ನಿಮ್ಮ ಮಗುವಿನ ಸಾಧನದಲ್ಲಿ ಚಲನಚಿತ್ರಗಳು, ಸಂಗೀತ ಮತ್ತು ಮುಂತಾದವುಗಳಿಗಾಗಿ ವಯಸ್ಸಿಗೆ ಸೂಕ್ತವಾದ ಕಂಟೆಂಟ್ ಅನ್ನು ಆರಿಸುವುದು
ಆ್ಯಪ್ಗಳು, ಸಂಗೀತ, ಪುಸ್ತಕಗಳು, ಚಲನಚಿತ್ರಗಳು, ಟಿವಿ ಶೋಗಳು ಮತ್ತು ಮುಂತಾದವುಗಳು ಹಾಗೂ ಪುಸ್ತಕ ಆ್ಯಪ್ ಅಥವಾ ಸಂಗೀತ ಆ್ಯಪ್
ತರಹದ Apple ಆ್ಯಪ್ಗಳಲ್ಲಿ ಸಹ ನೀವು ವಯಸ್ಸಿಗೆ ಸೂಕ್ತವಾದ ರೇಟಿಂಗ್ಗಳನ್ನು ಆರಿಸಬಹುದು. ಇದರಿಂದ ನಿಮ್ಮ ಮಗು ತನ್ನ ವಯಸ್ಸಿಗೆ ಸೂಕ್ತವಾದ ಕಂಟೆಂಟ್ ಅನ್ನು ನೋಡುತ್ತದೆ. ಈ ರೇಟಿಂಗ್ಗಳಲ್ಲಿ ಹಲವನ್ನು ನಿಮ್ಮ ಮಗುವಿನ ವಯಸ್ಸನ್ನು ಆಧರಿಸಿ ಸ್ವಯಂಚಾಲಿತವಾಗಿ ಅನ್ವಯಿಸಲಾಗುತ್ತದೆ ಮತ್ತು ಅದನ್ನು ಯಾವುದೇ ಸಮಯದಲ್ಲಿ ಸರಿಹೊಂದಿಸಬಹುದು.
ಚಲನಚಿತ್ರಗಳು, ಸಂಗೀತ ಮತ್ತು ಮುಂತಾದವುಗಳಲ್ಲಿ ವಯಸ್ಸಿಗೆ ಸೂಕ್ತವಾದ ಕಂಟೆಂಟ್ ಅನ್ನು ಆರಿಸುವುದು
ನಿಮ್ಮ ಮಗುವಿನ ಸೆಟ್ಟಿಂಗ್ಸ್ ಅನ್ನು ತೆರೆಯಿರಿ:
iPhone ಅಥವಾ iPadನಲ್ಲಿ: ಸೆಟ್ಟಿಂಗ್ಸ್ ಆ್ಯಪ್ಗೆ ಹೋಗಿ, ಕುಟುಂಬ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಮಗುವಿನ ಹೆಸರನ್ನು ಟ್ಯಾಪ್ ಮಾಡಿ.
Macನಲ್ಲಿ: ಸಿಸ್ಟಂ ಸೆಟ್ಟಿಂಗ್ಸ್ಗೆ ಹೋಗಿ, ಕುಟುಂಬ ಎಂಬುದನ್ನು ಕ್ಲಿಕ್ ಮಾಡಿ, ನಂತರ ನಿಮ್ಮ ಮಗುವಿನ ಹೆಸರನ್ನು ಕ್ಲಿಕ್ ಮಾಡಿ.
ಕಂಟೆಂಟ್ ಮತ್ತು ಗೌಪ್ಯತೆ ನಿರ್ಬಂಧಗಳು ಎಂಬುದನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ, ನಂತರ ಪುಸ್ತಕಗಳು, ಚಲನಚಿತ್ರಗಳು, ಟಿವಿ ಶೋಗಳು ಮತ್ತು ಸಂಗೀತದಂತಹ ಕಂಟೆಂಟ್ ನಿರ್ಬಂಧಗಳ ಅಡಿಯಲ್ಲಿ ತೋರಿಸಿರುವ ಯಾವುದೇ ಸೆಟ್ಟಿಂಗ್ಗಳನ್ನು ಅನುಮತಿಸಿ ಅಥವಾ ಬ್ಲಾಕ್ ಮಾಡಿ.
ಮುಂದೇನು?
ನಿಮ್ಮ ಮಗುವಿನ ಸಾಧನದಲ್ಲಿ ನೀವು ಆ್ಯಪ್ಗಳು ಮತ್ತು ವೆಬ್ಸೈಟ್ಗಳನ್ನು ಸಹ ಬ್ಲಾಕ್ ಮಾಡಬಹುದು ಹಾಗೂ ಕ್ಯಾಮರಾ, AirDrop ಮತ್ತು CarPlay ರೀತಿಯ ಬಿಲ್ಟ್-ಇನ್ ಆ್ಯಪ್ಗಳು ಮತ್ತು ಫೀಚರ್ಗಳನ್ನು ಆಫ್ ಮಾಡಬಹುದು. ನಿಮ್ಮ ಮಗುವಿನ ಸಾಧನದಲ್ಲಿ ಆ್ಯಪ್ಗಳು ಮತ್ತು ವೆಬ್ಸೈಟ್ಗಳಿಗೆ ಆ್ಯಕ್ಸೆಸ್ ಅನ್ನು ಬ್ಲಾಕ್ ಮಾಡುವುದು ಅಥವಾ ಅನುಮತಿಸುವುದು ಮತ್ತು Siri ಮತ್ತು Apple Intelligence ಫೀಚರ್ಗಳಿಗೆ ಆ್ಯಕ್ಸೆಸ್ ಅನ್ನು ಬ್ಲಾಕ್ ಮಾಡುವುದು ಅಥವಾ ಅನುಮತಿಸುವುದು ಎಂಬುವನ್ನು ನೋಡಿ.