Apple Watchನಲ್ಲಿನ ನಿಮ್ಮ ಮಗುವಿನ ಆರೋಗ್ಯ ವರದಿಗಳು ಮತ್ತು ಮಾಹಿತಿಯನ್ನು ನೋಡುವುದು
ನಿಮ್ಮ ಮಗುವಿನ ಅನುಮತಿಯೊಂದಿಗೆ, ನೀವು ಅವರ ಚಟುವಟಿಕೆ ಮತ್ತು ಆರೋಗ್ಯ ಮಾಹಿತಿಯ ವರದಿಗಳನ್ನು ನೋಡಬಹುದು.
ಗಮನಿಸಿ: ನಿಮ್ಮ ಮಕ್ಕಳಿಗಾಗಿ Apple Watch ಎಂಬುದು ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. ಬೆಂಬಲಿತ ನೆಟ್ವರ್ಕ್ ಪೂರೈಕೆದಾರರನ್ನು ಒಳಗೊಂಡಂತೆ ಲಭ್ಯತೆಯ ಕುರಿತ ಮಾಹಿತಿಗಾಗಿ, Apple Watch GPS + Cellular ಎಂಬುದನ್ನು ನೋಡಿ.
ನಿಮ್ಮ ಮಗುವಿನ ಆರೋಗ್ಯ ವಿವರಗಳು ಮತ್ತು ಮೆಡಿಕಲ್ IDಯನ್ನು ಅವರ Apple Watchಗೆ ಸೇರಿಸುವುದು
ನಿಮ್ಮ ಮಗುವಿನ ವಾಚ್ ಅನ್ನು ನಿರ್ವಹಿಸಲು ಬಳಸುವ iPhoneನಲ್ಲಿ Apple Watch ಆ್ಯಪ್ಗೆ
ಹೋಗಿ.
ನನ್ನ ವಾಚ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಕುಟುಂಬದ ವಾಚ್ಗಳು ಎಂಬುದರ ಕೆಳಗಿರುವ ವಾಚ್ ಅನ್ನು ಟ್ಯಾಪ್ ಮಾಡಿ.
ಅನ್ನು ಟ್ಯಾಪ್ ಮಾಡಿ, ಆರೋಗ್ಯ ಆ್ಯಪ್ ಅನ್ನು ಟ್ಯಾಪ್ ಮಾಡಿ, ನಂತರ [ಕುಟುಂಬದ ಸದಸ್ಯರ ಹೆಸರು] ಅವರ ಆರೋಗ್ಯ ಡೇಟವನ್ನು ವಿನಂತಿಸಿ ಎಂಬುದನ್ನು ಟ್ಯಾಪ್ ಮಾಡಿ.
ಆರೋಗ್ಯ ಡೇಟವನ್ನು ವಿನಂತಿಸಿ ಎಂಬುದನ್ನು ಟ್ಯಾಪ್ ಮಾಡಿ ಮತ್ತು ನಿರ್ವಹಿಸಲಾದ ವಾಚ್ಗೆ ನೋಟಿಫಿಕೇಷನ್ ಅನ್ನು ಕಳುಹಿಸಲಾಗುತ್ತದೆ. ನಿಮ್ಮ ಕುಟುಂಬದ ಸದಸ್ಯರು ತಮ್ಮ ಆರೋಗ್ಯ ಡೇಟವನ್ನು ಹಂಚಿಕೊಳ್ಳಲು ಆಯ್ಕೆಮಾಡಿದ ನಂತರ, ಈ ಕೆಳಗಿನವುಗಳನ್ನು ಮಾಡಿ:
ಜನ್ಮದಿನಾಂಕ, ಎತ್ತರ ಮತ್ತು ತೂಕದಂತಹ ಮಾಹಿತಿಯನ್ನು ನಮೂದಿಸಲು ಅಥವಾ ಎಡಿಟ್ ಮಾಡಲು, ಆರೋಗ್ಯ ವಿವರಗಳು ಎಂಬುದನ್ನು ಟ್ಯಾಪ್ ಮಾಡಿ.
ತುರ್ತು ಸಂಪರ್ಕಗಳು ಮತ್ತು ಹೆಚ್ಚಿನದನ್ನು ಸೇರಿಸಲು, “ಮೆಡಿಕಲ್ IDಯನ್ನು ಸೆಟಪ್ ಮಾಡಿ” ಎಂಬುದನ್ನು ಟ್ಯಾಪ್ ಮಾಡಿ.
ನಿಮ್ಮ ಕುಟುಂಬದ ಸದಸ್ಯರು ತಮ್ಮ ಆರೋಗ್ಯ ಆ್ಯಪ್ನಿಂದ ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಆರಿಸಿದರೆ, Apple Watch ಅನ್ನು ನಿರ್ವಹಿಸಲು ಬಳಸುವ iPhoneನಲ್ಲಿ ಮತ್ತು ವಾಚ್ನಲ್ಲಿ ನೀವು ಆರೋಗ್ಯದ ವಿವರಗಳು ಮತ್ತು ಮೆಡಿಕಲ್ IDಯನ್ನು ನೋಡಬಹುದು.
ನಿಮ್ಮ iPhoneನಲ್ಲಿ: ಆರೋಗ್ಯ ಆ್ಯಪ್ಗೆ ಹೋಗಿ, ಹಂಚಿಕೆ ಎಂಬುದನ್ನು ಟ್ಯಾಪ್ ಮಾಡಿ, ನಿಮ್ಮ ಕುಟುಂಬ ಸದಸ್ಯರ ಹೆಸರನ್ನು ಟ್ಯಾಪ್ ಮಾಡಿ, ನಂತರ ಪ್ರೊಫೈಲ್ ಎಂಬುದನ್ನು ಟ್ಯಾಪ್ ಮಾಡಿ.
ನಿರ್ವಹಿಸಲಾದ Apple Watchನಲ್ಲಿ: Apple Watchನಲ್ಲಿ ಸೆಟ್ಟಿಂಗ್ಸ್ ಆ್ಯಪ್ಗೆ
ಹೋಗಿ, ನಂತರ ಆರೋಗ್ಯ ಆ್ಯಪ್ ಅನ್ನು ಟ್ಯಾಪ್ ಮಾಡಿ.
ನಿಮ್ಮ ಮಗುವಿನ Apple Watchನಲ್ಲಿನ ಅವರ ಆರೋಗ್ಯ ಮಾಹಿತಿಯನ್ನು ನೋಡುವುದು
ನಿಮ್ಮ ಕುಟುಂಬದ ಸದಸ್ಯರು ತಮ್ಮ ಆರೋಗ್ಯ ಡೇಟವನ್ನು ಹಂಚಿಕೊಳ್ಳಲು ಆರಿಸಿದ್ದರೆ, ನೀವು ಅವರ ಚಟುವಟಿಕೆಯ ಕುರಿತು ಹೆಚ್ಚುವರಿ ಮಾಹಿತಿಯನ್ನು ನೋಡಬಹುದು ಹಾಗೂ ಆಲಿಸುವಿಕೆ, ಹಗಲು ಬೆಳಕಿನಲ್ಲಿ ಕಳೆದ ಸಮಯ, ಹೃದಯ ಬಡಿತದ ದರ ಮತ್ತು ಮುಂತಾದವುಗಳ ಕುರಿತು ಮಾಹಿತಿಯನ್ನು ನೋಡಬಹುದು.
ನಿಮ್ಮ iPhoneನಲ್ಲಿ ಆರೋಗ್ಯ ಆ್ಯಪ್ಗೆ ಹೋಗಿ.
ಹಂಚಿಕೆ ಎಂಬುದನ್ನು ಟ್ಯಾಪ್ ಮಾಡಿ, ನಂತರ “ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು” ಎಂಬುದರ ಕೆಳಗೆ ನಿಮ್ಮ ಕುಟುಂಬ ಸದಸ್ಯರ ಹೆಸರನ್ನು ಟ್ಯಾಪ್ ಮಾಡಿ.
ಆರೋಗ್ಯ ವರ್ಗಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ವರ್ಗವೊಂದನ್ನು ಟ್ಯಾಪ್ ಮಾಡಿ.
ಮುಂದೇನು?
ನೀವು ಸ್ಕೂಲ್ಟೈಮ್ ಅನ್ನು ಸೆಟಪ್ ಮಾಡಿದಾಗ ನಿಮ್ಮ ಮಗುವಿನ Apple Watchನಲ್ಲಿನ ಎಲ್ಲಾ ಆ್ಯಪ್ಗಳನ್ನು ಆಫ್ ಮಾಡುವ ಮೂಲಕ ಮತ್ತು ನೋಟಿಫಿಕೇಷನ್ಗಳನ್ನು ಬ್ಲಾಕ್ ಮಾಡುವ ಮೂಲಕ ನಿಮ್ಮ ಮಗು ಶಾಲೆಯಲ್ಲಿ ಗಮನಹರಿಸಲು ನೀವು ಸಹಾಯ ಮಾಡಬಹುದು. ನಿಮ್ಮ ಮಗುವಿನ Apple Watchನಲ್ಲಿ ಸ್ಕೂಲ್ಟೈಮ್ ಬಳಕೆಯನ್ನು ಪ್ರಾರಂಭಿಸುವುದು ಎಂಬುದನ್ನು ನೋಡಿ.