ಹಂತ 1: ನಿಮ್ಮ ಮಗುವಿನೊಂದಿಗೆ ಸ್ಕ್ರೀನ್ ಟೈಮ್ ಕುರಿತು ಸಂಭಾಷಣೆ ನಡೆಸಿ
ನೀವು American Academy of Pediatricsನ (AAP) ಸ್ಕ್ರೀನ್ ಟೈಮ್ ಮಾರ್ಗದರ್ಶನವನ್ನು ಪರಿಶೀಲಿಸಿದ ನಂತರ ಮತ್ತು ನಿಮ್ಮ ಕುಟುಂಬಕ್ಕೆ ಯಾವುದು ಸೂಕ್ತ ಎಂಬುದರ ಕುರಿತು ಯೋಚಿಸಿದ ನಂತರ, ಮುಂದಿನ ಹಂತವೆಂದರೆ ನಿಮ್ಮ ಮಗುವಿನೊಂದಿಗೆ ಮಾತನಾಡುವುದು. ಈ ಸಂಭಾಷಣೆಗಳು ಬಹುಬಾರಿ ಅವರ ಜೊತೆಯಲ್ಲೇ ಬೆಳೆಯುವ ನಿರಂತರ ಸಂವಾದವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆಯೇ ಹೊರತು, ಒಮ್ಮೆ ಮಾತ್ರ ಅನ್ವಯವಾಗುವ ನಿಯಮಗಳಾಗಿ ಅಲ್ಲ.
ನಿಮ್ಮ ಮಗುವಿನ ಜೊತೆಗೆ ಸಂಭಾಷಣೆ ಪ್ರಾರಂಭಿಸಿ
ಚಿಕ್ಕ ಮಕ್ಕಳಿಗಾಗಿ, ನೀವು ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುತ್ತಾ ಹೋದಂತೆ ಅವರೊಟ್ಟಿಗೆ ವೀಕ್ಷಿಸಿ ಮತ್ತು ಆಟವಾಡಿ ಹಾಗೂ ಸರಳ, ಹಂಚಿಕೊಂಡ ಒಪ್ಪಂದಗಳನ್ನು ಸೆಟ್ ಮಾಡಿ. ಇವುಗಳು ಊಟದ ಸಮಯ ಮತ್ತು ಮಲಗುವುದಕ್ಕಿಂತ ಒಂದು ಗಂಟೆ ಮೊದಲಿನಂತಹ ಸ್ಕ್ರೀನ್-ಫ್ರೀ ಸಮಯಗಳು ಮತ್ತು ಮಲಗುವ ಕೋಣೆಗಳಂತಹ ಸ್ಕ್ರೀನ್-ಫ್ರೀ ವಲಯಗಳನ್ನು ಒಳಗೊಂಡಿರಬಹುದು. ನೀವು ನಿಗದಿಪಡಿಸಿದ ಮಿತಿಗಳ ಹಿಂದಿನ ಕಾರಣಗಳನ್ನು ವಿವರಿಸಿ. ನಿದ್ರೆ, ಚಲನೆ ಮತ್ತು ಆಫ್ಲೈನ್ ಆಟವು ಬೆಳೆಯುತ್ತಿರುವ ದೇಹ ಮತ್ತು ಮನಸ್ಸಿಗೆ ಮುಖ್ಯವಾಗಿವೆ. ಮತ್ತು ನೀವು ಚರ್ಚಿಸುವ ಮಿತಿಗಳನ್ನು ಬೆಂಬಲಿಸಲು ಸಹಾಯ ಮಾಡಲು ಅವರ Apple ಸಾಧನದಲ್ಲಿ ನೀವು ಸ್ಕ್ರೀನ್ ಟೈಮ್ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಬಹುದು.
ನಿಮ್ಮ ಮಗು ಬೆಳೆದಂತೆ, ನೀವು ಬಹುಶಃ ಅವರಿಗಾಗಿ ಸ್ಕ್ರೀನ್ ಟೈಮ್ ನಿರ್ವಹಿಸುವುದನ್ನು ಬಿಟ್ಟು, ಅವರು ಅದನ್ನು ಸ್ವತಃ ನಿರ್ವಹಣೆ ಮಾಡುವುದಕ್ಕೆ ಸಹಾಯ ಮಾಡುವ ಕಡೆಗೆ ಬದಲಾಯಿಸಲು ಬಯಸುತ್ತೀರಿ, ಇದರಿಂದ ಅವರು ವಯಸ್ಕರಾಗುವ ಹೊತ್ತಿಗೆ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಂಡಿರುತ್ತಾರೆ. ಸಂಭಾಷಣೆಯನ್ನು ಅವರು ಸಾಧನವೊಂದರಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎಂಬುದರಿಂದ ಅವರು ವಾಸ್ತವವಾಗಿ ಏನು ಮಾಡುತ್ತಿದ್ದಾರೆ ಎಂಬುದರತ್ತ ಕೊಂಡೊಯ್ಯಿರಿ. ಆರೋಪ ಮಾಡುವ ಬದಲು ಕುತೂಹಲದಿಂದಿರಿ.
AAP ತನ್ನ ವೆಬ್ಸೈಟ್ನಲ್ಲಿ ನೀವು ಅಳವಡಿಸಿಕೊಳ್ಳಬಹುದಾದ ಸಂಭಾಷಣೆಯನ್ನು ಪ್ರಾರಂಭಿಸುವ ವಿಧಾನಗಳನ್ನು ಒದಗಿಸುತ್ತದೆ, ಉದಾಹರಣೆಗೆ:
“ನಮ್ಮ ಕುಟುಂಬವು ತಂತ್ರಜ್ಞಾನವನ್ನು ಬಳಸುವ ಬಗ್ಗೆ ಹೇಗೆ ಮಿತಿಗಳನ್ನು ನಿಗದಿಪಡಿಸಬೇಕು ಎಂಬುದರ ಕುರಿತು ನಾವು ಮಾತನಾಡಬಹುದೇ? ನಾವು ಒಟ್ಟಾಗಿ ಇದರ ಮೇಲೆ ಕೆಲಸ ಮಾಡೋಣ, ನಾನು ನಿಮ್ಮನ್ನು ಈ ನಿರ್ಧಾರಗಳಲ್ಲಿ ಸೇರಿಸಿಕೊಳ್ಳಲು ಬಯಸುತ್ತೇನೆ.”
“ದಿನವೊಂದರ ಯಾವ ಸಮಯಗಳಲ್ಲಿ ನಾವು ಸಾಧನಗಳು ಅಥವಾ ಫೋನ್ಗಳನ್ನು ಬಳಸಬಾರದೆಂದು ನಿಮಗೆ ಅನಿಸುತ್ತದೆ? ಉದಾಹರಣೆಗೆ, ಕುಟುಂಬದ ಜೊತೆಗೆ ರಾತ್ರಿ ಊಟ ಮಾಡುವ ಸಮಯ ಆಗಿರಬಹುದು.”
“ಯಾವ ಸಮಯಗಳಲ್ಲಿ ಸಾಧನ ಅಥವಾ ಫೋನ್ ಅನ್ನು ಬಳಸುವ ಬದಲು ನಾನು ನಿಮ್ಮೊಂದಿಗೆ ಇರುವುದು ಮುಖ್ಯವೆಂದು ನಿಮಗೆ ಅನಿಸುತ್ತದೆ?”
ಹೆಚ್ಚುವರಿ ಸಲಹೆಗಳಿಗಾಗಿ, AAPನ ಮೀಡಿಯಾದ ಕುರಿತು ಸಂಭಾಷಣೆಯನ್ನು ಪ್ರಾರಂಭಿಸಲು ಕುಟುಂಬಗಳಿಗಾಗಿ ಸಲಹೆಗಳು ಎಂಬುದನ್ನು ನೋಡಿ.
ನಿಮ್ಮ ಮಗುವಿಗೆ ಡಿಜಿಟಲ್ ಸಾಕ್ಷರತೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿ
ನೀವು ನಿಮ್ಮ ಮಗುವಿನ ಜೊತೆಗೆ ಸ್ಕ್ರೀನ್ ಟೈಮ್ ಕುರಿತು ಸಂಭಾಷಣೆಗಳನ್ನು ನಡೆಸುವಾಗ, ನೀವು ಅವರಿಗೆ ಡಿಜಿಟಲ್ ಸಾಕ್ಷರತೆಯನ್ನು ಬೆಳೆಸಿಕೊಳ್ಳಲು, ಎಂದರೆ ತಂತ್ರಜ್ಞಾನವನ್ನು ಸುರಕ್ಷಿತವಾಗಿ ಮತ್ತು ಚಿಂತನಶೀಲವಾಗಿ ಬಳಸುವುದು ಹೇಗೆಂದು ತಿಳಿದುಕೊಳ್ಳಲು ಸಹಾಯ ಮಾಡಬಹುದು. ಆನ್ಲೈನ್ನಲ್ಲಿ ಏನನ್ನು ಹಂಚಿಕೊಳ್ಳಬೇಕು, ಯಾರನ್ನು ನಂಬಬೇಕು ಮತ್ತು ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಮಗುವಿಗೆ ನೀವು ಸಹಾಯ ಮಾಡಬಹುದು. ನಿಮ್ಮ ಕಣ್ಣಿಗೆ ಬೀಳುವ ತಪ್ಪು ಮಾಹಿತಿಯ ಉದಾಹರಣೆಗಳನ್ನು ನೀವು ಎತ್ತಿ ತೋರಿಸಬಹುದು, ಇನ್ಫ್ಲುಯೆನ್ಸರ್ಗಳು ಮತ್ತು ಆ್ಯಡ್ಗಳು ಏನು ಮಾರಾಟ ಮಾಡುತ್ತಿವೆ ಎಂಬುದನ್ನು ಪ್ರಶ್ನಿಸಬಹುದು ಮತ್ತು ಬಳಸುವುದನ್ನು ನಿಲ್ಲಿಸುವುದು ಕಷ್ಟಕರವಾದ ಆ್ಯಪ್ಗಳ ಕುರಿತು ಮಾತನಾಡಬಹುದು. ಪರಸ್ಪರ ಸಂಭಾಷಣೆಯನ್ನು ಸಾಧ್ಯವಾಗಿಸುವುದರಿಂದ ಸೈಬರ್ನಿಂದನೆ ಮತ್ತು ಗೌಪ್ಯತೆಯಂತಹ ಕಠಿಣ ವಿಷಯಗಳ ಬಗ್ಗೆಯೂ ಮಾತನಾಡಲು ಅವಕಾಶ ದೊರೆಯುತ್ತದೆ, ಇದರಿಂದ ನಿಮ್ಮ ಮಗುವಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಲು ಅವರು ನಿಮ್ಮ ಬಳಿ ಬರಬಹುದು ಎಂದು ತಿಳಿಯುತ್ತದೆ.
ಹೆಚ್ಚಿನ ಮಾಹಿತಿಗಾಗಿ, AAPನ ಡಿಜಿಟಲ್ ಜಗತ್ತಿನಲ್ಲಿ ಅಭಿವೃದ್ಧಿ ಸಾಧಿಸಲು ಮಕ್ಕಳಿಗೆ ಸಹಾಯ ಮಾಡುವುದು: AAP ನೀತಿಯ ವಿವರಣೆ ಎಂಬುದನ್ನು ನೋಡಿ.