರೀನ್ ಟೈಮ್ ಪಾಸ್ಕೋಡ್ ಅನ್ನು ಹೊಂದಿಸಿ, ಬದಲಾಯಿಸಿ ಮತ್ತು ನಿರ್ವಹಿಸಿ |
Apple Cash ಮತ್ತು Apple Card ಕುಟುಂಬವನ್ನು ಸೆಟಪ್ ಮಾಡಿ Apple Cash ಮೂಲಕ ನಿಮ್ಮ ಮಗುವಿಗೆ ಹಣವನ್ನು ಕಳುಹಿಸಿ ಮತ್ತು ಅವರು ಅದನ್ನು ನಿರ್ವಹಿಸಲು ಕಲಿಯುವಾಗ ಖರ್ಚಿನ ಮಿತಿಗಳನ್ನು ಸೆಟ್ ಮಾಡಿ. ದೊಡ್ಡ ವಯಸ್ಸಿನ ಮಕ್ಕಳನ್ನು ನಿಮ್ಮ Apple Cardಗೆ ಸೇರಿಸಿ, ನಂತರ ಅವರ ಬ್ಯಾಲೆನ್ಸ್ ಮತ್ತು ಇತ್ತೀಚಿನ ಶುಲ್ಕಗಳನ್ನು ಪರಿಶೀಲಿಸಿ. ನಿಮ್ಮ ಮಗುವಿಗಾಗಿ Apple Cash ಕುಟುಂಬ ಮತ್ತು Apple Card ಕುಟುಂಬವನ್ನು ಸೆಟಪ್ ಮಾಡಿ | ಆ್ಯಪ್ಗಳೊಂದಿಗೆ ನಿಮ್ಮ ಮಗುವಿನ ವಯಸ್ಸನ್ನು ಹಂಚಿಕೊಳ್ಳಿ ನಿಮ್ಮ ಮಗುವಿಗೆ ವಯಸ್ಸಿಗೆ ಸೂಕ್ತವಾದ ಅನುಭವಗಳನ್ನು ಪಡೆಯುವುದಕ್ಕೆ ಸಹಾಯ ಮಾಡಲು ಬೆಂಬಲಿತ ಥರ್ಡ್ ಪಾರ್ಟಿ ಆ್ಯಪ್ಗಳೊಂದಿಗೆ ಅವರ ವಯಸ್ಸನ್ನು ಹಂಚಿಕೊಳ್ಳಿ. |
Apple Watchನಲ್ಲಿ ಸ್ಕೂಲ್ಟೈಮ್ ಅನ್ನು ಸೆಟಪ್ ಮಾಡಿ ನಿಮ್ಮ ಮಗುವಿಗೆ ಏಕಾಗ್ರತೆಯಿಂದಿರುವುದಕ್ಕೆ ಸಹಾಯ ಮಾಡಲು ಅವರು ಶಾಲಾ ಅವಧಿ ಮತ್ತು ಇತರೆ ಸಮಯಗಳಲ್ಲಿ ತಮ್ಮ Apple Watchನಲ್ಲಿ ಮಾಡಬಹುದಾದ ಕಾರ್ಯಗಳನ್ನು ಮಿತಿಗೊಳಿಸಿ. ನೀವು ನಿಮ್ಮ ಮಗುವಿನ Apple Watch ಸೆಟ್ಟಿಂಗ್ಸ್ ಅನ್ನು ಸಹ ಬದಲಾಯಿಸಬಹುದು. | ನಿಮ್ಮ ಮಗುವಿನ Apple Watch ಆರೋಗ್ಯ ವರದಿಗಳನ್ನು ಪರಿಶೀಲಿಸಿ ನಿಮ್ಮ ಮಗುವಿನ ಅನುಮತಿಯೊಂದಿಗೆ ಅವರ ಆಲಿಸುವಿಕೆ, ಹಗಲು ಬೆಳಕಿನಲ್ಲಿ ಕಳೆದ ಸಮಯ ಮತ್ತು ಹೃದಯ ಬಡಿತದ ದರದಂತಹ ಆರೋಗ್ಯ ಚಟುವಟಿಕೆಯನ್ನು ನೋಡಿ. ನೀವು ಅವರ ಆರೋಗ್ಯ ವಿವರಗಳನ್ನು ಕೂಡ ಸೇರಿಸಬಹುದು ಮತ್ತು ತುರ್ತು ಸಂಪರ್ಕಗಳೊಂದಿಗೆ ಮೆಡಿಕಲ್ IDಯನ್ನು ಸೆಟಪ್ ಮಾಡಬಹುದು. |