ನಿಮ್ಮ AirPods ಅನ್ನು ಸ್ವಚ್ಛಗೊಳಿಸುವುದು ಹೇಗೆ

ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ನಿಮ್ಮ AirPods ಅನ್ನು ನಿರ್ವಹಿಸಲು ಸಹಾಯವಾಗುತ್ತದೆ.

ನಿಮ್ಮ AirPods ನ ಮೆಶ್‌ಗಳನ್ನು ಸ್ವಚ್ಛಗೊಳಿಸಿ

ನಿಮ್ಮ AirPods 3 ಮತ್ತು AirPods 4 ಮೆಶ್‌ಗಳನ್ನು ಸ್ವಚ್ಛಗೊಳಿಸಲು, ನಿಮಗೆ ಇವುಗಳ ಅಗತ್ಯವಿದೆ: Belkin AirPods ಕ್ಲೀನಿಂಗ್ ಕಿಟ್ ಅಥವಾ:

  • Bioderma ಅಥವಾ Neutrogena ದಂತಹ ಬ್ರ್ಯಾಂಡ್‌ಗಳಿಂದ, PEG-6 ಕ್ಯಾಪ್ರಿಲಿಕ್/ಕ್ಯಾಪ್ರಿಕ್ ಗ್ಲಿಸರೈಡ್ಸ್ ಒಳಗೊಂಡಿರುವ ಮೈಕೆಲ್ಲರ್ ವಾಟರ್

  • ಡಿಸ್ಟಿಲ್ಡ್ ವಾಟರ್

  • ಮೆತ್ತನೆಯ ಬ್ರಿಸಲ್‌ಗಳಿರುವ ಮಕ್ಕಳ ಟೂತ್‌ಬ್ರಷ್

  • ಎರಡು ಸಣ್ಣ ಕಪ್‌ಗಳು

  • ಒಂದು ಪೇಪರ್ ಟವೆಲ್

ನಿಮ್ಮ AirPods 4 ಮೆಶ್‌ಗಳನ್ನು ಸ್ವಚ್ಛಗೊಳಿಸಿ

ನಿಮ್ಮ AirPods 4 ನಲ್ಲಿನ ವೃತ್ತಾಕಾರದಲ್ಲಿರುವ ಮೆಶ್‌ಗಳನ್ನು ನೀವು ಸ್ವಚ್ಛಗೊಳಿಸಬಹುದು. ಬೇರೆ ಯಾವುದೇ ಭಾಗಗಳನ್ನು ಸ್ವಚ್ಛಗೊಳಿಸಬೇಡಿ.

AirPods 4 ಮೆಶ್‌ಗಳು.
  1. ಒಂದು ಕಪ್‌ನಲ್ಲಿ ಸ್ವಲ್ಪ ಪ್ರಮಾಣದ ಮೈಕೆಲ್ಲರ್ ವಾಟರ್ ಹಾಕಿ.

  2. ಟೂತ್‌ಬ್ರಷ್‌ನ ಬ್ರಿಸಲ್‌ಗಳು ಸಂಪೂರ್ಣವಾಗಿ ಒದ್ದೆಯಾಗುವವರೆಗೆ ಅದನ್ನು ಮೈಕೆಲ್ಲರ್ ವಾಟರ್ ಕಪ್‌ನಲ್ಲಿ ಮುಳುಗಿಸಿಡಿ.

  3. ನಿಮ್ಮ AirPod ಅನ್ನು ಮೆಶ್ ಮೇಲ್ಮುಖವಾಗಿರುವಂತೆ ಹಿಡಿದುಕೊಳ್ಳಿ.

  4. ಮೆಶ್ ಅನ್ನು ವೃತ್ತಾಕಾರದಲ್ಲಿ ಸುಮಾರು 15 ಸೆಕೆಂಡ್‌ಗಳ ಕಾಲ ಬ್ರಷ್ ಮಾಡಿ.

  5. ನಿಮ್ಮ AirPod ಅನ್ನು ತಿರುಗಿಸಿ ಮತ್ತು ಅದನ್ನು ಪೇಪರ್‌ ಟವೆಲ್ ಒಂದರ ಮೇಲೆ ಬ್ಲಾಟ್ ಮಾಡಿ. ಪೇಪರ್ ಟವೆಲ್, ಮೆಶ್‌ನ ಸಂಪರ್ಕದಲ್ಲಿದೆಯೆಂದು ಖಚಿತಪಡಿಸಿಕೊಳ್ಳಿ.

  6. ನೀವು ಸ್ವಚ್ಛಗೊಳಿಸಲು ಬಯಸುವ ಪ್ರತಿ ಮೆಶ್‌ಗಾಗಿ 2-5 ನೇ ಹಂತಗಳನ್ನು ಇನ್ನೂ ಎರಡು ಬಾರಿ (ಒಟ್ಟು ಮೂರು ಬಾರಿ) ಪುನರಾವರ್ತಿಸಿ.

  7. ಮೈಸೆಲರ್ ನೀರನ್ನು ತೊಳೆದುಹಾಕಲು, ಬ್ರಷ್ ಅನ್ನು ಡಿಸ್ಟಿಲ್ಡ್ ವಾಟರ್‌ನಿಂದ ತೊಳೆಯಿರಿ, ನಂತರ ನೀವು ಸ್ವಚ್ಛಗೊಳಿಸಿದ ಪ್ರತಿಯೊಂದು ಮೆಶ್‌ಗಾಗಿ ಡಿಸ್ಟಿಲ್ಡ್ ವಾಟರ್‌ ಬಳಸಿ 1-5 ನೇ ಹಂತಗಳನ್ನು ಪುನರಾವರ್ತಿಸಿ.

  8. ನಿಮ್ಮ AirPods ಅನ್ನು ಚಾರ್ಜಿಂಗ್ ಕೇಸ್‌ನಲ್ಲಿ ಇರಿಸುವ ಮೊದಲು ಅಥವಾ ಅವುಗಳನ್ನು ಬಳಸುವ ಮೊದಲು ಕನಿಷ್ಠ ಪಕ್ಷ ಎರಡು ಗಂಟೆಗಳ ಕಾಲ ಅವುಗಳನ್ನು ಸಂಪೂರ್ಣವಾಗಿ ಒಣಗಲು ಬಿಡಿ.

ನಿಮ್ಮ AirPods 3 ಮೆಶ್‌ಗಳನ್ನು ಸ್ವಚ್ಛಗೊಳಿಸಿ

ನಿಮ್ಮ AirPods 3 ನಲ್ಲಿನ ವೃತ್ತ ಹಾಕಿ ಗುರುತಿಸಲಾಗಿರುವ ಮೆಶ್‌ಗಳನ್ನು ನೀವು ಸ್ವಚ್ಛಗೊಳಿಸಬಹುದು. ಬೇರೆ ಯಾವುದೇ ಭಾಗಗಳನ್ನು ಸ್ವಚ್ಛಗೊಳಿಸಬೇಡಿ.

ನಿಮ್ಮ AirPods 3 ನಲ್ಲಿನ ಸ್ನೋರ್ಕೆಲ್ ಮೆಶ್, ಸೋರಿಕೆ ನಿಯಂತ್ರಣ ಮೆಶ್ ಮತ್ತು ಮೇಲ್ಭಾಗದ ಮೈಕ್ ಅನ್ನು ನೀವು ಸ್ವಚ್ಛಗೊಳಿಸಬಹುದು.
  1. ಒಂದು ಕಪ್‌ನಲ್ಲಿ ಸ್ವಲ್ಪ ಪ್ರಮಾಣದ ಮೈಸೆಲರ್ ನೀರನ್ನು ಹಾಕಿ.

  2. ಟೂತ್‌ಬ್ರಷ್‌ನ ಬ್ರಿಸಲ್‌ಗಳು ಸಂಪೂರ್ಣವಾಗಿ ಒದ್ದೆಯಾಗುವವರೆಗೆ ಅದನ್ನು ಮೈಸೆಲರ್ ನೀರಿನ ಕಪ್‌ನಲ್ಲಿ ಮುಳುಗಿಸಿಡಿ.

  3. ನಿಮ್ಮ AirPod ಅನ್ನು ಮೆಶ್ ಮೇಲ್ಮುಖವಾಗಿರುವಂತೆ ಹಿಡಿದುಕೊಳ್ಳಿ.

  4. ಮೆಶ್ ಅನ್ನು ವೃತ್ತಾಕಾರದಲ್ಲಿ ಸುಮಾರು 15 ಸೆಕೆಂಡ್‌ಗಳ ಕಾಲ ಬ್ರಷ್ ಮಾಡಿ.

  5. ನಿಮ್ಮ AirPod ಅನ್ನು ತಿರುಗಿಸಿ ಮತ್ತು ಅದನ್ನು  ಪೇಪರ್‌ ಟವೆಲ್ ಒಂದರ ಮೇಲೆ ಬ್ಲಾಟ್ ಮಾಡಿ. ಪೇಪರ್ ಟವೆಲ್, ಮೆಶ್‌ನ ಸಂಪರ್ಕದಲ್ಲಿದೆಯೆಂದು ಖಚಿತಪಡಿಸಿಕೊಳ್ಳಿ.

  6. ನೀವು ಸ್ವಚ್ಛಗೊಳಿಸಲು ಬಯಸುವ ಪ್ರತಿ ಮೆಶ್‌ಗಾಗಿ 2-5 ನೇ ಹಂತಗಳನ್ನು ಇನ್ನೂ ಎರಡು ಬಾರಿ (ಒಟ್ಟು ಮೂರು ಬಾರಿ) ಪುನರಾವರ್ತಿಸಿ.

  7. ಮೈಸೆಲರ್ ನೀರನ್ನು ತೊಳೆದುಹಾಕಲು, ಬ್ರಷ್ ಅನ್ನು ಡಿಸ್ಟಿಲ್ಡ್ ವಾಟರ್‌ನಿಂದ ತೊಳೆಯಿರಿ, ನಂತರ ನೀವು ಸ್ವಚ್ಛಗೊಳಿಸಿದ ಪ್ರತಿಯೊಂದು ಮೆಶ್‌ಗಾಗಿ ಡಿಸ್ಟಿಲ್ಡ್ ವಾಟರ್‌ ಬಳಸಿ 1-5 ನೇ ಹಂತಗಳನ್ನು ಪುನರಾವರ್ತಿಸಿ.

  8. ನಿಮ್ಮ AirPods ಅನ್ನು ಚಾರ್ಜಿಂಗ್ ಕೇಸ್‌ನಲ್ಲಿ ಇರಿಸುವ ಮೊದಲು ಅಥವಾ ಅವುಗಳನ್ನು ಬಳಸುವ ಮೊದಲು ಕನಿಷ್ಠ ಪಕ್ಷ ಎರಡು ಗಂಟೆಗಳ ಕಾಲ ಅವುಗಳನ್ನು ಸಂಪೂರ್ಣವಾಗಿ ಒಣಗಲು ಬಿಡಿ.

ನಿಮ್ಮ AirPods ನ ಮುಖ್ಯ ಭಾಗವನ್ನು ಸ್ವಚ್ಛಗೊಳಿಸಿ

ನಿಮ್ಮ AirPods, ಕಲೆಗಳನ್ನು ಅಥವಾ ಇತರ ಪ್ರಕಾರದ ಹಾನಿಯನ್ನು ಉಂಟುಮಾಡಬಲ್ಲ ಯಾವುದೇ ಪದಾರ್ಥದ ಸಂಪರ್ಕಕ್ಕೆ ಬಂದರೆ—ಉದಾಹರಣೆಗೆ, ಸಾಬೂನುಗಳು, ಶಾಂಪೂಗಳು, ಕಂಡೀಷನರ್‌ಗಳು, ಲೋಷನ್‌ಗಳು, ಸುಗಂಧ ದ್ರವ್ಯಗಳು, ದ್ರಾವಕಗಳು, ಡಿಟರ್ಜೆಂಟ್, ಆಮ್ಲಗಳು ಅಥವಾ ಆಮ್ಲೀಯ ಆಹಾರಗಳು, ಕೀಟ ನಿವಾರಕ, ಸನ್‌ಸ್ಕ್ರೀನ್, ತೈಲ, ಅಥವಾ ಹೇರ್ ಡೈ:

  1. ಅವುಗಳನ್ನು ನೀರಿನಿಂದ ಸ್ವಲ್ಪ ಒದ್ದೆ ಮಾಡಿರುವ ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ ಮತ್ತು ಮೆತ್ತನೆಯ, ಒಣಗಿದ, ಲಿಂಟ್ ಇಲ್ಲದಿರುವ ಬಟ್ಟೆಯನ್ನು ಬಳಸಿ ಒಣಗಿಸಿ.

  2. ಅವುಗಳನ್ನು ಚಾರ್ಜಿಂಗ್ ಕೇಸ್‌ನಲ್ಲಿ ಇರಿಸುವ ಮೊದಲು ಅಥವಾ ಬಳಸುವ ಮೊದಲು ಕನಿಷ್ಠ ಪಕ್ಷ ಎರಡು ಗಂಟೆಗಳ ಕಾಲ ಅವುಗಳನ್ನು ಸಂಪೂರ್ಣವಾಗಿ ಒಣಗಲು ಬಿಡಿ.

ನಿಮ್ಮ AirPods ಅನ್ನು ನೀರಿನ ಅಡಿಯಲ್ಲಿ ಬಳಸಬೇಡಿ ಮತ್ತು ನಿಮ್ಮ AirPods ಅನ್ನು ಸ್ವಚ್ಛಗೊಳಿಸಲು ಹರಿತವಾದ ವಸ್ತುಗಳನ್ನು ಅಥವಾ ಒರಟಾದ ಪದಾರ್ಥಗಳನ್ನು ಬಳಸಬೇಡಿ.

ನಿಮ್ಮ AirPods ನ ಚಾರ್ಜಿಂಗ್ ಕೇಸ್ ಅನ್ನು ಸ್ವಚ್ಛಗೊಳಿಸಿ

  1. ಚಾರ್ಜಿಂಗ್ ಪೋರ್ಟ್‌ನಲ್ಲಿರುವ ಯಾವುದೇ ಕಸವನ್ನು ಸ್ವಚ್ಛ, ಒಣಗಿರುವ, ಮೆತ್ತನೆಯ ಬ್ರಿಸಲ್‌ಗಳಿರುವ ಬ್ರಷ್‌ನಿಂದ ತೆಗೆದುಹಾಕಿ. ಲೋಹದ ಕಾಂಟ್ಯಾಕ್ಟ್‌ಗಳಿಗೆ ಹಾನಿಯಾಗುವುದನ್ನು ತಪ್ಪಿಸಲು, ಚಾರ್ಜಿಂಗ್ ಪೋರ್ಟ್‌ಗಳಲ್ಲಿ ಏನನ್ನೂ ಹಾಕಬೇಡಿ.

  2. ಚಾರ್ಜಿಂಗ್ ಕೇಸ್ ಅನ್ನು ಮೆತ್ತನೆಯ, ಒಣಗಿರುವ, ಲಿಂಟ್ ಇಲ್ಲದಿರುವ ಬಟ್ಟೆಯಿಂದ ಸ್ವಚ್ಛಗೊಳಿಸಿ. ಅಗತ್ಯವಿದ್ದರೆ, ನೀವು ಬಟ್ಟೆಯನ್ನು ಐಸೋಪ್ರೊಪೈಲ್ ಆಲ್ಕೋಹಾಲ್‌ನಿಂದ ಸ್ವಲ್ಪ ಒದ್ದೆ ಮಾಡಬಹುದು.

  3. ಚಾರ್ಜಿಂಗ್ ಕೇಸ್ ಒಣಗಲು ಬಿಡಿ.

ಚಾರ್ಜಿಂಗ್ ಪೋರ್ಟ್‌ಗಳಲ್ಲಿ ಯಾವುದೇ ರೀತಿಯ ದ್ರವ ಸೇರಿಕೊಳ್ಳದಂತೆ ನೋಡಿಕೊಳ್ಳಿ ಮತ್ತು ಚಾರ್ಜಿಂಗ್ ಕೇಸ್ ಅನ್ನು ಸ್ವಚ್ಛಗೊಳಿಸಲು ಒರಟಾದ ಪದಾರ್ಥಗಳನ್ನು ಬಳಸಬೇಡಿ.

ಚರ್ಮದ ಕಿರಿಕಿರಿಯನ್ನು ತಪ್ಪಿಸಿ

  • AirPods 3 ಅಥವಾ AirPods 4 ನೊಂದಿಗೆ ವರ್ಕ್‌ಔಟ್ ಮಾಡಿದ ನಂತರ ಅಥವಾ ನಿಮ್ಮ ಸಾಧನವು ಚರ್ಮದ ಕಿರಿಕಿರಿ ಉಂಟುಮಾಡುವ ಸಾಧ್ಯತೆಯಿರುವ, ಬೆವರು, ಸಾಬೂನು, ಶಾಂಪೂ, ಮೇಕಪ್, ಸನ್‌ಸ್ಕ್ರೀನ್ ಮತ್ತು ಲೋಷನ್‌ಗಳಂತಹ ದ್ರವಗಳ ಸಂಪರ್ಕಕ್ಕೆ ಬಂದ ನಂತರ, ನಿಮ್ಮ ಸಾಧನವನ್ನು ಸ್ವಚ್ಛಗೊಳಿಸಿ ಮತ್ತು ಒಣಗಿಸಿ. ನಿಮ್ಮ AirPods ಅನ್ನು—ಹಾಗೂ ನಿಮ್ಮ ಚರ್ಮವನ್ನು— ಸ್ವಚ್ಛ ಮತ್ತು ಒಣಗಿದ ಸ್ಥಿತಿಯಲ್ಲಿಡುವುದರಿಂದ ಗರಿಷ್ಠ ಆರಾಮ ದೊರೆಯುತ್ತದೆ ಮತ್ತು ನಿಮ್ಮ ಸಾಧನಕ್ಕೆ ದೀರ್ಘಕಾಲೀನ ಹಾನಿಯಾಗುವುದು ತಪ್ಪುತ್ತದೆ.

  • ನೀವು ಕೆಲವು ವಸ್ತುಗಳಿಗೆ ಅಲರ್ಜಿ ಅಥವಾ ಸೂಕ್ಷ್ಮತೆಯನ್ನು ಹೊಂದಿದ್ದರೆ, AirPods ನಲ್ಲಿನ ಪದಾರ್ಥಗಳನ್ನು ಪರಿಶೀಲಿಸಿ.

  • AirPods ನ ಬೆವರು ಮತ್ತು ನೀರಿನ ಪ್ರತಿರೋಧಕ ಗುಣದ ಕುರಿತು ತಿಳಿದುಕೊಳ್ಳಿ.

ಹೆಚ್ಚಿನ ಸಹಾಯ ಪಡೆಯಿರಿ

  • ಸ್ವಚ್ಛಗೊಳಿಸುವುದರಿಂದ ನಿಮ್ಮ ಸಮಸ್ಯೆ ಬಗೆಹರಿಯದಿದ್ದರೆ, ನಿಮ್ಮ AirPods ಗಾಗಿ ಸರ್ವೀಸ್ ಪಡೆದುಕೊಳ್ಳಿ.

  • ನಿಮ್ಮ AirPods ಗೆ ಹಾನಿಯಾದರೆ, ನೀವು ಬದಲಿಯನ್ನು ಆರ್ಡರ್ ಮಾಡಿ. ನಿಮ್ಮ ಸಮಸ್ಯೆಯು Apple Limited ವಾರಂಟಿ, AppleCare+ ಅಥವಾ ಗ್ರಾಹಕ ಕಾನೂನಿನ ವ್ಯಾಪ್ತಿಗೆ ಒಳಪಡದಿದ್ದರೆ, ವಾರಂಟಿಯ ವ್ಯಾಪ್ತಿಯ ಹೊರಗಿನ ಶುಲ್ಕವನ್ನು ಪಾವತಿಸುವ ಮೂಲಕ ನಿಮ್ಮ AirPods ಅನ್ನು ಬದಲಾಯಿಸಲು ನಿಮಗೆ ಸಾಧ್ಯವಾಗಬಹುದು.

ಪ್ರಕಟಿತ ದಿನಾಂಕ: