ನಿಮ್ಮ ಸ್ಪರ್ಶಕ್ಕೆ iPad ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಸರಿಹೊಂದಿಸುವುದು

ಕೈ ನಡುಕ, ಕೈ ಚಲನೆಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಸೂಕ್ಷ್ಮ ದೈಹಿಕ ನಿಯಂತ್ರಣದಲ್ಲಿ ನಿಮಗೆ ತೊಂದರೆಗಳಿದ್ದಲ್ಲಿ ಟ್ಯಾಪ್ ಮಾಡುವ, ಸ್ವೈಪ್ ಮಾಡುವ ಮತ್ತು ಒತ್ತಿ ಹಿಡಿದುಕೊಳ್ಳುವ ಜೆಸ್ಚರ್‌ಗಳಿಗೆ iPad ಟಚ್‌ಸ್ಕ್ರೀನ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೀವು ಸರಿಹೊಂದಿಸಬಹುದು. ನೀವು iPad ಅನ್ನು ವೇಗದ ಅಥವಾ ನಿಧಾನಗತಿಯ ಸ್ಪರ್ಶಗಳನ್ನು ಗುರುತಿಸುವಂತೆ ಮತ್ತು ಅನೇಕ ಸ್ಪರ್ಶಗಳನ್ನು ನಿರ್ಲಕ್ಷಿಸುವಂತೆ ಮಾಡಬಹುದು. ನೀವು ಸ್ಕ್ರೀನ್ ಅನ್ನು ಸ್ಪರ್ಶಿಸಿದಾಗ iPad ಎಚ್ಚರಗೊಳ್ಳುವುದನ್ನು ಸಹ ನೀವು ತಡೆಯಬಹುದು ಅಥವಾ ನೀವು ಉದ್ದೇಶಪೂರ್ವಕವಲ್ಲದೆ iPad ಅನ್ನು ಅಲುಗಾಡಿಸಿದರೆ ’ಅನ್‌ಡು ಮಾಡಲು ಅಲುಗಾಡಿಸಿ’ ಎಂಬುದನ್ನು ಆಫ್ ಮಾಡಬಹುದು.

ಟ್ಯಾಪ್‌ಗಳು, ಸ್ವೈಪ್‌ಗಳು ಮತ್ತು ಅನೇಕ ಟಚ್‌ಗಳ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸುವುದು

  1. ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ > ಟಚ್ > ಟಚ್ ಸೌಕರ್ಯಗಳು ಎಂಬುದಕ್ಕೆ ಹೋಗಿ, ನಂತರ ಟಚ್ ಸೌಕರ್ಯಗಳು ಎಂಬುದನ್ನು ಆನ್ ಮಾಡಿ.

  2. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಲು ನೀವು iPad ಅನ್ನು ಕಾನ್ಫಿಗರ್ ಮಾಡಬಹುದು:

    • ದೀರ್ಘ ಅಥವಾ ಕಡಿಮೆ ಅವಧಿಯ ಸ್ಪರ್ಶಗಳಿಗೆ ಪ್ರತಿಕ್ರಿಯಿಸಿ: ಹೋಲ್ಡ್ ಅವಧಿ ಎಂಬುದನ್ನು ಆನ್ ಮಾಡಿ, ನಂತರ ಅವಧಿಯನ್ನು ಸರಿಹೊಂದಿಸಲು ಡಿಕ್ರೀಮೆಂಟ್ ಬಟನ್ ಅಥವಾ ಇಂಕ್ರೀಮೆಂಟ್ ಬಟನ್ ಅನ್ನು ಟ್ಯಾಪ್ ಮಾಡಿ.

      ಗಮನಿಸಿ: ಹೋಲ್ಡ್ ಮಾಡುವ ಅವಧಿ ಎಂಬುದನ್ನು ನೀವು ಆನ್ ಮಾಡಿದಾಗ, ಅವಧಿಯ ಒಳಗೆ ಮಾಡುವ ಟ್ಯಾಪ್‌ಗಳನ್ನು ಮತ್ತು ಸ್ವೈಪ್‌ಗಳನ್ನು ನಿರ್ಲಕ್ಷಿಸಲಾಗುತ್ತದೆ. ಒತ್ತಿ ಹಿಡಿದುಕೊಳ್ಳುವ ಕಾಲಾವಧಿ ಆನ್ ಆಗಿರುವಾಗ ಸ್ವೈಪ್ ಮಾಡುವುದನ್ನು ಸುಲಭಗೊಳಿಸಲು ನೀವು ಸ್ವೈಪ್ ಗೆಸ್ಚರ್‌ಗಳನ್ನು ಆನ್ ಮಾಡಬಹುದು.

    • ಒತ್ತಿ ಹಿಡಿದುಕೊಳ್ಳುವ ಕಾಲಾವಧಿ ಆನ್ ಆಗಿರುವಾಗ ಸ್ವೈಪ್ ಮಾಡುವುದನ್ನು ಸುಲಭಗೊಳಿಸಿ: ಹೋಲ್ಡ್ ಅವಧಿ ಎಂಬುದನ್ನು ಆನ್ ಮಾಡಿ, ನಂತರ ಸ್ವೈಪ್ ಗೆಸ್ಚರ್‌ಗಳು ಎಂಬುದನ್ನು ಟ್ಯಾಪ್ ಮಾಡಿ. ಸ್ವೈಪ್ ಗೆಸ್ಚರ್‌ಗಳು ಎಂಬುದನ್ನು ಆನ್ ಮಾಡಿ, ನಂತರ ಸ್ವೈಪ್ ಗೆಸ್ಚರ್ ಪ್ರಾರಂಭವಾಗುವ ಮೊದಲು ಅಗತ್ಯವಿರುವ ಚಲನೆಯನ್ನು ಆಯ್ಕೆಮಾಡಿ.

    • ಅನೇಕ ಸ್ಪರ್ಶಗಳನ್ನು ಒಂದೇ ಸ್ಪರ್ಶವೆಂದು ಪರಿಗಣಿಸಿ: “ಪುನರಾವರ್ತಿಸುವುದನ್ನು ನಿರ್ಲಕ್ಷಿಸಿ” ಎಂಬುದನ್ನು ಆನ್ ಮಾಡಿ, ನಂತರ ಒಂದಕ್ಕಿಂತ ಹೆಚ್ಚು ಸ್ಪರ್ಶಗಳ ನಡುವೆ ಅನುಮತಿಸಬೇಕಾದ ಸಮಯವನ್ನು ಸರಿಹೊಂದಿಸಲು ಡಿಕ್ರೀಮೆಂಟ್ ಬಟನ್ ಅಥವಾ ಇಂಕ್ರೀಮೆಂಟ್ ಬಟನ್ ಅನ್ನು ಟ್ಯಾಪ್ ಮಾಡಿ.

    • ನೀವು ಸ್ಪರ್ಶಿಸಿದ ಮೊದಲ ಅಥವಾ ಕೊನೆಯ ಸ್ಥಳಕ್ಕೆ ಪ್ರತಿಕ್ರಿಯಿಸಿ: ಟ್ಯಾಪ್ ಸಹಾಯ ಎಂಬುದರ ಅಡಿಯಲ್ಲಿ, ಪ್ರಾರಂಭಿಕ ಟಚ್ ಸ್ಥಳವನ್ನು ಬಳಸಿ ಅಥವಾ ಅಂತಿಮ ಟಚ್ ಸ್ಥಳವನ್ನು ಬಳಸಿ ಎಂಬುದನ್ನು ಆಯ್ಕೆಮಾಡಿ.

      ನೀವು “ಪ್ರಾರಂಭಿಕ ಟಚ್ ಸ್ಥಳವನ್ನು ಬಳಸಿ” ಎಂಬುದನ್ನು ಆಯ್ಕೆಮಾಡಿದರೆ, iPad ನಿಮ್ಮ ಮೊದಲ ಟ್ಯಾಪ್ ಮಾಡಿದ ಸ್ಥಳವನ್ನು ಬಳಸುತ್ತದೆ—ಉದಾಹರಣೆಗೆ, ನೀವು ಹೋಮ್ ಸ್ಕ್ರೀನ್‌ನಲ್ಲಿ ಆ್ಯಪ್ ಅನ್ನು ಟ್ಯಾಪ್ ಮಾಡಿದಾಗ.

      ’ಅಂತಿಮ ಸ್ಪರ್ಶದ ಸ್ಥಳವನ್ನು ಬಳಸಿ’ ಎಂಬುದನ್ನು ನೀವು ಆಯ್ಕೆಮಾಡಿದರೆ, iPad ನಿಮ್ಮ ಬೆರಳನ್ನು ತೆಗೆಯುವ ಸ್ಥಳದ ಟ್ಯಾಪ್ ಅನ್ನು ನೋಂದಾಯಿಸುತ್ತದೆ. ನೀವು ನಿರ್ದಿಷ್ಟ ಸಮಯದೊಳಗೆ ನಿಮ್ಮ ಬೆರಳನ್ನು ತೆಗೆಯುವಾಗ iPad ಟ್ಯಾಪ್‌ಗೆ ಪ್ರತಿಕ್ರಿಯಿಸುತ್ತದೆ. ಟೈಮಿಂಗ್ ಅನ್ನು ಸರಿಹೊಂದಿಸಲು ಡಿಕ್ರೀಮೆಂಟ್ ಬಟನ್ ಅಥವಾ ಇಂಕ್ರೀಮೆಂಟ್ ಬಟನ್ ಅನ್ನು ಟ್ಯಾಪ್ ಮಾಡಿ. ನೀವು ಜೆಸ್ಚರ್ ವಿಳಂಬಕ್ಕಿಂತ ಹೆಚ್ಚಿನ ಸಮಯ ಕಾಯುತ್ತಿದ್ದರೆ, ನಿಮ್ಮ iPad ಡ್ರ್ಯಾಗ್ ಜೆಸ್ಚರ್ ರೀತಿಯ ಇತರ ಜೆಸ್ಚರ್‌ಗಳಿಗೆ ಪ್ರತಿಕ್ರಿಯಿಸಬಲ್ಲದು.

      ಗಮನಿಸಿ: ನೀವು ಟ್ಯಾಪ್ ಸಹಾಯ ಎಂಬುದನ್ನು ಆನ್ ಮಾಡಿದಾಗ, ಅವಧಿಯೊಳಗೆ ಮಾಡುವ ಟ್ಯಾಪ್‌ಗಳನ್ನು ಮತ್ತು ಸ್ವೈಪ್‌ಗಳನ್ನು ನಿರ್ಲಕ್ಷಿಸಲಾಗುತ್ತದೆ. ಒತ್ತಿ ಹಿಡಿದುಕೊಳ್ಳುವ ಕಾಲಾವಧಿ ಆನ್ ಆಗಿರುವಾಗ ಸ್ವೈಪ್ ಮಾಡುವುದನ್ನು ಸುಲಭಗೊಳಿಸಲು ನೀವು ಸ್ವೈಪ್ ಗೆಸ್ಚರ್‌ಗಳನ್ನು ಆನ್ ಮಾಡಬಹುದು.

    • ಟ್ಯಾಪ್ ಸಹಾಯ ಎಂಬುದು ಆನ್ ಆಗಿರುವಾಗ ಸ್ವೈಪ್ ಮಾಡುವುದನ್ನು ಸುಲಭಗೊಳಿಸಿ: “ಪ್ರಾರಂಭಿಕ ಟಚ್ ಸ್ಥಳವನ್ನು ಬಳಸಿ” ಅಥವಾ “ಅಂತಿಮ ಟಚ್ ಸ್ಥಳವನ್ನು ಬಳಸಿ” ಎಂಬುದನ್ನು ಆರಿಸಿ, ನಂತರ ಸ್ವೈಪ್ ಗೆಸ್ಚರ್‌ಗಳು ಎಂಬುದನ್ನು ಟ್ಯಾಪ್ ಮಾಡಿ. ಸ್ವೈಪ್ ಗೆಸ್ಚರ್‌ಗಳು ಎಂಬುದನ್ನು ಆನ್ ಮಾಡಿ, ನಂತರ ಸ್ವೈಪ್ ಗೆಸ್ಚರ್ ಪ್ರಾರಂಭವಾಗುವ ಮೊದಲು ಅಗತ್ಯವಿರುವ ಚಲನೆಯನ್ನು ಆಯ್ಕೆಮಾಡಿ.

ಸ್ಪರ್ಶಿಸಿ ಹಿಡಿದುಕೊಳ್ಳುವ ಜೆಸ್ಚರ್‌ಗಳಿಗೆ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ

ಹೆಚ್ಚುವರಿ ಆಯ್ಕೆಗಳು ಅಥವಾ ನೀವು ಮಾಡಬಹುದಾದ ಆ್ಯಕ್ಷನ್‌ಗಳನ್ನು ನೋಡಲು ಅಥವಾ ಕಂಟೆಂಟ್ ಪ್ರಿವ್ಯೂವನ್ನು ನೋಡಲು ನೀವು ಸ್ಪರ್ಶಿಸಿ ಹಿಡಿದುಕೊಳ್ಳುವ ಜೆಸ್ಚರ್ ಅನ್ನು ಬಳಸುತ್ತೀರಿ. ಈ ಜೆಸ್ಚರ್ ಅನ್ನು ನಿರ್ವಹಿಸುವಲ್ಲಿ ನಿಮಗೆ ಸಮಸ್ಯೆಯಿದ್ದರೆ, ಈ ಕೆಳಗಿನವುಗಳನ್ನು ಮಾಡಿ:

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > ಟಚ್ > Haptic Touch ಎಂಬುದಕ್ಕೆ ಹೋಗಿ.

  2. ಟಚ್ ಅವಧಿ—ವೇಗ ಅಥವಾ ನಿಧಾನ ಎಂಬುದನ್ನು ಆಯ್ಕೆಮಾಡಿ.

  3. ಸ್ಕ್ರೀನ್‌ನ ಕೆಳಭಾಗದಲ್ಲಿರುವ ಚಿತ್ರದ ಮೇಲೆ ನಿಮ್ಮ ಹೊಸ ಸೆಟ್ಟಿಂಗ್ಸ್ ಅನ್ನು ಪರಿಶೀಲಿಸಿ.

ಎಚ್ಚರಗೊಳಿಸಲು ಟ್ಯಾಪ್ ಮಾಡಿ ಎಂಬುದನ್ನು ಆಫ್ ಮಾಡಿ

ಬೆಂಬಲಿತ iPad ಮಾಡಲ್‌ನಲ್ಲಿ, ಸ್ಕ್ರೀನ್ ಮೇಲಿನ ಸ್ಪರ್ಶಗಳು iPad ಅನ್ನು ಎಚ್ಚರಗೊಳಿಸುವುದನ್ನು ನೀವು ತಡೆಯಬಹುದು. ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ > ಟಚ್ ಎಂಬಲ್ಲಿಗೆ ಹೋಗಿ, ನಂತರ ಎಚ್ಚರಗೊಳಿಸಲು ಟ್ಯಾಪ್ ಮಾಡಿ ಎಂಬುದನ್ನು ಆನ್ ಮಾಡಿ.

'ಅನ್‌ಡು ಮಾಡಲು ಅಲುಗಾಡಿಸಿ’ ಎಂಬುದನ್ನು ಆಫ್ ಮಾಡಿ

ನೀವು ಆಕಸ್ಮಿಕವಾಗಿ iPad ಅನ್ನು ಅಲುಗಾಡಿಸುವ ಪ್ರವೃತ್ತಿಯನ್ನು ಹೊಂದಿದ್ದಲ್ಲಿ, ನೀವು ‘ಅನ್‌ಡು ಮಾಡಲು ಅಲುಗಾಡಿಸಿ’ ಎಂಬುದನ್ನು ಆಫ್ ಮಾಡಿ. ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ > ಟಚ್ ಎಂಬುದಕ್ಕೆ ಹೋಗಿ.

ಸಲಹೆ: ಪಠ್ಯ ಎಡಿಟ್‌ಗಳನ್ನು ಅನ್‌ಡು ಮಾಡಲು, ಮೂರು ಬೆರಳುಗಳಿಂದ ಎಡಕ್ಕೆ ಸ್ವೈಪ್ ಮಾಡಿ.