Apple Creator Studio ಕುರಿತು

Apple Creator Studio ಗೆ ಸಬ್‌ಸ್ಕ್ರೈಬ್ ಮಾಡುವುದು ಹೇಗೆ, ಯಾವ ಆ್ಯಪ್‌ಗಳನ್ನು ಒಳಗೊಳ್ಳಲಾಗಿದೆ, ಸಿಸ್ಟಮ್ ಅವಶ್ಯಕತೆಗಳು ಮತ್ತು ಇತ್ಯಾದಿಗಳ ಕುರಿತು ಇನ್ನಷ್ಟು ತಿಳಿಯಿರಿ.

Apple Creator Studio Apple ನ ಸೃಜನಶೀಲತೆ ಮತ್ತು ಉತ್ಪಾದಕತೆಯ ಆ್ಯಪ್‌ಗಳ ಸಂಗ್ರಹವಾಗಿದ್ದು, ಅದು Final Cut Pro, Logic Pro, Pixelmator Pro, Motion, Compressor ಮತ್ತು MainStage ಅನ್ನು ಒಳಗೊಂಡಿದೆ. ಸಬ್‌ಸ್ಕ್ರಿಪ್ಶನ್‌ Pages, Numbers, Keynote ಮತ್ತು Freeform ನಲ್ಲಿನ ಪ್ರೀಮಿಯಂ ಕಂಟೆಂಟ್ ಅನ್ನು ಸಹ ಒಳಗೊಂಡಿದೆ.*

Apple Creator Studio ಫೀಚರ್‌ಗಳ ಓವರ್‌ವ್ಯೂ ಪಡೆಯಿರಿ

Apple Creator Studio ಅನ್ನು ಡೌನ್-ಲೋಡ್ ಮಾಡಿ

ಈ ಕೆಳಗಿನವುಗಳು ಸೇರಿವೆ:

  • Mac 12.0 ಗಾಗಿ Final Cut Pro

  • iPad 3.0 ಗಾಗಿ Final Cut Pro

  • Mac 12.0 ಗಾಗಿ Logic Pro

  • iPad 3.0 ಗಾಗಿ Logic Pro

  • Mac 4.0 ಗಾಗಿ Pixelmator Pro

  • iPad 4.0 ಗಾಗಿ Pixelmator Pro

  • Motion 6.0 (Mac)

  • Compressor 5.0 (Mac)

  • MainStage 4.0 (Mac)

  • Pages 15.1 (Mac, iPad ಮತ್ತು iPhone)

  • Numbers 15.1 (Mac, iPad ಮತ್ತು iPhone)

  • Keynote 15.1 (Mac, iPad ಮತ್ತು iPhone)

Apple Creator Studio ಗೆ ಸಬ್‌ಸ್ಕ್ರೈಬ್ ಮಾಡಿ

ನೀವು ಮೊದಲು Apple Creator Studio ಆ್ಯಪ್ ಅನ್ನು ತೆರೆದಾಗ, ನೀವು ಒಂದು ತಿಂಗಳ ಉಚಿತ ಟ್ರಯಲ್‌ಗೆ ನೋಂದಾಯಿಸಬಹುದು ಮತ್ತು ಮಾಸಿಕ ಅಥವಾ ವಾರ್ಷಿಕ ಸಬ್‌ಸ್ಕ್ರಿಪ್ಶನ್ ಅನ್ನು ಆಯ್ಕೆಮಾಡಬಹುದು.

  1. ಯಾವುದೇ Apple Creator Studio ಆ್ಯಪ್ ಅನ್ನು ತೆರೆಯಿರಿ, ಮುಂದುವರಿಸಿ ಎಂಬುದನ್ನು ಕ್ಲಿಕ್ ಅಥವಾ ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಯಾವುದೇ ಸೂಚನೆಗಳನ್ನು ಅನುಸರಿಸಿ. Pages, Numbers ಅಥವಾ Keynote ನಲ್ಲಿ, ನೀವು ಪ್ರೀಮಿಯಂ ಕಂಟೆಂಟ್ ಅಥವಾ ಫೀಚರ್‌ಗಳನ್ನು ಆ್ಯಕ್ಸೆಸ್ ಮಾಡಲು ಪ್ರಯತ್ನಿಸಿದಾಗ ನೀವು ಆ್ಯಪ್‌ನೊಳಗಿನಿಂದ ಸಬ್‌ಸ್ಕ್ರೈಬ್ ಮಾಡಬಹುದು.

  2. ಉಚಿತ ಟ್ರಯಲ್‌ಗೆ ಸಮ್ಮತಿಸಿ (ಅಥವಾ ಇನ್ನೊಂದು ಲಭ್ಯವಿರುವ ಆಯ್ಕೆಯನ್ನು) ಎಂಬುದನ್ನು ಕ್ಲಿಕ್ ಮಾಡಿ ಅಥವಾ ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ ಮತ್ತು ನಿಮ್ಮ Apple ಖಾತೆ ಬಳಸಿ ಸಬ್‌ಸ್ಕ್ರೈಬ್ ಮಾಡಿ.

  3. ಪ್ರಾರಂಭಿಸಲು, Apple Creator Studio ಆ್ಯಪ್‌ನಲ್ಲಿ ಹೊಸ ಪ್ರಾಜೆಕ್ಟ್ ಅಥವಾ ಡಾಕ್ಯುಮೆಂಟ್ ಅನ್ನು ರಚಿಸಿ ಅಥವಾ ಅಸ್ತಿತ್ವದಲ್ಲಿರುವ ಪ್ರಾಜೆಕ್ಟ್ ಅಥವಾ ಡಾಕ್ಯುಮೆಂಟ್ ಅನ್ನು ತೆರೆಯಿರಿ.

ನೀವು Final Cut Pro iPad ಅಥವಾ iPad ಗಾಗಿ Logic Pro ಗೆ ಈಗಾಗಲೇ ಸಬ್‌ಸ್ಕ್ರೈಬ್ ಮಾಡಿದ್ದೀರಿ ಎಂದಾದರೆ, ಮತ್ತೊಂದು Apple Creator Studio ಆ್ಯಪ್ ಡೌನ್‌ಲೋಡ್ ಮಾಡಿ ಮತ್ತು ತೆರೆಯಿರಿ, ನಂತರ ಆ ಆ್ಯಪ್‌ನೊಳಗಿನಿಂದ ಸಬ್‌ಸ್ಕ್ರೈಬ್ ಮಾಡಿ.

ಆ್ಯಪ್‌ಗಳನ್ನು ಪ್ರತ್ಯೇಕವಾಗಿ ಖರೀದಿಸಿ

Final Cut Pro, Motion, Compressor, Logic Pro, MainStage ಮತ್ತು Pixelmator Pro App Store ನಲ್ಲಿ Mac ಗಾಗಿ ಒಂದು ಬಾರಿಯ ಖರೀದಿಗೆ ಸಹ ಲಭ್ಯವಿವೆ. ನೀವು ಈ ಆ್ಯಪ್‌ಗಳಲ್ಲಿ ಯಾವುದನ್ನಾದರೂ ಈ ಹಿಂದೆ ಖರೀದಿಸಿದ್ದರೆ ಮತ್ತು ನಿಮ್ಮ ಬಳಿ Apple Creator Studio ಸಬ್‌ಸ್ಕ್ರಿಪ್ಶನ್ ಇದ್ದರೆ, ನೀವು ಆ್ಯಪ್‌ಗಳ ಎರಡೂ ಆವೃತ್ತಿಗಳನ್ನು ಬಳಸಬಹುದು. ನೀವು ಈ ಆ್ಯಪ್‌ಗಳ ಎರಡೂ ಆವೃತ್ತಿಗಳನ್ನು ನಿಮ್ಮ Mac ನಲ್ಲಿ ಇನ್‌ಸ್ಟಾಲ್ ಮಾಡಬಹುದು. ಆವೃತ್ತಿಗಳನ್ನು ಪ್ರತ್ಯೇಕವಾಗಿ ಗುರುತಿಸುವುದನ್ನು ಸುಲಭವಾಗಿಸಲು, Apple Creator Studio ದಲ್ಲಿನ ಆ್ಯಪ್‌ಗಳು ಅನನ್ಯ ಐಕಾನ್‌ಗಳನ್ನು ಹೊಂದಿವೆ.

Apple Creator Studio ಅನ್ನು ನಿಮ್ಮ ಕುಟುಂಬದ ಜೊತೆಗೆ ಹಂಚಿಕೊಳ್ಳಿ

ನೀವು ಕುಟುಂಬ ಹಂಚಿಕೆಗೆ ನೋಂದಾಯಿಸಿಕೊಂಡಾಗ, ನೀವು ಮತ್ತು ಇನ್ನೂ ಐವರು ಕುಟುಂಬದ ಸದಸ್ಯರು Apple Creator Studio ಸಬ್‌ಸ್ಕ್ರಿಪ್ಶನ್ ಅನ್ನು ಹಂಚಿಕೊಳ್ಳಬಹುದು. Apple Creator Studio ಮಾಸಿಕ ಅಥವಾ ವಾರ್ಷಿಕ ಸಬ್‌ಸ್ಕ್ರಿಪ್ಶನ್ ಅನ್ನು ಹಂಚಿಕೊಳ್ಳಲು, ನಿಮ್ಮ ಸಬ್‌ಸ್ಕ್ರಿಪ್ಶನ್ ಕುಟುಂಬ ಹಂಚಿಕೆ > ಸಬ್‌ಸ್ಕ್ರಿಪ್ಶನ್ ಹಂಚಿಕೆ ವಿಭಾಗದಲ್ಲಿ ಕಾಣಿಸಿಕೊಳ್ಳುತ್ತಿದೆ ಮತ್ತು ಸಕ್ರಿಯವಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ನೀವು ಒಂದು ಬಾರಿ ಖರೀದಿಸುವ ಆ್ಯಪ್ ಅನ್ನು ಸಹ ಹಂಚಿಕೊಳ್ಳಬಹುದು.

ನಿಮ್ಮ ಕುಟುಂಬದ ಜೊತೆಗೆ ಆ್ಯಪ್‌ಗಳು ಮತ್ತು ಖರೀದಿಗಳನ್ನು ಹಂಚಿಕೊಳ್ಳುವ ಕುರಿತು ಇನ್ನಷ್ಟು ತಿಳಿಯಿರಿ

ಉನ್ನತ ಶಿಕ್ಷಣ ವಿದ್ಯಾರ್ಥಿ ಮತ್ತು ಬೋಧಕರ ಸಬ್‌ಸ್ಕ್ರಿಪ್ಶನ್‌ಗಳಿಗೆ ಕುಟುಂಬ ಹಂಚಿಕೆ ಲಭ್ಯವಿಲ್ಲ.

Apple Creator Studio ಸಿಸ್ಟಮ್ ಅವಶ್ಯಕತೆಗಳು

ಸಂಪೂರ್ಣ Apple Creator Studio ಕಾರ್ಯಚಟುವಟಿಕೆಯು macOS 26, iPadOS 26, ಮತ್ತು iOS 26 ನಲ್ಲಿ ಲಭ್ಯವಿದೆ. Apple Creator Studio App Store ನಲ್ಲಿ ಲಭ್ಯವಿದೆ ಮತ್ತು ಅದಕ್ಕೆ Apple ಖಾತೆಯ ಅಗತ್ಯವಿದೆ. ಫೀಚರ್‌ಗಳು ಬದಲಾವಣೆಗೆ ಒಳಪಡುತ್ತವೆ ಮತ್ತು ಕೆಲವು ಫೀಚರ್‌ಗಳಿಗೆ ಇಂಟರ್ನೆಟ್ ಆ್ಯಕ್ಸೆಸ್‌ನ ಅಗತ್ಯವಿರಬಹುದು. ಹೆಚ್ಚುವರಿ ಶುಲ್ಕಗಳು ಮತ್ತು ನಿಯಮಗಳು ಅನ್ವಯವಾಗಬಹುದು.

ಪ್ರತಿ Apple Creator Studio ಆ್ಯಪ್‌ನ ಕನಿಷ್ಠ ಸಿಸ್ಟಮ್ ಅವಶ್ಯಕತೆಗಳು ಈ ಕೆಳಗಿನಂತಿವೆ:

  • ಎಲ್ಲಾ Mac ಆ್ಯಪ್‌ಗಳಿಗೆ macOS 15.6 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ, ಆದರೆ Pixelmator Pro ಗೆ ಮಾತ್ರ macOS 26 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ.

  • Final Cut Pro:

    • Mac ನಲ್ಲಿನ Final Cut Pro ಗೆ macOS 15.6 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ.

    • iPad ಗಾಗಿ Final Cut Pro ಅನ್ನು ಬಳಸಲು iPadOS 18.6 ಅಥವಾ ನಂತರದ ಆವೃತ್ತಿ ಮತ್ತು Apple M1 ಚಿಪ್ ಅಥವಾ ನಂತರದ ಆವೃತ್ತಿಯ ಚಿಪ್ ಹೊಂದಿರುವ iPad, iPad Pro ಅಥವಾ iPad Air; iPad (A16) ಅಥವಾ iPad mini (A17 Pro) ಅಗತ್ಯವಿದೆ.

  • Logic Pro:

    • Mac ಗಾಗಿ Logic Pro ಅನ್ನು ಬಳಸಲು macOS 15.6 ಅಥವಾ ನಂತರದ ಆವೃತ್ತಿ ಮತ್ತು Apple ಸಿಲಿಕಾನ್ ಹೊಂದಿರುವ Mac ನ ಅಗತ್ಯವಿದೆ.

    • iPadನಲ್ಲಿನ Logic Pro ಅನ್ನು ಬಳಸಲು iPadOS 26 ಅಥವಾ ನಂತರದ ಆವೃತ್ತಿ ಮತ್ತು Apple A12 Bionic ಚಿಪ್ ಅಥವಾ ನಂತರದ ಆವೃತ್ತಿಯ ಚಿಪ್ ಹೊಂದಿರುವ iPad ನ ಅಗತ್ಯವಿದೆ. ಕೆಲವು ಫೀಚರ್‌ಗಳಿಗೆ Apple A17 Pro ಚಿಪ್ ಅಥವಾ ನಂತರದ ಆವೃತ್ತಿಯ ಚಿಪ್‌ನ ಅಗತ್ಯವಿದೆ.

  • Pixelmator Pro:

    • Mac ಗಾಗಿ Pixelmator Pro ಅನ್ನು ಬಳಸಲು macOS 26 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ.

    • iPad ಗಾಗಿ Pixelmator Pro ಅನ್ನು ಬಳಸಲು iPadOS 26 ಅಥವಾ ನಂತರದ ಆವೃತ್ತಿ ಮತ್ತು Apple M1 ಚಿಪ್ ಅಥವಾ ನಂತರದ ಆವೃತ್ತಿಯ ಚಿಪ್ ಹೊಂದಿರುವ iPad, iPad Pro ಅಥವಾ iPad Air; iPad (A16) ಅಥವಾ iPad mini (A17 Pro) ಅಗತ್ಯವಿದೆ.

  • Pages, Numbers ಮತ್ತು Keynote:

    • Mac ನಲ್ಲಿ Pages, Numbers ಮತ್ತು Keynote ಬಳಸಲು macOS 15.6 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ.

    • iPad, iPhone ಮತ್ತು Apple Vision Pro ಗಾಗಿ Pages, Numbers ಮತ್ತು Keynote ಬಳಸಲು iPadOS 18 ಅಥವಾ ನಂತರದ ಆವೃತ್ತಿ, iOS 18 ಅಥವಾ ನಂತರದ ಆವೃತ್ತಿ ಮತ್ತು visionOS 2 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ.

    • ಕೆಲವು ಪ್ರೀಮಿಯಂ ಫೀಚರ್‌ಗಳನ್ನು ಬಳಸಲು macOS 26, iPadOS 26, iOS 26 ಅಥವಾ visionOS 26 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ.

  • Motion ಅನ್ನು ಬಳಸಲು macOS 15.6 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ.

  • Compressor ಅನ್ನು ಬಳಸಲು macOS 15.6 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ. ಕೆಲವು ಫೀಚರ್‌ಗಳಿಗೆ Apple ಸಿಲಿಕಾನ್ ಹೊಂದಿರುವ Mac ನ ಅಗತ್ಯವಿದೆ.

  • MainStage ಅನ್ನು ಬಳಸಲು macOS 15.6 ಅಥವಾ ನಂತರದ ಆವೃತ್ತಿ ಮತ್ತು Apple ಸಿಲಿಕಾನ್ ಹೊಂದಿರುವ Mac ನ ಅಗತ್ಯವಿದೆ.

ಇನ್ನಷ್ಟು ತಿಳಿಯಿರಿ

Apple Creator Studio ಕುರಿತು ಇನ್ನಷ್ಟು ತಿಳಿಯಿರಿ

* Freeform ನಲ್ಲಿನ ಪ್ರೀಮಿಯಂ ಕಂಟೆಂಟ್ ಮತ್ತು ಫೀಚರ್‌ಗಳನ್ನು ಈ ವರ್ಷದ ಕೊನೆಯಲ್ಲಿ Apple Creator Studio ಸಬ್‌ಸ್ಕ್ರಿಪ್ಶನ್‌ನಲ್ಲಿ ಸೇರಿಸುವ ನಿರೀಕ್ಷೆಯಿದೆ.

ಪ್ರಕಟಿತ ದಿನಾಂಕ: