Siriಗೆ ಕೇಳಿ
ಗಮನಿಸಿ: Siriಯನ್ನು ಬಳಸಲು ನೀವು ಇಂಟರ್ನೆಟ್‌ಗೆ ಕನೆಕ್ಟ್ ಆಗಿರಬೇಕು.
ನೀವು ಏನನ್ನಾದರೂ ಮಾಡಲು Siriಗೆ ಕೇಳುವ ಮೊದಲು, ನೀವು ಅದನ್ನು ಸಕ್ರಿಯಗೊಳಿಸಬೇಕಾಗುತ್ತದೆ. ನಿಮ್ಮ iPhoneನಲ್ಲಿ, ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:
ನಿಮ್ಮ ಧ್ವನಿಯೊಂದಿಗೆ: “Siri” ಅಥವಾ “Hey Siri” ಎಂದು ಹೇಳಿ.
Face ID ಹೊಂದಿರುವ iPhoneನಲ್ಲಿ: ಸೈಡ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
ಹೋಮ್ ಬಟನ್ ಹೊಂದಿರುವ iPhoneನಲ್ಲಿ: ಹೋಮ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
EarPodsನಿಂದ: ಮಧ್ಯದ ಅಥವಾ ಕರೆಯ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
CarPlay ಜೊತೆಗೆ: ಸ್ಟೀರಿಂಗ್ ವೀಲ್‌ನಲ್ಲಿ ವಾಯ್ಸ್ ಕಮಾಂಡ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ ಅಥವಾ CarPlay Home ಸ್ಕ್ರೀನ್‌ನಲ್ಲಿ ಹೋಮ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
Siri Eyes Free ಜೊತೆಗೆ: ನಿಮ್ಮ ಸ್ಟೀರಿಂಗ್ ವೀಲ್‌ನಲ್ಲಿ ವಾಯ್ಸ್ ಕಮಾಂಡ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.