ನಿಮ್ಮ ಎಡ ಅಥವಾ ಬಲ AirPod ಕಾರ್ಯನಿರ್ವಹಿಸದಿದ್ದರೆ

ಒಂದು AirPod ನಲ್ಲಿ ಯಾವುದೇ ಧ್ವನಿ ಇಲ್ಲದಿದ್ದರೆ ಅಥವಾ ಒಂದು AirPod ಇನ್ನೊಂದಕ್ಕಿಂತ ಜೋರಾಗಿ ಕೇಳಿಸುತ್ತಿದ್ದರೆ ಅಥವಾ ನಿಶ್ಯಬ್ದವಾಗಿದ್ದರೆ ಏನು ಮಾಡಬೇಕೆಂದು ತಿಳಿಯಿರಿ.

ಯಾವುದೇ ಒಂದು AirPod ನಲ್ಲಿ ಧ್ವನಿ ಕೇಳಿಸದಿದ್ದರೆ

  1. ನಿಮ್ಮ ಚಾರ್ಜಿಂಗ್ ಕೇಸ್ ಸಂಪೂರ್ಣವಾಗಿ ಚಾರ್ಜ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.s

  2. ಎರಡೂ AirPod ಗಳನ್ನು ನಿಮ್ಮ ಚಾರ್ಜಿಂಗ್ ಕೇಸ್‌ನಲ್ಲಿ ಇರಿಸಿ ಮತ್ತು ಅವುಗಳನ್ನು 30 ಸೆಕೆಂಡುಗಳ ಕಾಲ ಚಾರ್ಜ್ ಮಾಡಲು ಬಿಡಿ.

  3. ನಿಮ್ಮ iPhone ಅಥವಾ iPad ಸಮೀಪ ಚಾರ್ಜಿಂಗ್ ಕೇಸ್ ತೆರೆಯಿರಿ.

    ಚಾರ್ಜಿಂಗ್ ಕೇಸ್‌ನಲ್ಲಿ ಮುಚ್ಚಳ ತೆರೆದಿರುವ AirPods 4
  4. ಪ್ರತಿಯೊಂದು AirPod ಚಾರ್ಜ್ ಆಗುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ iPhone ಅಥವಾ iPad ನಲ್ಲಿ ಚಾರ್ಜ್ ಸ್ಥಿತಿಯನ್ನು ಪರಿಶೀಲಿಸಿ.

    iPhone ಹೋಮ್ ಸ್ಕ್ರೀನ್‌ನಲ್ಲಿ AirPods ಮತ್ತು ಚಾರ್ಜಿಂಗ್ ಕೇಸ್ ಬ್ಯಾಟರಿ ಮಟ್ಟ ಕಾಣಿಸುತ್ತದೆ
  5. ಸರಿಯಾಗಿ ಕಾರ್ಯನಿರ್ವಹಿಸದ AirPod ಅನ್ನು ಸರಿಯಾದ ಕಿವಿಯಲ್ಲಿ ಇರಿಸಿ.

  6. ಇನ್ನೊಂದು AirPod ಇನ್ನೂ ಚಾರ್ಜಿಂಗ್ ಕೇಸ್‌ನಲ್ಲಿರುವಾಗ, ಕೇಸ್‌ನ ಮುಚ್ಚಳವನ್ನು ಮುಚ್ಚಿ.

  7. ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ AirPod ಅನ್ನು ಪರೀಕ್ಷಿಸಲು ಆಡಿಯೋ ಪ್ಲೇ ಮಾಡಿ.

  8. ಏನಾಗುತ್ತದೆ ಎಂಬುದರ ಆಧಾರದ ಮೇಲೆ:

    • ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ AirPod ಧ್ವನಿಯನ್ನು ಪ್ಲೇ ಮಾಡಿದರೆ, ಎರಡೂ AirPod ಗಳನ್ನು ಚಾರ್ಜಿಂಗ್ ಕೇಸ್‌ನಲ್ಲಿ ಇರಿಸಿ, ಅವುಗಳನ್ನು 30 ಸೆಕೆಂಡುಗಳ ಕಾಲ ಚಾರ್ಜ್ ಮಾಡಲು ಬಿಡಿ, ನಿಮ್ಮ iPhone ಅಥವಾ iPad ಬಳಿ ಚಾರ್ಜಿಂಗ್ ಕೇಸ್ ಅನ್ನು ತೆರೆಯಿರಿ ಮತ್ತು ಎರಡೂ ಈಗ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರೀಕ್ಷಿಸಿ.

    • AirPod ಈಗಲೂ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ನಿಮ್ಮ AirPod ಗಳನ್ನು ರೀಸೆಟ್ ಮಾಡಿ.

ಒಂದು AirPod ಇನ್ನೊಂದಕ್ಕಿಂತ ಜೋರಾಗಿದ್ದರೆ ಅಥವಾ ನಿಶ್ಯಬ್ದವಾಗಿದ್ದರೆ

ನಿಮ್ಮ ಎಡ ಭಾಗದ ಅಥವಾ ಬಲ ಭಾಗದ AirPod ಯಾವುದೇ ಧ್ವನಿಯನ್ನು ಪ್ಲೇ ಮಾಡದಿದ್ದರೆ ಅಥವಾ ವಾಲ್ಯೂಮ್ ತುಂಬಾ ನಿಶ್ಯಬ್ದವಾಗಿದ್ದರೆ ಹೀಗೆ ಮಾಡಿ:

  1. ಪ್ರತಿ AirPod ನಲ್ಲಿ ಮೈಕ್ರೊಫೋನ್ ಮತ್ತು ಸ್ಪೀಕರ್ ಮೆಶ್ ಅನ್ನು ಪರಿಶೀಲಿಸಿ.

    ಎಡ AirPod ಗಳ ಇಯರ್‌ಬಡ್‌ನಲ್ಲಿ ಸ್ಪೀಕರ್ ಮೆಶ್ ಇರುತ್ತದೆ
  2. ಅದರಲ್ಲಿ ಯಾವುದೇ ವಸ್ತುಗಳಿದ್ದರೆ, ನಿಮ್ಮ AirPod ಗಳು ಅಥವಾ ನಿಮ್ಮ AirPods Pro ಅನ್ನು ಸ್ವಚ್ಛಗೊಳಿಸಿ.

  3. ಸೆಟ್ಟಿಂಗ್‌ಗಳು > ಆ್ಯಕ್ಸೆಸ್‌ಬಿಲಿಟಿ> ಆಡಿಯೋ/ವಿಷುಯಲ್ > ಬ್ಯಾಲೆನ್ಸ್‌ಗೆ ಹೋಗಿ, ಮತ್ತು ಬ್ಯಾಲೆನ್ಸ್ ಮಧ್ಯದಲ್ಲಿರುವಂತೆ ಸೆಟ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಹೆಚ್ಚಿನ ಸಹಾಯ ಬೇಕೇ?

ಏನಾಗುತ್ತಿದೆ ಎಂಬುದರ ಕುರಿತು ನಮಗೆ ಇನ್ನಷ್ಟು ಹೇಳಿ, ಮುಂದೆ ನೀವು ಏನು ಮಾಡಬಹುದು ಎಂಬುದನ್ನು ನಾವು ಸೂಚಿಸುತ್ತೇವೆ.

ಸಲಹೆಗಳನ್ನು ಪಡೆಯಿರಿ

ಪ್ರಕಟಿತ ದಿನಾಂಕ: