iPhone SE (2ನೇ ಜನರೇಷನ್)

iPhone SEನಲ್ಲಿ (2ನೇ ಜನರೇಷನ್) ಕ್ಯಾಮರಾಗಳು, ಬಟನ್‌ಗಳು ಮತ್ತು ಇತರ ಅಗತ್ಯ ಹಾರ್ಡ್‌ವೇರ್ ಫೀಚರ್‌ಗಳು ಎಲ್ಲಿವೆ ಎಂಬುದನ್ನು ತಿಳಿಯಿರಿ.

iPhone SEಯ (2ನೇ ಜನರೇಷನ್) ಮುಂಬದಿಯ ನೋಟ. ಮುಂಬದಿಯ ಕ್ಯಾಮರಾ ಮೇಲ್ಭಾಗದಲ್ಲಿ, ಸ್ಪೀಕರ್‌ನ ಎಡಭಾಗದಲ್ಲಿ ಇದೆ. ಬಲಭಾಗದಲ್ಲಿ, ಮೇಲಿನಿಂದ ಕೆಳಕ್ಕೆ, ಸೈಡ್ ಬಟನ್ ಮತ್ತು ಸಿಮ್ ಟ್ರೇ ಇವೆ. ಕೆಳಭಾಗದ ಮಧ್ಯದಲ್ಲಿ ಹೋಮ್ ಬಟನ್ ಇದೆ. Lightning ಕನೆಕ್ಟರ್ ಕೆಳಗಿನ ಅಂಚಿನಲ್ಲಿದೆ. ಎಡಭಾಗದಲ್ಲಿ, ಕೆಳಗಿನಿಂದ ಮೇಲಕ್ಕೆ, ವಾಲ್ಯೂಮ್ ಬಟನ್‌ಗಳು ಮತ್ತು ರಿಂಗ್/ನಿಶ್ಯಬ್ದ ಸ್ವಿಚ್ ಇವೆ.

1 ಮುಂಬದಿ ಕ್ಯಾಮರಾ

2 ಸೈಡ್ ಬಟನ್

3 ಸಿಮ್ ಟ್ರೇ

4 ಹೋಮ್ ಬಟನ್/Touch ID

5 Lightning ಕನೆಕ್ಟರ್

6 ವಾಲ್ಯೂಮ್ ಬಟನ್‌ಗಳು

7 ರಿಂಗ್/ನಿಶ್ಯಬ್ದ ಸ್ವಿಚ್

iPhone SEಯ (2ನೇ ಜನರೇಷನ್) ಹಿಂಬದಿಯ ನೋಟ. ಹಿಂಬದಿಯ ಕ್ಯಾಮರಾ ಮತ್ತು ಫ್ಲ್ಯಾಶ್ ಮೇಲಿನ ಎಡಭಾಗದಲ್ಲಿವೆ.

8 ಹಿಂಬದಿಯ ಕ್ಯಾಮರಾ

9 ಫ್ಲ್ಯಾಷ್