ನಿಮ್ಮ iPhone ಅಥವಾ iPad ನಲ್ಲಿ ನಿಮಗೆ ಇಮೇಲ್‌ ಕಳುಹಿಸಲು ಆಗದೇ ಇದ್ದರೆ

ನಿಮ್ಮ iPhone ಅಥವಾ iPad ನಲ್ಲಿ Mail ಆ್ಯಪ್‌ನಿಂದ ಇಮೇಲ್‌ ಕಳುಹಿಸಲು ನಿಮಗೆ ಸಾಧ್ಯವಾಗದೇ ಇದ್ದರೆ, ಒಂದಿಷ್ಟು ವಿಧಾನಗಳಿದ್ದು, ನೀವು ಅವುಗಳನ್ನು ಪ್ರಯತ್ನಿಸಬಹುದು.

ನೀವು ಪ್ರಾರಂಭಿಸುವ ಮುನ್ನ

ಕೆಲವು ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ ಹಾಗೂ ಇದನ್ನು ಪರಿಶೀಲಿಸಿ:

ಕಳುಹಿಸದೇ ಇರುವ ಇಮೇಲ್‌ಗಾಗಿ ಔಟ್‌ಬಾಕ್ಸ್‌ ಅನ್ನು ಪರಿಶೀಲಿಸಿ

ನಿಮ್ಮ ಇಮೇಲ್‌ ಅನ್ನು ಕಳುಹಿಸಲಾಗಿಲ್ಲ ಎಂಬ ಸಂದೇಶ ನಿಮಗೆ ಬಂದರೆ, ಬಳಿಕ ನಿಮ್ಮ ಇಮೇಲ್‌ ಔಟ್‌ಬಾಕ್ಸ್‌ಗೆ ಹೋಗುತ್ತದೆ. ಈ ಹಂತಗಳ ಮೂಲಕ ನಿಮ್ಮ ಔಟ್‌ಬಾಕ್ಸ್ ಅನ್ನು ಪರಿಶೀಲಿಸಿ, ಇಮೇಲ್‌ ಅನ್ನು ಮತ್ತೊಮ್ಮೆ ಕಳುಹಿಸಲು ಪ್ರಯತ್ನಿಸಿ:

  1. Mail ನಲ್ಲಿ, ನಿಮ್ಮ ಮೇಲ್‌ಬಾಕ್ಸ್‌ಗಳ ಪಟ್ಟಿಗೆ ಹೋಗಿ.

  2. ಔಟ್‌ಬಾಕ್ಸ್‌ ಟ್ಯಾಪ್‌ ಮಾಡಿ. ಔಟ್‌ಬಾಕ್ಸ್‌ ಕಾಣಿಸದೇ ಇದ್ದರೆ, ನಿಮ್ಮ ಇಮೇಲ್‌ ಅನ್ನು ಕಳುಹಿಸಲಾಗಿದೆ ಎಂದರ್ಥ.

    iOS ನಲ್ಲಿನ ಮೇಲ್‌ಬಾಕ್ಸ್‌ಗಳ ಪುಟದಲ್ಲಿ, ಕಳುಹಿಸದೇ ಇರುವ ಇಮೇಲ್‌ ಸಂದೇಶಗಳಿಗಾಗಿ ಔಟ್‌ಬಾಕ್ಸ್‌ ಅನ್ನು ಪರಿಶೀಲಿಸಬಹುದು.
  3. ಔಟ್‌ಬಾಕ್ಸ್‌ನಲ್ಲಿರುವ ಇಮೇಲ್‌ ಅನ್ನು ಟ್ಯಾಪ್‌ ಮಾಡಿ. ಸ್ವೀಕೃತಿದಾರರ ಇಮೇಲ್‌ ವಿಳಾಸ ಸರಿಯಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

  4. ಕಳುಹಿಸಿ ಟ್ಯಾಪ್‌ ಮಾಡಿ.

ನಿಮ್ಮ ಇಮೇಲ್‌ ವಿಳಾಸ ಹಾಗೂ ಪಾಸ್‌ವರ್ಡ್‌ ಅನ್ನು ಪರಿಶೀಲಿಸಿ

ನಿಮ್ಮ ಇಮೇಲ್‌ ಖಾತೆಗೆ ಪಾಸ್‌ವರ್ಡ್‌ ನಮೂದಿಸುವಂತೆ Mail ನಿಮ್ಮನ್ನು ವಿನಂತಿಸಿದರೆ, ನಿಮ್ಮ ಪಾಸ್‌ವರ್ಡ್‌ ಸರಿಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಇಮೇಲ್‌ ವಿಳಾಸ ಮತ್ತು ಪಾಸ್‌ವರ್ಡ್‌ ಅನ್ನು ಪರಿಶೀಲಿಸಲು, ನಿಮ್ಮ ಇಮೇಲ್‌ ಪೂರೈಕೆದಾರರ ವೆಬ್‌ಸೈಟ್‌ಗೆ ಸೈನ್‌ ಇನ್‌ ಮಾಡಿ.

ಬಳಕೆದಾರ ಹೆಸರು ಅಥವಾ ಪಾಸ್‌ವರ್ಡ್‌ ದೋಷವನ್ನು ನೀವು ಈಗಲೂ ಎದುರಿಸುತ್ತಿದ್ದರೆ, ನಿಮ್ಮ ಇಮೇಲ್‌ ಪೂರೈಕೆದಾರ ಅಥವಾ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ.

ನಿಮ್ಮ ಇಮೇಲ್‌ ಪೂರೈಕೆದಾರ ಅಥವಾ ಸಿಸ್ಟಂ ನಿರ್ವಾಕರನ್ನು ಸಂಪರ್ಕಿಸಿ

  1. ನಿಮ್ಮ ಇಮೇಲ್‌ ಪೂರೈಕೆದಾರನ್ನು ಸಂಪರ್ಕಿಸಿ ಅಥವಾ ಅವರ ಸೇವೆಯೇನಾದರೂ ಸ್ಥಗತಿಗೊಂಡಿದೆಯೇ ಎಂಬುದನ್ನು ನೋಡಲು ಅವರ ಸ್ಟೇಟಸ್‌ ವೆಬ್‌ಪುಟವನ್ನು ಪರಿಶೀಲಿಸಿ.

  2. ನಿಮ್ಮ ಇಮೇಲ್‌ ಖಾತೆಗಾಗಿ ನೀವೇನಾದರೂ ಎರಡು-ಹಂತದ ಪರಿಶೀಲನೆ ರೀತಿಯ ಭದ್ರತೆ ಫೀಚರ್‌ಗಳು ಅಥವಾ ನಿರ್ಬಂಧಗಳನ್ನು ಆನ್‌ ಮಾಡಿದ್ದೀರಾ ಎಂದು ನಿಮ್ಮ ಇಮೇಲ್‌ ಪೂರೈಕೆದಾರರು ಅಥವಾ ಸಿಸ್ಟಂ ನಿರ್ವಾಹಕರನ್ನು ಕೇಳಿ. ನಿಮ್ಮ ಡಿವೈಸ್‌ನಲ್ಲಿ ಮೇಲ್‌ ಕಳುಹಿಸಲು ಮತ್ತು ಸ್ವೀಕರಿಸಲು ನಿಮಗೆ ವಿಶೇಷ ಪಾಸ್‌ವರ್ಡ್‌ ಅಗತ್ಯವಿರಬಹುದು ಅಥವಾ ನಿಮ್ಮ ಇಮೇಲ್‌ ಪೂರೈಕೆದಾರರಿಂದ ದೃಢೀಕರಣ ವಿನಂತಿಯ ಅಗತ್ಯವಿರಬಹುದು.

  3. ನಿಮ್ಮ ಇಮೇಲ್‌ ಪೂರೈಕೆದಾರರ ಅಥವಾ ಸಿಸ್ಟಂ ನಿರ್ವಾಹಕರ ಜೊತೆ ನಿಮ್ಮ ಇಮೇಲ್‌ ಖಾತೆ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ ಮತ್ತು ಆ ಮೂಲಕ ಅವೆಲ್ಲವೂ ಸರಿಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಿ.

ನಿಮ್ಮ ಇಮೇಲ್‌ ಖಾತೆಯನ್ನು ತೆಗೆದುಹಾಕಿ ಹಾಗೂ ಅದನ್ನು ಮತ್ತೊಮ್ಮೆ ಸಟ್‌ ಮಾಡಿ

  1. ನಿಮ್ಮ ಕಂಪ್ಯೂಟರ್‌ನಲ್ಲಿ, ನಿಮ್ಮ ಇಮೇಲ್‌ ಪೂರೈಕೆದಾರರ ವೆಬ್‌ಸೈಟ್‌ಗೆ ಸೈನ್‌ ಇನ್‌ ಮಾಡಿ. ನಿಮ್ಮೆಲ್ಲಾ ಇಮೇಲ್‌ ಅಲ್ಲಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಅಥವಾ ನಿಮ್ಮ ಇಮೇಲ್‌ ಅನ್ನು iOS ಅಥವಾ iPadOS ಡಿವೈಸ್‌ ಹೊರತುಪಡಿಸಿ ಬೇರೆಲ್ಲಾದರೂ ಉಳಿಸಿರುವುದನ್ನು ಖಾತ್ರಿಪಡಿಸಿಕೊಳ್ಳಿ.

  2. ನಿಮ್ಮ ಡಿವೈಸ್‌ನಲ್ಲಿ, ಸೆಟ್ಟಿಂಗ್‌ಗಳು > ಆ್ಯಪ್‌ಗಳು > Mail ಗೆ ಹೋಗಿ, Mail ಖಾತೆಗಳು ಅನ್ನು ಟ್ಯಾಪ್‌ ಮಾಡಿ.

  3. ನೀವು ತೆಗೆದುಹಾಕಲು ಇಷ್ಟಪಡುವ ಇಮೇಲ್ ಖಾತೆಯನ್ನು ಟ್ಯಾಪ್‌ ಮಾಡಿ.

  4. ಖಾತೆ ಅಳಿಸಿ ಟ್ಯಾಪ್‌ ಮಾಡಿ.

  5. ನಿಮ್ಮ ಖಾತೆಯನ್ನು ಮತ್ತೊಮ್ಮೆ ಸೇರಿಸಿ.

ಈ ಲೇಖನದಲ್ಲಿರುವ ಹಂತಗಳಿಂದ ಪ್ರಯೋಜನವಾಗದಿದ್ದರೆ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಇಮೇಲ್‌ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ.

ಹೆಚ್ಚಿನ ಸಹಾಯ ಬೇಕೇ?

ಏನಾಗುತ್ತಿದೆ ಎಂಬುದರ ಕುರಿತು ನಮಗೆ ಹೇಳಿ, ಮುಂದೆ ನೀವು ಏನು ಮಾಡಬಹುದು ಎಂಬುದನ್ನು ನಾವು ಸೂಚಿಸುತ್ತೇವೆ.

ಸಲಹೆಗಳನ್ನು ಪಡೆಯಿರಿ

ಪ್ರಕಟಿತ ದಿನಾಂಕ: