ನಿಮ್ಮ Apple ಖಾತೆಗೆ ಪಾವತಿ ವಿಧಾನವನ್ನು ಸೇರಿಸಿ
ನೀವು ಮತ್ತು ನಿಮ್ಮ ಕುಟುಂಬವು App store, iCloud+, Apple Music ಮತ್ತು ಇನ್ನೂ ಹೆಚ್ಚಿನವುಗಳಿಗಾಗಿ ಬಳಸಬಹುದಾದ ಪಾವತಿ ವಿಧಾನವನ್ನು ಸೇರಿಸಿ. ನೀವು ಪಾವತಿ ವಿಧಾನವನ್ನು ಸೇರಿಸಲು ಸಾಧ್ಯವಾಗದಿದ್ದರೆ, ಏನು ಮಾಡಬೇಕೆಂದು ತಿಳಿಯಿರಿ.
ಪಾವತಿ ವಿಧಾನವನ್ನು ಸೇರಿಸಿ
ಪಾವತಿ ವಿಧಾನವನ್ನು ಸೇರಿಸಿನಿಮ್ಮ ಸಾಧನದಲ್ಲಿ ಪಾವತಿ ವಿಧಾನವನ್ನು ಸೇರಿಸಿ
ನಿಮ್ಮ Apple ಖಾತೆಗೆ ಪಾವತಿ ವಿಧಾನವನ್ನು ಸೇರಿಸಲು ನಿಮ್ಮ ಸಾಧನವನ್ನು ನೀವು ಬಳಸಬಹುದು.
ನಿಮ್ಮ iPhone ನಲ್ಲಿ ಪಾವತಿ ವಿಧಾನವನ್ನು ಸೇರಿಸಿ
ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ.
ನಿಮ್ಮ ಹೆಸರನ್ನು ಟ್ಯಾಪ್ ಮಾಡಿ.
ಪಾವತಿ ಮತ್ತು ಶಿಪ್ಪಿಂಗ್ ಅನ್ನು ಟ್ಯಾಪ್ ಮಾಡಿ. ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಲು ನಿಮ್ಮನ್ನು ಕೇಳಬಹುದು.
ಪಾವತಿ ವಿಧಾನವನ್ನು ಸೇರಿಸಿ ಅನ್ನು ಟ್ಯಾಪ್ ಮಾಡಿ.
ಪಾವತಿ ವಿಧಾನದ ವಿವರಗಳನ್ನು ನಮೂದಿಸಿ, ನಂತರ ಮುಗಿದಿದೆ ಅನ್ನು ಟ್ಯಾಪ್ ಮಾಡಿ.
ನಿಮ್ಮ iPhone ನಲ್ಲಿ ಪಾವತಿ ವಿಧಾನಗಳನ್ನು ರೀಆರ್ಡರ್ ಮಾಡಿ
ಪಾವತಿ ಮತ್ತು ಶಿಪ್ಪಿಂಗ್ ಸ್ಕ್ರೀನ್‌ನಲ್ಲಿ, ಎಡಿಟ್ ಅನ್ನು ಟ್ಯಾಪ್ ಮಾಡಿ.
ನಿಮ್ಮ ಪಾವತಿ ವಿಧಾನಗಳ ಪಟ್ಟಿಯನ್ನು ಮೇಲಕ್ಕೆ ಅಥವಾ ಕೆಳಕ್ಕೆ ಎಳೆಯಲು ಪಾವತಿ ವಿಧಾನ ಎನ್ನುವುದನ್ನು ಟಚ್ ಮಾಡಿ ಹಾಗೇ ಹಿಡಿದುಕೊಳ್ಳಿ. ನಿಮ್ಮ ಪಾವತಿ ವಿಧಾನಗಳು ಗೋಚರಿಸುವ ಕ್ರಮದಲ್ಲಿಯೇ ಶುಲ್ಕ ವಿಧಿಸಲು Apple ಪ್ರಯತ್ನಿಸುತ್ತದೆ.
ಮುಗಿದಿದೆ ಅನ್ನು ಟ್ಯಾಪ್ ಮಾಡಿ.
ನೀವು ಈಗಾಗಲೇ ಫೈಲ್‌ನಲ್ಲಿ ಪಾವತಿ ವಿಧಾನವನ್ನು ಹೊಂದಿದ್ದರೆ, ನಿಮ್ಮ ಪಾವತಿ ವಿಧಾನವನ್ನು ಹೇಗೆ ಬದಲಾಯಿಸುವುದು ಅಥವಾ ಅಪ್ಡೇಟ್ ಮಾಡುವುದು ಎಂಬುದನ್ನು ತಿಳಿಯಿರಿ.
ನಿಮ್ಮ iPad ನಲ್ಲಿ ಪಾವತಿ ವಿಧಾನವನ್ನು ಸೇರಿಸಿ
ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ.
ನಿಮ್ಮ ಹೆಸರನ್ನು ಟ್ಯಾಪ್ ಮಾಡಿ.
ಪಾವತಿ ಮತ್ತು ಶಿಪ್ಪಿಂಗ್ ಅನ್ನು ಟ್ಯಾಪ್ ಮಾಡಿ. ನಿಮ್ಮ ಆಪಲ್ ಖಾತೆಗೆ ಸೈನ್ ಇನ್ ಮಾಡಲು ನಿಮ್ಮನ್ನು ಕೇಳಬಹುದು.
ಪಾವತಿ ವಿಧಾನವನ್ನು ಸೇರಿಸಿ ಅನ್ನು ಟ್ಯಾಪ್ ಮಾಡಿ.
ಪಾವತಿ ವಿಧಾನದ ವಿವರಗಳನ್ನು ನಮೂದಿಸಿ, ನಂತರ ಮುಗಿದಿದೆ ಎನ್ನುವುದನ್ನು ಟ್ಯಾಪ್ ಮಾಡಿ.
ನಿಮ್ಮ iPad ನಲ್ಲಿ ಪಾವತಿ ವಿಧಾನಗಳನ್ನು ರೀಆರ್ಡರ್ ಮಾಡಿ
ಪಾವತಿ ಮತ್ತು ಶಿಪ್ಪಿಂಗ್ ಸ್ಕ್ರೀನ್‌ನಲ್ಲಿ, ಎಡಿಟ್ ಅನ್ನು ಟ್ಯಾಪ್ ಮಾಡಿ.
ನಿಮ್ಮ ಪಾವತಿ ವಿಧಾನಗಳ ಪಟ್ಟಿಯನ್ನು ಮೇಲಕ್ಕೆ ಅಥವಾ ಕೆಳಕ್ಕೆ ಎಳೆಯಲು ಪಾವತಿ ವಿಧಾನ ಎಂಬುದನ್ನು ಟಚ್ ಮಾಡಿ ಹಾಗೇ ಹಿಡಿದುಕೊಳ್ಳಿ. ನಿಮ್ಮ ಪಾವತಿ ವಿಧಾನಗಳು ಗೋಚರಿಸುವ ಕ್ರಮದಲ್ಲಿಯೇ ಶುಲ್ಕ ವಿಧಿಸಲು Apple ಪ್ರಯತ್ನಿಸುತ್ತದೆ.
ಮುಗಿದಿದೆ ಅನ್ನು ಟ್ಯಾಪ್ ಮಾಡಿ.
ನೀವು ಈಗಾಗಲೇ ಫೈಲ್‌ನಲ್ಲಿ ಪಾವತಿ ವಿಧಾನವನ್ನು ಹೊಂದಿದ್ದರೆ,ನಿಮ್ಮ ಪಾವತಿ ವಿಧಾನವನ್ನು ಹೇಗೆ ಬದಲಾಯಿಸುವುದು ಅಥವಾ ಅಪ್ಡೇಟ್ ಮಾಡುವುದು ಎಂಬುದನ್ನು ತಿಳಿಯಿರಿ. .
ನಿಮ್ಮ Apple Vision Pro ನಲ್ಲಿ ಪಾವತಿ ವಿಧಾನವನ್ನು ಸೇರಿಸಿ
ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ.
ನಿಮ್ಮ ಹೆಸರನ್ನು ಟ್ಯಾಪ್ ಮಾಡಿ.
ಪಾವತಿ ಮತ್ತು ಶಿಪ್ಪಿಂಗ್ ಅನ್ನು ಟ್ಯಾಪ್ ಮಾಡಿ. ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಲು ನಿಮ್ಮನ್ನು ಕೇಳಬಹುದು.
ಪಾವತಿ ವಿಧಾನವನ್ನು ಸೇರಿಸಿ ಅನ್ನು ಟ್ಯಾಪ್ ಮಾಡಿ.
ಪಾವತಿ ವಿಧಾನದ ವಿವರಗಳನ್ನು ನಮೂದಿಸಿ, ನಂತರ ಮುಗಿದಿದೆ ಅನ್ನು ಟ್ಯಾಪ್ ಮಾಡಿ.
ನಿಮ್ಮ Apple Vision Pro ನಲ್ಲಿ ಪಾವತಿ ವಿಧಾನಗಳನ್ನು ರೀಆರ್ಡರ್ ಮಾಡಿ
ಪಾವತಿ ಮತ್ತು ಶಿಪ್ಪಿಂಗ್ ಸ್ಕ್ರೀನ್‌ನಲ್ಲಿ, ಎಡಿಟ್ ಅನ್ನು ಟ್ಯಾಪ್ ಮಾಡಿ.
ನಿಮ್ಮ ಪಾವತಿ ವಿಧಾನಗಳ ಪಟ್ಟಿಯನ್ನು ಮೇಲಕ್ಕೆ ಅಥವಾ ಕೆಳಕ್ಕೆ ಎಳೆಯಲು ಪಾವತಿ ವಿಧಾನ ಎಂಬುದನ್ನು ಟಚ್ ಮಾಡಿ ಹಾಗೇ ಹಿಡಿದುಕೊಳ್ಳಿ. ನಿಮ್ಮ ಪಾವತಿ ವಿಧಾನಗಳು ಗೋಚರಿಸುವ ಕ್ರಮದಲ್ಲಿಯೇ ಶುಲ್ಕ ವಿಧಿಸಲು Apple ಪ್ರಯತ್ನಿಸುತ್ತದೆ.
ಮುಗಿದಿದೆ ಅನ್ನು ಟ್ಯಾಪ್ ಮಾಡಿ.
ನೀವು ಈಗಾಗಲೇ ಫೈಲ್‌ನಲ್ಲಿ ಪಾವತಿ ವಿಧಾನವನ್ನು ಹೊಂದಿದ್ದರೆ, ನಿಮ್ಮ ಪಾವತಿ ವಿಧಾನವನ್ನು ಹೇಗೆ ಬದಲಾಯಿಸುವುದು ಅಥವಾ ಅಪ್ಡೇಟ್ ಮಾಡುವುದು ಎಂಬುದನ್ನು ತಿಳಿಯಿರಿ.
ನಿಮ್ಮ Mac ನಲ್ಲಿ ಪಾವತಿ ವಿಧಾನವನ್ನು ಸೇರಿಸಿ
App Store ತೆರೆಯಿರಿ.
ನಿಮ್ಮ ಹೆಸರಿನ ಮೇಲೆ ಕ್ಲಿಕ್ ಮಾಡಿ. ನಿಮ್ಮ ಹೆಸರು ಕಾಣಿಸದಿದ್ದರೆ, ಸೈನ್ ಇನ್ ಬಟನ್ ಕ್ಲಿಕ್ ಮಾಡಿ, ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಿ, ನಂತರ ನಿಮ್ಮ ಹೆಸರನ್ನು ಕ್ಲಿಕ್ ಮಾಡಿ.
ಖಾತೆ ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಲು ನಿಮ್ಮನ್ನು ಕೇಳಬಹುದು.
ಪಾವತಿ ಮಾಹಿತಿಯ ನಂತರ, ಪಾವತಿಗಳನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
ಪಾವತಿಯನ್ನು ಸೇರಿಸಿ ಎಂಬುದನ್ನು ಕ್ಲಿಕ್ ಮಾಡಿ.
ಪಾವತಿ ವಿಧಾನದ ವಿವರಗಳನ್ನು ನಮೂದಿಸಿ, ನಂತರ ಮುಗಿದಿದೆ ಎಂಬುದನ್ನು ಕ್ಲಿಕ್ ಮಾಡಿ.
ನಿಮ್ಮ Mac ನಲ್ಲಿ ಪಾವತಿ ವಿಧಾನಗಳನ್ನು ರೀಆರ್ಡರ್ ಮಾಡಿ
ಪಾವತಿ ಮಾಹಿತಿಯ ಸ್ಕ್ರೀನ್‌ನಲ್ಲಿ, ನಿಮ್ಮ ಪಾವತಿ ವಿಧಾನಗಳ ಪಟ್ಟಿಯನ್ನು ಮೇಲಕ್ಕೆ ಅಥವಾ ಕೆಳಕ್ಕೆ ಸರಿಸಲು ಪ್ರತಿ ಪಾವತಿ ವಿಧಾನದ ಪಕ್ಕದಲ್ಲಿರುವ ಬಾಣದ ಗುರುತನ್ನು ಬಳಸಿ. ನಿಮ್ಮ ಪಾವತಿ ವಿಧಾನಗಳು ಗೋಚರಿಸುವ ಕ್ರಮದಲ್ಲಿಯೇ ಶುಲ್ಕ ವಿಧಿಸಲು Apple ಪ್ರಯತ್ನಿಸುತ್ತದೆ.
ನೀವು ಈಗಾಗಲೇ ಫೈಲ್‌ನಲ್ಲಿ ಪಾವತಿ ವಿಧಾನವನ್ನು ಹೊಂದಿದ್ದರೆ, ನಿಮ್ಮ ಪಾವತಿ ವಿಧಾನವನ್ನು ಹೇಗೆ ಬದಲಾಯಿಸುವುದು ಅಥವಾ ಅಪ್ಡೇಟ್ ಮಾಡುವುದು ಎಂಬುದನ್ನು ತಿಳಿಯಿರಿ.
ನಿಮ್ಮ Windows PC ಯಲ್ಲಿ ಪಾವತಿ ವಿಧಾನವನ್ನು ಸೇರಿಸಿ
ನಿಮ್ಮ Windows PC ಯಲ್ಲಿ, Apple Music ಅಪ್ಲಿಕೇಶನ್ ಅಥವಾ Apple TV ಅಪ್ಲಿಕೇಶನ್ ತೆರೆಯಿರಿ.
ಸೈಡ್‌ಬಾರ್‌ನ ಕೆಳಭಾಗದಲ್ಲಿರುವ ನಿಮ್ಮ ಹೆಸರನ್ನು ಕ್ಲಿಕ್ ಮಾಡಿ, ನಂತರ ನನ್ನ ಖಾತೆಯನ್ನು ವೀಕ್ಷಿಸಿ ಎಂಬುದನ್ನು ಆಯ್ಕೆಮಾಡಿ. ನೀವು ಮೊದಲು ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಬೇಕಾಗಬಹುದು.
ಪಾವತಿ ಮಾಹಿತಿಯ ಮುಂದೆ, ಪಾವತಿಗಳನ್ನು ನಿರ್ವಹಿಸಿ ಎನ್ನುವುದನ್ನು ಕ್ಲಿಕ್ ಮಾಡಿ.
ಪಾವತಿಯನ್ನು ಸೇರಿಸಿ ಎಂಬುದನ್ನು ಕ್ಲಿಕ್ ಮಾಡಿ.
ಪಾವತಿ ವಿಧಾನದ ವಿವರಗಳನ್ನು ನಮೂದಿಸಿ, ನಂತರ ಮುಗಿದಿದೆ ಎಂಬುದನ್ನು ಕ್ಲಿಕ್ ಮಾಡಿ.
ನಿಮ್ಮ Windows PC ಯಲ್ಲಿ ಪಾವತಿ ವಿಧಾನಗಳನ್ನು ರೀಆರ್ಡರ್ ಮಾಡಿ
ಪಾವತಿ ಮಾಹಿತಿಯ ಸ್ಕ್ರೀನ್‌ನಲ್ಲಿ, ನಿಮ್ಮ ಪಾವತಿ ವಿಧಾನಗಳ ಪಟ್ಟಿಯನ್ನು ಮೇಲಕ್ಕೆ ಅಥವಾ ಕೆಳಕ್ಕೆ ಸರಿಸಲು ಪ್ರತಿ ಪಾವತಿ ವಿಧಾನದ ಪಕ್ಕದಲ್ಲಿರುವ ಬಾಣದ ಗುರುತನ್ನು ಬಳಸಿ. ನಿಮ್ಮ ಪಾವತಿ ವಿಧಾನಗಳು ಗೋಚರಿಸುವ ಕ್ರಮದಲ್ಲಿಯೇ ಶುಲ್ಕ ವಿಧಿಸಲು Apple ಪ್ರಯತ್ನಿಸುತ್ತದೆ.
ನೀವು ಈಗಾಗಲೇ ಫೈಲ್‌ನಲ್ಲಿ ಪಾವತಿ ವಿಧಾನವನ್ನು ಹೊಂದಿದ್ದರೆ, ನಿಮ್ಮ ಪಾವತಿ ವಿಧಾನವನ್ನು ಹೇಗೆ ಬದಲಾಯಿಸುವುದು ಅಥವಾ ಅಪ್ಡೇಟ್ ಮಾಡುವುದು ಎಂಬುದನ್ನು ತಿಳಿಯಿರಿ.
ಆನ್‌ಲೈನ್‌ನಲ್ಲಿ ಪಾವತಿ ವಿಧಾನವನ್ನು ಸೇರಿಸಿ
ಇಲ್ಲಿ ಸೈನ್ ಇನ್ ಮಾಡಿದ ನಂತರ ನೀವು ಪಾವತಿ ವಿಧಾನವನ್ನು ಸಹ ಸೇರಿಸಬಹುದುaccount.apple.com.
ಕೆಲವು ದೇಶಗಳು ಮತ್ತು ಪ್ರದೇಶಗಳಲ್ಲಿ, ನೀವು account.apple.com ನಲ್ಲಿ ಆನ್‌ಲೈನ್‌ನಲ್ಲಿ ಪಾವತಿ ಮಾಹಿತಿಯನ್ನು ಎಡಿಟ್ ಮಾಡಿದಾಗ, ನಿಮ್ಮ ಖಾತೆಯಿಂದ ಹೆಚ್ಚುವರಿ ಪಾವತಿ ವಿಧಾನಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕಬಹುದು.
ನೀವು ಪಾವತಿ ವಿಧಾನವನ್ನು ಸೇರಿಸಲು ಸಾಧ್ಯವಾಗದಿದ್ದರೆ
ನಿಮ್ಮ ದೇಶ ಅಥವಾ ಪ್ರದೇಶದಲ್ಲಿ ನಿಮ್ಮ Apple ಖಾತೆಯೊಂದಿಗೆ ನೀವು ಯಾವ ಪಾವತಿ ವಿಧಾನಗಳನ್ನು ಬಳಸಬಹುದು ಎಂಬುದನ್ನು ಪರಿಶೀಲಿಸಿ.
ನೀವು ಸ್ವೀಕೃತ ಪಾವತಿ ವಿಧಾನವನ್ನು ಬಳಸುತ್ತಿದ್ದರೆ ಮತ್ತು ನಿಮ್ಮ Apple ಖಾತೆಯನ್ನು ಬೇರೆ ದೇಶ ಅಥವಾ ಪ್ರದೇಶಕ್ಕೆ ಹೊಂದಿಸಿದ್ದರೆ,ನಿಮ್ಮ ದೇಶ ಅಥವಾ ಪ್ರದೇಶವನ್ನು ಬದಲಾಯಿಸಿ.
ಸೇರಿಸು ಎನ್ನುವ ಬಟನ್ ಬೂದು ಬಣ್ಣದಲ್ಲಿದ್ದರೆ, ನೀವು ಕುಟುಂಬ ಹಂಚಿಕೆ ಗುಂಪಿನಲ್ಲಿರಬಹುದು ಮತ್ತು ನೀವು ಖರೀದಿ ಹಂಚಿಕೆಯನ್ನು ಬಳಸುತ್ತಿರಬಹುದು. ಕುಟುಂಬ ಸಂಘಟಕರು ಮಾತ್ರ ಫೈಲ್‌ನಲ್ಲಿ ಪಾವತಿ ವಿಧಾನವನ್ನು ಹೊಂದಬಹುದು. ನಿಮ್ಮ ಸ್ವಂತ ಪಾವತಿ ವಿಧಾನಗಳನ್ನು ಬಳಸಲು ನೀವು ಬಯಸಿದರೆ, ಖರೀದಿ ಹಂಚಿಕೆ ಎಂಬುದನ್ನು ಆಫ್ ಮಾಡಿ, ನಂತರ ನಿಮ್ಮ ಸ್ವಂತ ಪಾವತಿ ವಿಧಾನವನ್ನು ಸೇರಿಸಿ.
ನಿಮ್ಮ ಹೆಸರು, ಬಿಲ್ಲಿಂಗ್ ವಿಳಾಸ ಮತ್ತು ಇತರ ಮಾಹಿತಿಯು ಸರಿಯಾಗಿ ಬರೆಯಲ್ಪಟ್ಟಿದೆಯೇ ಮತ್ತು ನಿಮ್ಮ ಹಣಕಾಸು ಸಂಸ್ಥೆಯ ಫೈಲ್‌ನಲ್ಲಿರುವ ಮಾಹಿತಿಗೆ ಹೊಂದಿಕೆಯಾಗಿದೆಯೇ ಎಂದು ಮತ್ತೊಮ್ಮೆ ಪರಿಶೀಲಿಸಿ.
ಕೆಲವು ಪಾವತಿ ವಿಧಾನಗಳು ನಿಮ್ಮ ಹಣಕಾಸು ಸಂಸ್ಥೆಯ ಅಪ್ಲಿಕೇಶನ್, ಪಠ್ಯ ಸಂದೇಶ ಅಥವಾ ಇತರ ವಿಧಾನಗಳ ಮೂಲಕ ಪರಿಶೀಲಿಸುವ ಅಗತ್ಯವಿದೆ. ನೀವು ಪರಿಶೀಲಿಸಲು ಸಾಧ್ಯವಾಗದಿದ್ದರೆ ಸಹಾಯಕ್ಕಾಗಿ ನಿಮ್ಮ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಿ.