ಫೋನ್ ಆ್ಯಪ್ ಲೇಔಟ್ ಬದಲಾಯಿಸುವುದು
ನಿಮ್ಮ ಮೆಚ್ಚಿನವುಗಳು, ಇತ್ತೀಚಿನವುಗಳು ಮತ್ತು ವಾಯ್ಸ್‌ಮೇಲ್‌ಗಳನ್ನು ಒಂದೇ ಟ್ಯಾಬ್‌ನಲ್ಲಿ ಸಂಯೋಜಿಸುವ ಯೂನಿಫೈಡ್ ಲೇಔಟ್ ಬಳಸುವುದನ್ನು ನೀವು ಆರಿಸಬಹುದು ಅಥವಾ ಅವುಗಳನ್ನು ಪ್ರತ್ಯೇಕ ಟ್ಯಾಬ್‌ಗಳಾಗಿ ವಿಂಗಡಿಸಲು ಕ್ಲಾಸಿಕ್ ಲೇಔಟ್ ಅನ್ನು ಆಯ್ಕೆಮಾಡಬಹುದು.
ನಿಮ್ಮ iPhoneನಲ್ಲಿ ಫೋನ್ ಆ್ಯಪ್‌ಗೆ
ಹೋಗಿ.ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿರುವ ಕರೆ (ಯೂನಿಫೈಡ್ ಲೇಔಟ್‌ನಲ್ಲಿ) ಅಥವಾ ಇತ್ತೀಚಿನವುಗಳು (ಕ್ಲಾಸಿಕ್ ಲೇಔಟ್‌ನಲ್ಲಿ) ಎಂಬುದನ್ನು ಟ್ಯಾಪ್ ಮಾಡಿ.
ಅನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಆರಿಸಿ: ಯೂನಿಫೈಡ್: ನಿಮ್ಮ ಮೆಚ್ಚಿನ ಸಂಪರ್ಕಗಳು, ಇತ್ತೀಚಿನ ಕರೆಗಳು ಮತ್ತು ವಾಯ್ಸ್‌ಮೇಲ್‌ಗಳನ್ನು ಸಂಯೋಜಿಸಲಾಗುತ್ತದೆ ಮತ್ತು ಸ್ಕ್ರೀನ್‌ನ ಕೆಳಭಾಗದಲ್ಲಿರುವ ಕರೆಗಳು ಎಂಬ ಟ್ಯಾಬ್‌ನಲ್ಲಿ ತೋರಿಸಲಾಗುತ್ತದೆ.
ಕ್ಲಾಸಿಕ್: ನಿಮ್ಮ ಮೆಚ್ಚಿನ ಸಂಪರ್ಕಗಳು, ಇತ್ತೀಚಿನ ಕರೆಗಳು ಮತ್ತು ವಾಯ್ಸ್‌ಮೇಲ್‌ಗಳನ್ನು ಸ್ಕ್ರೀನ್‌ನ ಕೆಳಭಾಗದಲ್ಲಿ ಪ್ರತ್ಯೇಕ ಟ್ಯಾಬ್‌ಗಳಾಗಿ ವಿಂಗಡಿಸಲಾಗಿದೆ.