ನಿಮ್ಮ Mac ಮತ್ತು iPhoneಗೆ ಕನೆಕ್ಟ್ ಮಾಡಲು Bluetooth ಬಳಸಿ
macOS 13 ಅಥವಾ ಅದರ ನಂತರದ ಆವೃತ್ತಿಗಳು: Apple ಮೆನು
> ಸಿಸ್ಟಂ ಸೆಟ್ಟಿಂಗ್ಸ್ ಎಂಬುದನ್ನು ಆಯ್ಕೆಮಾಡಿ, ಸೈಡ್‌ಬಾರ್‌ನಲ್ಲಿ Bluetooth® ಎಂಬುದನ್ನು ಕ್ಲಿಕ್ ಮಾಡಿ. (ನೀವು ಕೆಳಗೆ ಸ್ಕ್ರೋಲ್ ಮಾಡಬೇಕಾಗಬಹುದು.) ಬಲಭಾಗದಲ್ಲಿ, Bluetooth ಅನ್ನು ಆನ್ ಮಾಡಿ (ಅದಾಗಲೇ ಆನ್ ಆಗಿರದಿದ್ದರೆ). ಬಲಭಾಗದಲ್ಲಿರುವ ನಿಮ್ಮ iPhone ಅನ್ನು ಆಯ್ಕೆಮಾಡಿ, ನಂತರ ಕನೆಕ್ಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.macOS 12.5 ಅಥವಾ ಅದಕ್ಕಿಂತ ಹಿಂದಿನ ಆವೃತ್ತಿಗಳು: Apple ಮೆನು
> ಸಿಸ್ಟಂ ಆದ್ಯತೆಗಳು ಎಂಬುದನ್ನು ಆಯ್ಕೆಮಾಡಿ, ನಂತರ Bluetooth ಅನ್ನು ಕ್ಲಿಕ್ ಮಾಡಿ. Bluetooth ಆನ್ ಮಾಡಿರದಿದ್ದರೆ, Bluetooth ಅನ್ನು ಆನ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ iPhone ಅನ್ನು ಆಯ್ಕೆಮಾಡಿ, ನಂತರ ಕನೆಕ್ಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.