American Academy of Pediatricsನಿಂದ (AAP) ಸ್ಕ್ರೀನ್ ಟೈಮ್ ಮಾರ್ಗದರ್ಶನ
ಸ್ಕ್ರೀನ್ ಬಳಕೆಗೆ ಸಂಬಂಧಿಸಿದಂತೆ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಕುಟುಂಬಗಳಿಗೆ ಸಹಾಯ ಮಾಡಲು American Academy of Pediatrics (AAP) ಸಂಶೋಧನೆ ಆಧಾರಿತ ಮಾರ್ಗದರ್ಶನವನ್ನು ಒದಗಿಸುತ್ತದೆ. AAP ಕುಟುಂಬಗಳು ತಮ್ಮ ಮಕ್ಕಳು ಯಾವ ಮೀಡಿಯಾವನ್ನು, ಹೇಗೆ ಮತ್ತು ಏಕೆ ಬಳಸುತ್ತಾರೆ ಎಂಬುದರ ಕುರಿತು ಯೋಚಿಸಲು ಮತ್ತು ಅವರು ಬೆಳೆಯುತ್ತಾ ಹೋದಂತೆ ಅದರ ಕುರಿತಾದ ಸಂಭಾಷಣೆಗಳನ್ನು ಮುಂದುವರಿಸಲು ಕುಟುಂಬಗಳಿಗೆ ಪ್ರೋತ್ಸಾಹಿಸುತ್ತದೆ.
ವಯಸ್ಸಿನ ಗುಂಪಿಗೆ ಅನುಗುಣವಾದ ಸ್ಕ್ರೀನ್ ಟೈಮ್ ಮಾರ್ಗದರ್ಶನ
ಕೆಳಗಿನ ಮಾರ್ಗದರ್ಶನವು ಕ್ಲಿನಿಕಲ್ ಮತ್ತು ಮಕ್ಕಳ-ಅಭಿವೃದ್ಧಿ ಸಂಶೋಧನೆಯನ್ನು ಆಧರಿಸಿದೆ. ಇದು ಕುಟುಂಬಗಳು ತಮ್ಮ ಮಗುವಿಗೆ ಸೂಕ್ತವಾಗಿರುವ ವಿಷಯವನ್ನು ಆಧರಿಸಿ ಸರಿಹೊಂದಿಸಬಹುದಾದ ಪ್ರಾರಂಭ ಬಿಂದುವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
5 ವರ್ಷಗಳವರೆಗಿನ ಮಕ್ಕಳಿಗೆ ಮಾರ್ಗದರ್ಶನ:
2 ವರ್ಷಕ್ಕಿಂತ ಕಡಿಮೆ ವಯಸ್ಸಿನವರು: ಸಂಶೋಧನೆ ಮತ್ತು ತಜ್ಞರ ಮಾರ್ಗದರ್ಶನವು ಸಾಮಾನ್ಯವಾಗಿ ಈ ವಯೋಮಾನದವರಿಗೆ ಕುಟುಂಬ ಮತ್ತು ಸ್ನೇಹಿತರ ಜೊತೆಗಿನ ವೀಡಿಯೊ ಕರೆಗಳನ್ನು ಹೊರತುಪಡಿಸಿ, ಸ್ಕ್ರೀನ್ ಟೈಮ್ ಅನ್ನು ತಪ್ಪಿಸಲು ಸೂಚಿಸುತ್ತದೆ. ಈ ಹಂತದಲ್ಲಿ, ಶಿಶುಗಳು ಮತ್ತು ತೊಡರುಗಾಲಿಡುವ ಮಕ್ಕಳು ಪ್ರಾಯೋಗಿಕ ಆಟದ ಮೂಲಕ ಮತ್ತು ತಮ್ಮ ಸುತ್ತಮುತ್ತಲಿನ ಜನರ ಜೊತೆಗೆ ಪರಸ್ಪರ ಸಂವಹನ ನಡೆಸುವ ಮೂಲಕ ಅತ್ಯುತ್ತಮವಾಗಿ ಕಲಿಯುತ್ತಾರೆ.
2–5 ವರ್ಷದ ಮಕ್ಕಳು: ಈ ವಯಸ್ಸಿನಲ್ಲಿ, ಚಿಕ್ಕ ಮಕ್ಕಳು ಡಿಜಿಟಲ್ ಮೀಡಿಯಾವನ್ನು ಬಳಸುವ ವಿಧಾನ ಸೇರಿದಂತೆ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಿದ್ದಾರೆ. ಮೀಡಿಯಾ ಬೌಂಡರಿಗಳನ್ನು ಸೆಟ್ ಮಾಡುವುದು ಆಟವಾಡಲು, ಒಟ್ಟಿಗೆ ಓದಲು ಮತ್ತು ಕುಟುಂಬದೊಂದಿಗೆ ಕಳೆಯಲು ಸಮಯ ಹೊಂದುವುದಕ್ಕೆ ಸಹಾಯ ಮಾಡುತ್ತದೆ. ಯಾವುದೇ ಪ್ರೋಗ್ರಾಮಿಂಗ್ ವಯಸ್ಸಿಗೆ ಸೂಕ್ತವಾಗಿರಬೇಕು, ಸಾಧ್ಯವಾದಷ್ಟು ಒಟ್ಟಿಗೆ ವೀಕ್ಷಿಸುವಂತಿರಬೇಕು, ಆಗ ನೀವು ಸ್ಕ್ರೀನ್ನಲ್ಲಿರುವ ಕಂಟೆಂಟ್ನ ಕುರಿತು ಮಾತನಾಡಬಹುದು. ದೊಡ್ಡ ಭಾವನೆಗಳು ಸಹ ಈ ವಯಸ್ಸಿನ ಭಾಗವಾಗಿವೆ ಮತ್ತು ವಿವಿಧ ತಂತ್ರಗಳೊಂದಿಗೆ ಮಕ್ಕಳಿಗೆ ಆ ಭಾವನೆಗಳನ್ನು ನಿಭಾಯಿಸಲು ಸಹಾಯ ಮಾಡುವುದು, ಆರಂಭದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.
6–12 ವರ್ಷಗಳ ಮಕ್ಕಳಿಗಾಗಿ ಮಾರ್ಗದರ್ಶನ: ಈ ವಯಸ್ಸಿನಲ್ಲಿ, ನಿದ್ರೆ, ದೈಹಿಕ ಚಟುವಟಿಕೆ, ಆಟ ಮತ್ತು ಕುಟುಂಬದ ಜೊತೆಗಿನ ಸಮಯಕ್ಕಾಗಿ ಸಾಕಷ್ಟು ಸಮಯವನ್ನು ಮೀಸಲಿಡುವುದು ಮುಖ್ಯವಾಗಿದೆ. ಶೈಕ್ಷಣಿಕ ಮೌಲ್ಯವನ್ನು ಹೊಂದಿರುವ ಗುಣಮಟ್ಟದ ಕಂಟೆಂಟ್ ಅನ್ನು ಹುಡುಕಿ ಮತ್ತು ಸಾಧ್ಯವಿರುವಲ್ಲಿ ಆಟೋಪ್ಲೇ ಮತ್ತು ಅನಿಯಮಿತ ಸ್ಕ್ರೋಲಿಂಗ್ ಅನ್ನು ಆಫ್ ಮಾಡಿ. ಸಾಮಾಜಿಕ ಮಾಧ್ಯಮವನ್ನು ಪರಿಗಣಿಸುವ ಮೊದಲು 13 ವರ್ಷವಾಗುವವರೆಗೆ ಕಾಯುವಂತೆ ಅನೇಕ ತಜ್ಞರು ಸೂಲಹೆ ನೀಡುತ್ತಾರೆ.
13–17 ವರ್ಷದ ಹದಿಹರೆಯದವರಿಗಾಗಿ ಮಾರ್ಗದರ್ಶನ: ಹದಿಹರೆಯದವರು ಹಂತ ಹಂತವಾಗಿ ಸ್ವತಂತ್ರರಾಗುವುದರಿಂದ ಉತ್ತಮವಾಗಿ ಬೆಳೆಯುತ್ತಾರೆ ಎಂದು ಹಲವು ಕುಟುಂಬಗಳು ಕಂಡುಕೊಂಡಿವೆ. ಹದಿಹರೆಯದವರು ಇನ್ನೂ ಕಲಿಯುತ್ತಿರುವ ಆರಂಭಿಕ ಹಂತದಲ್ಲಿ ಹೆಚ್ಚಿನ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ನಡೆಸಬೇಕು ಹಾಗೂ ಅವರು ಜವಾಬ್ದಾರಿಯುತ ಬಳಕೆಯನ್ನು ತೋರಿಸಿದಂತೆಲ್ಲಾ ಹೆಚ್ಚಿನ ಸ್ವತಂತ್ರ ನೀಡಬೇಕು.
ವಿಶೇಷವಾಗಿ ಕಿರಿಯ ಹದಿಹರೆಯದವರಿಗೆ, ಸಾಮಾಜಿಕ ಮಾಧ್ಯಮ ಬಳಕೆಗಾಗಿ ಅವರ ಸಿದ್ಧತೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತಿರಿ ಮತ್ತು ನಿದ್ರೆ, ಕುಟುಂಬ, ದೈಹಿಕ ಚಟುವಟಿಕೆ ಮತ್ತು ವೈಯಕ್ತಿಕ ಸಂಪರ್ಕಕ್ಕಾಗಿ ಅಗತ್ಯ ಸಮಯವನ್ನು ಮೀಸಲಿಡಿ.
ಹೆಚ್ಚು ಸ್ವಾತಂತ್ರ್ಯವನ್ನು ಹೊಂದಿರುವ ಹದಿಹರೆಯದವರಲ್ಲಿ, ನಿದ್ರೆಗೆ ಅಡಚಣೆ, ಅನಿಯಂತ್ರಿತ ಬಳಕೆ, ಕಡಿಮೆಯಾದ ಶೈಕ್ಷಣಿಕ ಅಂಕಗಳು ಅಥವಾ ಸ್ವಯಂ-ಚಿತ್ರಣದ ಬಗ್ಗೆ ಅಧಿಕ ಗಮನಹರಿಸುವುದು ಸಾಧನದ ಬಳಕೆಯಿಂದಾಗಿ ಉಂಟಾಗಿರಬಹುದಾದ ಲಕ್ಷಣಗಳು ಎಂಬುದರ ಬಗ್ಗೆ ಗಮನವಿರಲಿ. ಅವರೊಂದಿಗೆ ಮಾತನಾಡುವುದನ್ನು ಮುಂದುವರಿಸಿ, ಇದರಿಂದ ಹದಿಹರೆಯದವರಿಗೆ ತಮಗೆ ಬೆಂಬಲದ ಅಗತ್ಯವಿದ್ದಾಗ ಅವರು ನಿಮ್ಮ ಬಳಿಗೆ ಬರಬಹುದು ಎಂಬ ಭಾವನೆಯಿರುತ್ತದೆ.
ಆರೋಗ್ಯಕರ ಸ್ಕ್ರೀನ್ ಟೈಮ್ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಸಲಹೆಗಳು
ಸ್ಕ್ರೀನ್ ಬಳಕೆಯ ಕುರಿತಾದ ನಿರ್ಧಾರಗಳಿಗೆ ಮಾರ್ಗದರ್ಶನ ನೀಡಲು, American Academy of Pediatrics ಈ ಕೆಳಗಿನ ಐದು ಅಂಶಗಳನ್ನು ಪರಿಗಣಿಸಲು ಸೂಚಿಸುತ್ತದೆ:
ಮಗು: ನಿಮ್ಮ ಮಗುವಿನ ವಯಸ್ಸು, ಸ್ವಭಾವ ಮತ್ತು ಬೆಳವಣಿಗೆಯ ಹಂತವನ್ನು ಪರಿಗಣಿಸಿ. ಮಕ್ಕಳು ಒಂದೇ ರೀತಿಯ ಅಥವಾ ಒಂದೇ ಪ್ರಮಾಣದ ಮೀಡಿಯಾಗೆ ವಿಭಿನ್ನವಾಗಿ ಪ್ರತಿಕ್ರಿಯಿಸಬಹುದು.
ಕಂಟೆಂಟ್: ವೇಗದ ಗತಿಯ ಅಥವಾ ಹಿಂಸಾತ್ಮಕ ಮೀಡಿಯಾದ ಬದಲಿಗೆ ಶೈಕ್ಷಣಿಕ, ವಯಸ್ಸಿಗೆ ಸೂಕ್ತವಾದ ಮತ್ತು ಸಕಾರಾತ್ಮಕ ಕಂಟೆಂಟ್ ಅನ್ನು ಆರಿಸುವ ಕುರಿತು ಆಲೋಚಿಸಿ.
ಶಾಂತ: ಮೀಡಿಯಾ ಬಳಕೆಯಿಂದ ನಿಮ್ಮ ಮಗುವಿನ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯಕ್ಕೆ ಉಪಯೋಗವಾಗುತ್ತದೆಯೇ ಅಥವಾ ಹಾನಿಯಾಗುತ್ತದೆಯೇ ಎಂಬುದರ ಕುರಿತು ಯೋಚಿಸಿ.
ಕ್ರೌಡಿಂಗ್ ಔಟ್: ಸ್ಕ್ರೀನ್ ಟೈಮ್ ಇವುಗಳಲ್ಲಿ ಯಾವುದನ್ನು ಬದಲಾಯಿಸಬಲ್ಲದು ಎಂಬುದನ್ನು ಪರಿಗಣಿಸಿ—ನಿದ್ರೆ, ದೈಹಿಕ ಚಟುವಟಿಕೆ, ಹೋಮ್ವರ್ಕ್, ಹೊರಾಂಗಣ ಆಟ ಅಥವಾ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆಯುವ ಸಮಯ—ಮತ್ತು ಆ ಚಟುವಟಿಕೆಗಳಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಿ.
ಸಂವಹನ: ಮೀಡಿಯಾವನ್ನು ಪ್ರಕ್ರಿಯೆಗೊಳಿಸಲು ಮತ್ತು ಅದರಿಂದ ಕಲಿಯಲು ಮಕ್ಕಳಿಗೆ ಸಹಾಯ ಮಾಡಲು ಅವರು ಆನ್ಲೈನ್ನಲ್ಲಿ ಏನನ್ನು ನೋಡುತ್ತಿದ್ದಾರೆ ಮತ್ತು ಮಾಡುತ್ತಿದ್ದಾರೆ ಎಂಬುದರ ಕುರಿತು ಅವರೊಂದಿಗೆ ಮಾತನಾಡಿ.
ನಿಮ್ಮ ಕುಟುಂಬಕ್ಕಾಗಿ ಆರೋಗ್ಯಕರ ಸ್ಕ್ರೀನ್ ಟೈಮ್ ಅಭ್ಯಾಸಗಳನ್ನು ಹೇಗೆ ಬೆಂಬಲಿಸಬೇಕು ಎಂಬುದರ ಕುರಿತು ನೀವು ಆಲೋಚಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಹೆಚ್ಚುವರಿ ವಿಷಯಗಳು ಇಲ್ಲಿವೆ:
ಕುಟುಂಬದ ಊಟದ ಸಮಯ ಅಥವಾ ಮಲಗುವ ಕೋಣೆಗಳಂತಹ ಕೆಲವು ಸಮಯಗಳು ಮತ್ತು ಸ್ಥಳಗಳನ್ನು ಸ್ಕ್ರೀನ್-ಫ್ರೀ ಆಗಿಡುವುದರಿಂದ ಸಂಭಾಷಣೆಗೆ ದಾರಿಯಾಗುತ್ತದೆ ಮತ್ತು ಮಕ್ಕಳಿಗೆ ಸ್ಕ್ರೀನ್ಗಳಿಂದ ದೂರವಿರುವ ಅವಕಾಶ ದೊರೆಯುತ್ತದೆ.
ಮಕ್ಕಳಿಗೆ ನಿದ್ರೆಯು ವಿಶೇಷವಾಗಿ ಮುಖ್ಯವಾಗಿದೆ. ಆರೋಗ್ಯಕರ ನಿದ್ರೆಯನ್ನು ಬೆಂಬಲಿಸುವುದಕ್ಕೆ ಸಹಾಯ ಮಾಡಲು, ಸಾಧನಗಳನ್ನು ಮಲಗುವ ಕೋಣೆಯ ಹೊರಗೆ ಚಾರ್ಜ್ ಮಾಡಲು ಮತ್ತು ಮಲಗುವ ಸಮಯಕ್ಕೆ ಸುಮಾರು ಒಂದು ಗಂಟೆ ಮೊದಲು ಸಾಧನಗಳ ಬಳಕೆಗೆ ನಿರ್ಬಂಧ ವಿಧಿಸಲು AAP ಸೂಚಿಸುತ್ತದೆ.
ಮಕ್ಕಳು ಸಾಮಾನ್ಯವಾಗಿ ತಮ್ಮ ಸುತ್ತಮುತ್ತಲಿನ ವಯಸ್ಕರನ್ನು ನೋಡಿ ಕಲಿಯುತ್ತಾರೆ, ಆದ್ದರಿಂದ ನೀವು ನಿಮ್ಮ ಸ್ವಂತ ಸಾಧನಗಳನ್ನು ಬಳಸುವ ಕ್ರಮವು ಅವರ ಅಭ್ಯಾಸಗಳನ್ನು ರೂಪಿಸಲು ಸಹಾಯ ಮಾಡಬಲ್ಲದು.
AAPನ ಮಾಹಿತಿಯ ಮೂಲಗಳು
ಕುಟುಂಬ ಮೀಡಿಯಾ ಪ್ಲ್ಯಾನ್: AAP ಉಚಿತ ಟೂಲ್ ಅನ್ನು ಒದಗಿಸುತ್ತದೆ, ಅದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಾಧನ-ಮುಕ್ತ ಸಮಯ, ಮಲಗುವ ಸಮಯ ಮತ್ತು ದೈನಂದಿನ ದಿನಚರಿಗಳು ಸೇರಿದಂತೆ ಸ್ಕ್ರೀನ್ ಟೈಮ್ ಬಳಕೆಗೆ ಕಸ್ಟಮೈಸ್ ಮಾಡಲಾದ ಪ್ಲ್ಯಾನ್ ಒಂದನ್ನು ರೂಪಿಸಲು ಸಹಾಯ ಮಾಡುತ್ತದೆ. AAP ವೆಬ್ಸೈಟ್ನಲ್ಲಿ ಫ್ಯಾಮಿಲಿ ಮೀಡಿಯಾ ಪ್ಲ್ಯಾನ್ ಅನ್ನು ನೋಡಿ.
ಮೀಡಿಯಾ ಬಳಕೆಯ 5 Cಗಳು: AAP ಮೀಡಿಯಾ ಬಳಕೆಯ ಐದು Cಗಳ ಕುರಿತು ವಯಸ್ಸಿನ ಆಧಾರಿತ ಮಾರ್ಗದರ್ಶನ, ಸಲಹೆಗಳು ಮತ್ತು ಮಾಹಿತಿಯ ಮೂಲಗಳನ್ನು ಒದಗಿಸುತ್ತದೆ. AAP ವೆಬ್ಸೈಟ್ನಲ್ಲಿ ಮಕ್ಕಳು ಮತ್ತು ಸ್ಕ್ರೀನ್ ಟೈಮ್: ಮೀಡಿಯಾದ 5 Cಗಳ ಮಾರ್ಗದರ್ಶನವನ್ನು ಬಳಸುವುದು ಹೇಗೆ ಎಂಬುದನ್ನು ನೋಡಿ.
ಶಿಶು ಅಭಿವೃದ್ಧಿ ಮತ್ತು ಸ್ಕ್ರೀನ್ ಟೈಮ್ ಟೂಲ್ಕಿಟ್: ಆರೋಗ್ಯಕರ ಮೀಡಿಯಾ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದಕ್ಕೆ ಕುಟುಂಬಗಳಿಗೆ ಸಹಾಯ ಮಾಡಲು AAP ಮಾಹಿತಿಯ ಮೂಲಗಳನ್ನು ಒದಗಿಸುತ್ತದೆ. AAP ವೆಬ್ಸೈಟ್ನಲ್ಲಿ ಶಿಶು ಅಭಿವೃದ್ಧಿ ಮತ್ತು ಸ್ಕ್ರೀನ್ ಟೈಮ್ ಟೂಲ್ಕಿಟ್ ಅನ್ನು ನೋಡಿ.
ಸ್ಕ್ರೀನ್ ಟೈಮ್ ಮಾರ್ಗಸೂಚಿಗಳು: AAP ಪುರಾವೆ ಆಧಾರಿತ ಮಾರ್ಗದರ್ಶನದೊಂದಿಗೆ ಹದಿಹರೆಯದವರು ಸಾಮಾಜಿಕ ಮಾಧ್ಯಮದಲ್ಲಿ ಎಷ್ಟು ಸಮಯವನ್ನು ಕಳೆಯಬೇಕು ಎಂಬುದರ ಕುರಿತಾದ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸುತ್ತದೆ. AAP ವೆಬ್ಸೈಟ್ನಲ್ಲಿರುವ ಸ್ಕ್ರೀನ್ ಟೈಮ್ ಮಾರ್ಗಸೂಚಿಗಳನ್ನು ನೋಡಿ.