ನಿಮ್ಮ iPhone ಅಥವಾ iPad ಗೆ ಇಮೇಲ್ ಖಾತೆಯನ್ನು ಸೇರಿಸಿ
ನಿಮ್ಮ iOS ಸಾಧನದಲ್ಲಿನ ಮೇಲ್ ಆ್ಯಪ್‌ನಲ್ಲಿ ಸ್ವಯಂಚಾಲಿತವಾಗಿ ಅಥವಾ ಮ್ಯಾನುಯಲ್ ಆಗಿ ಇಮೇಲ್ ಖಾತೆಯನ್ನು ಸೆಟಪ್ ಮಾಡಿ.
ನೀವು ಸಾಮಾನ್ಯ ಇಮೇಲ್ ಪೂರೈಕೆದಾರರನ್ನು ಬಳಸಿದರೆ ಸ್ವಯಂಚಾಲಿತವಾಗಿ ಸೆಟಪ್ ಮಾಡಿ
ನೀವು iCloud, Google, Microsoft Exchange, ಅಥವಾ Yahoo ನಂತಹ ಇಮೇಲ್ ಪೂರೈಕೆದಾರರನ್ನು ಬಳಸಿದರೆ, ನಿಮ್ಮ ಇಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ಮೂಲಕ ನಿಮ್ಮ ಇಮೇಲ್ ಖಾತೆಯನ್ನು ಮೇಲ್ ಸ್ವಯಂಚಾಲಿತವಾಗಿ ಸೆಟಪ್ ಮಾಡಬಲ್ಲದು. ಹೇಗೆ ಎಂಬುದು ಇಲ್ಲಿದೆ:
ಸೆಟ್ಟಿಂಗ್‌ಗಳು > ಆ್ಯಪ್‌ಗಳು > ಮೇಲ್ ಎಂಬಲ್ಲಿಗೆ ಹೋಗಿ, ನಂತರ ಮೇಲ್ ಖಾತೆಗಳು ಎಂಬುದನ್ನು ಟ್ಯಾಪ್ ಮಾಡಿ.
ಖಾತೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ. ಅಗತ್ಯವಿದ್ದರೆ ಪಟ್ಟಿಯಿಂದ ನಿಮ್ಮ ಇಮೇಲ್ ಪೂರೈಕೆದಾರರನ್ನು ಆರಿಸಿ.
ಪ್ರಾಂಪ್ಟ್‌ಗಳನ್ನು ಅನುಸರಿಸಿ ಮತ್ತು ನಿಮ್ಮ ಇಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
ನಿಮಗೆ ಮುಂದಿನದು ಎಂಬುದು ಕಾಣಿಸಿದರೆ, ಮುಂದಿನದು ಎಂಬುದನ್ನು ಟ್ಯಾಪ್ ಮಾಡಿ ಹಾಗೂ ಮೇಲ್ ನಿಮ್ಮ ಖಾತೆಯ ಪರಿಶೀಲನೆ ನಡೆಸುವುದಕ್ಕಾಗಿ ನಿರೀಕ್ಷಿಸಿ.
ನಿಮಗೆ ಸೇವ್ ಮಾಡಿ ಎಂಬುದು ಕಾಣಿಸಿದರೆ, ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಪಟ್ಟಿ ಮಾಡಲಾದ ಯಾವ ಇಮೇಲ್ ಪೂರೈಕೆದಾರರು ನಿಮ್ಮ ಇಮೇಲ್ ಖಾತೆಗೆ ಹೊಂದಾಣಿಕೆಯಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳಿ
ಸಾಮಾನ್ಯವಾಗಿ ಬಳಕೆಯಾಗದ ಇಮೇಲ್ ಪೂರೈಕೆದಾರರನ್ನು ಬಳಸುತ್ತಿದ್ದರೆ ಮ್ಯಾನುಯಲ್ ಆಗಿ ಸೆಟಪ್ ಮಾಡಿ
ನಿಮ್ಮ ಇಮೇಲ್ ಖಾತೆಯನ್ನು ನೀವು ಮ್ಯಾನುಯಲ್ ಆಗಿ ಸೆಟಪ್ ಮಾಡಬೇಕಾದರೆ, ನಿಮ್ಮ ಖಾತೆಯ ಇಮೇಲ್ ಸೆಟ್ಟಿಂಗ್‌ಗಳು ನಿಮಗೆ ತಿಳಿದಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮಗೆ ಅವುಗಳು ತಿಳಿದಿಲ್ಲದಿದ್ದರೆ, ನೀವು ಅವುಗಳನ್ನು ಹುಡುಕಬಹುದು ಅಥವಾ ನಿಮ್ಮ ಇಮೇಲ್ ಪೂರೈಕೆದಾರರನ್ನು ಸಂಪರ್ಕಿಸಬಹುದು. ನಂತರ ಈ ಹಂತಗಳನ್ನು ಅನುಸರಿಸಿ:
ಸೆಟ್ಟಿಂಗ್‌ಗಳು > ಆ್ಯಪ್‌ಗಳು > ಮೇಲ್ ಎಂಬಲ್ಲಿಗೆ ಹೋಗಿ, ನಂತರ ಮೇಲ್ ಖಾತೆಗಳು ಎಂಬುದನ್ನು ಟ್ಯಾಪ್ ಮಾಡಿ.
ಖಾತೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.
ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ, ನಂತರ ಮುಂದಿನದು ಎಂಬುದನ್ನು ಟ್ಯಾಪ್ ಮಾಡಿ.
ಇತರೆ ಖಾತೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಮೇಲ್ ಖಾತೆ ಎಂಬುದನ್ನು ಟ್ಯಾಪ್ ಮಾಡಿ.
ನಿಮ್ಮ ಹೆಸರು , ಇಮೇಲ್ ವಿಳಾಸ, ಪಾಸ್‌ವರ್ಡ್ ಮತ್ತು ನಿಮ್ಮ ಖಾತೆಯ ವಿವರಣೆಯನ್ನು ನಮೂದಿಸಿ.
ಮುಂದಿನದು ಎಂಬುದನ್ನು ಟ್ಯಾಪ್ ಮಾಡಿ. ಮೇಲ್, ಇಮೇಲ್ ಸೆಟ್ಟಿಂಗ್‌ಗಳನ್ನು ಹುಡುಕಲು ಮತ್ತು ನಿಮ್ಮ ಖಾತೆಯ ಸೆಟಪ್ ಅನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತದೆ. ಮೇಲ್‌ಗೆ ನಿಮ್ಮ ಇಮೇಲ್ ಸೆಟ್ಟಿಂಗ್‌ಗಳು ಕಂಡುಬಂದರೆ, ನಿಮ್ಮ ಖಾತೆಯ ಸೆಟಪ್ ಅನ್ನು ಪೂರ್ಣಗೊಳಿಸಲು ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.
ಮೇಲ್‌ಗೆ ನಿಮ್ಮ ಖಾತೆಯ ಸೆಟ್ಟಿಂಗ್‌ಗಳನ್ನು ಸ್ವಯಂಚಾಲಿತವಾಗಿ ಹುಡುಕಲು ಸಾಧ್ಯವಾಗದಿದ್ದರೆ
ಮೇಲ್‌ಗೆ ನಿಮ್ಮ ಇಮೇಲ್ ಸೆಟ್ಟಿಂಗ್‌ಗಳನ್ನು ಹುಡುಕಲು ಸಾಧ್ಯವಾಗದಿದ್ದರೆ, ಆಗ ನೀವು ಅವುಗಳನ್ನು ಮ್ಯಾನುಯಲ್ ಆಗಿ ನಮೂದಿಸಬೇಕಾಗುತ್ತದೆ. ಮುಂದಿನದು ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಹಂತಗಳನ್ನು ಅನುಸರಿಸಿ:
ನಿಮ್ಮ ಹೊಸ ಖಾತೆಗಾಗಿ IMAP ಅಥವಾ POP ಆಯ್ಕೆಮಾಡಿ. ಯಾವುದನ್ನು ಆರಿಸಬೇಕು ಎಂಬುದರ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಇಮೇಲ್ ಪೂರೈಕೆದಾರರನ್ನು ಸಂಪರ್ಕಿಸಿ.
ಇನ್‌ಕಮಿಂಗ್ ಮೇಲ್ ಸರ್ವರ್ ಮತ್ತು ಔಟ್‌ಗೋಯಿಂಗ್ ಮೇಲ್ ಸರ್ವರ್ ಮಾಹಿತಿಯನ್ನು ನಮೂದಿಸಿ. ನಂತರ ಮುಂದಿನದು ಎಂಬುದನ್ನು ಟ್ಯಾಪ್ ಮಾಡಿ. ನಿಮ್ಮ ಬಳಿ ಈ ಮಾಹಿತಿ ಇಲ್ಲದಿದ್ದರೆ, ನಿಮ್ಮ ಇಮೇಲ್ ಪೂರೈಕೆದಾರರನ್ನು ಸಂಪರ್ಕಿಸಿ.
ನಿಮ್ಮ ಇಮೇಲ್ ಸೆಟ್ಟಿಂಗ್‌ಗಳು ಸರಿಯಾಗಿದ್ದರೆ, ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕಾಗಿ ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ. ಇಮೇಲ್ ಸೆಟ್ಟಿಂಗ್‌ಗಳು ತಪ್ಪಾಗಿದ್ದರೆ, ಅವುಗಳನ್ನು ಎಡಿಟ್ ಮಾಡಿ ಎಂದು ನಿಮಗೆ ತಿಳಿಸಲಾಗುತ್ತದೆ.
ನಿಮ್ಮ ಇಮೇಲ್ ಖಾತೆಯನ್ನು ಸೆಟಪ್ ಮಾಡಲು ಅಥವಾ ನಿಮ್ಮ ಇಮೇಲ್ ಸೆಟ್ಟಿಂಗ್‌ಗಳನ್ನು ಸೇವ್ ಮಾಡಲು ನಿಮಗೆ ಆಗಲೂ ಸಾಧ್ಯವಾಗದಿದ್ದರೆ, ನಿಮ್ಮ ಇಮೇಲ್ ಪೂರೈಕೆದಾರರನ್ನು ಸಂಪರ್ಕಿಸಿ.