ನಿಮ್ಮ Macನಲ್ಲಿ Wi-Fi ಆನ್ ಮಾಡಿ
ನಿಮ್ಮ Macನಲ್ಲಿ, ಮೆನು ಬಾರ್‌ನಲ್ಲಿರುವ Wi-Fi ಸ್ಟೇಟಸ್ ಮೆನು ಅನ್ನು ಕ್ಲಿಕ್ ಮಾಡಿ, ನಂತರ Wi-Fi ಅನ್ನು ಆನ್ ಅಥವಾ ಆಫ್ ಮಾಡಿ.
Wi-Fi ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಲು, Wi-Fi ಸ್ಟೇಟಸ್ ಮೆನು ಅನ್ನು ಕ್ಲಿಕ್ ಮಾಡಿ, ನಂತರ ನೆಟ್‌ವರ್ಕ್ ಅನ್ನು ಆಯ್ಕೆಮಾಡಿ ಅಥವಾ ಇತರ ನೆಟ್‌ವರ್ಕ್ ಅನ್ನು ಆಯ್ಕೆಮಾಡಿ, ನಂತರ ನೆಟ್‌ವರ್ಕ್ ಅನ್ನು ಆಯ್ಕೆಮಾಡಿ. (ನೆಟ್‌ವರ್ಕ್ ಅನ್ನು ಮರೆಮಾಡಿದ್ದರೆ, ಇತರ ನೆಟ್‌ವರ್ಕ್‌ಗಳ ಪಟ್ಟಿಯ ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ, ಇತರ ಎಂಬುದನ್ನು ಆಯ್ಕೆಮಾಡಿ, ನೆಟ್‌ವರ್ಕ್ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ, ನಂತರ ಸೇರಿಕೊಳ್ಳಿ ಎಂಬುದನ್ನು ಕ್ಲಿಕ್ ಮಾಡಿ.)