ಹಂತ 4: ನಿಮ್ಮ ಮಗುವಿನ ಸಾಧನದ ಬಳಕೆಗಾಗಿ ವೇಳಾಪಟ್ಟಿಯನ್ನು ರಚಿಸಿ
ನಿಮ್ಮ ಮಗು ತಮ್ಮ ಸಾಧನದಲ್ಲಿ ಸಮಯವನ್ನು ಕಳೆಯುತ್ತಿರುವಾಗ, ಆರೋಗ್ಯಕರ, ಸಮತೋಲಿತ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಅವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನೀವು ಪ್ರಮುಖ ಪಾತ್ರ ನಿರ್ವವಹಿಸುತ್ತೀರಿ. ಮಕ್ಕಳು ಇನ್ನೂ ಅಭಿವೃದ್ಧಿ ಹೊಂದುತ್ತಿರುವಾಗ ಈ ಅಭ್ಯಾಸಗಳಲ್ಲಿ ಹಲವು ವಿಶೇಷವಾಗಿ ಮುಖ್ಯವಾಗಿವೆ. ನಿದ್ರೆ, ದೈಹಿಕ ಚಟುವಟಿಕೆ, ಹೋಮ್ವರ್ಕ್ ಮತ್ತು ಕುಟುಂಬ ಹಾಗೂ ಸ್ನೇಹಿತರ ಜೊತೆಗಿನ ಸಮಯದಂತಹ ಅಗತ್ಯ ಸಂಗತಿಗಳಿಗೆ ಸಮಯವನ್ನು ಮೀಸಲಿಡುವುದು ಆರೋಗ್ಯಕರ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
ಊಟದ ಸಮಯ ಅಥವಾ ಮಲಗುವ ಕೋಣೆಗಳಂತಹ ಸ್ಕ್ರೀನ್-ಫ್ರೀ ಸಮಯಗಳು ಮತ್ತು ಸ್ಥಳಗಳನ್ನು ನಿರ್ಮಿಸುವುದರಿಂದ ಮಕ್ಕಳಿಗೆ ಇತರರೊಂದಿಗೆ ಬೆರೆಯುವ ಮತ್ತು ಅವರ ಸಾಧನಗಳಿಂದ ವಿರಾಮ ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡುವ ಅವಕಾಶ ದೊರೆಯುತ್ತದೆ. ವಿಶೇಷವಾಗಿ ಮಕ್ಕಳು ಬೆಳೆದಂತೆ, ಒಂದೇ ಪ್ರಮಾಣದ ಸ್ಕ್ರೀನ್ ಟೈಮ್ಗಿಂತ, ಸ್ಕ್ರೀನ್ ಟೈಮ್ನ ಸ್ಥಿರವಾದ ನಿರ್ವಹಣೆ ಹೆಚ್ಚು ಮುಖ್ಯ ಎಂಬುದನ್ನು ಸಂಶೋಧನೆ ಮತ್ತು ತಜ್ಞರ ಮಾರ್ಗದರ್ಶನ ಸಾಮಾನ್ಯವಾಗಿ ಸೂಚಿಸುತ್ತವೆ.
ನಿಮ್ಮ ಕುಟುಂಬ ಹಂಚಿಕೆ ಗುಂಪಿನಲ್ಲಿರುವ ಮಗುವಿಗಾಗಿ ನೀವು ಈ ಪೋಷಕರು ಹೇರುವ ನಿಯಂತ್ರಣಗಳನ್ನು ಸೆಟಪ್ ಮಾಡುತ್ತಿದ್ದರೆ, ನಿಮ್ಮ ಕುಟುಂಬದಲ್ಲಿರುವ ಎಲ್ಲಾ ಸಾಧನಗಳನ್ನು iOS, iPadOS, macOS, watchOS ಅಥವಾ visionOSನ ಆವೃತ್ತಿ 27ಕ್ಕೆ ಅಥವಾ ನಂತರದ ಆವೃತ್ತಿಗೆ ಅಪ್ಗ್ರೇಡ್ ಮಾಡಬೇಕು. ನಿಮ್ಮ Apple ಸಾಧನಗಳನ್ನು ಅಪ್ಡೇಟ್ ಮಾಡುವುದು ಹೇಗೆ ಎಂದು ತಿಳಿಯಿರಿ. | |||||||||||
ನಿಮ್ಮ ಮಗು ಆ್ಯಪ್ಗಳನ್ನು ಎಷ್ಟು ಸಮಯದವರೆಗೆ ಬಳಸಬೇಕು ಎಂಬುದನ್ನು ಆರಿಸಿ
ಮನರಂಜನೆ, ಗೇಮ್ಗಳು ಮತ್ತು ಸಾಮಾಜಿಕ ಮಾಧ್ಯಮದಂತಹ ವಿವಿಧ ವರ್ಗಗಳಾದ್ಯಂತ ನಿಮ್ಮ ಮಗು ಆ್ಯಪ್ಗಳಲ್ಲಿ ಕಳೆಯುವ ಸಮಯವನ್ನು ನಿರ್ವಹಿಸಲು ಸಮಯದ ಅನುಮತಿಗಳನ್ನು ಸೆಟಪ್ ಮಾಡಿ. ಸಮಯದ ಅನುಮತಿಗಳು American Academy of Pediatrics (AAP) ಮತ್ತು ಇತರ ಸಂಸ್ಥೆಗಳು ಮಕ್ಕಳ ಆರೋಗ್ಯ ಸಂಶೋಧನೆಯನ್ನು ಆಧರಿಸಿ, ವಿಭಾಗಗಳಾದ್ಯಂತ ನಿಮ್ಮ ಮಗುವಿನ ಹಂಚಿಕೊಂಡ ಸಮಯದ ಅನುಮತಿಗಾಗಿ ವಯಸ್ಸನ್ನು ಆಧರಿಸಿದ ಆರಂಭಿಕ ಹಂತವನ್ನು ಸೂಚಿಸುತ್ತವೆ. ನೀವು ಪ್ರತಿ ವರ್ಗಕ್ಕಾಗಿ ಸಮಯವನ್ನು ಸರಿಹೊಂದಿಸಬಹುದು ಮತ್ತು ಅದು ಸಾಮಾನ್ಯ ಮಾರ್ಗದರ್ಶನದೊಳಗೆ ಬರುತ್ತದೆಯೇ ಎಂದು ಪರಿಶೀಲಿಸಬಹುದು.
ಪ್ರಾರಂಭಿಸಲು, ನಿಮ್ಮ ಕುಟುಂಬ ಹಂಚಿಕೆ ಸೆಟ್ಟಿಂಗ್ಸ್ಗೆ ಹೋಗಿ, ನಿಮ್ಮ ಮಗುವಿನ ಹೆಸರನ್ನು ಆಯ್ಕೆಮಾಡಿ, ನಂತರ ಸಮಯದ ಅನುಮತಿಗಳು ಎಂಬುದನ್ನು ಕ್ಲಿಕ್ ಮಾಡಿ ಅಥವಾ ಟ್ಯಾಪ್ ಮಾಡಿ. ಹೆಚ್ಚಿನ ಮಾಹಿತಿಗಾಗಿ, ಸಮಯದ ಅನುಮತಿಗಳೊಂದಿಗೆ ನಿಮ್ಮ ಮಗು ಎಷ್ಟು ಸಮಯದವರೆಗೆ ಆ್ಯಪ್ಗಳು ಮತ್ತು ವೆಬ್ಸೈಟ್ಗಳನ್ನು ಬಳಸಬಹುದು ಎಂಬುದನ್ನು ಸೆಟ್ ಮಾಡಿ ಎಂಬುದನ್ನು ನೋಡಿ.
ನಿಮ್ಮ ಮಗುವಿನ ಸಾಧನದ ಬಳಕೆಗಾಗಿ ವೇಳಾಪಟ್ಟಿಗಳನ್ನು ರಚಿಸಿ
ಸ್ಕ್ರೀನ್ ಟೈಮ್ ವೇಳಾಪಟ್ಟಿಗಳ ಮೂಲಕ, ನಿಮ್ಮ ಮಗುವಿಗೆ ಏಕಾಗ್ರತೆಯಿಂದಿರುವುದಕ್ಕೆ ಸಹಾಯ ಮಾಡಲು ಅವರು ದಿನದ ವಿವಿಧ ಸಮಯಗಳಲ್ಲಿ ಯಾವ ಆ್ಯಪ್ಗಳನ್ನು ಬಳಸಬಹುದು ಎಂಬುದನ್ನು ನೀವು ನಿರ್ವಹಿಸಬಹುದು. ನೀವು ಶಾಲೆಯ ಮೊದಲು, ಶಾಲೆ ಮತ್ತು ಶಾಲೆಯ ನಂತರದಂತಹ ಬಿಲ್ಟ್-ಇನ್ ಸಮಯದ ವಿಂಡೋಗಳನ್ನು ಬಳಸಿಕೊಂಡು ವಾರದ ದಿನಗಳು ಮತ್ತು ವಾರಾಂತ್ಯಗಳಿಗಾಗಿ ದಿನಚರಿಗಳನ್ನು ಸೆಟ್ ಮಾಡಬಹುದು. ನೀವು ಕಡಿಮೆ ಶಾಲಾ ದಿನಗಳು ಅಥವಾ ಪಠ್ಯೇತರ ಚಟುವಟಿಕೆಗಳಂತಹ ಸಂದರ್ಭಗಳಿಗಾಗಿ ನಿಮ್ಮದೇ ಆದ ವೇಳಾಪಟ್ಟಿಯನ್ನು ಸಹ ರಚಿಸಬಹುದು.
ಪ್ರಾರಂಭಿಸಲು, ನಿಮ್ಮ ಕುಟುಂಬ ಹಂಚಿಕೆ ಸೆಟ್ಟಿಂಗ್ಸ್ಗೆ ಹೋಗಿ, ನಿಮ್ಮ ಮಗುವಿನ ಹೆಸರನ್ನು ಆಯ್ಕೆಮಾಡಿ, ನಂತರ ಸ್ಕ್ರೀನ್ ಟೈಮ್ ವೇಳಾಪಟ್ಟಿಯನ್ನು ಕ್ಲಿಕ್ ಮಾಡಿ ಅಥವಾ ಟ್ಯಾಪ್ ಮಾಡಿ. ಹೆಚ್ಚಿನ ಮಾಹಿತಿಗಾಗಿ, ಸಾಧನದ ಬಳಕೆಗಾಗಿ ಸ್ಕ್ರೀನ್ ಟೈಮ್ ವೇಳಾಪಟ್ಟಿಗಳನ್ನು ಸೆಟಪ್ ಮಾಡಿ ಎಂಬುದನ್ನು ನೋಡಿ.
ಸಲಹೆ: ನೀವು ಮತ್ತು ನಿಮ್ಮ ಮಗು ಸಾಧನ ಬಳಕೆಗಾಗಿ ವೇಳಾಪಟ್ಟಿಗಳನ್ನು ರಚಿಸುವಾಗ, ಮಲಗುವ ಸಮಯದ ದಿನಚರಿಗಳು ಸಹ ಆ ಯೋಜನೆಯ ಭಾಗವಾಗಿರಲಿ. ಬೆಳೆಯುತ್ತಿರುವ ಮಕ್ಕಳಿಗಾಗಿ ನಿದ್ರೆಯು ವಿಶೇಷವಾಗಿ ಮುಖ್ಯವಾಗಿದೆ. ಮಲಗುವ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಸ್ಕ್ರೀನ್ಗಳನ್ನು ಆಫ್ ಮಾಡುವಂತೆ ಮತ್ತು ರಾತ್ರಿಯಿಡೀ ಸಾಧನಗಳನ್ನು ಮಲಗುವ ಕೋಣೆಯ ಹೊರಗಿಡುವಂತೆ AAP ಸೂಚಿಸುತ್ತದೆ. ಮಲಗುವ ಸಮಯ ಸಮೀಪಿಸಿದಾಗ ನಿಮ್ಮ ಮಗುವಿಗೆ ನೆನಪಿಸಲು ನೀವು ನಿದ್ರೆಯ ವೇಳಾಪಟ್ಟಿಯನ್ನು ಸೆಟಪ್ ಮಾಡಬಹುದು ಮತ್ತು ಸಂಜೆಯ ಸಮಯದಲ್ಲಿ ನಿಮ್ಮ ಮಗು ವಿಶ್ರಾಂತಿಗೆ ಸಿದ್ಧವಾಗುವಾಗ ಡಿಸ್ಪ್ಲೇಯನ್ನು ವಾರ್ಮ್ ಬಣ್ಣಗಳಿಗೆ ಬದಲಿಸಲು Night Shift ಅನ್ನು ಆನ್ ಮಾಡಬಹುದು.
ಅಗತ್ಯ ಆ್ಯಪ್ಗಳು ಮತ್ತು ಸಂಪರ್ಕಗಳು ಯಾವಾಗಲೂ ಲಭ್ಯವಿರುವಂತೆ ಇರಿಸಿ
ಯಾವಾಗಲೂ ಅನುಮತಿಸಲಾಗಿದೆ ಎಂಬುದು ಸಮಯದ ಅನುಮತಿಗಳು ಅಥವಾ ಸ್ಕ್ರೀನ್ ಟೈಮ್ ವೇಳಾಪಟ್ಟಿಗಳಂತಹ ಸ್ಕ್ರೀನ್ ಟೈಮ್ ಸೆಟ್ಟಿಂಗ್ಸ್ ಮೂಲಕ ಇತರ ಆ್ಯಪ್ಗಳನ್ನು ವಿರಾಮಗೊಳಿಸಿದಾಗಲೂ ಅಥವಾ ಸೀಮಿತಗೊಳಿಸಿದಾಗಲೂ ನಿಮ್ಮ ಮಗು ಆ್ಯಕ್ಸೆಸ್ ಮಾಡಬಹುದಾದ ಆ್ಯಪ್ಗಳು ಮತ್ತು ಸಂಪರ್ಕಗಳನ್ನು ಆರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಡಿಫಾಲ್ಟ್ ಆಗಿ, FaceTime, ನಕ್ಷೆ, ಫೋನ್ ಮತ್ತು ಸಂದೇಶದಂತಹ ಅಗತ್ಯ ಆ್ಯಪ್ಗಳನ್ನು ಯಾವಾಗಲೂ ಅನುಮತಿಸಲಾಗಿದೆ ಎಂಬುದಕ್ಕೆ ಸೆಟ್ ಮಾಡಲಾಗಿದೆ. ನೀವು ಸಂಪರ್ಕಗಳನ್ನು ಯಾವಾಗಲೂ ಅನುಮತಿಸಲಾಗಿದೆ ಎಂಬುದಕ್ಕೆ ಸೇರಿಸಬಹುದು, ಇದರಿಂದ ನಿಮ್ಮ ಮಗುವು ಯಾವಾಗಲೂ ಅತ್ಯಂತ ಮುಖ್ಯವಾದ ಜನರನ್ನು ಸಂಪರ್ಕಿಸಬಹುದು.
ಪ್ರಾರಂಭಿಸಲು, ನಿಮ್ಮ ಕುಟುಂಬ ಹಂಚಿಕೆ ಸೆಟ್ಟಿಂಗ್ಸ್ಗೆ ಹೋಗಿ, ನಿಮ್ಮ ಮಗುವಿನ ಹೆಸರನ್ನು ಆಯ್ಕೆಮಾಡಿ, ನಂತರ ಯಾವಾಗಲೂ ಅನುಮತಿಸಲಾಗಿದೆ ಎಂಬುದನ್ನು ಕ್ಲಿಕ್ ಮಾಡಿ ಅಥವಾ ಟ್ಯಾಪ್ ಮಾಡಿ. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಮಗುವಿನ ಸಾಧನದಲ್ಲಿ ಯಾವಾಗಲೂ ಅನುಮತಿಸಲು ಆ್ಯಪ್ಗಳು ಮತ್ತು ಜನರನ್ನು ಆಯ್ಕೆಮಾಡಿ ಎಂಬುದನ್ನು ನೋಡಿ.
ಸಲಹೆ: ನೀವು ಫೋನ್, ಸಂದೇಶ ಮತ್ತು FaceTime ಆ್ಯಪ್ಗಳಲ್ಲಿ ನಿಮ್ಮ ಮಗು ಯಾರನ್ನು ಸಂಪರ್ಕಿಸಬಹುದು ಎಂಬುದನ್ನು ಕೂಡ ನಿರ್ವಹಿಸಬಹುದು. ನಿಮ್ಮ ಮಗು ಯಾರ ಜೊತೆಗೆ ಸಂವಹನ ನಡೆಸಬಹುದು ಎಂದು ನಿರ್ಧರಿಸಿ ಎಂಬುದನ್ನು ನೋಡಿ