ನಿಮ್ಮ AirPods ಮತ್ತು AirPods Pro ಅನ್ನು ರೀಸೆಟ್ ಮಾಡುವುದು ಹೇಗೆ

ನಿಮ್ಮ AirPods ಚಾರ್ಜ್ ಆಗದಿದ್ದರೆ ಅಥವಾ ಬೇರೊಂದು ಸಮಸ್ಯೆಯನ್ನು ಪರಿಹರಿಸಲು ನೀವು ಅವುಗಳನ್ನು ರೀಸೆಟ್ ಮಾಡಬೇಕಾಗಬಹುದು.

ನಿಮ್ಮ AirPods 1, AirPods 2, AirPods 3, AirPods Pro 1, ಅಥವಾ AirPods Pro 2 ಅನ್ನು ರೀಸೆಟ್ ಮಾಡಿ

  1. ನಿಮ್ಮ AirPods ಅನ್ನು ಅವುಗಳ ಚಾರ್ಜಿಂಗ್ ಕೇಸ್‌ನಲ್ಲಿರಿಸಿ, ಲಿಡ್ ಅನ್ನು ಮುಚ್ಚಿ ಮತ್ತು 30 ಸೆಕೆಂಡ್‌ಗಳ ಕಾಲ ಕಾಯಿರಿ.

  2. ನಿಮ್ಮ AirPods ಜೊತೆಗೆ ಪೇರ್ ಮಾಡಲಾಗಿರುವ iPhone ಅಥವಾ iPad ನಲ್ಲಿ, ಸೆಟ್ಟಿಂಗ್ಸ್ > Bluetooth ಎಂಬಲ್ಲಿಗೆ ಹೋಗಿ:

    • ನಿಮ್ಮ AirPods ನನ್ನ ಸಾಧನಗಳು ಎಂಬ ಪಟ್ಟಿಯಲ್ಲಿ ಕಾಣಿಸಿಕೊಂಡರೆ, ನಿಮ್ಮ AirPods ಪಕ್ಕದಲ್ಲಿರುವ ಹೆಚ್ಚಿನ ಮಾಹಿತಿ ಬಟನ್ ಅನ್ನು ಟ್ಯಾಪ್ ಮಾಡಿ, ಈ ಸಾಧನವನ್ನು ಮರೆತುಬಿಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ದೃಢೀಕರಿಸಲು ಮತ್ತೊಮ್ಮೆ ಟ್ಯಾಪ್ ಮಾಡಿ.

    • ನಿಮ್ಮ AirPods ಪಟ್ಟಿಯಲ್ಲಿ ಕಾಣಿಸಿಕೊಳ್ಳದಿದ್ದರೆ, ಮುಂದಿನ ಹಂತಕ್ಕೆ ಮುಂದುವರಿಯಿರಿ.

  3. ನಿಮ್ಮ ಚಾರ್ಜಿಂಗ್ ಕೇಸ್‌ನ ಲಿಡ್ ಅನ್ನು ತೆರೆಯಿರಿ.

  4. ಕೇಸ್‌ನ ಹಿಂಭಾಗದಲ್ಲಿರುವ ಸೆಟಪ್ ಬಟನ್ ಅನ್ನು ಸುಮಾರು 15 ಸೆಕೆಂಡ್‌ಗಳ ಕಾಲ ಒತ್ತಿ ಹಿಡಿದುಕೊಳ್ಳಿ.

  5. ಕೇಸ್‌ನ ಮುಂಭಾಗದಲ್ಲಿರುವ ಸ್ಟೇಟಸ್ ಲೈಟ್ ಆಂಬರ್ ಬಣ್ಣದಲ್ಲಿ ಮಿನುಗಿ, ನಂತರ ಬಿಳಿ ಬಣ್ಣದಲ್ಲಿ ಮಿನುಗಿದಾಗ, ನಿಮ್ಮ AirPods ಅನ್ನು ಪುನಃ ಕನೆಕ್ಟ್ ಮಾಡಲು ನಿಮ್ಮ ಸಾಧನದ ಸ್ಕ್ರೀನ್ ಮೇಲಿನ ಹಂತಗಳನ್ನು ನೀವು ಅನುಸರಿಸಬಹುದು.

ವೀಡಿಯೊವನ್ನು ಪ್ಲೇ ಮಾಡಿ

ನಿಮ್ಮ AirPods 4 (ಎಲ್ಲಾ ಮಾಡಲ್‌ಗಳು) ಅಥವಾ AirPods Pro 3 ಅನ್ನು ರೀಸೆಟ್ ಮಾಡಿ

  1. ನಿಮ್ಮ AirPods ಅನ್ನು ಅವುಗಳ ಚಾರ್ಜಿಂಗ್ ಕೇಸ್‌ನಲ್ಲಿರಿಸಿ, ಲಿಡ್ ಅನ್ನು ಮುಚ್ಚಿ ಮತ್ತು 30 ಸೆಕೆಂಡ್‌ಗಳ ಕಾಲ ಕಾಯಿರಿ.

  2. ನಿಮ್ಮ AirPods ಜೊತೆಗೆ ಪೇರ್ ಆಗಿರುವ iPhone ಅಥವಾ iPad ನಲ್ಲಿ ಸೆಟ್ಟಿಂಗ್ಸ್ > Bluetooth ಎಂಬಲ್ಲಿಗೆ ಹೋಗಿ:

    • ನಿಮ್ಮ AirPods ನನ್ನ ಸಾಧನಗಳು ಎಂಬ ಪಟ್ಟಿಯಲ್ಲಿ ಕಾಣಿಸಿಕೊಂಡರೆ, ನಿಮ್ಮ AirPods ಪಕ್ಕದಲ್ಲಿರುವ ಹೆಚ್ಚಿನ ಮಾಹಿತಿ ಬಟನ್ ಅನ್ನು ಟ್ಯಾಪ್ ಮಾಡಿ, ಈ ಸಾಧನವನ್ನು ಮರೆತುಬಿಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ದೃಢೀಕರಿಸಲು ಮತ್ತೊಮ್ಮೆ ಟ್ಯಾಪ್ ಮಾಡಿ.

    • ನಿಮ್ಮ AirPods ಪಟ್ಟಿಯಲ್ಲಿ ಕಾಣಿಸಿಕೊಳ್ಳದಿದ್ದರೆ, ಮುಂದಿನ ಹಂತಕ್ಕೆ ಮುಂದುವರಿಯಿರಿ.

  3. ನಿಮ್ಮ ಚಾರ್ಜಿಂಗ್ ಕೇಸ್‌ನ ಲಿಡ್ ಅನ್ನು ತೆರೆಯಿರಿ.

  4. ಸ್ಟೇಟಸ್ ಲೈಟ್ ಆನ್ ಆಗಿರುವಾಗ ಕೇಸ್‌ನ ಮುಂಭಾಗವನ್ನು ಡಬಲ್ ಟ್ಯಾಪ್ ಮಾಡಿ.

  5. ಸ್ಟೇಟಸ್ ಲೈಟ್ ಬಿಳಿ ಬಣ್ಣದಲ್ಲಿ ಮಿನುಗಿದಾಗ ಮತ್ತೊಮ್ಮೆ ಡಬಲ್ ಟ್ಯಾಪ್ ಮಾಡಿ.

  6. ಸ್ಟೇಟಸ್ ಲೈಟ್ ವೇಗವಾಗಿ ಮಿನುಗಿದಾಗ ಮೂರನೇ ಬಾರಿಗೆ ಡಬಲ್ ಟ್ಯಾಪ್ ಮಾಡಿ.

  7. ಸ್ಟೇಟಸ್ ಲೈಟ್ ಆಂಬರ್ ಬಣ್ಣದಲ್ಲಿ ಮಿನುಗಿ, ನಂತರ ಬಿಳಿ ಬಣ್ಣದಲ್ಲಿ ಮಿನುಗಿದಾಗ, ನಿಮ್ಮ AirPods ಅನ್ನು ಪುನಃ ಕನೆಕ್ಟ್ ಮಾಡಲು ನಿಮ್ಮ ಸಾಧನದ ಸ್ಕ್ರೀನ್ ಮೇಲಿನ ಹಂತಗಳನ್ನು ನೀವು ಅನುಸರಿಸಬಹುದು.

ವೀಡಿಯೊವನ್ನು ಪ್ಲೇ ಮಾಡಿ

ನಿಮ್ಮ AirPods ಅನ್ನು ರೀಸೆಟ್ ಮಾಡಿದಾಗ ಸ್ಟೇಟಸ್ ಲೈಟ್ ಬಿಳಿ ಬಣ್ಣದಲ್ಲಿ ಮಿನುಗದಿದ್ದರೆ

  1. ನಿಮ್ಮ AirPods ಅನ್ನು ಚಾರ್ಜಿಂಗ್ ಕೇಸ್‌ನಲ್ಲಿರಿಸಿ ಮತ್ತು 20 ಸೆಕೆಂಡ್‌ಗಳ ಕಾಲ ಲಿಡ್ ಅನ್ನು ಮುಚ್ಚಿ.

  2. ನಿಮ್ಮ ಚಾರ್ಜಿಂಗ್ ಕೇಸ್‌ನ ಲಿಡ್ ಅನ್ನು ತೆರೆಯಿರಿ.

  3. ನಿಮ್ಮ AirPods ನ ಮಾಡಲ್ ಅನ್ನು ಆಧರಿಸಿ:

    • AirPods 1, AirPods 2, AirPods 3, AirPods Pro 1 ಅಥವಾ AirPods Pro 2 ಗಾಗಿ, ಕೇಸ್‌ನ ಮುಂಭಾಗದಲ್ಲಿರುವ ಸ್ಟೇಟಸ್ ಲೈಟ್ ಆಂಬರ್ ಬಣ್ಣದಲ್ಲಿ ಮಿನುಗಿ, ನಂತರ ಬಿಳಿ ಬಣ್ಣದಲ್ಲಿ ಮಿನುಗುವವರೆಗೆ ಕೇಸ್‌ನಲ್ಲಿನ ಸೆಟಪ್ ಬಟನ್ ಅನ್ನು ಸುಮಾರು 15 ಸೆಕೆಂಡ್‌ಗಳ ಕಾಲ ಒತ್ತಿ ಹಿಡಿದುಕೊಳ್ಳಿ.

    • AirPods 4 ಮಾಡಲ್‌ಗಳು ಮತ್ತು AirPods Pro 3 ಗಾಗಿ, ಸ್ಟೇಟಸ್ ಲೈಟ್ ಆನ್ ಆಗಿರುವಾಗ ಕೇಸ್‌ನ ಮುಂಭಾಗವನ್ನು ಡಬಲ್ ಟ್ಯಾಪ್ ಮಾಡಿ, ಸ್ಟೇಟಸ್ ಲೈಟ್ ಬಿಳಿ ಬಣ್ಣದಲ್ಲಿ ಮಿನುಗಿದಾಗ ಮತ್ತೊಮ್ಮೆ ಡಬಲ್ ಟ್ಯಾಪ್ ಮಾಡಿ. ಸ್ಟೇಟಸ್ ಲೈಟ್ ವೇಗವಾಗಿ ಮಿನುಗಿದಾಗ, ಸ್ಟೇಟಸ್ ಲೈಟ್ ಆಂಬರ್ ಬಣ್ಣದಲ್ಲಿ ಮಿನುಗಿ, ನಂತರ ಬಿಳಿ ಬಣ್ಣದಲ್ಲಿ ಮಿನುಗುವವರೆಗೆ ಮೂರನೇ ಬಾರಿ ಡಬಲ್ ಟ್ಯಾಪ್ ಮಾಡಿ.

  4. ನಿಮ್ಮ AirPods ಅನ್ನು ಪುನಃ ಕನೆಕ್ಟ್ ಮಾಡಲು: ನಿಮ್ಮ AirPods ಅನ್ನು ಅವುಗಳ ಚಾರ್ಜಿಂಗ್ ಕೇಸ್‌ನಲ್ಲಿರಿಸಿ, ಮುಚ್ಚಳವನ್ನು ತೆರೆದು, ನಿಮ್ಮ AirPods ಅನ್ನು ನಿಮ್ಮ ಸಾಧನದ ಸಮೀಪ ಇರಿಸಿ, ನಂತರ ನಿಮ್ಮ ಸಾಧನದ ಸ್ಕ್ರೀನ್‌ ಮೇಲಿನ ಹಂತಗಳನ್ನು ಅನುಸರಿಸಿ.

ಇನ್ನಷ್ಟು ತಿಳಿಯಿರಿ

ನಿಮ್ಮ ಬದಲಿ AirPods ಅಥವಾ ಚಾರ್ಜಿಂಗ್ ಕೇಸ್ ಅನ್ನು ಸೆಟಪ್ ಮಾಡಿ

ಪ್ರಕಟಿತ ದಿನಾಂಕ: