iPhone ಮತ್ತು Apple Watchನಲ್ಲಿ Apple ಕ್ರೀಡೆ ಆ್ಯಪ್‌ನ ಲೈವ್ ಚಟುವಟಿಕೆಗಳ ಅಲರ್ಟ್‌ಗಳು

ನಿಮ್ಮ ಗೇಮ್ ಅನ್ನು ಪಡೆಯುವುದು

Apple ಕ್ರೀಡೆ ಆ್ಯಪ್, ಕ್ರೀಡಾ ಅಭಿಮಾನಿಗಳಿಗಾಗಿ ಅಭಿವೃದ್ಧಿಪಡಿಸಿರುವ ಅತಿವೇಗದ ಮತ್ತು ನ್ಯಾವಿಗೇಟ್ ಮಾಡಲು ಸುಲಭವಾದ ಆ್ಯಪ್ ಆಗಿದೆ. ನೈಜ ಸಮಯದ ಸ್ಕೋರ್‌ಗಳು ಮತ್ತು ಅಂಕಿಅಂಶಗಳೊಂದಿಗೆ ಅಪ್‌ಡೇಟ್ ಆಗಿರಿ ಅಥವಾ ನಿಮ್ಮ iPhone ಲಾಕ್ ಸ್ಕ್ರೀನ್ ಮತ್ತು ನಿಮ್ಮ Apple Watchನಲ್ಲಿ ಲೈವ್ ಸ್ಕೋರ್‌ಗಳು ಮತ್ತು ಪ್ಲೇ ಅಪ್‌ಡೇಟ್‌ಗಳನ್ನು ನೋಡಲು ಲೈವ್ ಚಟುವಟಿಕೆಗಳನ್ನು ಆನ್ ಮಾಡಿ (iOS 18 ಅಥವಾ ನಂತರದ ಆವೃತ್ತಿ ಮತ್ತು watchOS 11 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ).

ನೀವು ಬಾಕ್ಸ್ ಸ್ಕೋರ್‌ಗಳು, ಪ್ಲೇ-ಬೈ-ಪ್ಲೇ, ತಂಡದ ಅಂಕಿಅಂಶಗಳು, ಲೈನ್‌ಅಪ್ ಮಾಹಿತಿ ಮತ್ತು ಬೆಟ್ಟಿಂಗ್ ಆಡ್ಸ್ (ಲಭ್ಯವಿರುವಲ್ಲಿ) ಇವುಗಳ ಮೂಲಕ ಸವಿವರವಾಗಿ ತಿಳಿಯಬಹುದು, ಅಥವಾ Apple TV ಆ್ಯಪ್ ಮತ್ತು ಕನೆಕ್ಟ್ ಮಾಡಲಾದ ಸ್ಟ್ರೀಮಿಂಗ್ ಆ್ಯಪ್‌ಗಳಲ್ಲಿ ಲೈವ್ ಗೇಮ್‌ಗಳನ್ನು ವೀಕ್ಷಿಸಲು ಟ್ಯಾಪ್ ಮಾಡಿ.

Apple ಕ್ರೀಡೆ ಆ್ಯಪ್‌ನ ಒಂದು ಕಿರುನೋಟ

iPhoneನಲ್ಲಿ Apple ಕ್ರೀಡೆ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡುವುದು

Apple ಕ್ರೀಡೆ ಆ್ಯಪ್ ಬಳಕೆದಾರರ ಮಾರ್ಗದರ್ಶಿಯನ್ನು ಓದಲು, ಪುಟದ ಮೇಲ್ಭಾಗದಲ್ಲಿರುವ ಪರಿವಿಡಿಯನ್ನು ಕ್ಲಿಕ್ ಮಾಡಿ ಅಥವಾ ಹುಡುಕಾಟ ಫೀಲ್ಡ್‌ನಲ್ಲಿ ಒಂದು ಪದ ಅಥವಾ ಫ್ರೇಸ್ ಅನ್ನು ನಮೂದಿಸಿ.

ಎಲ್ಲಾ ಫೀಚರ್‌ಗಳು ಮತ್ತು ಕಂಟೆಂಟ್ ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.