ನಿಮ್ಮ ಬದಲಿ AirPods ಅಥವಾ ಚಾರ್ಜಿಂಗ್ ಕೇಸ್ ಅನ್ನು ಸೆಟ್ ಅಪ್ ಮಾಡಿ

ನೀವು ನಿಮ್ಮ AirPods ಬದಲಿ ಇಯರ್‌ಬಡ್‌ಗಳು ಅಥವಾ ಚಾರ್ಜಿಂಗ್ ಕೇಸ್ ಅನ್ನು ಪಡೆದಾಗ, ನಿಮ್ಮ iPhone ಅಥವಾ iPad‌ನಲ್ಲಿ ನಿಮ್ಮ AirPods ಅನ್ನು ಮತ್ತೆ ಬಳಸಲು ಈ ಹಂತಗಳನ್ನು ಅನುಸರಿಸಿ.

ನೀವು ಹೊಸ AirPods ಅನ್ನು ಖರೀದಿಸಿದ್ದರೆ, ನಿಮ್ಮ AirPod‌s ಗಳನ್ನು ಹೊಸದಾಗಿ ಸೆಟ್ ಅಪ್ ಮಾಡಿ .

ನಿಮ್ಮ ಬದಲಿ AirPods 1, AirPods 2, AirPods 3, AirPods Pro 1, AirPods Pro 2, ಅಥವಾ ಬದಲಿ ಚಾರ್ಜಿಂಗ್ ಕೇಸ್ ಅನ್ನು ಸೆಟ್ ಅಪ್ ಮಾಡಿ

  1. ಎರಡೂ AirPods ಅನ್ನು ನಿಮ್ಮ ಚಾರ್ಜಿಂಗ್ ಕೇಸ್‌ನಲ್ಲಿ ಇರಿಸಿ.

  2. ಕೇಸ್ ಅನ್ನು ವಿದ್ಯುತ್‌ಗೆ ಸಂಪರ್ಕಿಸಿ, ಲಿಡ್ ಮುಚ್ಚಿ 20 ನಿಮಿಷ ಕಾಯಿರಿ.

  3. ಲಿಡ್ ತೆಗೆದು, ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಸ್ಟೇಟಸ್ ಲೈಟ್ ಬಿಳಿ ಬಣ್ಣದಲ್ಲಿ ಫ್ಲಾಶ್ ಆದರೆ, ಹಂತ 5 ಕ್ಕೆ ಹೋಗಿ.

    • ಸ್ಟೇಟಸ್ ಲೈಟ್ ಬಿಳಿ ಬಣ್ಣದಲ್ಲಿ ಫ್ಲಾಶ್ ಆಗದಿದ್ದರೆ, ಮುಂದಿನ ಹಂತಕ್ಕೆ ಹೋಗಿ.

  4. ಲಿಡ್ ತೆಗೆದು, ಸ್ಟೇಟಸ್ ಲೈಟ್ ಕಿತ್ತಳೆ ಬಣ್ಣ ಆನಂತರ ಬಿಳಿ ಬಣ್ಣದಲ್ಲಿ ಫ್ಲಾಶ್ ಆಗುವವರೆಗೆ ಕೇಸ್‌ನ ಹಿಂಭಾಗದಲ್ಲಿರುವ ಸೆಟಪ್ ಬಟನ್ ಅನ್ನು 15 ಸೆಕೆಂಡುಗಳ ಕಾಲ ಒತ್ತಿ ಹಿಡಿದುಕೊಳ್ಳಿ. ಒಂದು ವೇಳೆ ಸ್ಟೇಟಸ್ ಲೈಟ್ ಬಿಳಿ ಬಣ್ಣದಲ್ಲಿ ಫ್ಲಾಶ್ ಆಗದಿದ್ದರೆ, ಏನು ಮಾಡಬೇಕೆಂದು ತಿಳಿದುಕೊಳ್ಳಿ.

     ಲಿಡ್ ತೆಗೆದು ಹಿಂಭಾಗದ ಬಟನ್ ಒತ್ತಿ ಹಿಡಿದಿರುವಾಗ ತಮ್ಮ ಕೇಸ್‌ನಲ್ಲಿರುವ AirPods Pro.
  5. ಸ್ಟೇಟಸ್ ಲೈಟ್ ಬಿಳಿ ಬಣ್ಣದಲ್ಲಿ ಫ್ಲಾಶ್ ಆಗುತ್ತಿದ್ದರೆ, ನಿಮ್ಮ ಚಾರ್ಜಿಂಗ್ ಕೇಸ್‌ನ ಲಿಡ್ ಮುಚ್ಚಿ.

  6. ಸ್ಕ್ರೀನ್ ಮೇಲಿನ ಸೆಟಪ್ ಅನಿಮೇಷನ್‌ನಲ್ಲಿ ಕಾಣಿಸುವ ಕನೆಕ್ಟ್ ಅನ್ನು ಟ್ಯಾಪ್ ಮಾಡುವ ಮೊದಲು, ಸೆಟ್ಟಿಂಗ್ಸ್ > ಬ್ಲೂಟೂಥ್‌ಗೆ ಹೋಗಿ ನಂತರ ಹೀಗೆ ಮಾಡಿ:

    • ನಿಮ್ಮ AirPods ಸೆಟ್ಟಿಂಗ್ಸ್ > ಬ್ಲೂಟೂತ್ ನಲ್ಲಿ ಕಾಣಿಸಿಕೊಂಡರೆ, ನಿಮ್ಮ ಏರ್‌ಪಾಡ್‌ಗಳ ಪಕ್ಕದಲ್ಲಿರುವ ಹೆಚ್ಚಿನ ಮಾಹಿತಿ ಬಟನ್ ಅನ್ನು nullನಿಮ್ಮ AirPods ಪಕ್ಕದಲ್ಲಿ ಟ್ಯಾಪ್ ಮಾಡಿ, ಈ ಸಾಧನವನ್ನು ಮರೆತುಬಿಡಿ ಟ್ಯಾಪ್ ಮಾಡಿ ನಂತರ ಇದನ್ನು ಖಚಿತಪಡಿಸಲು ಇನ್ನೊಮ್ಮೆ ಟ್ಯಾಪ್ ಮಾಡಿ. ಮುಂದಿನ ಹಂತಕ್ಕೆ ಹೋಗಿ.

    • ನಿಮ್ಮ AirPods ಅಲ್ಲಿ ಕಾಣಿಸದಿದ್ದರೆ, ಮುಂದಿನ ಹಂತಕ್ಕೆ ಹೋಗಿ.

  7. ಮುಚ್ಚಳವನ್ನು ತೆಗೆದು, ನಿಮ್ಮ iPhone ಅಥವಾ iPad ಹೋಂ ಸ್ಕ್ರೀನ್‌ಗೆ ಹೋಗಿ.

  8. ಸೆಟಪ್ ಅನಿಮೇಷನ್‌ನಲ್ಲಿ, ಸಂಪರ್ಕಿಸಿ ಟ್ಯಾಪ್ ಮಾಡಿ, ನಂತರ ಮುಗಿದಿದೆ ಟ್ಯಾಪ್ ಮಾಡಿ. AirPods ಬಳಸಲು ಸಿದ್ಧವಾಗಿವೆ.

ನಿಮ್ಮ ಬದಲಿ AirPods 4 (ಎಲ್ಲಾ ಮಾದರಿಗಳು), AirPods Pro 3, ಅಥವಾ ಬದಲಿ ಚಾರ್ಜಿಂಗ್ ಕೇಸ್ ಅನ್ನು ಸೆಟ್ ಅಪ್ ಮಾಡಿ

  1. ಎರಡೂ AirPods ಅನ್ನು ನಿಮ್ಮ ಚಾರ್ಜಿಂಗ್ ಕೇಸ್‌ನಲ್ಲಿ ಇರಿಸಿ.

  2. ಕೇಸ್ ಅನ್ನು ವಿದ್ಯುತ್‌ಗೆ ಸಂಪರ್ಕಿಸಿ, ಲಿಡ್ ಮುಚ್ಚಿ 20 ನಿಮಿಷ ಕಾಯಿರಿ.

  3. ಲಿಡ್ ತೆಗೆದು, ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಸ್ಟೇಟಸ್ ಲೈಟ್ ಬಿಳಿ ಬಣ್ಣದಲ್ಲಿ ಫ್ಲಾಶ್ ಆದರೆ, ಹಂತ 5 ಕ್ಕೆ ಹೋಗಿ.

    • ಸ್ಟೇಟಸ್ ಲೈಟ್ ಬಿಳಿ ಬಣ್ಣದಲ್ಲಿ ಫ್ಲಾಶ್ ಆಗದಿದ್ದರೆ, ಮುಂದಿನ ಹಂತಕ್ಕೆ ಹೋಗಿ.

  4. ಸ್ಟೇಟಸ್ ಲೈಟ್ ಆನ್ ಆಗಿರುವಾಗ ಕೇಸ್‌ನ ಮುಂಭಾಗವನ್ನು ಎರಡು ಸರಿ ಟ್ಯಾಪ್ ಮಾಡಿ, ಸ್ಟೇಟಸ್ ಲೈಟ್ ಬಿಳಿ ಬಣ್ಣದಲ್ಲಿ ಫ್ಲಾಶ್ ಆದಾಗ ಮತ್ತೆ ಎರಡು ಸರಿ ಟ್ಯಾಪ್ ಮಾಡಿ, ನಂತರ ಸ್ಟೇಟಸ್ ಲೈಟ್ ವೇಗವಾಗಿ ಫ್ಲಾಶ್ ಆದಾಗ ಮೂರನೇ ಬಾರಿ ಎರಡು ಸರಿ ಟ್ಯಾಪ್ ಮಾಡಿ. ಸ್ಟೇಟಸ್ ಲೈಟ್ ಕಿತ್ತಳೆ ಬಣ್ಣದಲ್ಲಿ ಫ್ಲಾಶ್ ಆಗಿ ನಂತರ ಬಿಳಿ ಬಣ್ಣದಲ್ಲಿ ಫ್ಲಾಶ್ ಆದರೆ, ಮುಂದಿನ ಹಂತಕ್ಕೆ ಹೋಗಿ. ಒಂದು ವೇಳೆ ಸ್ಟೇಟಸ್ ಲೈಟ್ ಬಿಳಿ ಬಣ್ಣದಲ್ಲಿ ಫ್ಲಾಶ್ ಆಗದಿದ್ದರೆ, ಏನು ಮಾಡಬೇಕೆಂದು ತಿಳಿದುಕೊಳ್ಳಿ.

    ಲಿಡ್ ತೆರೆದಿರುವ ಕೇಸ್‌ನಲ್ಲಿ AirPods Pro 3 ಇವೆ. ಮುಂಭಾಗದಲ್ಲಿರುವ ಇಂಡೆಂಟೇಶನ್‌ನ ಕೆಳಗಿನ ಕೇಸ್ ಅನ್ನು ಎಲ್ಲಿ ಟ್ಯಾಪ್ ಮಾಡಬೇಕೆಂದು ನೀಲಿ ವೃತ್ತವು ಸೂಚಿಸುತ್ತದೆ.
  5. ಸ್ಟೇಟಸ್ ಲೈಟ್ ಬಿಳಿ ಬಣ್ಣದಲ್ಲಿ ಫ್ಲಾಶ್ ಆಗುತ್ತಿದ್ದರೆ, ನಿಮ್ಮ ಚಾರ್ಜಿಂಗ್ ಕೇಸ್‌ನ ಲಿಡ್ ಮುಚ್ಚಿ.

  6. ಸ್ಕ್ರೀನ್ ಮೇಲಿನ ಸೆಟಪ್ ಅನಿಮೇಷನ್‌ನಲ್ಲಿ ಕಾಣಿಸುವ ಕನೆಕ್ಟ್ ಅನ್ನು ಟ್ಯಾಪ್ ಮಾಡುವ ಮೊದಲು, ಸೆಟ್ಟಿಂಗ್ಸ್ > ಬ್ಲೂಟೂಥ್‌ಗೆ ಹೋಗಿ ನಂತರ ಹೀಗೆ ಮಾಡಿ:

    • ನಿಮ್ಮ AirPods ಸೆಟ್ಟಿಂಗ್ಸ್ > ಬ್ಲೂಟೂತ್ ನಲ್ಲಿ ಕಾಣಿಸಿಕೊಂಡರೆ, ನಿಮ್ಮ ಏರ್‌ಪಾಡ್‌ಗಳ ಪಕ್ಕದಲ್ಲಿರುವ ಹೆಚ್ಚಿನ ಮಾಹಿತಿ ಬಟನ್ ಅನ್ನು nullನಿಮ್ಮ AirPods ಪಕ್ಕದಲ್ಲಿ ಟ್ಯಾಪ್ ಮಾಡಿ, ಈ ಸಾಧನವನ್ನು ಮರೆತುಬಿಡಿ ಟ್ಯಾಪ್ ಮಾಡಿ ನಂತರ ಇದನ್ನು ಖಚಿತಪಡಿಸಲು ಇನ್ನೊಮ್ಮೆ ಟ್ಯಾಪ್ ಮಾಡಿ. ಮುಂದಿನ ಹಂತಕ್ಕೆ ಹೋಗಿ.

    • ನಿಮ್ಮ AirPods ಅಲ್ಲಿ ಕಾಣಿಸದಿದ್ದರೆ, ಮುಂದಿನ ಹಂತಕ್ಕೆ ಹೋಗಿ.

  7. ಮುಚ್ಚಳವನ್ನು ತೆಗೆದು, ನಿಮ್ಮ iPhone ಅಥವಾ iPad ಹೋಂ ಸ್ಕ್ರೀನ್‌ಗೆ ಹೋಗಿ.

  8. ಸೆಟಪ್ ಅನಿಮೇಷನ್‌ನಲ್ಲಿ, ಸಂಪರ್ಕಿಸಿ ಟ್ಯಾಪ್ ಮಾಡಿ, ನಂತರ ಮುಗಿದಿದೆ ಟ್ಯಾಪ್ ಮಾಡಿ. AirPods ಬಳಸಲು ಸಿದ್ಧವಾಗಿವೆ.

ಹೆಚ್ಚಿನ ಸಹಾಯ ಬೇಕೇ?

ಏನಾಗುತ್ತಿದೆ ಎಂಬುದರ ಕುರಿತು ನಮಗೆ ಹೇಳಿ, ಮುಂದೆ ನೀವು ಏನು ಮಾಡಬಹುದು ಎಂಬುದನ್ನು ನಾವು ಸೂಚಿಸುತ್ತೇವೆ.

ಸಲಹೆಗಳನ್ನು ಪಡೆಯಿರಿ

ಪ್ರಕಟಿತ ದಿನಾಂಕ: