ಫ್ಯಾಮಿಲಿ ಶೇರಿಂಗ್‌ನೊಂದಿಗೆ ಅಪ್ಲಿಕೇಶನ್‌ಗಳು ಮತ್ತು ಪರ್ಚೇಸ್‌ಗಳನ್ನು ಹೇಗೆ ಹಂಚಿಕೊಳ್ಳುವುದು
ಫ್ಯಾಮಿಲಿ ಶೇರಿಂಗ್‌ನೊಂದಿಗೆ, ಫ್ಯಾಮಿಲಿ ಆರ್ಗನೈಸರ್ ಪರ್ಚೇಸ್ ಶೇರಿಂಗ್ ಅನ್ನು ಆನ್ ಮಾಡಬಹುದು. ಇದರಿಂದ ಫ್ಯಾಮಿಲಿ ಶೇರಿಂಗ್ ಗುಂಪಿನಲ್ಲಿರುವ ಪ್ರತಿಯೊಬ್ಬರೂ ಅಪ್ಲಿಕೇಶನ್‌ಗಳು, ಸಂಗೀತ, ಪುಸ್ತಕಗಳು ಮತ್ತು ಹೆಚ್ಚಿನದನ್ನು ಹಂಚಿಕೊಳ್ಳಬಹುದು.
ಪರ್ಚೇಸ್ ಶೇರಿಂಗ್ ಹೇಗೆ ಕೆಲಸ ಮಾಡುತ್ತದೆ
ಫ್ಯಾಮಿಲಿ ಶೇರಿಂಗ್ ಆರ್ಗನೈಸರ್ ಇಡೀ ಫ್ಯಾಮಿಲಿ ಗ್ರೂಪ್‌ಗೆ ಪರ್ಚೇಸ್ ಶೇರಿಂಗ್ ಅನ್ನು ಆನ್ ಮಾಡಬಹುದಾದ ಏಕೈಕ ಸದಸ್ಯರಾಗಿದ್ದಾರೆ. ಗುಂಪಿನಲ್ಲಿರುವ ಇತರ ಸದಸ್ಯರು ತಮ್ಮ ಸಾಧನದಲ್ಲಿ ಪರ್ಚೇಸ್ ಶೇರಿಂಗ್ ಅನ್ನು ಎನೇಬಲ್ ಮಾಡಲು ಅಥವಾ ಭಾಗವಹಿಸುವುದನ್ನು ನಿರಾಕರಿಸಲು ಆಯ್ಕೆ ಮಾಡಬಹುದು. ಫ್ಯಾಮಿಲಿ ಆರ್ಗನೈಸರ್ ಪರ್ಚೇಸ್ ಶೇರಿಂಗ್ ಅನ್ನು ಆನ್ ಮಾಡಿದಾಗ ಮತ್ತು ಗುಂಪಿನಲ್ಲಿರುವ ಇತರ ಕುಟುಂಬ ಸದಸ್ಯರು ಸಹ ಪರ್ಚೇಸ್ ಶೇರಿಂಗ್ ಅನ್ನು ಆನ್ ಮಾಡಿದಾಗ, ಅವರು ಪರಸ್ಪರ ಹಂಚಿಕೊಂಡ ವಿಷಯಕ್ಕೆ ಅಕ್ಸೆಸ್ ಪಡೆಯುತ್ತಾರೆ, ಉದಾಹರಣೆಗೆ ಅಪ್ಲಿಕೇಶನ್‌ಗಳು, ಸಂಗೀತ, ಚಲನಚಿತ್ರಗಳು ಮತ್ತು ಇನ್ನೂ ಹೆಚ್ಚಿನವು. ಪರ್ಚೇಸ್ ಶೇರಿಂಗ್ ಅನ್ನು ಆಫ್ ಮಾಡದೇ ಇದ್ದರೆ, ಫ್ಯಾಮಿಲಿ ಆರ್ಗನೈಸರ್ ಪ್ರತಿಯೊಬ್ಬರ ಪರ್ಚೇಸ್‌ಗಳಿಗೆ ಪಾವತಿಸುತ್ತಾರೆ.
ಫ್ಯಾಮಿಲಿ ಮೆಂಬರ್ಸ್ App Store, iTunes Store, Apple Books ಅಥವಾ Apple TV ಅಪ್ಲಿಕೇಶನ್‌ನಲ್ಲಿ ಖರೀದಿಸಿದ ಪೇಜ್‌ನಲ್ಲಿ ಹಂಚಿಕೊಂಡ ವಿಷಯವನ್ನು ಕಾಣಬಹುದು. ಅಪ್ಲಿಕೇಶನ್ ಒಳಗಿನ ಖರೀದಿಗಳನ್ನು ಹಂಚಿಕೊಳ್ಳಬಹುದಾದರೂ ಸಹ, ಖರೀದಿಸಿದ ಪುಟದಲ್ಲಿ ಕಾಣಿಸುವುದಿಲ್ಲ ಮತ್ತು ಕೆಲವು ಐಟಂಗಳನ್ನು ಹಂಚಿಕೊಳ್ಳಲಾಗುವುದಿಲ್ಲ.
ನೀವು ಯಾವ ರೀತಿಯ ವಿಷಯವನ್ನು ಹಂಚಿಕೊಳ್ಳಬಹುದು ಮತ್ತು ಹಂಚಿಕೊಳ್ಳಬಾರದು ಎಂಬುದನ್ನು ತಿಳಿಯಿರಿ
ನಿಮ್ಮ iPhone ಅಥವಾ iPad ನಲ್ಲಿ ಪರ್ಚೇಸ್ ಶೇರಿಂಗ್ ಅನ್ನು ಆನ್ ಮಾಡಿ
ಪರ್ಚೇಸ್ ಶೇರಿಂಗ್ ಅನ್ನು ಬಳಸಲುನೀವು ಫ್ಯಾಮಿಲಿ ಶೇರಿಂಗ್ ಅನ್ನುಸೆಟ್ ಮಾಡಬೇಕಾಗುತ್ತದೆ.
ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ, ನಂತರ ಫ್ಯಾಮಿಲಿ ಎಂಬುದನ್ನು ಟ್ಯಾಪ್ ಮಾಡಿ.
ಪರ್ಚೇಸ್ ಶೇರಿಂಗ್ ಅನ್ನು ಟ್ಯಾಪ್ ಮಾಡಿ.
ನಿಮ್ಮ ಹೆಸರಿನ ಮೇಲೆ ಟ್ಯಾಪ್ ಮಾಡಿ, ನಂತರ ನನ್ನ ಖರೀದಿಗಳನ್ನು ಹಂಚಿಕೊಳ್ಳಿ ಎನ್ನುವುದನ್ನು ಆನ್ ಮಾಡಿ ಹಾಗೂ ಸ್ಕ್ರೀನ್ ಮೇಲೆ ಕಂಡುಬರುವ ಸೂಚನೆಗಳನ್ನು ಅನುಸರಿಸಿ.
ಪಾವತಿ ವಿಧಾನವನ್ನು ಖಚಿತಪಡಿಸಲು, ಪರ್ಚೇಸ್ ಶೇರಿಂಗ್ ಅನ್ನು ಮತ್ತೊಮ್ಮೆ ಟ್ಯಾಪ್ ಮಾಡಿ ಮತ್ತು ಹಂಚಿಕೊಂಡ ಪಾವತಿ ವಿಧಾನದ ಮಾಹಿತಿಯನ್ನು ಪರಿಶೀಲಿಸಿ. ಇದು ಫ್ಯಾಮಿಲಿ ಆರ್ಗನೈಸರ್‌ರವರ ಡೀಫಾಲ್ಟ್ ಪಾವತಿ ವಿಧಾನವಾಗುತ್ತದೆ.
ನಿಮ್ಮ Mac ನಲ್ಲಿ ಪರ್ಚೇಸ್ ಶೇರಿಂಗ್ ಅನ್ನು ಆನ್ ಮಾಡಿ
ಪರ್ಚೇಸ್ ಶೇರಿಂಗ್ ಅನ್ನು ಬಳಸಲು ನೀವು ಫ್ಯಾಮಿಲಿ ಶೇರಿಂಗ್ ಅನ್ನುಸೆಟ್ ಮಾಡಬೇಕಾಗುತ್ತದೆ.
Apple ಮೆನು ಆಯ್ಕೆಮಾಡಿ> ನಂತರ ಸಿಸ್ಟಮ್ ಸೆಟ್ಟಿಂಗ್‌ಗಳು, ಅಲ್ಲಿ ಕುಟುಂಬವನ್ನು ಕ್ಲಿಕ್ ಮಾಡಿ
ಪರ್ಚೇಸ್ ಶೇರಿಂಗ್ ಅನ್ನು ಆಯ್ಕೆ ಮಾಡಿ.
ನಿಮ್ಮ ಹೆಸರಿನ ಮೇಲೆ ಕ್ಲಿಕ್ ಮಾಡಿ, ನಂತರ ನನ್ನ ಖರೀದಿಗಳನ್ನು ಹಂಚಿಕೊಳ್ಳಿ ಅನ್ನು ಆನ್ ಮಾಡಿ.
ಪಾವತಿ ವಿಧಾನವನ್ನು ಖಚಿತಪಡಿಸಲು, ಹಂಚಿಕೊಂಡ ಪಾವತಿ ವಿಧಾನಗಳ ಅಡಿಯಲ್ಲಿ ಪರಿಶೀಲಿಸಿ. ಇದು ಫ್ಯಾಮಿಲಿ ಆರ್ಗನೈಸರ್‌ರವರ ಡೀಫಾಲ್ಟ್ ಪಾವತಿ ವಿಧಾನವಾಗುತ್ತದೆ.
ನೀವು ಪರ್ಚೇಸ್ ಶೇರಿಂಗ್ ಅನ್ನು ಆನ್ ಮಾಡಿದಾಗ, ಪ್ರತಿಯೊಬ್ಬರ ಖರೀದಿಗಳ ಬಿಲ್ ಅನ್ನು ಫ್ಯಾಮಿಲಿ ಆರ್ಗನೈಸರ್‌ರವರ ಪಾವತಿ ವಿಧಾನಕ್ಕೆ ಜಮಾ ಮಾಡಲಾಗುತ್ತದೆ.* ಫ್ಯಾಮಿಲಿ ಆರ್ಗನೈಸರ್ ಹೀಗೆ ಮಾಡಬಹುದು:
ಏನಾದರೂ ಸಮಸ್ಯೆ ಇದ್ದರೆ ಅವರ ಪಾವತಿ ವಿಧಾನವನ್ನು ಅಪ್ಡೇಟ್ ಮಾಡಬಹುದುಅಥವಾ ಹೊಸದನ್ನು ಸೇರಿಸಬಹುದು.
ಕುಟುಂಬ ಸದಸ್ಯರು ಮಾಡಿರುವ ಖರೀದಿಗಳನ್ನು ನೋಡಲು ಅವರ ಖರೀದಿ ಇತಿಹಾಸವನ್ನು ಪರಿಶೀಲಿಸಬಹುದು.
ನಿಮ್ಮ ದೇಶ ಅಥವಾ ಪ್ರದೇಶದಲ್ಲಿ ಯಾವ ಪಾವತಿ ವಿಧಾನಗಳು ಲಭ್ಯವಿದೆ ಎಂಬುದನ್ನು ತಿಳಿಯುವುದು.
ಕುಟುಂಬ ಸದಸ್ಯರು ಮೊದಲು ತಮ್ಮ ಸಾಧನದಲ್ಲಿ ಖರೀದಿ ಮಾಡಿದಾಗ, ಫ್ಯಾಮಿಲಿ ಆರ್ಗನೈಸರ್ CVV ನಮೂದಿಸುವ ಮೂಲಕ ಪಾವತಿ ವಿಧಾನವನ್ನು ಪರಿಶೀಲಿಸಬೇಕಾಗಬಹುದು.
* ನೀವು ಫ್ಯಾಮಿಲಿ ಶೇರಿಂಗ್ ಗ್ರೂಪ್‌ನಲ್ಲಿದ್ದರೆ, ನೀವು ಮಾಡುವ ಖರೀದಿಗಳನ್ನು ನಿಮ್ಮ ಪರ್ಸನಲ್ ಆಪಲ್ ಅಕೌಂಟ್ ಬ್ಯಾಲೆನ್ಸ್‌ವಿಧಿಸಲಾಗುತ್ತದೆ. ನಿಮ್ಮ Apple ಅಕೌಂಟ್ ನಲ್ಲಿ ಖರೀದಿಗೆ ಪಾವತಿಸಲು ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ, ಮತ್ತು ಈ ಸಂದರ್ಭದಲ್ಲಿ ಪರ್ಚೇಸ್ ಶೇರಿಂಗ್ ಆನ್ ಆಗಿದ್ದರೆ, ಉಳಿದ ಹಣವನ್ನು ಫ್ಯಾಮಿಲಿ ಶೇರಿಂಗ್ ಆರ್ಗನೈಸರ್ ರವರಿಗೆ ವಿಧಿಸಲಾಗುತ್ತದೆ.
ಪರ್ಚೇಸ್ ಶೇರಿಂಗ್ ಅನ್ನು ಆಫ್ ಮಾಡಿ
ನೀವು ಫ್ಯಾಮಿಲಿ ಶೇರಿಂಗ್ ಆರ್ಗನೈಸರ್ ಆಗಿದ್ದು, ನಿಮ್ಮ ಕುಟುಂಬ ಸದಸ್ಯರು ತಮ್ಮ ಖರೀದಿಗಳಿಗೆ ಅವರದೇ ಸ್ವಂತ ಹಣ ಪಾವತಿಸಬೇಕೆಂದು ನೀವು ಬಯಸಿದರೆ, ಆಗ ಪರ್ಚೇಸ್ ಶೇರಿಂಗ್ ಅನ್ನು ಆಫ್ ಮಾಡಿ.
ನಿಮ್ಮ iPhone ಅಥವಾ iPad ನಲ್ಲಿ
ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ, ನಂತರ ಕುಟುಂಬ ಎನ್ನುವುದನ್ನು ಟ್ಯಾಪ್ ಮಾಡಿ.
ಪರ್ಚೇಸ್ ಶೇರಿಂಗ್ ಅನ್ನು ಟ್ಯಾಪ್ ಮಾಡಿ.
ಪರ್ಚೇಸ್ ಶೇರಿಂಗ್ ನಿಲ್ಲಿಸಿ ಅನ್ನು ಟ್ಯಾಪ್ ಮಾಡಿ, ನಂತರ ಖಚಿತಪಡಿಸಲು ಸ್ಟಾಪ್ ಶೇರಿಂಗ್ ಅನ್ನು ಟ್ಯಾಪ್ ಮಾಡಿ.
ನಿಮ್ಮ Mac ನಲ್ಲಿ
Apple ಮೆನು ಆಯ್ಕೆಮಾಡಿ >ನಂತರ ಸಿಸ್ಟಮ್ ಸೆಟ್ಟಿಂಗ್‌ಗಳು.
ಅಲ್ಲಿ ಕುಟುಂಬ ಎಂಬುದನ್ನು ಕ್ಲಿಕ್ ಮಾಡಿ, ನಂತರ ಪರ್ಚೇಸ್ ಶೇರಿಂಗ್ ಅನ್ನು ಕ್ಲಿಕ್ ಮಾಡಿ.
ಪರ್ಚೇಸ್ ಶೇರಿಂಗ್ ನಿಲ್ಲಿಸಿ ಅನ್ನು ಕ್ಲಿಕ್ ಮಾಡಿ, ನಂತರ ಇದನ್ನು ಖಚಿತಪಡಿಸಲು ಮತ್ತೊಮ್ಮೆ ಪರ್ಚೇಸ್ ಶೇರಿಂಗ್ ನಿಲ್ಲಿಸಿ ಅನ್ನು ಕ್ಲಿಕ್ ಮಾಡಿ.
ಪರ್ಚೇಸ್ ಶೇರಿಂಗ್ ಆಫ್ ಮಾಡಿದಾಗ, ನೀವು ನಿಮ್ಮ ಖರೀದಿಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುತ್ತೀರಿ ಮತ್ತು ಫ್ಯಾಮಿಲಿ ಶೇರಿಂಗ್ ಗುಂಪಿನಲ್ಲಿರುವ ನಿಮ್ಮ ಇತರ ಕುಟುಂಬ ಸದಸ್ಯರು ಮಾಡಿದ ಖರೀದಿಗಳಿಗೆ ಅಕ್ಸೆಸ್ ಅನ್ನು ಕಳೆದುಕೊಳ್ಳುತ್ತೀರಿ. ಆದಾಗ್ಯೂ, ನೀವು iCloud+, Apple TV+ ಮತ್ತು ಹೆಚ್ಚಿನವುಗಳಂತಹ ಚಂದಾದಾರಿಕೆಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಬಹುದು - ಆದರೆ ಪ್ರತಿಯೊಬ್ಬರೂ ಖರೀದಿಗಳಿಗೆ ತಮ್ಮದೇ ಆದ ಪಾವತಿ ವಿಧಾನವನ್ನು ಬಳಸಬೇಕು.
ಮಗುವಿನ ಖರೀದಿಗಳನ್ನು ಅನುಮೋದಿಸಿ
ಮಕ್ಕಳು ಏನನ್ನು ಖರೀದಿಸುತ್ತಾರೆ ಮತ್ತು ಡೌನ್‌ಲೋಡ್ ಮಾಡುತ್ತಾರೆ ಎಂಬುದನ್ನು ನೋಡಲು ಮತ್ತು ಅನುಮೋದಿಸಲು ನೀವು ಬಯಸಿದರೆ, Ask to Buy ಅನ್ನು ಸೆಟಪ್ ಮಾಡಿ. ಒಂದು ಮಗು ಅಪ್ಲಿಕೇಶನ್‌ಗಳು, ಚಲನಚಿತ್ರಗಳು ಅಥವಾ ಇತರ ವಿಷಯವನ್ನು ಖರೀದಿಸಲು ಕೇಳಿದಾಗ, ಫ್ಯಾಮಿಲಿ ಶೇರಿಂಗ್ ಆರ್ಗನೈಸರ್ ಅಧಿಸೂಚನೆಯನ್ನು ಸ್ವೀಕರಿಸುತ್ತಾರೆ ಮತ್ತು ಅವರು ತಮ್ಮ ಸಾಧನದಿಂದಲೇ ವಿನಂತಿಯನ್ನು ಅನುಮೋದಿಸಬಹುದು ಅಥವಾ ನಿರಾಕರಿಸಬಹುದು.