iPadನಲ್ಲಿನ ಟಿಪ್ಪಣಿ ಆ್ಯಪ್‌ನಲ್ಲಿ ರೇಖಾಚಿತ್ರಗಳು ಮತ್ತು ಕೈಬರಹವನ್ನು ಸೇರಿಸಿ
ನೀವು Apple Pencil ಅಥವಾ ನಿಮ್ಮ ಬೆರಳಿನಿಂದ ಸ್ಕೆಚ್ ಬಿಡಿಸಲು ಅಥವಾ ಕೈಬರಹದ ಟಿಪ್ಪಣಿಗಳನ್ನು ಬರೆದುಕೊಳ್ಳಲು (ಬೆಂಬಲಿತ ಮಾಡಲ್‌ಗಳಲ್ಲಿ) ಟಿಪ್ಪಣಿ ಆ್ಯಪ್ ಅನ್ನು ಬಳಸಿ. ವಿವಿಧ ಮಾರ್ಕಪ್ ಟೂಲ್‌ಗಳು ಮತ್ತು ಬಣ್ಣಗಳಿಂದ ಆರಿಸಿಕೊಳ್ಳಿ ಮತ್ತು ರೂಲರ್ ಮೂಲಕ ನೇರವಾದ ರೇಖೆಗಳನ್ನು ಎಳೆಯಿರಿ. ನೀವು Apple Pencilನೊಂದಿಗೆ ಬರೆಯುವಾಗ, ನಿಮ್ಮದೇ ಕೈಬರಹದ ಶೈಲಿಯ ನೋಟ ಮತ್ತು ಸ್ವರೂಪವನ್ನು ಕಾಪಾಡಿಕೊಂಡು ನಿಮ್ಮ ಕೈಬರಹವನ್ನು ನೈಜ ಸಮಯದಲ್ಲಿ ಸ್ವಯಂಚಾಲಿತವಾಗಿ ಪರಿಷ್ಕರಿಸಬಹುದು.

ರೇಖಾಚಿತ್ರ ಮತ್ತು ಕೈಬರಹದ ಟೂಲ್‌ಗಳನ್ನು ಬಳಸಿ
ನಿಮ್ಮ iPadನಲ್ಲಿ ಟಿಪ್ಪಣಿ ಆ್ಯಪ್‌ಗೆ
ಹೋಗಿ.ಟಿಪ್ಪಣಿಯೊಂದರಲ್ಲಿ Apple Pencilನೊಂದಿಗೆ ಡ್ರಾಯಿಂಗ್ ಅನ್ನು ಚಿತ್ರಿಸಲು ಅಥವಾ ಬರೆಯಲು ಪ್ರಾರಂಭಿಸಿ. ಅಥವಾ ನಿಮ್ಮ ಬೆರಳನ್ನು ಬಳಸಿ ಚಿತ್ರಿಸಲು ಅಥವಾ ಬರೆಯಲು,
ಅನ್ನು ಟ್ಯಾಪ್ ಮಾಡಿ.ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
ಬಣ್ಣ ಅಥವಾ ಟೂಲ್‌ಗಳನ್ನು ಬದಲಾಯಿಸಿ: ಮಾರ್ಕಪ್ ಟೂಲ್‌ಗಳನ್ನು ಬಳಸಿ.
ಕೈಬರಹ ಪ್ರದೇಶವನ್ನು ಸರಿಹೊಂದಿಸಿ: ಮರುಗಾತ್ರಗೊಳಿಸುವ ಹ್ಯಾಂಡಲ್ ಅನ್ನು (ಎಡಭಾಗದಲ್ಲಿ) ಮೇಲಕ್ಕೆ ಅಥವಾ ಕೆಳಕ್ಕೆ ಡ್ರ್ಯಾಗ್ ಮಾಡಿ.
Apple Pencil ಮೂಲಕ ಬರೆಯುವಾಗ ನಿಮ್ಮ ಕೈಬರಹವನ್ನು ಟೈಪ್ ಮಾಡಿದ ಪಠ್ಯಕ್ಕೆ ಟ್ರಾನ್ಸ್‌ಕ್ರೈಬ್ ಮಾಡಿ: ಸ್ಕ್ರಿಬಲ್ ಟೂಲ್
(ಪೆನ್‌ನ ಎಡಕ್ಕೆ) ಅನ್ನು ಟ್ಯಾಪ್ ಮಾಡಿ, ನಂತರ ಬರೆಯಲು ಪ್ರಾರಂಭಿಸಿ.ಗಮನಿಸಿ: ಸ್ಕ್ರಿಬಲ್ ಬೆಂಬಲಿತ ಭಾಷೆಗಳಲ್ಲಿ ಲಭ್ಯವಿದೆ. iOS ಮತ್ತು iPadOS ಫೀಚರ್ ಲಭ್ಯತೆ ವೆಬ್‌ಸೈಟ್ ಅನ್ನು ನೋಡಿ. Apple Pencilನೊಂದಿಗೆ ಟಿಪ್ಪಣಿಗಳನ್ನು ಬರೆಯುವುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, Scribbleನೊಂದಿಗೆ ಪಠ್ಯವನ್ನು ನಮೂದಿಸಿ ಎಂಬುದನ್ನು ನೋಡಿ.
ಸಲಹೆ: ನೀವು ಟಿಪ್ಪಣಿಗಳಲ್ಲಿ ಕೈಬರಹದ ಪಠ್ಯವನ್ನು (ಬೆಂಬಲಿತ ಭಾಷೆಗಳಲ್ಲಿ) ಹುಡುಕಬಹುದು. ಟಿಪ್ಪಣಿಯು ಶೀರ್ಷಿಕೆಯನ್ನು ಹೊಂದಿಲ್ಲದಿದ್ದರೆ, ಕೈಬರಹದ ಪಠ್ಯದ ಮೊದಲ ಸಾಲು ಸೂಚಿಸಿದ ಶೀರ್ಷಿಕೆಯಾಗುತ್ತದೆ. ಶೀರ್ಷಿಕೆಯನ್ನು ಎಡಿಟ್ ಮಾಡಲು, ಟಿಪ್ಪಣಿಯ ಮೇಲ್ಭಾಗಕ್ಕೆ ಸ್ಕ್ರಾಲ್ ಮಾಡಿ, ನಂತರ ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ರೇಖಾಚಿತ್ರಗಳು ಮತ್ತು ಕೈಬರಹವನ್ನು ಆಯ್ಕೆಮಾಡಿ ಮತ್ತು ಎಡಿಟ್ ಮಾಡಿ
ಸ್ಮಾರ್ಟ್ ಆಯ್ಕೆಯ ಮೂಲಕ, ಟೈಪ್ ಮಾಡಿದ ಪಠ್ಯಕ್ಕಾಗಿ ನೀವು ಬಳಸುವ ಜೆಸ್ಚರ್‌ಗಳನ್ನೇ ಬಳಸಿಕೊಂಡು ಡ್ರಾಯಿಂಗ್‌ಗಳು ಮತ್ತು ಕೈಬರಹವನ್ನು ನೀವು ಆಯ್ಕೆ ಮಾಡಬಹುದು. ನೀವು ಟಿಪ್ಪಣಿಯೊಳಗೆ ಆಯ್ಕೆಮಾಡಿರುವುದನ್ನು ಮೂವ್ ಮಾಡಬಹುದು, ಕಾಪಿ ಮಾಡಬಹುದು ಅಥವಾ ಡಿಲೀಟ್ ಮಾಡಬಹುದು. ನೀವು ಅದನ್ನು ಟೈಪ್ ಮಾಡಿದ ಪಠ್ಯದಂತೆ ಮತ್ತೊಂದು ಟಿಪ್ಪಣಿ ಅಥವಾ ಆ್ಯಪ್‌ಗೆ ಪೇಸ್ಟ್ ಮಾಡಬಹುದು.
ಗಮನಿಸಿ: ನಿಮ್ಮ iPadನ ಸಿಸ್ಟಂ ಭಾಷೆಯನ್ನು ಸೆಟ್ಟಿಂಗ್ಸ್
> ಸಾಮಾನ್ಯ > ಭಾಷೆ ಮತ್ತು ಪ್ರದೇಶ > iPad ಭಾಷೆ ಎಂಬಲ್ಲಿಗೆ ಹೋಗಿ ಬೆಂಬಲಿತ ಭಾಷೆಗೆ ಸೆಟ್ ಮಾಡಿದರೆ, ಸ್ಮಾರ್ಟ್ ಆಯ್ಕೆ ಮತ್ತು ಕೈಬರಹದ ಟ್ರಾನ್ಸ್‌ಕ್ರಿಪ್ಶನ್ ಕಾರ್ಯನಿರ್ವಹಿಸುತ್ತವೆ. iOS ಮತ್ತು iPadOS ಫೀಚರ್ ಲಭ್ಯತೆಯ ವೆಬ್‌ಸೈಟ್ ಅನ್ನು ನೋಡಿ.
ನಿಮ್ಮ iPadನಲ್ಲಿ ಟಿಪ್ಪಣಿ ಆ್ಯಪ್‌ಗೆ
ಹೋಗಿ.ಟಿಪ್ಪಣಿಯಲ್ಲಿ, ಈ ಕೆಳಗಿನ ಯಾವುದೇ ವಿಧಾನಗಳನ್ನು ಬಳಸಿಕೊಂಡು ರೇಖಾಚಿತ್ರಗಳು ಮತ್ತು ಕೈಬರಹವನ್ನು ಆಯ್ಕೆ ಮಾಡಲು ನಿಮ್ಮ ಬೆರಳನ್ನು ಬಳಸಿ:
Lasso ಟೂಲ್ ಮೂಲಕ:
ಅನ್ನು ಟ್ಯಾಪ್ ಮಾಡಿ,
ಅನ್ನು ಟ್ಯಾಪ್ ಮಾಡಿ (ಟೂಲ್ ಪ್ಯಾಲೆಟ್‌ನಲ್ಲಿ ಎರೇಸರ್ ಮತ್ತು Image Wand ನಡುವೆ), ನಂತರ ನೀವು ಆಯ್ಕೆ ಮಾಡಲು ಬಯಸುವ ವಸ್ತುಗಳನ್ನು ಔಟ್‌ಲೈನ್ ಮಾಡಲು ನಿಮ್ಮ ಬೆರಳನ್ನು ಬಳಸಿ.ಗೆಸ್ಚರ್‌ಗಳ ಮೂಲಕ:
ಒತ್ತಿ ಹಿಡಿದುಕೊಳ್ಳಿ, ನಂತರ ಆಯ್ಕೆಯನ್ನು ವಿಸ್ತರಿಸಲು ಡ್ರ್ಯಾಗ್ ಮಾಡಿ.
ಪದವನ್ನು ಆಯ್ಕೆ ಮಾಡಲು ಡಬಲ್ ಟ್ಯಾಪ್ ಮಾಡಿ.
ವಾಕ್ಯವನ್ನು ಆಯ್ಕೆ ಮಾಡಲು ಮೂರು ಬಾರಿ ಟ್ಯಾಪ್ ಮಾಡಿ.
ಅಗತ್ಯವಿರುವಂತೆ ಆಯ್ಕೆಯನ್ನು ಸರಿಹೊಂದಿಸಲು ಹ್ಯಾಂಡಲ್‌ಗಳನ್ನು ಡ್ರ್ಯಾಗ್ ಮಾಡಿ.
ಆಯ್ಕೆಯನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆಮಾಡಿ:
ಕಟ್
ಕಾಪಿ
ಡಿಲೀಟ್ ಮಾಡಿ
ಡ್ಯೂಪ್ಲಿಕೇಟ್
Playgroundಗೆ ಸೇರಿಸಿ
ಪಠ್ಯವಾಗಿ ಕಾಪಿ ಮಾಡಿ
ಮೇಲೆ ಸ್ಪೇಸ್ ಅನ್ನು ಇನ್ಸರ್ಟ್ ಮಾಡಿ
ಅನುವಾದ
ಕೈಬರಹದ ಪಠ್ಯದೊಂದಿಗೆ ಕಾರ್ಯನಿರ್ವಹಿಸಿ
iPad, ನಿಮ್ಮ ಕೈಬರಹವನ್ನು ಸುಗಮವಾಗಿಸಲು, ನೇರವಾಗಿಸಲು ಮತ್ತು ಹೆಚ್ಚು ಸ್ಪಷ್ಟವಾಗಿಸಲು ಪರಿಷ್ಕರಿಸಬಹುದು. ನಿಮ್ಮ ಕೈಬರಹದಲ್ಲಿ ಟೈಪ್ ಮಾಡಿದ ಪಠ್ಯವನ್ನು ಪೇಸ್ಟ್ ಮಾಡಬಹುದು ಅಥವಾ ಪರಿವರ್ತಿಸಬಹುದು, ಇನ್‌ಲೈನ್ ಕಾಗುಣಿತವನ್ನು ಸರಿಪಡಿಸಬಹುದು ಮತ್ತು ಕೈಬರಹವನ್ನು ಮೂವ್ ಮಾಡಬಹುದು ಅಥವಾ ಡಿಲೀಟ್ ಮಾಡಬಹುದು.
ನಿಮ್ಮ iPadನಲ್ಲಿ ಟಿಪ್ಪಣಿ ಆ್ಯಪ್‌ಗೆ
ಹೋಗಿ.ಟಿಪ್ಪಣಿ ಆ್ಯಪ್‌ನಲ್ಲಿ, ಕೈಬರಹವನ್ನು ಆಯ್ಕೆಮಾಡಿ.
ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
ರೀಫೈನ್ ಮಾಡಿ: ನಿಮ್ಮ ಬರವಣಿಗೆಯನ್ನು ಸುಗಮಗೊಳಿಸಲು, ನೇರವಾಗಿಸಲು ಮತ್ತು ಹೆಚ್ಚು ಸ್ಪಷ್ಟವಾಗಿಸಲು, ಪರಿಷ್ಕರಿಸಿ 1 ಎಂಬುದನ್ನು ಟ್ಯಾಪ್ ಮಾಡಿ.
ನಿಮ್ಮ ಕೈಬರಹವನ್ನು ಸ್ವಯಂಚಾಲಿತವಾಗಿ ಪರಿಷ್ಕರಿಸಲು,
ಅನ್ನು ಟ್ಯಾಪ್ ಮಾಡಿ,
ಅನ್ನು ಟ್ಯಾಪ್ ಮಾಡಿ, ನಂತರ 'ಕೈಬರಹವನ್ನು ಸ್ವಯಂಚಾಲಿತವಾಗಿ ಪರಿಷ್ಕರಿಸಿ' ಎಂಬುದನ್ನು ಆನ್ ಮಾಡಿ.ನಿಮ್ಮ ಬರವಣಿಗೆಯನ್ನು ಹೆಚ್ಚು ಸಮಮಟ್ಟವಾಗಿಸಿ: ನೇರವಾಗಿಸಿ ಎಂಬುದನ್ನು ಟ್ಯಾಪ್ ಮಾಡಿ.
ಕಾಗುಣಿತವನ್ನು ತಿದ್ದಿ: ಅಂಡರ್‌ಲೈನ್ ಮಾಡಲಾದ ಪದವನ್ನು ಟ್ಯಾಪ್ ಮಾಡಿ, ನಂತರ ನೀವು ಅದನ್ನು ಹೇಗೆ ಸರಿಪಡಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ. ಈ ಫಿಕ್ಸ್, ನಿಮ್ಮ ಸ್ವಂತ ಬರವಣಿಗೆಯ ಶೈಲಿಯಲ್ಲಿ ಕಾಣಿಸುತ್ತದೆ.
ಕೈಬರಹವನ್ನು ಮೂವ್ ಮಾಡಿ: ಆಯ್ಕೆ ಮಾಡಲಾದ ಪಠ್ಯವನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಅದನ್ನು ಹೊಸ ಸ್ಥಾನಕ್ಕೆ ಡ್ರ್ಯಾಗ್ ಮಾಡಿ.
ಪಠ್ಯದ ಆಬ್ಜೆಕ್ಟ್ ಅನ್ನು ಕೈಬರಹಕ್ಕೆ ಪರಿವರ್ತಿಸಿ: ಡ್ರಾಯಿಂಗ್ ಪ್ರದೇಶದಲ್ಲಿರುವ ಪಠ್ಯ ಆಬ್ಜೆಕ್ಟ್ ಅನ್ನು ಟ್ಯಾಪ್ ಮಾಡಿ,
ಅನ್ನು ಟ್ಯಾಪ್ ಮಾಡಿ, ನಂತರ ಕೈಬರಹಕ್ಕೆ ಪರಿವರ್ತಿಸಿ ಎಂಬುದನ್ನು ಟ್ಯಾಪ್ ಮಾಡಿ. (ಈ ಫೀಚರ್ 2 ಅನ್ನು ಬಳಸಲು ಕನಿಷ್ಠ 10 ಅನನ್ಯ ಸಣ್ಣ ಅಕ್ಷರಗಳೊಂದಿಗೆ ನಿಮ್ಮ ಕೈಬರಹದಲ್ಲಿ ಈ ಹಿಂದೆ ಸೇವ್ ಮಾಡಿದ ಟಿಪ್ಪಣಿಗಳ ಅಗತ್ಯವಿದೆ.)ಟೈಪ್ ಮಾಡಿದ ಪಠ್ಯವನ್ನು ನಿಮ್ಮ ಕೈಬರಹದಲ್ಲಿ ಪೇಸ್ಟ್ ಮಾಡಿ: ವೆಬ್‌ಪುಟ, ಡಾಕ್ಯುಮಂಟ್ ಅಥವಾ ಈಮೇಲ್‌ನಿಂದ ಪಠ್ಯವನ್ನು ಆಯ್ಕೆಮಾಡಿ ಮತ್ತು ಕಾಪಿ ಮಾಡಿ; ನಂತರ ಟಿಪ್ಪಣಿ ಆ್ಯಪ್‌ನಲ್ಲಿನ ಕೈಬರಹದ ಸ್ಥಳದಲ್ಲಿ ಪೇಸ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ. (ಈ ಫೀಚರ್ 2 ಅನ್ನು ಬಳಸಲು ಕನಿಷ್ಠ 10 ಅನನ್ಯ ಸಣ್ಣ ಅಕ್ಷರಗಳೊಂದಿಗೆ ನಿಮ್ಮ ಕೈಬರಹದಲ್ಲಿ ಈ ಹಿಂದೆ ಸೇವ್ ಮಾಡಿದ ಟಿಪ್ಪಣಿಗಳ ಅಗತ್ಯವಿದೆ.)
ಪಠ್ಯವನ್ನು ಅಳಿಸಲು, ಬರವಣಿಗೆಯ ಮೇಲೆ ಗೀಚಿ, ನಂತರ iPadನಲ್ಲಿ ನಿಮ್ಮ ಬರವಣಿಗೆಯ ಉಪಕರಣವನ್ನು (ಉದಾಹರಣೆಗೆ Apple Pencil ಅಥವಾ ನಿಮ್ಮ ಬೆರಳನ್ನು) ಒತ್ತಿ ಹಿಡಿಯಿರಿ. (ಪೆನ್, ಮೋನೋ ಲೈನ್ ಅಥವಾ ಮಾರ್ಕರ್‌ನಂತಹ ಮಾರ್ಕ್ಅಪ್ ಟೂಲ್ ಅನ್ನು ಬಳಸುವಾಗ ಬೆಂಬಲಿಸುತ್ತದೆ.)
ಇತರ ಆ್ಯಪ್‌ಗಳಿಂದ ಚಿತ್ರಗಳನ್ನು ಡ್ರ್ಯಾಗ್ ಮಾಡಿ
ನೀವು ಇತರ ಆ್ಯಪ್‌ಗಳಿಂದ ಚಿತ್ರಗಳನ್ನು ಟಿಪ್ಪಣಿಗೆ ಡ್ರ್ಯಾಗ್ ಮಾಡಬಹುದು ಮತ್ತು ಅವುಗಳನ್ನು ಕೈಬರಹದ ಮತ್ತು ಚಿತ್ರಿಸಿದ ಕಂಟೆಂಟ್ ಜೊತೆಗೆ ಸಂಯೋಜಿಸಬಹುದು. ಚಿತ್ರಿಸುವ ಪ್ರದೇಶದಲ್ಲಿ ಚಿತ್ರವನ್ನು ಸೇರಿಸಿದ ನಂತರ, ನೀವು ಚಿತ್ರವನ್ನು ಮರುಸ್ಥಾನಗೊಳಿಸಬಹುದು ಮತ್ತು ಮರುಗಾತ್ರಗೊಳಿಸಬಹುದು.
Image Wand ಅನ್ನು ಬಳಸುವುದು
Apple Intelligence* ಆನ್ ಆಗಿದ್ದರೆ, ನೀವು ರಚಿಸುವ ರಫ್ ಸ್ಕೆಚ್‌ಗಳ ಆಧಾರದ ಮೇಲೆ ಚಿತ್ರಗಳನ್ನು ರಚಿಸಲು ಟಿಪ್ಪಣಿ ಆ್ಯಪ್‌ನಲ್ಲಿ Image Wand ಅನ್ನು ಬಳಸಬಹುದು. ಸುತ್ತಮುತ್ತಲಿನ ಪ್ರದೇಶದ ಪದಗಳು ಮತ್ತು ಚಿತ್ರಗಳನ್ನು ಆಧರಿಸಿ ಚಿತ್ರವನ್ನು ರಚಿಸಲು ನೀವು ಖಾಲಿ ಜಾಗವನ್ನು ಸಹ ಆಯ್ಕೆಮಾಡಬಹುದು. Apple Intelligence ಜೊತೆಗೆ Image Wand ಬಳಸಿ ಎಂಬುದನ್ನು ನೋಡಿ.