ನಿಮ್ಮ iPhone ಮತ್ತು iPad ನಲ್ಲಿ ಸಂಗ್ರಹಣೆಯನ್ನು ಪರಿಶೀಲಿಸುವುದು ಹೇಗೆ

iOS ಮತ್ತು iPadOS ಸಾಧನದ ಸಂಗ್ರಹಣೆಯನ್ನು ಮೇಲ್ವಿಚಾರಣೆ ಮಾಡುತ್ತವೆ, ಪ್ರತಿಯೊಂದು ಆ್ಯಪ್ ಎಷ್ಟು ಸ್ಥಳಾವಕಾಶವನ್ನು ಬಳಸುತ್ತದೆ ಎಂಬುದನ್ನು ತೋರಿಸುತ್ತದೆ. ನೀವು ಸೆಟ್ಟಿಂಗ್‌ಗಳು, Finder, Apple Devices ಆ್ಯಪ್ ಅಥವಾ iTunes ನಲ್ಲಿ ಸಂಗ್ರಹಣೆಯನ್ನು ಪರಿಶೀಲಿಸಬಹುದು.

iOS ಮತ್ತು iPadOS ಸಂಗ್ರಹಣೆಯನ್ನು ಆಪ್ಟಿಮೈಸ್ ಮಾಡಿ

ನಿಮ್ಮ ಸಾಧನದಲ್ಲಿ ಸಂಗ್ರಹಣೆ ಕಡಿಮೆ ಇದ್ದಾಗ, ನೀವು ಪುನಃ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಅಥವಾ ಬಳಸದೇ ಇರುವ ಆ್ಯಪ್‌ಗಳು ಮತ್ತು ತಾತ್ಕಾಲಿಕ ಫೈಲ್‌ಗಳಂತಹ ಅಗತ್ಯವಿಲ್ಲದ ಐಟಂಗಳನ್ನು ತೆಗೆದುಹಾಕುವ ಮೂಲಕ ಅದು ಸ್ಥಳಾವಕಾಶವನ್ನು ತೆರವುಗೊಳಿಸುತ್ತದೆ.

ಅದರ ಸಂಗ್ರಹಣೆಯನ್ನು ಪರಿಶೀಲಿಸಲು ನಿಮ್ಮ ಸಾಧನವನ್ನು ಬಳಸಿ

  1. ಸೆಟ್ಟಿಂಗ್‌ಗಳು > ಸಾಮಾನ್ಯ > [ಸಾಧನ] ಸಂಗ್ರಹಣೆ ಎಂಬಲ್ಲಿಗೆ ಹೋಗಿ, ಅಲ್ಲಿ ನಿಮಗೆ ಶಿಫಾರಸುಗಳು ಮತ್ತು ಆ್ಯಪ್‌ಗಳ ಪಟ್ಟಿಯ ಜೊತೆಗೆ ಅವುಗಳ ಸಂಗ್ರಹಣೆಯ ಬಳಕೆ ಕಾಣಿಸುತ್ತದೆ.

    iPhone ಸಂಗ್ರಹಣೆ ಸೆಟ್ಟಿಂಗ್‌ಗಳಲ್ಲಿ ಬಳಸದ ಆ್ಯಪ್‌ಗಳ ಶಿಫಾರಸನ್ನು ಆಫ್‌ಲೋಡ್ ಮಾಡಿ.
  2. ಆ್ಯಪ್‌ನ ಸಂಗ್ರಹಣೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅದರ ಹೆಸರನ್ನು ಟ್ಯಾಪ್ ಮಾಡಿ. ಕ್ಯಾಶ್ ಮಾಡಿದ ಡೇಟಾ ಮತ್ತು ತಾತ್ಕಾಲಿಕ ಡೇಟಾವನ್ನು ಬಳಕೆ ಎಂಬುದಾಗಿ ಪರಿಗಣಿಸಲಾಗುವುದಿಲ್ಲ.

ವಿವರವಾದ ವೀಕ್ಷಣೆಯಲ್ಲಿ ನೀವು ಈ ಕೆಳಗಿನವುಗಳನ್ನು ಮಾಡಬಹುದು:

  • ಆ್ಯಪ್ ಅನ್ನು ಆಫ್‌ಲೋಡ್ ಮಾಡುವುದು, ಹೀಗೆ ಮಾಡಿದಾಗ ಆ್ಯಪ್ ಬಳಸುವ ಸಂಗ್ರಹಣೆಯನ್ನು ತೆರವುಗೊಳಿಸಲಾಗುತ್ತದೆ, ಆದರೆ ಅದರ ಡಾಕ್ಯುಮೆಂಟ್‌ಗಳು ಮತ್ತು ಡೇಟಾವನ್ನು ಇರಿಸಿಕೊಳ್ಳಲಾಗುತ್ತದೆ.

  • ಆ್ಯಪ್ ಅನ್ನು ಅಳಿಸುವುದು, ಹೀಗೆ ಮಾಡಿದಾಗ ಆ್ಯಪ್ ಅನ್ನು ಹಾಗೂ ಅದಕ್ಕೆ ಸಂಬಂಧಿಸಿದ ಡೇಟಾವನ್ನು ತೆಗೆದುಹಾಕಲಾಗುತ್ತದೆ.

  • ಆ್ಯಪ್ ಅನ್ನು ಅವಲಂಬಿಸಿ, ನಿಮಗೆ ಅದರ ಕೆಲವು ಡಾಕ್ಯುಮೆಂಟ್‌ಗಳು ಮತ್ತು ಡೇಟಾವನ್ನು ಅಳಿಸಲು ಸಾಧ್ಯವಾಗುತ್ತದೆ.

ನಿಮ್ಮ ಸಾಧನದಲ್ಲಿ "ಸಂಗ್ರಹಣೆ ಬಹುತೇಕ ಭರ್ತಿಯಾಗಿದೆ" ಎಂಬ ಎಚ್ಚರಿಕೆ ಕಾಣಿಸಿದರೆ, ಸಂಗ್ರಹಣೆಯ ಶಿಫಾರಸುಗಳನ್ನು ಪರಿಶೀಲಿಸಿ ಅಥವಾ ವೀಡಿಯೊಗಳು ಮತ್ತು ಆ್ಯಪ್‌ಗಳಂತಹ ಕೆಲವು ಕಂಟೆಂಟ್ ತೆಗೆದುಹಾಕಿ.

ಕಂಟೆಂಟ್ ಅನ್ನು ವರ್ಗೀಕರಿಸಿ

ನಿಮ್ಮ ಸಾಧನದಲ್ಲಿರುವ ಕಂಟೆಂಟ್‌ನ ಪ್ರಕಾರಗಳ ಪಟ್ಟಿ ಹಾಗೂ ಪ್ರತಿಯೊಂದು ಪ್ರಕಾರವು ಏನನ್ನು ಒಳಗೊಂಡಿದೆ ಎಂಬುದು ಇಲ್ಲಿದೆ:

  • ಆ್ಯಪ್‌ಗಳು: ಇನ್‌ಸ್ಟಾಲ್ ಮಾಡಲಾದ ಆ್ಯಪ್‌ಗಳು ಮತ್ತು ಅವುಗಳ ಕಂಟೆಂಟ್ ಮತ್ತು Files ಆ್ಯಪ್‌ನಲ್ಲಿ "ನನ್ನ iPhone/iPad/iPod touch ನಲ್ಲಿ" ಎಂಬ ಡೈರೆಕ್ಟರಿಯಲ್ಲಿ ಸಂಗ್ರಹವಾಗಿರುವ ಕಂಟೆಂಟ್ ಮತ್ತು Safari ಡೌನ್‌ಲೋಡ್‌ಗಳು.

  • ಫೋಟೋಗಳು: Photos ಆ್ಯಪ್‌ನಲ್ಲಿ ಸಂಗ್ರಹಿಸಲಾದ ಫೋಟೋಗಳು ಮತ್ತು ವೀಡಿಯೊಗಳು.

  • ಮಾಧ್ಯಮ: ಸಂಗೀತ, ವೀಡಿಯೊಗಳು, ಪಾಡ್‌ಕಾಸ್ಟ್‌ಗಳು, ರಿಂಗ್‌ಟೋನ್‌ಗಳು, ಆರ್ಟ್‌ವರ್ಕ್ ಮತ್ತು ಧ್ವನಿ ಮೆಮೊಗಳು.

  • ಮೇಲ್: ಇಮೇಲ್‌ಗಳು ಮತ್ತು ಅವುಗಳ ಲಗತ್ತುಗಳು.

  • Apple Books: Books ಆ್ಯಪ್‌ನಲ್ಲಿರುವ ಪುಸ್ತಕಗಳು ಮತ್ತು PDF ಗಳು.

  • ಸಂದೇಶಗಳು: ಸಂದೇಶಗಳು ಮತ್ತು ಅವುಗಳ ಲಗತ್ತುಗಳು.

  • iCloud Drive: ನಿಮ್ಮ ಸಾಧನದಲ್ಲಿ ನೀವು ಡೌನ್‌ಲೋಡ್ ಮಾಡಿರುವ iCloud Drive ನ ಕಂಟೆಂಟ್.1

  • ಇತರೆ: Siri ಧ್ವನಿಗಳು, ಫಾಂಟ್‌ಗಳು, ಡಿಕ್ಷನರಿಗಳು, ಮುಂತಾದ ತೆಗೆದುಹಾಕಲಾಗದ ಮೊಬೈಲ್ ಅಸೆಟ್‌ಗಳು, ತೆಗೆದುಹಾಕಲಾಗದ ಲಾಗ್‌ಗಳು ಮತ್ತು ಕ್ಯಾಶ್‌ಗಳು, Spotlight ಇಂಡೆಕ್ಸ್ ಮತ್ತು ಸಿಸ್ಟಮ್ ಡೇಟಾ, ಉದಾಹರಣೆಗೆ Keychain ಮತ್ತು CloudKit Database.2

  • ಸಿಸ್ಟಮ್: ಆಪರೇಟಿಂಗ್ ಸಿಸ್ಟಮ್ ತೆಗೆದುಕೊಂಡ ಸ್ಥಳಾವಕಾಶ. ಇದು ನಿಮ್ಮ ಸಾಧನ ಮತ್ತು ಮಾಡಲ್ ಆಧಾರದ ಮೇಲೆ ಬದಲಾಗಬಹುದು.

ನಿಮ್ಮ ಸಂಗ್ರಹಣೆಯು ಭರ್ತಿಯಾಗಿದ್ದರೆ, ಸಂಗ್ರಹಣೆಯನ್ನು ಆಪ್ಟಿಮೈಸ್ ಮಾಡಲು ಶಿಫಾರಸುಗಳನ್ನು ಬಳಸಿ

ಸೆಟ್ಟಿಂಗ್‌ಗಳ ಸಂಗ್ರಹಣೆ ಎಂಬ ವಿಭಾಗದಲ್ಲಿ, ನಿಮ್ಮ ಸಾಧನವು ನಿಮ್ಮ ಸಂಗ್ರಹಣೆಯನ್ನು ಆಪ್ಟಿಮೈಸ್ ಮಾಡುವುದಕ್ಕಾಗಿ ಶಿಫಾರಸುಗಳನ್ನು ನೀಡಬಹುದು. ನಿಮ್ಮ ಸಂಗ್ರಹಣೆಯನ್ನು ಆಪ್ಟಿಮೈಸ್ ಮಾಡಲು:

  1. ನಿಮ್ಮ ಸಾಧನಕ್ಕಾಗಿ ಮಾಡಲಾದ ಶಿಫಾರಸುಗಳನ್ನು ನೋಡಲು ಎಲ್ಲವನ್ನೂ ತೋರಿಸಿ ಎಂಬುದನ್ನು ಟ್ಯಾಪ್ ಮಾಡಿ.

  2. ಪ್ರತಿಯೊಂದು ಶಿಫಾರಸಿನ ವಿವರಣೆಯನ್ನು ಓದಿ, ನಂತರ ಅದನ್ನು ಆನ್ ಮಾಡುವುದಕ್ಕಾಗಿ ಸಕ್ರಿಯಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ ಅಥವಾ ನೀವು ಅಳಿಸಬಹುದಾದ ಕಂಟೆಂಟ್ ಅನ್ನು ಪರಿಶೀಲಿಸುವುದಕ್ಕಾಗಿ ಶಿಫಾರಸನ್ನು ಟ್ಯಾಪ್ ಮಾಡಿ.

ನಿಮ್ಮ iOS ಸಾಧನದಲ್ಲಿನ ಸಂಗ್ರಹಣೆಯನ್ನು ಪರಿಶೀಲಿಸಲು Finder, Apple Devices ಆ್ಯಪ್ ಅಥವಾ iTunes ಬಳಸಿ

  1. ನಿಮ್ಮ Mac ನಲ್ಲಿ Finder ಗೆ ಬದಲಿಸಿ ಅಥವಾ ಈ ಲಿಂಕ್ ಅನ್ನು ತೆರೆಯಿರಿ Apple Devices ಆ್ಯಪ್. ನಿಮ್ಮ PC ಯಲ್ಲಿ Apple Devices ಆ್ಯಪ್ ಇಲ್ಲದಿದ್ದರೆ ಅಥವಾ ನಿಮ್ಮ Mac ನಲ್ಲಿ macOS Mojave ಅಥವಾ ಅದರ ಹಿಂದಿನ ಆವೃತ್ತಿಯನ್ನು ಬಳಸುತ್ತಿದ್ದರೆ, iTunes. ನಿಮ್ಮ Mac ನಲ್ಲಿ ಯಾವ macOS ಅನ್ನು ಬಳಸಲಾಗುತ್ತಿದೆ ಎಂದು ನೋಡಿ.

  2. ನಿಮ್ಮ ಸಾಧನವನ್ನು ನಿಮ್ಮ ಕಂಪ್ಯೂಟರ್‌ಗೆ ಕನೆಕ್ಟ್ ಮಾಡಿ.

  3. Finder ವಿಂಡೋದ ಸೈಡ್‌ಬಾರ್‌ನಲ್ಲಿ ಅಥವಾ Apple Devices ಆ್ಯಪ್‌ನಲ್ಲಿ ನಿಮ್ಮ ಸಾಧನವನ್ನು ಆಯ್ಕೆಮಾಡಿ. iTunes ಬಳಸುತ್ತಿದ್ದರೆ, iTunes ವಿಂಡೋದ ಮೇಲಿನ ಎಡ ಮೂಲೆಯಲ್ಲಿ ನಿಮ್ಮ ಸಾಧನವನ್ನು ಆಯ್ಕೆಮಾಡಿ. ನಿಮಗೆ ಒಂದು ಬಾರ್ ಕಾಣಿಸುತ್ತದೆ, ಅದರಲ್ಲಿ ನಿಮ್ಮ ಕಂಟೆಂಟ್ ಎಷ್ಟು ಸಂಗ್ರಹಣೆಯನ್ನು ಬಳಸುತ್ತದೆ ಎಂಬುದು ಕಾಣಿಸುತ್ತದೆ ಹಾಗೂ ಕಂಟೆಂಟ್ ಪ್ರಕಾರವಾಗಿ ಅದನ್ನು ವಿಂಗಡಣೆ ಮಾಡಲಾಗಿರುತ್ತದೆ.

  4. ಪ್ರತಿಯೊಂದು ಕಂಟೆಂಟ್ ಪ್ರಕಾರವು ಎಷ್ಟು ಸಂಗ್ರಹಣೆಯನ್ನು ಬಳಸುತ್ತಿದೆ ಎಂಬುದನ್ನು ನೋಡಲು ನಿಮ್ಮ ಮೌಸ್ ಅನ್ನು ಬಾರ್ ಮೇಲೆ ಮೂವ್ ಮಾಡಿ.

    Finder ನಲ್ಲಿ ಸಂಗ್ರಹಣೆಯ ವರ್ಗದ ಮೇಲೆ ಕರ್ಸರ್ ಹೋವರ್ ಮಾಡುತ್ತಿರುವುದು.

ಕಂಟೆಂಟ್ ಅನ್ನು ವರ್ಗೀಕರಿಸಿ

ನಿಮ್ಮ ಸಾಧನದಲ್ಲಿರುವ ಕಂಟೆಂಟ್‌ನ ಪ್ರಕಾರಗಳ ಪಟ್ಟಿ ಹಾಗೂ ಪ್ರತಿಯೊಂದು ಪ್ರಕಾರವು ಏನನ್ನು ಒಳಗೊಂಡಿದೆ ಎಂಬುದು ಇಲ್ಲಿದೆ:

  • ಆಡಿಯೋ: ಹಾಡುಗಳು, ಆಡಿಯೋ ಪಾಡ್‌ಕಾಸ್ಟ್‌ಗಳು, ಆಡಿಯೋಬುಕ್‌ಗಳು, ಧ್ವನಿ ಮೆಮೊಗಳು ಮತ್ತು ರಿಂಗ್‌ಟೋನ್‌ಗಳು.

  • ವೀಡಿಯೊ: ಚಲನಚಿತ್ರಗಳು, ಸಂಗೀತ ವೀಡಿಯೊಗಳು ಮತ್ತು TV ಕಾರ್ಯಕ್ರಮಗಳು.

  • ಫೋಟೋಗಳು: ನಿಮ್ಮ ಫೋಟೋ ಲೈಬ್ರರಿ, ಕ್ಯಾಮರಾ ರೋಲ್ ಮತ್ತು ಫೋಟೋ ಸ್ಟ್ರೀಮ್‌ನಲ್ಲಿನ ಕಂಟೆಂಟ್.

  • ಆ್ಯಪ್‌ಗಳು: ಇನ್‌ಸ್ಟಾಲ್ ಮಾಡಲಾದ ಆ್ಯಪ್‌ಗಳು. ಡಾಕ್ಯುಮೆಂಟ್‌ಗಳು ಮತ್ತು ಡೇಟಾವು ಆ್ಯಪ್‌ಗಳ ಕಂಟೆಂಟ್ ಅನ್ನು ಪಟ್ಟಿ ಮಾಡುತ್ತದೆ.

  • ಪುಸ್ತಕಗಳು: iBooks ಪುಸ್ತಕಗಳು, ಆಡಿಯೋ ಬುಕ್‌ಗಳು ಮತ್ತು PDF ಫೈಲ್‌ಗಳು.

  • ಡಾಕ್ಯುಮೆಂಟ್‌ಗಳು ಮತ್ತು ಡೇಟಾ: Safari ಆಫ್‌ಲೈನ್ ಓದುವಿಕೆ ಪಟ್ಟಿ, ಇನ್‌ಸ್ಟಾಲ್ ಮಾಡಲಾದ ಆ್ಯಪ್‌ಗಳಲ್ಲಿ ಸಂಗ್ರಹವಾಗಿರುವ ಫೈಲ್‌ಗಳು ಮತ್ತು ಸಂಪರ್ಕಗಳು, ಕ್ಯಾಲೆಂಡರ್‌ಗಳು, ಸಂದೇಶಗಳು ಮತ್ತು ಇಮೇಲ್‌ಗಳಂತಹ (ಮತ್ತು ಅವುಗಳ ಲಗತ್ತುಗಳು) ಆ್ಯಪ್ ಕಂಟೆಂಟ್.

  • ಇತರೆ: ಸೆಟ್ಟಿಂಗ್‌ಗಳು, Siri ಧ್ವನಿಗಳು, ಸಿಸ್ಟಮ್ ಡೇಟಾ ಮತ್ತು ಕ್ಯಾಶ್ ಮಾಡಿದ ಫೈಲ್‌ಗಳು.

  • ಸಿಂಕ್ ಮಾಡಿದ ಕಂಟೆಂಟ್: ನೀವು Finder ವಿಂಡೋದಲ್ಲಿ ಸಿಂಕ್ ಮಾಡಿ ಅನ್ನು ಕ್ಲಿಕ್ ಮಾಡಿದಾಗ ನಿಮ್ಮ ಕಂಪ್ಯೂಟರ್‌ನಿಂದ ನೀವು ಸಿಂಕ್ರೊನೈಸ್ ಮಾಡುವ ಮಾಧ್ಯಮ ಕಂಟೆಂಟ್.3

ಇತರೆ ಎಂಬುದರಲ್ಲಿ ಕ್ಯಾಶ್ ಮಾಡಿದ ಫೈಲ್‌ಗಳ ಕುರಿತು

Finder, Apple Devices ಆ್ಯಪ್ ಮತ್ತು iTunes, ಕ್ಯಾಶ್ ಮಾಡಿದ ಸಂಗೀತ, ವೀಡಿಯೊಗಳು ಮತ್ತು ಫೋಟೋಗಳನ್ನು "ಇತರೆ" ಸಂಗ್ರಹಣೆ ಎಂಬುದಾಗಿ ತೋರಿಸುತ್ತವೆ. ನೀವು ಕಂಟೆಂಟ್ ಅನ್ನು ಸ್ಟ್ರೀಮ್ ಮಾಡಿದಾಗ ಅಥವಾ ವೀಕ್ಷಿಸಿದಾಗ ಸಿಸ್ಟಮ್ ಈ ಫೈಲ್‌ಗಳನ್ನು ರಚಿಸುತ್ತದೆ, ಇದು ಮುಂದಿನ ಬಾರಿ ನೀವು ಕಂಟೆಂಟ್ ಆನಂದಿಸಲು ಬಯಸಿದಾಗ ವೇಗವಾಗಿ ಆ್ಯಕ್ಸೆಸ್ ಮಾಡಲು ಅನುವು ಮಾಡಿಕೊಡುತ್ತದೆ. ನಿಮ್ಮ ಸಾಧನಕ್ಕೆ ಹೆಚ್ಚಿನ ಸ್ಥಳಾವಕಾಶ ಬೇಕಾದಾಗ ನಿಮ್ಮ ಸಾಧನವು ಈ ಫೈಲ್‌ಗಳನ್ನು ತೆಗೆದುಹಾಕುತ್ತದೆ.

ನಿಮ್ಮ ಸಾಧನದಲ್ಲಿನ ಸಂಗ್ರಹಣೆಯು Finder, Apple Devices ಆ್ಯಪ್ ಅಥವಾ iTunes ನಲ್ಲಿ ನಿಮಗೆ ಕಾಣಿಸುವುದಕ್ಕಿಂತ ಭಿನ್ನವಾಗಿದ್ದರೆ

Finder, Apple Devices ಆ್ಯಪ್ ಹಾಗೂ iTunes, ಕ್ಯಾಶ್ ಮಾಡಿದ ಫೈಲ್‌ಗಳನ್ನು ಇತರೆ ಎಂಬುದಾಗಿ ವರ್ಗೀಕರಿಸುವ ಕಾರಣ, ಸಂಗೀತ ಅಥವಾ ವೀಡಿಯೊಗಳಿಗೆ ಸಂಬಂಧಿಸಿದ ಹಾಗೆ ವರದಿಯಾದ ಬಳಕೆಯ ಡೇಟಾ ಭಿನ್ನವಾಗಿರಬಹುದು. ನಿಮ್ಮ ಸಾಧನದಲ್ಲಿ ಬಳಕೆಯನ್ನು ವೀಕ್ಷಿಸಲು, ಸೆಟ್ಟಿಂಗ್‌ಗಳು > ಸಾಮಾನ್ಯ > [ಸಾಧನ] ಸಂಗ್ರಹಣೆ ಎಂಬಲ್ಲಿಗೆ ಹೋಗಿ.

ಕ್ಯಾಶ್ ಮಾಡಿದ ಫೈಲ್ ಗಳನ್ನು ನಿಮ್ಮ ಸಾಧನದಿಂದ ನೀವು ಅಳಿಸಲು ಬಯಸಿದರೆ

ಸ್ಥಳಾವಕಾಶವನ್ನು ತೆರವುಗೊಳಿಸಲು, ಕ್ಯಾಶ್ ಮಾಡಿದ ಮತ್ತು ತಾತ್ಕಾಲಿಕ ಫೈಲ್‌ಗಳನ್ನು ನಿಮ್ಮ ಸಾಧನವು ತೆಗೆದುಹಾಕುತ್ತದೆ, ಹಾಗಾಗಿ ಈ ಕೆಲಸವನ್ನು ನೀವು ಮಾಡಬೇಕಾಗಿಲ್ಲ.

1. ನಿಮಗೆ iCloud ಕಂಟೆಂಟ್ ಅನ್ನು ಸ್ವಯಂಚಾಲಿತವಾಗಿ ಅಳಿಸಲು ಸಾಧ್ಯವಾಗುವುದಿಲ್ಲ.

2. ಕ್ಯಾಶ್ ಮಾಡಿದ ಫೈಲ್‌ಗಳನ್ನು ಅಳಿಸಲು ಸಿಸ್ಟಮ್‌ಗೆ ಸಾಧ್ಯವಾಗುವುದಿಲ್ಲ.

3. ನಿಮ್ಮ iPhone ಬಳಸಿಕೊಂಡು ಸಿಂಕ್ ಮಾಡಲಾದ ಕಂಟೆಂಟ್‌ನಲ್ಲಿರುವ ಡೇಟಾವನ್ನು ತೆಗೆದುಹಾಕಲು ನಿಮಗೆ ಸಾಧ್ಯವಾಗುವುದಿಲ್ಲ. ಈ ಡೇಟಾವನ್ನು ತೆಗೆದುಹಾಕಲು, Finder ಗೆ ಬದಲಿಸಿ ಅಥವಾ Apple Devices ಆ್ಯಪ್ ಅಥವಾ iTunes ಅನ್ನು ತೆರೆಯಿರಿ, ಡೇಟಾ ಆಯ್ಕೆಯನ್ನು ರದ್ದುಮಾಡಿ ಮತ್ತು ಸಿಂಕ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಪ್ರಕಟಿತ ದಿನಾಂಕ: