ನಿಮ್ಮ iPhone ಅಥವಾ iPad ನಲ್ಲಿ ಇಮೇಲ್ ಸ್ವೀಕರಿಸಲು ನಿಮಗೆ ಸಾಧ್ಯವಾಗದಿದ್ದರೆ

ನಿಮ್ಮ iPhone ಅಥವಾ iPad ನಲ್ಲಿರುವ ಮೇಲ್ ಆ್ಯಪ್‌ನಲ್ಲಿ ನಿಮಗೆ ಇಮೇಲ್ ಸ್ವೀಕರಿಸಲು ಸಾಧ್ಯವಾಗದಿದ್ದರೆ, ನೀವು ಕೆಲವು ವಿಷಯಗಳನ್ನು ಪ್ರಯತ್ನಿಸಿ ನೋಡಬಹುದು.

ನೀವು ಪ್ರಾರಂಭಿಸುವ ಮುನ್ನ

ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಹಾಗೂ ಪರಿಶೀಲಿಸಬೇಕು:

  • ನೀವು iCloud ಅಥವಾ iTunes ನಲ್ಲಿ iOS ಅಥವಾ iPadOS ಬ್ಯಾಕಪ್ ಅನ್ನು ಮಾಡಿದಾಗ, ಅದು ನಿಮ್ಮ ಮೇಲ್ ಸೆಟ್ಟಿಂಗ್‌ಗಳನ್ನು ಬ್ಯಾಕಪ್ ಮಾಡುತ್ತದೆ, ಆದರೆ ನಿಮ್ಮ ಇಮೇಲ್ ಅನ್ನು ಬ್ಯಾಕಪ್ ಮಾಡುವುದಿಲ್ಲ. ನಿಮ್ಮ ಇಮೇಲ್ ಖಾತೆಯ ಸೆಟ್ಟಿಂಗ್‌ಗಳನ್ನು ನೀವು ಅಳಿಸಿದರೆ ಅಥವಾ ಬದಲಾಯಿಸಿದರೆ, ಈ ಹಿಂದೆ ಡೌನ್‌ಲೋಡ್ ಮಾಡಲಾದ ಇಮೇಲ್‌ಗಳನ್ನು ನಿಮ್ಮ ಸಾಧನದಿಂದ ತೆಗೆದುಹಾಕಬಹುದು.

  • ನಿಮ್ಮ ಸಾಧನವು ಇಂಟರ್ನೆಟ್‌ಗೆ ಕನೆಕ್ಟ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

  • ಸೇವೆಯಲ್ಲಿ ಅಡಚಣೆ ಏನಾದರೂ ಇದೆಯೇ ಎಂಬುದನ್ನು ತಿಳಿದುಕೊಳ್ಳಲು ನಿಮ್ಮ ಇಮೇಲ್ ಸೇವಾ ಪೂರೈಕೆದಾರರ ಬಳಿ ವಿಚಾರಿಸಿ.

  • ನಿಮ್ಮ ಇಮೇಲ್ ಅನ್ನು ಆ್ಯಕ್ಸೆಸ್ ಮಾಡಲು ಅಥವಾ ನಿಮ್ಮ @icloud.com ಇಮೇಲ್ ವಿಳಾಸದ ಮೂಲಕ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ನಿಮಗೆ ಸಾಧ್ಯವಾಗದಿದ್ದರೆ, ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ನಿಮ್ಮ ಇಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ಅನ್ನು ಪರಿಶೀಲಿಸಿ

ಮೇಲ್ ಆ್ಯಪ್‌ಗಳು ನಿಮ್ಮ ಇಮೇಲ್ ಖಾತೆಯ ಪಾಸ್‌ವರ್ಡ್ ನಮೂದಿಸಲು ಹೇಳಿದರೆ, ನಿಮ್ಮ ಪಾಸ್‌ವರ್ಡ್ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಇಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ಅನ್ನು ಪರಿಶೀಲಿಸಲು, ನಿಮ್ಮ ಇಮೇಲ್ ಪೂರೈಕೆದಾರರ ವೆಬ್‌ಸೈಟ್‌ಗೆ ಸೈನ್ ಇನ್ ಮಾಡಿ.

ನಿಮಗೆ ಆಗಲೂ ಬಳಕೆದಾರರ ಹೆಸರು ಅಥವಾ ಪಾಸ್‌ವರ್ಡ್‌ಗೆ ಸಂಬಂಧಿಸಿದ ಹಾಗೆ ದೋಷ ಎದುರಾದರೆ, ಇಮೇಲ್ ಪೂರೈಕೆದಾರರು ಅಥವಾ ಸಿಸ್ಟಮ್ ನಿರ್ವಾಹಕರನ್ನು ಸಂಪರ್ಕಿಸಿ.

ಮೇಲ್ ಫೆಚ್ ಮತ್ತು ನೋಟಿಫಿಕೇಶನ್ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ

ಡೀಫಾಲ್ಟ್ ಆಗಿ, ಹೊಸ ಡೇಟಾ ಫೆಚ್ ಮಾಡಿ ಎಂಬ ಸೆಟ್ಟಿಂಗ್‌ಗಳು ನಿಮ್ಮ ಇಮೇಲ್ ಸೇವಾ ಪೂರೈಕೆದಾರರು ಒದಗಿಸಿರುವ ಮಾಹಿತಿಯನ್ನು ಆಧರಿಸಿರುತ್ತವೆ. Push ಎಂಬುದು ಸೆಟ್ಟಿಂಗ್ ಆಗಿ ಲಭ್ಯವಿಲ್ಲದಿದ್ದರೆ, ನಿಮ್ಮ ಖಾತೆಯು ಡೀಫಾಲ್ಟ್ ಆಗಿ ಫೆಚ್ ಎಂಬುದಕ್ಕೆ ಸೆಟ್ ಆಗುತ್ತದೆ. ಈ ಸೆಟ್ಟಿಂಗ್‌ಗಳು ನಿಮ್ಮ ಸಾಧನವು ಇಮೇಲ್ ಅನ್ನು ಸ್ವೀಕರಿಸುವ ವಿಧಾನದ ಮೇಲೆ ಪರಿಣಾಮ ಬೀರುತ್ತವೆ. ಈ ಸೆಟ್ಟಿಂಗ್‌ಗಳನ್ನು ಅಡ್ಜಸ್ಟ್ ಮಾಡಲು:

  1. ಸೆಟ್ಟಿಂಗ್‌ಗಳು > ಆ್ಯಪ್‌ಗಳು > ಮೇಲ್ ಎಂಬಲ್ಲಿಗೆ ಹೋಗಿ, ನಂತರ ಮೇಲ್ ಖಾತೆಗಳು ಎಂಬುದನ್ನು ಟ್ಯಾಪ್ ಮಾಡಿ.

  2. ಹೊಸ ಡೇಟಾ ಫೆಚ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಒಂದು ಸೆಟ್ಟಿಂಗ್‌ ಅನ್ನು ಆರಿಸಿ — ಉದಾಹರಣೆಗೆ ಸ್ವಯಂಚಾಲಿತವಾಗಿ ಅಥವಾ ಮ್ಯಾನುಯಲ್ ಆಗಿ — ಅಥವಾ ಮೇಲ್ ಆ್ಯಪ್‌ ಎಷ್ಟು ಬಾರಿ ಡೇಟಾ ಫೆಚ್ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದ ವೇಳಾಪಟ್ಟಿಯನ್ನು ಆರಿಸಿ.

iOS 11 ಮತ್ತು ನಂತರದ ಆವೃತ್ತಿಗಳು ಹಾಗೂ iPadOS ನಲ್ಲಿ, ಸ್ವಯಂಚಾಲಿತವಾಗಿ ಎಂಬುದನ್ನು ಡೀಫಾಲ್ಟ್ ಆಗಿ ಸೆಟ್ ಮಾಡಲಾಗಿರುತ್ತದೆ. ನಿಮ್ಮ ಸಾಧನವು ಚಾರ್ಜ್ ಆಗುತ್ತಿರುವಾಗ ಮತ್ತು ವೈ-ಫೈಗೆ ಕನೆಕ್ಟ್ ಆಗಿದ್ದಾಗ ಮಾತ್ರ ಹಿನ್ನೆಲೆಯಲ್ಲಿ ಹೊಸ ಡೇಟಾ ಫೆಚ್ ಮಾಡುತ್ತದೆ.

ನಿಮ್ಮ ನೋಟಿಫಿಕೇಶನ್ ಸೆಟ್ಟಿಂಗ್‌ಗಳು ಮೇಲ್ ಆ್ಯಪ್‌ಗೆ ಸರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ:

  1. ಸೆಟ್ಟಿಂಗ್‌ಗಳು ಎಂಬಲ್ಲಿಗೆ ಹೋಗಿ, ನಂತರ ನೋಟಿಫಿಕೇಶನ್‌ಗಳು ಎಂಬುದನ್ನು ಟ್ಯಾಪ್ ಮಾಡಿ.

  2. ಮೇಲ್ ಎಂಬುದನ್ನು ಟ್ಯಾಪ್ ಮಾಡಿ.

  3. ನಿಮ್ಮ ಎಚ್ಚರಿಕೆಗಳು, ಸೌಂಡ್‌ಗಳು ಮತ್ತು ಬ್ಯಾಡ್ಜ್‌ಗಳನ್ನು ಅಡ್ಜಸ್ಟ್ ಮಾಡಿ.

ನಿಮ್ಮ ಇಮೇಲ್ ಪೂರೈಕೆದಾರರು ಅಥವಾ ಸಿಸ್ಟಮ್ ನಿರ್ವಾಹಕರನ್ನು ಸಂಪರ್ಕಿಸಿ

  1. ಸೇವೆಯಲ್ಲಿ ಅಡಚಣೆ ಉಂಟಾಗಿದೆಯೇ ಎಂದು ನೋಡಲು ನಿಮ್ಮ ಇಮೇಲ್ ಪೂರೈಕೆದಾರರನ್ನು ಸಂಪರ್ಕಿಸಿ ಅಥವಾ ಸ್ಥಿತಿಯ ಕುರಿತಾದ ಮಾಹಿತಿ ಒದಗಿಸುವ ಅವರ ವೆಬ್‌ಪುಟವನ್ನು ಪರಿಶೀಲಿಸಿ.

  2. ನಿಮ್ಮ ಇಮೇಲ್ ಖಾತೆಯಲ್ಲಿ ಎರಡು-ಹಂತದ ದೃಢೀಕರಣದಂತಹ ಯಾವುದೇ ಭದ್ರತಾ ಫೀಚರ್‌ಗಳು ಅಥವಾ ನಿರ್ಬಂಧಗಳನ್ನು ನೀವು ಆನ್ ಮಾಡಿದ್ದೀರಾ ಎಂಬುದನ್ನು ತಿಳಿದುಕೊಳ್ಳಲು ನಿಮ್ಮ ಇಮೇಲ್ ಪೂರೈಕೆದಾರರು ಅಥವಾ ಸಿಸ್ಟಮ್ ನಿರ್ವಾಹಕರನ್ನು ಕೇಳಿ. ನಿಮ್ಮ ಸಾಧನದಲ್ಲಿ ಇಮೇಲ್ ಕಳುಹಿಸುವುದಕ್ಕಾಗಿ ಮತ್ತು ಸ್ವೀಕರಿಸುವುದಕ್ಕಾಗಿ ನಿಮಗೆ ವಿಶೇಷ ಪಾಸ್‌ವರ್ಡ್ ಬೇಕಾಗಬಹುದು ಅಥವಾ ದೃಢೀಕರಣ ನೀಡಿ ಎಂದು ನೀವು ನಿಮ್ಮ ಇಮೇಲ್ ಪೂರೈಕೆದಾರರ ಬಳಿ ವಿನಂತಿಸಬೇಕಾಗಬಹುದು.

  3. ನಿಮ್ಮ ಇಮೇಲ್ ಖಾತೆ ಸೆಟ್ಟಿಂಗ್‌ಗಳು ಸರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಇಮೇಲ್ ಪೂರೈಕೆದಾರರು ಅಥವಾ ಸಿಸ್ಟಮ್ ನಿರ್ವಾಹಕರ ಬಳಿ ವಿಚಾರಿಸಿ.

ನಿಮ್ಮ ಇಮೇಲ್ ಖಾತೆಯನ್ನು ತೆಗೆದುಹಾಕಿ ಮತ್ತು ಅದನ್ನು ಪುನಃ ಸೆಟಪ್ ಮಾಡಿ

  1. ನಿಮ್ಮ ಕಂಪ್ಯೂಟರ್‌ನಲ್ಲಿ, ನಿಮ್ಮ ಇಮೇಲ್ ಪೂರೈಕೆದಾರರ ವೆಬ್‌ಸೈಟ್‌ಗೆ ಸೈನ್ ಇನ್ ಮಾಡಿ. ನಿಮ್ಮ ಎಲ್ಲಾ ಇಮೇಲ್‌ಗಳು ಇವೆ ಅಥವಾ ನಿಮ್ಮ ಇಮೇಲ್ ಅನ್ನು ನಿಮ್ಮ ಸಾಧನವನ್ನು ಹೊರತುಪಡಿಸಿ ಬೇರೆಡೆ ಸೇವ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

  2. ನಿಮ್ಮ ಸಾಧನದಲ್ಲಿ, ಸೆಟ್ಟಿಂಗ್‌ಗಳು > ಆ್ಯಪ್‌ಗಳು > ಮೇಲ್ ಎಂಬಲ್ಲಿಗೆ ಹೋಗಿ, ನಂತರ ಮೇಲ್ ಖಾತೆಗಳು ಎಂಬುದನ್ನು ಟ್ಯಾಪ್ ಮಾಡಿ.

  3. ನೀವು ತೆಗೆದುಹಾಕಲು ಬಯಸುವ ಇಮೇಲ್ ಖಾತೆಯನ್ನು ಟ್ಯಾಪ್ ಮಾಡಿ.

  4. ಖಾತೆಯನ್ನು ಅಳಿಸಿ ಎಂಬುದನ್ನು ಟ್ಯಾಪ್ ಮಾಡಿ.

  5. ನಿಮ್ಮ ಖಾತೆಯನ್ನು ಪುನಃ ಸೇರಿಸಿ.

ಈ ಹಂತಗಳು ಕೆಲಸ ಮಾಡದಿದ್ದರೆ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಇಮೇಲ್ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ.

ಹೆಚ್ಚಿನ ಸಹಾಯ ಬೇಕೇ?

ಏನಾಗುತ್ತಿದೆ ಎಂಬುದರ ಕುರಿತು ನಮಗೆ ಇನ್ನಷ್ಟು ತಿಳಿಸಿ, ಮುಂದೆ ನೀವು ಏನು ಮಾಡಬಹುದು ಎಂಬುದನ್ನು ನಾವು ಸೂಚಿಸುತ್ತೇವೆ.

ಸಲಹೆಗಳನ್ನು ಪಡೆಯಿರಿ

ಪ್ರಕಟಿತ ದಿನಾಂಕ: