iPadನಲ್ಲಿನ ಹುಡುಕಿ ಆ್ಯಪ್‌ನಲ್ಲಿ ಸ್ನೇಹಿತರನ್ನು ಪತ್ತೆಹಚ್ಚುವುದು

ಸ್ನೇಹಿತರೊಬ್ಬರು ನಿಮ್ಮೊಂದಿಗೆ ತಮ್ಮ ಸ್ಥಳವನ್ನು ಹಂಚಿಕೊಂಡಾಗ, ನಕ್ಷೆಯಲ್ಲಿ ಅವರನ್ನು ಪತ್ತೆಹಚ್ಚಲು ನೀವು ಹುಡುಕಿ ಆ್ಯಪ್ ಅನ್ನು ಬಳಸಬಹುದು.

ಹುಡುಕಿ ಆ್ಯಪ್‌ನ ಸ್ಕ್ರೀನ್ ಜನರು ಪಟ್ಟಿಗೆ ತೆರೆದುಕೊಳ್ಳುತ್ತದೆ. ಪಟ್ಟಿಯಲ್ಲಿ ನಾಲ್ಕು ಜನರಿದ್ದಾರೆ: ಆ್ಯಶ್ಲೇ ರಿಕೊ, ಒಲಿವಿಯಾ ರಿಕೊ, ಡಾನ್ ರಾಮಿರೆಜ್ ಮತ್ತು ವಿಲ್ ರಿಕೊ. ಅವರ ಸ್ಥಳಗಳನ್ನು ಸ್ಯಾನ್ ಫ್ರಾನ್ಸಿಸ್ಕೋದ ನಕ್ಷೆಯಲ್ಲಿ ತೋರಿಸಲಾಗಿದೆ.

ಗಮನಿಸಿ: ನಿಮ್ಮ ಸ್ನೇಹಿತರು ನಿಮ್ಮಿಂದ ಎಷ್ಟು ದೂರದಲ್ಲಿದ್ದಾರೆ ಎಂಬುದನ್ನು ನೀವು ನೋಡಲು ಬಯಸಿದರೆ, “ಹುಡುಕಿ” ಆ್ಯಪ್‌ಗಾಗಿ ನೀವು ನಿಖರವಾದ ಸ್ಥಳವನ್ನು ಆನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಹಂಚಿಕೊಳ್ಳುವ ಸ್ಥಳದ ಮಾಹಿತಿಯನ್ನು ನಿಯಂತ್ರಿಸಿ ಎಂಬುದನ್ನು ನೋಡಿ.

ಸ್ನೇಹಿತರ ಸ್ಥಳವನ್ನು ನೋಡಿ

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳ ಎಡಭಾಗದಲ್ಲಿರುವ ಜನರು ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ಹುಡುಕಲು ಬಯಸುವ ವ್ಯಕ್ತಿಯ ಹೆಸರನ್ನು ಟ್ಯಾಪ್ ಮಾಡಿ.

    • ನಿಮ್ಮ ಸ್ನೇಹಿತರನ್ನು ಪತ್ತೆಹಚ್ಚಲು ಸಾಧ್ಯವಾದರೆ: ಅವರು ನಕ್ಷೆಯಲ್ಲಿ ಕಾಣಿಸಿಕೊಳ್ಳುವುದರಿಂದ ಅವರು ಎಲ್ಲಿದ್ದಾರೆ ಎಂಬುದನ್ನು ನೀವು ನೋಡಬಹುದು.

    • ನಿಮ್ಮ ಸ್ನೇಹಿತರನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದರೆ: ನೀವು ಅವರ ಹೆಸರಿನ ಕೆಳಗೆ “ಯಾವುದೇ ಸ್ಥಳ ಕಂಡುಬಂದಿಲ್ಲ” ಎಂಬುದನ್ನು ಕಾಣುತ್ತೀರಿ.

    • ನಿಮ್ಮ ಸ್ನೇಹಿತರನ್ನು ನೀವು ಫಾಲೋ ಮಾಡದಿದ್ದರೆ: ನೀವು ಅವರ ಹೆಸರಿನ ಕೆಳಗೆ “ನಿಮ್ಮ ಸ್ಥಳವನ್ನು ನೋಡಬಹುದು” ಎಂಬುದನ್ನು ಕಾಣುತ್ತೀರಿ. ನೀವು ಸ್ನೇಹಿತರೊಬ್ಬರ ಸ್ಥಳವನ್ನು ತೋರಿಸುವಂತೆ ಕೇಳಬಹುದು.

ಸ್ನೇಹಿತರೊಬ್ಬರನ್ನು ಸಂಪರ್ಕಿಸಿ

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳ ಎಡಭಾಗದಲ್ಲಿರುವ ಜನರು ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ಸಂಪರ್ಕಿಸಲು ಬಯಸುವ ವ್ಯಕ್ತಿಯ ಹೆಸರನ್ನು ಟ್ಯಾಪ್ ಮಾಡಿ.

  3. ಸಂಪರ್ಕ ಆ್ಯಪ್ ಟ್ಯಾಪ್ ಮಾಡಿ ಮತ್ತು ನೀವು ನಿಮ್ಮ ಸ್ನೇಹಿತರನ್ನು ಹೇಗೆ ಸಂಪರ್ಕಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ. ಸಂಪರ್ಕದ ಮಾಹಿತಿಯನ್ನು ಸೇರಿಸಿ ಮತ್ತು ಬಳಸಿ ಎಂಬುದನ್ನು ನೋಡಿ.

ಸ್ನೇಹಿತರೊಬ್ಬರನ್ನು ತಲುಪುವ ನಿರ್ದೇಶನಗಳನ್ನು ಪಡೆಯಿರಿ

ನಕ್ಷೆ ಆ್ಯಪ್‌ನಲ್ಲಿ ನೀವು ಸ್ನೇಹಿತರೊಬ್ಬರು ಪ್ರಸ್ತುತ ಇರುವ ಸ್ಥಳಕ್ಕೆ ಮಾರ್ಗ ನಿರ್ದೇಶನಗಳನ್ನು ಪಡೆಯಬಹುದು.

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳ ಎಡಭಾಗದಲ್ಲಿರುವ ಜನರು ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ಯಾವ ವ್ಯಕ್ತಿಯನ್ನು ತಲುಪಲು ಮಾರ್ಗ ನಿರ್ದೇಶನಗಳನ್ನು ಪಡೆಯಲು ಬಯಸುತ್ತೀರೋ ಅವರ ಹೆಸರನ್ನು ಟ್ಯಾಪ್ ಮಾಡಿ.

  3. ನಕ್ಷೆ ಆ್ಯಪ್ ಅನ್ನು ತೆರೆಯಲು ನಿರ್ದೇಶನಗಳನ್ನು ಟ್ಯಾಪ್ ಮಾಡಿ.

ನಕ್ಷೆ ಆ್ಯಪ್‌ನಲ್ಲಿ ಮಾರ್ಗ ನಿರ್ದೇಶನಗಳನ್ನು ಪಡೆಯಿರಿ.

ಸ್ನೇಹಿತರೊಬ್ಬರ ಸ್ಥಳಕ್ಕಾಗಿ ಲೇಬಲ್ ಅನ್ನು ಸೆಟ್ ಮಾಡಿ

ಸ್ನೇಹಿತರ ಪ್ರಸ್ತುತ ಸ್ಥಳವನ್ನು ಹೆಚ್ಚು ಅರ್ಥಪೂರ್ಣವಾಗಿಸಲು (ಉದಾಹರಣೆಗೆ, ಮನೆ ಅಥವಾ ಕೆಲಸದ ಸ್ಥಳ) ನೀವು ಲೇಬಲ್ ಅನ್ನು ಸೆಟ್ ಮಾಡಬಹುದು. ನಿಮ್ಮ ಸ್ನೇಹಿತರು ಆ ಸ್ಥಳದಲ್ಲಿದ್ದಾಗ ಅವರ ಹೆಸರಿನ ಕೆಳಗೆ ಲೇಬಲ್ ಕಾಣಿಸುತ್ತದೆ.

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳ ಎಡಭಾಗದಲ್ಲಿರುವ ಜನರು ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ಯಾವ ವ್ಯಕ್ತಿಗೆ ಸ್ಥಳದ ಲೇಬಲ್ ಅನ್ನು ಸೆಟ್ ಮಾಡಲು ಬಯತ್ತೀರೋ ಅವರ ಹೆಸರನ್ನು ಟ್ಯಾಪ್ ಮಾಡಿ.

  3. ಸ್ಥಳದ ಹೆಸರನ್ನು ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಲೇಬಲ್ ಅನ್ನು ಆಯ್ಕೆಮಾಡಿ.

    ಹೊಸ ಲೇಬಲ್ ಅನ್ನು ಸೇರಿಸಲು, ಕಸ್ಟಮ್ ಲೇಬಲ್ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ಹೆಸರನ್ನು ನಮೂದಿಸಿ, ನಂತರ ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಸ್ನೇಹಿತರನ್ನು ಮೆಚ್ಚಿನವರೆಂದು ಗುರುತಿಸಿ

ಮೆಚ್ಚಿನ ಸ್ನೇಹಿತರು ಜನರ ಪಟ್ಟಿಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಅವರನ್ನು ನಕ್ಷತ್ರದೊಂದಿಗೆ ಗುರುತಿಸಲಾಗುತ್ತದೆ.

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳ ಎಡಭಾಗದಲ್ಲಿರುವ ಜನರು ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ಮೆಚ್ಚಿನವರೆಂದು ಗುರುತಿಸಲು ಬಯಸುವ ವ್ಯಕ್ತಿಯನ್ನು ಹುಡುಕಿ.

  3. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ವ್ಯಕ್ತಿಯ ಹೆಸರನ್ನು ಟ್ಯಾಪ್ ಮಾಡಿ, ನಂತರ [ಹೆಸರು] ಅನ್ನು ಮೆಚ್ಚಿನವುಗಳಿಗೆ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

    • ವ್ಯಕ್ತಿಯ ಹೆಸರಿನ ಮೇಲೆ ಎಡಕ್ಕೆ ಸ್ವೈಪ್ ಮಾಡಿ, ನಂತರ ನಕ್ಷತ್ರವನ್ನು ಟ್ಯಾಪ್ ಮಾಡಿ.

ನಿಮ್ಮ ಮೆಚ್ಚಿನವುಗಳಿಂದ ಸ್ನೇಹಿತರನ್ನು ತೆಗೆದುಹಾಕಲು, ಎಡಕ್ಕೆ ಸ್ವೈಪ್ ಮಾಡಿ ಮತ್ತು ನಕ್ಷತ್ರವನ್ನು ಟ್ಯಾಪ್ ಮಾಡಿ, ಅಥವಾ ಸ್ನೇಹಿತರನ್ನು ಟ್ಯಾಪ್ ಮಾಡಿ, ನಂತರ ಮೆಚ್ಚಿನವುಗಳಿಂದ [ಹೆಸರು] ಅನ್ನು ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ.