ನಿಮ್ಮ ಮಗುವಿನ ಸಾಧನದಲ್ಲಿ ಪೋಷಕರು ಹೇರುವ ನಿಯಂತ್ರಣಗಳನ್ನು ಸೆಟಪ್ ಮಾಡುವುದು
iOS 27, iPadOS 27, macOS 27 ಮತ್ತು watchOS 27 ನಿಮ್ಮ ಮಗುವಿನ ಸಾಧನಗಳನ್ನು ನಿರ್ವಹಿಸಲು ಹೊಸ ಮಾರ್ಗಗಳನ್ನು ಒದಗಿಸುವ ಮರುವಿನ್ಯಾಸಗೊಳಿಸಲಾದ ಪೋಷಕರು ಹೇರುವ ನಿಯಂತ್ರಣಗಳ* ಅನುಭವವನ್ನು ತರುತ್ತವೆ. ನೀವು ಮತ್ತು ನಿಮ್ಮ ಕುಟುಂಬ ನಿಮ್ಮ ಸಾಧನಗಳನ್ನು ಅಪ್ಡೇಟ್ ಮಾಡಿದ ನಂತರ, ಪ್ರತಿ ಮಗುವಿಗಾಗಿ ಚಿಕ್ಕ ಸೆಟಪ್ ಒಂದನ್ನು ಮಾಡಲು ನಿಮಗೆ ಮಾರ್ಗದರ್ಶನವನ್ನು ಒದಗಿಸಲಾಗುತ್ತದೆ. ನೀವು ಈ ಹಿಂದೆ ಸೆಟ್ ಮಾಡಿದ್ದ ಪೋಷಕರು ಹೇರುವ ನಿಯಂತ್ರಣಗಳನ್ನು ಪರಿಶೀಲಿಸಬಹುದು ಮತ್ತು ಬದಲಾವಣೆಗಳನ್ನು ಮಾಡಬಹುದು, ಅಥವಾ ಮೊದಲ ಬಾರಿಗೆ ಪೋಷಕರು ಹೇರುವ ನಿಯಂತ್ರಣಗಳನ್ನು ಸೆಟಪ್ ಮಾಡಬಹುದು.
ನಿಮ್ಮ ಮಗುವಿಗಾಗಿ ನೀವು ಮೊದಲ ಬಾರಿಗೆ ಸಾಧನವನ್ನು ಸೆಟಪ್ ಮಾಡುತ್ತಿದ್ದರೆ iPhone, iPad, Mac ಅಥವಾ Apple Watch ಅನ್ನು ಸೆಟಪ್ ಮಾಡುವುದು ಎಂಬುದನ್ನು ನೋಡಿ.
ಹಂತ 1: ಪ್ರಾರಂಭಿಸಿ
ನೀವು ಮತ್ತು ನಿಮ್ಮ ಕುಟುಂಬ ನಿಮ್ಮ ಸಾಧನಗಳನ್ನು ಅಪ್ಡೇಟ್ ಮಾಡಿದ ನಂತರ, ನಿಮ್ಮ ಮಗುವಿಗಾಗಿ ಪೋಷಕರು ಹೇರುವ ನಿಯಂತ್ರಣಗಳನ್ನು ಸೆಟಪ್ ಮಾಡಲು ನಿಮ್ಮನ್ನು ಆಹ್ವಾನಿಸಲಾಗುತ್ತದೆ. ನಿಮ್ಮ ಮಗುವು ಎಕ್ಸ್ಪ್ಲೋರ್ ಮಾಡಬಹುದಾದ ಆ್ಯಪ್ಗಳನ್ನು ಸೆಟಪ್ ಮಾಡಲು, ಅವರು ಯಾವ ಸಂಪರ್ಕಗಳೊಂದಿಗೆ ಸಂವಹನ ನಡೆಸಬಹುದು ಮತ್ತು ಅವರು ಆ್ಯಪ್ಗಳು ಮತ್ತು ವೆಬ್ಸೈಟ್ಗಳನ್ನು ಯಾವಾಗ ಆ್ಯಕ್ಸೆಸ್ ಮಾಡಬಹುದು ಎಂಬುದನ್ನು ಸೆಟಪ್ ಮಾಡಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಇನ್ನಷ್ಟು.
ಪ್ರಾರಂಭಿಸಲು, ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ. ನಿಮಗೆ ಈ ಹಂತಗಳನ್ನು ಈಗ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ನೀವು ಯಾವುದೇ ಸಮಯದಲ್ಲಿ ಕುಟುಂಬ ಹಂಚಿಕೆ ಸೆಟ್ಟಿಂಗ್ಸ್ > (ನಿಮ್ಮ ಮಗುವಿನ ಹೆಸರು) ಎಂಬಲ್ಲಿಗೆ ಹೋಗಿ ಪ್ರಾರಂಭಿಸಬಹುದು.
ಹಂತ 2: ನಿಮ್ಮ ಮಗು ಯಾವ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಬಹುದು ಎಂಬುದನ್ನು ಆರಿಸುವುದು
ನಿಮ್ಮ ಮಗು ಯಾವ ಆ್ಯಪ್ಗಳು, ವೆಬ್ಸೈಟ್ಗಳು ಮತ್ತು ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಬಹುದೆಂದು ನಿರ್ಧರಿಸಿ. ನೀವು ಎರಡು ಸೆಟ್ಟಿಂಗ್ಸ್ ಅನ್ನು ಆಯ್ಕೆಮಾಡುತ್ತೀರಿ:
Safariಯಲ್ಲಿ ಅವರ ವೆಬ್ಸೈಟ್ ಆ್ಯಕ್ಸೆಸ್ ಅನ್ನು ನಿರ್ವಹಿಸಿ: “ಅನುಮೋದಿತ ವೆಬ್ಸೈಟ್ಗಳೊಂದಿಗೆ ಮಾತ್ರ” ಅಥವಾ “ಬ್ರೌಸ್ ಮಾಡಲು ಕೇಳಿ” ಎಂಬ ಆಯ್ಕೆಗಳೊಂದಿಗೆ, ನಿಮ್ಮ ಮಗು Safariಯಲ್ಲಿ ಹೊಸ ವೆಬ್ಸೈಟ್ಗೆ ಭೇಟಿ ನೀಡುವ ಮೊದಲು ನಿಮ್ಮ ಅನುಮೋದನೆಯ ಅಗತ್ಯವಿರುತ್ತದೆ. ಒಮ್ಮೆ ಅನುಮೋದಿಸಿದ ನಂತರ, ಆ ಸೈಟ್ ಅನ್ನು ಯಾವಾಗಲೂ ಆ್ಯಕ್ಸೆಸ್ ಮಾಡಬಹುದು. “ವಯಸ್ಕರ ವೆಬ್ಸೈಟ್ಸ್ ಮಿತಿಗೊಳಿಸಿ” ಎಂಬ ಆಯ್ಕೆಯೊಂದಿಗೆ, ಅನೇಕ ವಯಸ್ಕರ ವೆಬ್ಸೈಟ್ಗಳಿಗೆ ಆ್ಯಕ್ಸೆಸ್ ಅನ್ನು ಮಿತಿಗೊಳಿಸಲಾಗುತ್ತದೆ. ಅಥವಾ ನೀವು ಇಂಟರ್ನೆಟ್ಗೆ ಅನಿರ್ಬಂಧಿತ ಆ್ಯಕ್ಸೆಸ್ ಅನ್ನು ಅನುಮತಿಸಬಹುದು.
ಗಮನಿಸಿ: ಬ್ರೌಸ್ ಮಾಡಲು ಕೇಳಿ ಎಂಬುದು ಮಗುವಿನ ಖಾತೆಯನ್ನು ಹೊಂದಿರುವ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಡಿಫಾಲ್ಟ್ ಆಗಿ ಆನ್ ಆಗಿರುತ್ತದೆ. “ವಯಸ್ಕರ ವೆಬ್ಸೈಟ್ಸ್ ಮಿತಿಗೊಳಿಸಿ” ಎಂಬುದು ಮಗುವಿನ ಖಾತೆಯನ್ನು ಹೊಂದಿರುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಡಿಫಾಲ್ಟ್ ಆಗಿ ಆನ್ ಆಗಿರುತ್ತದೆ. 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೊಸ ವೆಬ್ಸೈಟ್ಗಳನ್ನು ಬ್ರೌಸ್ ಮಾಡಲು ವಿನಂತಿಸುವ ಅಗತ್ಯವಿದೆ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎಲ್ಲಾ ಬ್ಲಾಕ್ ಮಾಡಲಾದ ವೆಬ್ಸೈಟ್ಗಳನ್ನು ಬ್ರೌಸ್ ಮಾಡಲು ಅನುಮತಿಯ ಅಗತ್ಯವಿದೆ. (ದೇಶ ಅಥವಾ ಪ್ರದೇಶಕ್ಕೆ ಅನುಗುಣವಾಗಿ ವಯಸ್ಸಿನಲ್ಲಿ ವ್ಯತ್ಯಾಸವಾಗಬಹುದು.)
ಕಂಟೆಂಟ್ಗೆ ಅವರ ಆ್ಯಕ್ಸೆಸ್ ಅನ್ನು ಆರಿಸಿ: ಪುಸ್ತಕ ಆ್ಯಪ್ನಂತಹ Apple ಆ್ಯಪ್ಗಳ ಮೂಲಕ ಲಭ್ಯವಿರುವ ಪುಸ್ತಕಗಳು, ಚಲನಚಿತ್ರಗಳು, ಟಿವಿ ಶೋಗಳು ಮತ್ತು ಸಂಗೀತಕ್ಕೆ ವಯಸ್ಸಿನ ರೇಟಿಂಗ್ಗಳನ್ನು ಸೆಟ್ ಮಾಡಿ. ಉದಾಹರಣೆಗೆ, ನೀವು ವಯಸ್ಸಿನ ರೇಟಿಂಗ್ ಅನ್ನು ಆಯ್ಕೆಮಾಡಬಹುದು ಅಥವಾ ಅಶ್ಲೀಲ ಕಂಟೆಂಟ್ ಅನ್ನು ಬ್ಲಾಕ್ ಮಾಡಬಹುದು.
ಗಮನಿಸಿ: ಮಗುವಿನ ಖಾತೆಯನ್ನು ಹೊಂದಿರುವ 18 ವರ್ಷದೊಳಗಿನ ಮಕ್ಕಳಿಗೆ ವಯಸ್ಸನ್ನು ಆಧರಿಸಿದ ಕಂಟೆಂಟ್ ಮತ್ತು ಗೌಪ್ಯತೆ ನಿರ್ಬಂಧಗಳು ಡಿಫಾಲ್ಟ್ ಆಗಿ ಆನ್ ಆಗಿರುತ್ತವೆ ಮತ್ತು ಅವುಗಳನ್ನು ಯಾವುದೇ ಸಮಯದಲ್ಲಿ ಸರಿಹೊಂದಿಸಬಹುದು. (ದೇಶ ಅಥವಾ ಪ್ರದೇಶಕ್ಕೆ ಅನುಗುಣವಾಗಿ ವಯಸ್ಸಿನಲ್ಲಿ ವ್ಯತ್ಯಾಸವಾಗಬಹುದು.)
ನೀವು ಪೂರ್ಣಗೊಳಿಸಿದ ನಂತರ ಮುಂದುವರಿಸಿ ಎಂಬುದನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಮಗು ಯಾರ ಜೊತೆಗೆ ಸಂವಹನ ನಡೆಸಬಹುದು ಎಂಬುದನ್ನು ಆರಿಸುವುದು
ನಿಮ್ಮ ಮಗು ಫೋನ್, ಸಂದೇಶ ಮತ್ತು FaceTime ಆ್ಯಪ್ಗಳನ್ನು ಬಳಸಿಕೊಂಡು ಯಾರೊಂದಿಗೆ ಸಂವಹನ ನಡೆಸಬಹುದು ಎಂಬುದನ್ನು ನಿರ್ವಹಿಸಿ ಮತ್ತು ಸೂಕ್ಷ್ಮ ಕಂಟೆಂಟ್ನಿಂದ ಅವರನ್ನು ರಕ್ಷಿಸಲು ಸಹಾಯ ಮಾಡಿ.
ಅವರು ಯಾರೊಂದಿಗೆ ಮಾತನಾಡಬಹುದು ಎಂಬುದನ್ನು ನಿರ್ಧರಿಸಿ: ನಿಮ್ಮ ಮಗು ಹೊಸ ವ್ಯಕ್ತಿಗೆ ಸಂದೇಶ ಕಳುಹಿಸಲು ಅಥವಾ ಕರೆ ಮಾಡಲು ಬಯಸಿದಾಗ, ನೀವು ಮೊದಲು ಆ ಸಂಪರ್ಕವನ್ನು ಪರಿಶೀಲಿಸುತ್ತೀರಿ ಮತ್ತು ಅನುಮೋದಿಸುತ್ತೀರಿ. ನೀವು ಗುಂಪಿನಲ್ಲಿರುವ ಪ್ರತಿಯೊಬ್ಬರಿಗೂ ಅನುಮೋದನೆಯ ಅಗತ್ಯವಿದೆಯೇ ಅಥವಾ ಥ್ರೆಡ್ನಲ್ಲಿರುವ ಕೇವಲ ಒಂದು ಅನುಮೋದಿತ ಸಂಪರ್ಕಕ್ಕೆ ಮಾತ್ರ ಅಗತ್ಯವಿದೆಯೇ ಎಂಬುದನ್ನು ಆರಿಸಬಹುದು.
ಗಮನಿಸಿ: ಸಂಪರ್ಕ ನಿರ್ವಹಣೆಯು ಮಗುವಿನ ಖಾತೆಯನ್ನು ಹೊಂದಿರುವ 13 ವರ್ಷದವರೆಗಿನ ಮಕ್ಕಳಿಗೆ ಡಿಫಾಲ್ಟ್ ಆಗಿ ಆನ್ ಆಗಿರುತ್ತದೆ, ಮತ್ತು ಮಗುವಿನ ಖಾತೆಯನ್ನು ಹೊಂದಿರುವ 13 ವರ್ಷ ಮತ್ತು ಮೇಲ್ಪಟ್ಟ ಮಕ್ಕಳಿಗೆ ಅದನ್ನು ಆನ್ ಮಾಡಬಹುದು. (ದೇಶ ಅಥವಾ ಪ್ರದೇಶಕ್ಕೆ ಅನುಗುಣವಾಗಿ ವಯಸ್ಸಿನಲ್ಲಿ ವ್ಯತ್ಯಾಸವಾಗಬಹುದು.)
ಸೂಕ್ಷ್ಮ ಚಿತ್ರಗಳು ಮತ್ತು ವೀಡಿಯೊಗಳಿಂದ ಅವರನ್ನು ರಕ್ಷಿಸಲು ಸಹಾಯ ಮಾಡಿ: ಪತ್ತೆಯಾದ ನಗ್ನತೆ ಅಥವಾ ರಕ್ತಪಾತವನ್ನು ಒಳಗೊಂಡಿರಬಹುದಾದ ಫೋಟೋಗಳನ್ನು ಕಳುಹಿಸುವುದರಿಂದ ಅಥವಾ ಸ್ವೀಕರಿಸುವುದರಿಂದ ನಿಮ್ಮ ಮಗುವನ್ನು ರಕ್ಷಿಸಲು ಸಹಾಯ ಮಾಡಿ.
ನೀವು ಪೂರ್ಣಗೊಳಿಸಿದ ನಂತರ ಮುಂದುವರಿಸಿ ಎಂಬುದನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ.
ಹಂತ 4: ನಿಮ್ಮ ಮಗು ತಮ್ಮ ಸಾಧನವನ್ನು ಯಾವಾಗ ಬಳಸಬಹುದು ಎಂಬುದನ್ನು ಆರಿಸಿ
ನಿಮ್ಮ ಮಗು ಆ್ಯಪ್ಗಳು ಮತ್ತು ವೆಬ್ಸೈಟ್ಗಳನ್ನು ಬಳಸಬಹುದಾದ ಅವಧಿಯನ್ನು, ವಾರದ ದಿನಗಳು ಮತ್ತು ವಾರಾಂತ್ಯಗಳ ಪ್ರತ್ಯೇಕ ವೇಳಾಪಟ್ಟಿಗಳೊಂದಿಗೆ ಸೆಟ್ ಮಾಡಿ. ಈ ಅವಧಿಯ ಹೊರಗೆ, ಬಹುತೇಕ ಆ್ಯಪ್ಗಳು ಮತ್ತು ನೋಟಿಫಿಕೇಷನ್ಗಳನ್ನು ವಿರಾಮಗೊಳಿಸಲಾಗುತ್ತದೆ—ಇದು ಹಿಂದೆ ಡೌನ್ಟೈಮ್ ಎಂದು ಕರೆಯಲಾಗುತ್ತಿದ್ದ ಫೀಚರ್ ಆಗಿದೆ ಮತ್ತು ಈಗ ಇದನ್ನು ನಿಮ್ಮ ಮಗುವಿನ ದೈನಂದಿನ ವೇಳಾಪಟ್ಟಿಯಲ್ಲಿ ನಿರ್ಮಿಸಲಾಗಿದೆ. ಪ್ರತಿಯೊಂದಕ್ಕೂ ಲಭ್ಯತೆಯ ಆರಂಭ ಸಮಯ ಮತ್ತು ಲಭ್ಯತೆಯ ಅಂತ್ಯ ಸಮಯವನ್ನು ಆರಿಸಿ.
ನೀವು ಪೂರ್ಣಗೊಳಿಸಿದ ನಂತರ ಮುಂದುವರಿಸಿ ಎಂಬುದನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ.
ಹಂತ 5: ನಿಮ್ಮ ಮಗು ಏಕಾಗ್ರತೆಯಿಂದಿರುವುದಕ್ಕೆ ಸಹಾಯ ಮಾಡಲು ಶಾಲಾ ಅವಧಿಯನ್ನು ಸೆಟ್ ಮಾಡುವುದು
ನಿಮ್ಮ ಮಗುವಿಗೆ ಏಕಾಗ್ರತೆಯಿಂದಿರುವುದಕ್ಕೆ ಸಹಾಯ ಮಾಡಲು ಮನರಂಜನೆ, ಗೇಮ್ಸ್ ಮತ್ತು ಸಾಮಾಜಿಕ ಮಾಧ್ಯಮದಂತಹ ಆ್ಯಪ್ ವರ್ಗಗಳನ್ನು ನೀವು ಶಾಲಾ ಅವಧಿಯಲ್ಲಿ ವಿರಾಮಗೊಳಿಸಬಹುದು. ಇತರೆ ಆ್ಯಪ್ಗಳು ಮತ್ತು ವೆಬ್ಸೈಟ್ಗಳು ಸಂಪೂರ್ಣವಾಗಿ ಆ್ಯಕ್ಸೆಸ್ ಮಾಡಬಹುದಾಗಿರುತ್ತವೆ.
ಶಾಲಾ ಅವಧಿಯಲ್ಲಿ ವಿರಾಮಗೊಳಿಸಿ ಎಂಬುದನ್ನು ಆನ್ ಮಾಡಿ, ನಂತರ ಶಾಲಾ ದಿನಕ್ಕಾಗಿ ಪ್ರಾರಂಭ ಸಮಯ ಮತ್ತು ಮುಕ್ತಾಯ ಸಮಯವನ್ನು ಸೆಟ್ ಮಾಡಿ.
ನೀವು ಪೂರ್ಣಗೊಳಿಸಿದ ನಂತರ ಮುಂದುವರಿಸಿ ಎಂಬುದನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ.
ಹಂತ 6: ಸಮಯದ ಅನುಮತಿಗಳನ್ನು ಸೆಟ್ ಮಾಡುವುದು
ಸಮಯದ ಅನುಮತಿಗಳನ್ನು ಈ ಹಿಂದೆ ಆ್ಯಪ್ ಮಿತಿಗಳು ಎಂದು ಕರೆಯಲಾಗುತ್ತಿತ್ತು ಹಾಗೂ ಈಗ ಅವುಗಳು ಕುಟುಂಬಗಳು ಹೆಚ್ಚಾಗಿ ನಿರ್ವಹಿಸಲು ಬಯಸುವ ಆ್ಯಪ್ ವರ್ಗಗಳಿಗೆ ಅನ್ವಯಿಸುತ್ತವೆ: ಮನೋರಂಜನೆ, ಗೇಮ್ಸ್ ಮತ್ತು ಸಾಮಾಜಿಕ ಮಾಧ್ಯಮ. ಮೂರೂ ವರ್ಗಗಳಿಗೆ ಸೇರಿ ಒಟ್ಟು ಅವಧಿಯೊಂದನ್ನು ನೀವು ಸೆಟ್ ಮಾಡಬಹುದು, ನಂತರ ಯಾವುದೇ ಒಂದು ವರ್ಗಕ್ಕೆ ಸಮಯವನ್ನು ಸರಿಹೊಂದಿಸಬಹುದು.
ನೀವು ಮಿತಿಯನ್ನು ಸೆಟ್ ಮಾಡಿದಾಗ, ನಿಮ್ಮ ಮಗುವಿನ ವಯಸ್ಸಿನ ಆಧಾರದ ಮೇಲೆ ಮಾರ್ಗದರ್ಶನವನ್ನು ನೋಡುತ್ತೀರಿ. ಇದು ಕ್ಲಿನಿಕಲ್ ಮತ್ತು ಮಕ್ಕಳ ಬೆಳವಣಿಗೆಯ ತಜ್ಞರ ಸಂಶೋಧನೆಯನ್ನು ಆಧರಿಸಿದೆ. ಸಮಯವನ್ನು ಸರಿಹೊಂದಿಸಲು ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಿ ಮತ್ತು ಅದು ಸೂಚಿಸಲಾದ ವ್ಯಾಪ್ತಿಯೊಳಗೆ ಬರುತ್ತದೆಯೇ ಇಲ್ಲವೇ ಎಂದು ನೋಡಿ.
ನಿಮ್ಮ ಕುಟುಂಬಕ್ಕೆ ಹೆಚ್ಚು ಸರಿಹೊಂದುವಂತೆ, ನೀವು ವರ್ಗಗಳನ್ನು ಸಹ ಸೇರಿಸಬಹುದು ಅಥವಾ ಯಾವ ಆ್ಯಪ್ಗಳು ಯಾವ ವರ್ಗದಲ್ಲಿರಬೇಕು ಎಂದು ಬದಲಾಯಿಸಬಹುದು.
ನೀವು ಪೂರ್ಣಗೊಳಿಸಿದ ನಂತರ ಮುಂದುವರಿಸಿ ಎಂಬುದನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ.
ಹಂತ 7: ಪಾಸ್ಕೋಡ್ ಅನ್ನು ರಚಿಸುವುದು
ನಿಮ್ಮ ಮಗು ಊಹಿಸಲು ಸಾಧ್ಯವಾಗದಂತಹ ನಾಲ್ಕು-ಅಂಕಿಯ ಪಾಸ್ಕೋಡ್ ಅನ್ನು ರಚಿಸಿ. ನೀವು ಪೋಷಕರು ಹೇರುವ ನಿಯಂತ್ರಣಗಳು ಅಥವಾ ಮಕ್ಕಳ ಸುರಕ್ಷತಾ ಫೀಚರ್ಗಳನ್ನು ಬದಲಾಯಿಸಿದ ಪ್ರತಿಬಾರಿ ನೀವು ಈ ಪಾಸ್ಕೋಡ್ ಅನ್ನು ನಮೂದಿಸಬೇಕಾಗುತ್ತದೆ.
ನೀವು ಪೂರ್ಣಗೊಳಿಸಿದ ನಂತರ ಮುಂದುವರಿಸಿ ಎಂಬುದನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ.
ಮುಂದೇನು?
ನೀವು ಈಗತಾನೆ ಆಯ್ಕೆಮಾಡಿದ ಪೋಷಕರು ಹೇರುವ ನಿಯಂತ್ರಣಗಳ ಕುರಿತು ಹೆಚ್ಚುವರಿ ಮಾಹಿತಿಯನ್ನು ಪಡೆಯಲು, ನಿಮ್ಮ ಮಗುವಿನ ಸಾಧನದಲ್ಲಿ ಪೋಷಕರ ನಿಯಂತ್ರಣಗಳ ಬಳಕೆಯನ್ನು ಪ್ರಾರಂಭಿಸುವುದು ಎಂಬುದನ್ನು ನೋಡಿ.
ಕುಟುಂಬ ಹಂಚಿಕೆಗೆ ನೀವು ಮತ್ತು ನಿಮ್ಮ ಕುಟುಂಬವು ಹೊಸಬರಾಗಿದ್ದರೆ, ನಿಮ್ಮ ಕುಟುಂಬ ಗುಂಪಿನಿಂದ ಏನೇನು ಸಾಧ್ಯವಿದೆ ಎಂಬುದರ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯಿರಿ. ಉದಾಹರಣೆಗೆ, ಖರೀದಿಗಳು ಮತ್ತು ಸಬ್ಸ್ಕ್ರಿಪ್ಶನ್ಗಳನ್ನು ಹಂಚಿಕೊಳ್ಳುವುದು, ಕಳೆದುಹೋದ ಸಾಧನಗಳನ್ನು ಹುಡುಕಲು ಸಹಾಯ ಮಾಡುವುದು ಮತ್ತು ಇನ್ನಷ್ಟು. ಕುಟುಂಬ ಹಂಚಿಕೆಯ ಬಳಕೆಯನ್ನು ಪ್ರಾರಂಭಿಸುವುದು ಎಂಬುದನ್ನು ನೋಡಿ.