Handoff ಅನ್ನು ಆನ್ ಮಾಡಿ

  • iPhone ಅಥವಾ iPadನಲ್ಲಿ: ಸೆಟ್ಟಿಂಗ್ಸ್ > ಸಾಮಾನ್ಯ > AirPlay ಮತ್ತು ಕಂಟಿನ್ಯುಯಿಟಿ ಎಂಬಲ್ಲಿಗೆ ಹೋಗಿ, ನಂತರ Handoff ಅನ್ನು ಆನ್ ಮಾಡಿ.

  • macOS 13 ಅಥವಾ ನಂತರದ ಆವೃತ್ತಿಗಳನ್ನು ಹೊಂದಿರುವ Macನಲ್ಲಿ: Apple ಮೆನು > ಸಿಸ್ಟಂ ಸೆಟ್ಟಿಂಗ್ಸ್ ಎಂಬುದನ್ನು ಆಯ್ಕೆಮಾಡಿ, ಸೈಡ್‌ಬಾರ್‌ನಲ್ಲಿ ಸಾಮಾನ್ಯ ಎಂಬುದನ್ನು ಕ್ಲಿಕ್ ಮಾಡಿ, AirPlay ಮತ್ತು Handoff ಎಂಬುದನ್ನು ಕ್ಲಿಕ್ ಮಾಡಿ, ನಂತರ “ಈ Mac ಮತ್ತು ನಿಮ್ಮ iCloud ಸಾಧನಗಳ ನಡುವೆ Handoff ಅನ್ನು ಅನುಮತಿಸಿ” ಎಂಬುದನ್ನು ಆನ್ ಮಾಡಿ.

  • macOS 12.5 ಅಥವಾ ಅದಕ್ಕಿಂತ ಹಿಂದಿನ ಆವೃತ್ತಿಗಳನ್ನು ಹೊಂದಿರುವ Macನಲ್ಲಿ: Apple ಮೆನು > ಸಿಸ್ಟಂ ಆದ್ಯತೆಗಳು ಎಂಬುದನ್ನು ಆಯ್ಕೆಮಾಡಿ, ಸಾಮಾನ್ಯ ಎಂಬುದನ್ನು ಕ್ಲಿಕ್ ಮಾಡಿ, ನಂತರ “ಈ Mac ಮತ್ತು ನಿಮ್ಮ iCloud ಸಾಧನಗಳ ನಡುವೆ Handoff ಅನ್ನು ಅನುಮತಿಸಿ” ಎಂಬುದನ್ನು ಆಯ್ಕೆಮಾಡಿ.