American Academy of Pediatrics (AAP) ಫ್ಯಾಮಿಲಿ ಮೀಡಿಯಾ ಪ್ಲ್ಯಾನ್‌ ಪರಸ್ಪರ ಮಾತನಾಡಲು ಮತ್ತು ನಿದ್ರೆ, ವ್ಯಾಯಾಮ, ಶಾಲಾ ಕೆಲಸ ಮತ್ತು ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಕಳೆಯುವ ಸಮಯದ ಮೂಲಕ ಸ್ಕ್ರೀನ್ ಸಮಯದ ಸಮತೋಲನ ಸಾಧಿಸುವ ಆರೋಗ್ಯಕರ ಡಿಜಿಟಲ್ ಅಭ್ಯಾಸಗಳನ್ನು ರೂಪಿಸಲು ಕುಟುಂಬಗಳಿಗೆ ಸಹಾಯ ಮಾಡುತ್ತದೆ. ನೀವು AAP ಮಾರ್ಗದರ್ಶನವನ್ನು ಆಚರಣೆಗೆ ತರುವಾಗ Apple ಸಾಧನಗಳು ಮತ್ತು ಫೀಚರ್‌ಗಳನ್ನು ನೀವು ಹೇಗೆ ಬಳಸಬಹುದು ಎಂಬುದನ್ನು ಈ ಮಾರ್ಗದರ್ಶಿಯು ನಿಮಗೆ ತೋರಿಸುತ್ತದೆ.*

American Academy of Pediatricsನ (AAP) ಸ್ಕ್ರೀನ್ ಟೈಮ್ ಮಾರ್ಗದರ್ಶನವನ್ನು ಎಕ್ಸ್‌ಪ್ಲೋರ್ ಮಾಡಿ

iPad ಅನ್ನು ಒಟ್ಟಿಗೆ ನೋಡುತ್ತಿರುವ ಒಬ್ಬರು ಪೋಷಕರು ಮತ್ತು ಮಗು.

ಹಂತ 1: ಸ್ಕ್ರೀನ್ ಟೈಮ್ ಕುರಿತು ಸಂಭಾಷಣೆಯನ್ನು ಪ್ರಾರಂಭಿಸಿ

ಪೋಷಕರು ಹೇರುವ ನಿಯಂತ್ರಣಗಳನ್ನು ಏಕೆ ಜಾರಿಗೆ ತರಲಾಗಿದೆ ಎಂಬುದು ಮಕ್ಕಳಿಗೆ ಅರ್ಥವಾದಾಗ ಅವುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಯಾವುದೇ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೊದಲು ಸ್ಕ್ರೀನ್ ಟೈಮ್ ಕುರಿತಾದ ಸಂಭಾಷಣೆಯೊಂದಿಗೆ ಪ್ರಾರಂಭಿಸಿದಾಗ ಮಕ್ಕಳಿಗೆ ತಾವು ಪ್ಲ್ಯಾನ್‌ನ ಭಾಗವಾಗಿದ್ದೀವೆ ಎಂದು ಯೋಚಿಸಲು ಭಾವಿಸಲು ಸಹಾಯವಾಗುತ್ತದೆ ಮತ್ತು ನಿಮ್ಮ ಮಗು ಬೆಳೆದಂತೆ ಅವರಿಗೆ ಬೆಂಬಲ ನೀಡುವ ಸಂಭಾಷಣೆಗಳನ್ನು ಮುಂದುವರಿಸುವ ಅವಕಾಶ ಸೃಷ್ಟಿಯಾಗುತ್ತದೆ.

ಸ್ಕ್ರೀನ್ ಟೈಮ್ ಕುರಿತು ನಿಮ್ಮ ಮಗುವಿನೊಂದಿಗೆ ಸಂಭಾಷಣೆ ನಡೆಸಿ

iMac ಅನ್ನು ಒಟ್ಟಿಗೆ ನೋಡುತ್ತಿರುವ ಇಬ್ಬರು ಪೋಷಕರು ಮತ್ತು ಮಗು.

ಹಂತ 2: ಮಗುವಿನ ಖಾತೆಯನ್ನು ಸೆಟಪ್ ಮಾಡಿ

ನೀವು ಕುಟುಂಬ ಹಂಚಿಕೆಯ ಮೂಲಕ ನಿಮ್ಮ ಮಗುವಿಗಾಗಿ Apple ಖಾತೆಯನ್ನು ಸೆಟಪ್ ಮಾಡಿದಾಗ, ಅದರಿಂದ ವಯಸ್ಸನ್ನು ಆಧರಿಸಿದ ಸುರಕ್ಷತಾ ಕ್ರಮಗಳು ಸಕ್ರಿಯಗೊಳ್ಳುತ್ತವೆ ಮತ್ತು ನಿಮ್ಮ ಮಗುವಿನ ಅನುಭವವನ್ನು ನಿರ್ವಹಿಸುವುದಕ್ಕಾಗಿ ಪೋಷಕರು ಹೇರುವ ನಿಯಂತ್ರಣಗಳಿಗೆ ನಿಮಗೆ ಆ್ಯಕ್ಸೆಸ್ ದೊರೆಯುತ್ತದೆ. ಇದು ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಿಮ್ಮ ಮಗುವಿನಿಂದ ಪ್ರತ್ಯೇಕವಾಗಿ ಇರಿಸುತ್ತದೆ.

ಮಗುವಿನ ಖಾತೆಯನ್ನು ರಚಿಸುವುದು

iPad ಅನ್ನು ಒಟ್ಟಿಗೆ ನೋಡುತ್ತಿರುವ ಒಬ್ಬರು ಪೋಷಕರು ಮತ್ತು ಮಗು.

ಹಂತ 3: ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಿಗಾಗಿ ಸುರಕ್ಷತಾ ಸೆಟ್ಟಿಂಗ್ಸ್ ಅನ್ನು ಸೆಟ್ ಮಾಡಿ

ನಿಮ್ಮ ಮಗು ಹೊಸ ಆ್ಯಪ್‌ಗಳು, ಗೇಮ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಕಂಡುಕೊಳ್ಳುತ್ತಾ ಹೋದಂತೆ, ಅವರು ಏನನ್ನು ಆ್ಯಕ್ಸೆಸ್ ಮಾಡಬಹುದು—ಅವರು ಯಾವ ಆ್ಯಪ್‌ಗಳನ್ನು ಖರೀದಿಸಬಹುದು ಅಥವಾ ಡೌನ್‌ಲೋಡ್ ಮಾಡಬಹುದು, ಅವರು ಯಾವ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು ಮತ್ತು ಯಾವ ರೇಟಿಂಗ್‌ಗಳನ್ನು ಹೊಂದಿರುವ ಪುಸ್ತಕಗಳು ಹಾಗೂ ಚಲನಚಿತ್ರಗಳಂತಹ ಕಂಟೆಂಟ್‌ಗೆ ಅನುಮತಿಯಿದೆ ಎಂಬುದನ್ನು ನೀವು ನಿರ್ಧರಿಸಬಹುದು.

ನಿಮ್ಮ ಮಗುವಿನ ಸಾಧನದಲ್ಲಿ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಿಗಾಗಿ ಸುರಕ್ಷತಾ ಸೆಟ್ಟಿಂಗ್ಸ್ ಅನ್ನು ಸೆಟ್ ಮಾಡಿ

ನಡೆಯುತ್ತಿರುವ ಮಗು, Apple Watch ಅನ್ನು ಕೆಳಗೆ ನೋಡುತ್ತಿದೆ.

ಹಂತ 4: ಸಾಧನದ ಬಳಕೆಗೆ ವೇಳಾಪಟ್ಟಿಯನ್ನು ರಚಿಸಿ

ನಿಮ್ಮ ಮಗುವಿನ ಸಾಧನದ ಬಳಕೆಗಾಗಿ ವೇಳಾಪಟ್ಟಿಯನ್ನು ಸೆಟ್ ಮಾಡುವುದರಿಂದ ಅವರು ಆನ್‌ಲೈನ್‌ನಲ್ಲಿ ಕಳೆಯುವ ಸಮಯವನ್ನು ನಿದ್ರೆ, ದೈಹಿಕ ಚಟುವಟಿಕೆ ಮತ್ತು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕಳೆಯುವ ಸಮಯದೊಂದಿಗೆ ಸಮತೋಲನಗೊಳಿಸಲು ಸಹಾಯವಾಗುತ್ತದೆ. ನಿಮ್ಮ ಮಗು ತಮ್ಮ Apple ಸಾಧನದಲ್ಲಿ ಕಳೆಯುವ ಸಮಯವನ್ನು ನಿರ್ವಹಿಸಲು ಮತ್ತು ದಿನಚರಿಗಳನ್ನು ಸೆಟ್ ಮಾಡಲು ಸಹಾಯ ಮಾಡುವುದಕ್ಕೆ ನೀವು ಸ್ಕ್ರೀನ್ ಟೈಮ್ ಅನ್ನು ಬಳಸಬಹುದು.

ನಿಮ್ಮ ಮಗುವಿನ ಸಾಧನದ ಬಳಕೆಗಾಗಿ ವೇಳಾಪಟ್ಟಿಯನ್ನು ರಚಿಸಿ

ಹೊರಗೆ ಕುಳಿತಿರುವ ಮಕ್ಕಳ ಗುಂಪು. iPhoneನಲ್ಲಿ ಒಂದು ಮಗು FaceTime ಕರೆಯಲ್ಲಿ ತೊಡಗಿದೆ.

ಹಂತ 5: ನಿಮ್ಮ ಮಗುವಿನ ಸಂಪರ್ಕಗಳನ್ನು ನಿರ್ವಹಿಸಿ

ನಿಮ್ಮ ಮಗು ಫೋನ್, FaceTime ಮತ್ತು ಸಂದೇಶ ಆ್ಯಪ್‌ನಲ್ಲಿ ಯಾರೊಂದಿಗೆ ಸಂವಹನ ನಡೆಸಬಹುದು ಎಂಬುದನ್ನು ನೀವು ಆರಿಸಬಹುದು ಮತ್ತು ಹೊಸ ಸಂಪರ್ಕಗಳನ್ನು ಅನುಮೋದಿಸಬಹುದು. ಚಿತ್ರಗಳಲ್ಲಿ ಮತ್ತು ವೀಡಿಯೊಗಳಲ್ಲಿ ಪತ್ತೆಯಾದ ನಗ್ನತೆ ಮತ್ತು ರಕ್ತಪಾತವನ್ನು ವೀಕ್ಷಿಸುವುದರಿಂದ ಅಥವಾ ಹಂಚಿಕೊಳ್ಳುವುದರಿಂದ ಅವರನ್ನು ರಕ್ಷಿಸಲು ಸಹಾಯ ಮಾಡುವುದಕ್ಕಾಗಿ ನೀವು ಸಂವಹನ ಸುರಕ್ಷತೆಯನ್ನು ಬಳಸಬಹುದು.

ನಿಮ್ಮ ಮಗುವಿನ ಸಂಪರ್ಕಗಳನ್ನು ನಿರ್ವಹಿಸಿ

ಒಬ್ಬ ಪೋಷಕರು ಮತ್ತು ಮಗು ಟೇಬಲ್‌ನೆದುರು ಇದ್ದು, ಮಗು Apple Pencil ಬಳಸಿಕೊಂಡು iPadನಲ್ಲಿ ಚಿತ್ರ ಬಿಡಿಸುತ್ತಿದೆ.

ಹಂತ 6: ನಿಮ್ಮ ಮಗು ಬೆಳೆದಂತೆ ಸಂಭಾಷಣೆಯನ್ನು ಮುಂದುವರಿಸಿ

ಪೋಷಕರು ಹೇರುವ ನಿಯಂತ್ರಣಗಳು ನಿಮ್ಮ ಮತ್ತು ನಿಮ್ಮ ಮಕ್ಕಳ ನಡುವೆ ಮುಕ್ತ, ನಿರಂತರ ಸಂಭಾಷಣೆಗಳನ್ನು ಬೆಂಬಲಿಸಬಲ್ಲವು. ನಿಯಮಿತವಾಗಿ ಪರಿಶೀಲಿಸುತ್ತಿರಿ ಮತ್ತು ನಿಮ್ಮ ಮಗು ಬೆಳೆದಂತೆ ನಿಮ್ಮ ಕುಟುಂಬದ ಪ್ಲ್ಯಾನ್‌ ಅನ್ನು ಸರಿಹೊಂದಿಸಿ.

ನಿಮ್ಮ ಮಗು ಬೆಳೆದಂತೆ ಸಂಭಾಷಣೆಯನ್ನು ಮುಂದುವರಿಸಿ

*ಈ ಮಾರ್ಗದರ್ಶಿಯಲ್ಲಿ ವಿವರಿಸಲಾಗಿರುವ ಫೀಚರ್‌ಗಳನ್ನು ಬಳಸಲು, ನಿಮಗೆ iOS, iPadOS, macOS, watchOS ಅಥವಾ visionOSನ ಆವೃತ್ತಿ 27 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ. ನಿಮ್ಮ ಕುಟುಂಬ ಹಂಚಿಕೆ ಗುಂಪಿನಲ್ಲಿರುವ ಮಗುವಿಗಾಗಿ ನೀವು ಈ ಫೀಚರ್‌ಗಳನ್ನು ಸೆಟಪ್ ಮಾಡುತ್ತಿದ್ದರೆ, ನಿಮ್ಮ ಕುಟುಂಬದಲ್ಲಿರುವ ಎಲ್ಲಾ ಸಾಧನಗಳನ್ನು iOS, iPadOS, macOS, watchOS ಅಥವಾ visionOSನ ಆವೃತ್ತಿ 27ಕ್ಕೆ ಅಥವಾ ನಂತರದ ಆವೃತ್ತಿಗೆ ಅಪ್‌ಗ್ರೇಡ್ ಮಾಡಬೇಕು. ನಿಮ್ಮ Apple ಸಾಧನಗಳನ್ನು ಅಪ್‌ಡೇಟ್ ಮಾಡುವುದು ಹೇಗೆ ಎಂದು ತಿಳಿಯಿರಿ.

ಈ ಮಾರ್ಗದರ್ಶಿಯು ನಿಮ್ಮ ಮಗುವಿನ ಸಾಧನದಲ್ಲಿ ಲಭ್ಯವಿರುವ ಪೋಷಕರು ಹೇರಬಹುದಾದ ಕೆಲವು ನಿಯಂತ್ರಣಗಳ ಕುರಿತು ಮಾತ್ರ ವಿವರಿಸುತ್ತದೆ. ನೀವು ಅವರ ಸಾಧನವನ್ನು ಮೊದಲ ಬಾರಿಗೆ ಸೆಟಪ್ ಮಾಡುವಾಗ ಅಥವಾ ಅದನ್ನು ಆವೃತ್ತಿ 27ಕ್ಕೆ ಅಪ್‌ಡೇಟ್ ಮಾಡುವಾಗ, ಪೋಷಕರು ಹೇರುವ ನಿಯಂತ್ರಣಗಳನ್ನು ಸೆಟಪ್ ಮಾಡುವಂತೆ ನಿಮಗೆ ಪ್ರಾಂಪ್ಟ್ ಮಾಡಲಾಗುತ್ತದೆ. ಪೋಷಕರು ಹೇರುವ ನಿಯಂತ್ರಣ ಸೆಟಪ್ ಮತ್ತು ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ಮಕ್ಕಳು ಮತ್ತು ಕುಟುಂಬಗಳಿಗಾಗಿ Apple ಸಾಧನಗಳು ಎಂಬುದನ್ನು ನೋಡಿ.

ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.