iPadನಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಇಂಪೋರ್ಟ್ ಮತ್ತು ಎಕ್ಸ್‌ಪೋರ್ಟ್ ಮಾಡುವುದು
ಡಿಜಿಟಲ್ ಕ್ಯಾಮರಾ, SD ಮೆಮೊರಿ ಕಾರ್ಡ್ ಅಥವಾ ಕ್ಯಾಮರಾ ಹೊಂದಿರುವ ಬೇರೊಂದು iPhone ಅಥವಾ iPadನಿಂದ ನೀವು ಫೋಟೋಗಳು ಮತ್ತು ವೀಡಿಯೊಗಳನ್ನು ನೇರವಾಗಿ ಫೋಟೋಸ್ ಆ್ಯಪ್‌ಗೆ ಇಂಪೋರ್ಟ್ ಮಾಡಬಹುದು. ನಿಮ್ಮ ಫೋಟೋಗಳು ಮತ್ತು ವೀಡಿಯೊಗಳ ಮಾರ್ಪಡಿಸಿಲ್ಲದ ಆವೃತ್ತಿಗಳನ್ನು ಬಾಹ್ಯ ಡ್ರೈವ್, ಮೆಮೊರಿ ಕಾರ್ಡ್ ಅಥವಾ ನಿಮ್ಮ iPadಗೆ ಕನೆಕ್ಟ್ ಆಗಿರುವ ಇತರೆ ಸಂಗ್ರಹಣಾ ಸಾಧನಕ್ಕೆ ನೇರವಾಗಿ ಎಕ್ಸ್‌ಪೋರ್ಟ್ ಸಹ ಮಾಡಬಹುದು.
ನಿಮ್ಮ iPadಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಇಂಪೋರ್ಟ್ ಮಾಡುವುದು
ಡಿಜಿಟಲ್ ಕ್ಯಾಮರಾ ಅಥವಾ ಬಾಹ್ಯ ಡ್ರೈವ್‌ನಂತಹ ಬೇರೊಂದು ಸಾಧನದಲ್ಲಿ ಸೇವ್ ಮಾಡಲಾಗಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ನಿಮ್ಮ iPadನಲ್ಲಿನ ಫೋಟೋಸ್ ಆ್ಯಪ್‌ಗೆ ಇಂಪೋರ್ಟ್ ಮಾಡಿ.
Lightning ಕನೆಕ್ಟರ್ ಅಥವಾ USB-C ಕನೆಕ್ಟರ್‌ಗೆ ಕ್ಯಾಮರಾ ಅಡಾಪ್ಟರ್ ಅಥವಾ ಕಾರ್ಡ್ ರೀಡರ್ ಅನ್ನು ಇನ್ಸರ್ಟ್ ಮಾಡಿ ಅಥವಾ ಸಾಧನವನ್ನು ನೇರವಾಗಿ ನಿಮ್ಮ iPadಗೆ ಕನೆಕ್ಟ್ ಮಾಡಿ.
ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:
ಕ್ಯಾಮರಾವನ್ನು ಕನೆಕ್ಟ್ ಮಾಡಿ: ಅಡಾಪ್ಟರ್ ಅನ್ನು ಕ್ಯಾಮರಾಗೆ ಕನೆಕ್ಟ್ ಮಾಡಿ, ನಂತರ ಕ್ಯಾಮರಾವನ್ನು ಆನ್ ಮಾಡಿ ಮತ್ತು ಅದು ವರ್ಗಾವಣೆ ಮೋಡ್‌ನಲ್ಲಿ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ, ಕ್ಯಾಮರಾದೊಂದಿಗೆ ಬಂದಿರುವ ಡಾಕ್ಯುಮಂಟೇಷನ್ ಅನ್ನು ನೋಡಿ.
ಬಾಹ್ಯ ಸಂಗ್ರಹಣೆ ಸಾಧನವನ್ನು ಕನೆಕ್ಟ್ ಮಾಡಿ ಅಥವಾ SD ಮೆಮೊರಿ ಕಾರ್ಡ್ ಅನ್ನು ಕಾರ್ಡ್ ರೀಡರ್‌ಗೆ ಸೇರಿಸಿ: ರೀಡರ್‌ನಲ್ಲಿರುವ ಸ್ಲಾಟ್‌ಗೆ ಕಾರ್ಡ್ ಜೋರಾಗಿ ತಳ್ಳಬೇಡಿ; ಅದು ಒಂದು ನಿರ್ದಿಷ್ಟ ಬಗೆಯಲ್ಲಿ ಮಾತ್ರ ಸರಿಯಾಗಿ ಕೂರುತ್ತದೆ.
iPhone ಅಥವಾ iPad ಅನ್ನು ಕನೆಕ್ಟ್ ಮಾಡಿ: ಕ್ಯಾಮರಾ ಅಡಾಪ್ಟರ್‌ಗೆ ಕನೆಕ್ಟ್ ಮಾಡಲು ಸಾಧನದೊಂದಿಗೆ ಬಂದ Lightning ಅಡಾಪ್ಟರ್ ಅಥವಾ USB-C ಕೇಬಲ್ ಅನ್ನು ಬಳಸಿ. ಸಾಧನವನ್ನು ಆನ್ ಮಾಡಿ ಮತ್ತು ಅನ್‌ಲಾಕ್ ಮಾಡಿ.
ನಿಮ್ಮ iPadನಲ್ಲಿ ಫೋಟೋಸ್ ಆ್ಯಪ್‌ಗೆ
ಹೋಗಿ.ಇಂಪೋರ್ಟ್ ಎಂಬುದನ್ನು ಟ್ಯಾಪ್ ಮಾಡಿ.
ನೀವು ಇಂಪೋರ್ಟ್ ಮಾಡಲು ಬಯಸುವ ಫೋಟೋಗಳು ಮತ್ತು ವೀಡಿಯೊಗಳನ್ನು ಆಯ್ಕೆಮಾಡಿ, ನಂತರ ನೀವು ಇಂಪೋರ್ಟ್ ಮಾಡಬೇಕಾದ ಸ್ಥಳವನ್ನು ಆಯ್ಕೆಮಾಡಿ.
ಎಲ್ಲಾ ಐಟಂಗಳನ್ನು ಇಂಪೋರ್ಟ್ ಮಾಡಿ: ಎಲ್ಲವನ್ನೂ ಇಂಪೋರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಆಯ್ಕೆಮಾಡಿದ ಐಟಂಗಳನ್ನು ಇಂಪೋರ್ಟ್ ಮಾಡಿ: ನೀವು ಇಂಪೋರ್ಟ್ ಮಾಡಲು ಬಯಸುವ ಐಟಂಗಳನ್ನು ಟ್ಯಾಪ್ ಮಾಡಿ (ಪ್ರತಿಯೊಂದಕ್ಕೂ ನೀವು ಚೆಕ್‌ಮಾರ್ಕ್ ಅನ್ನು ನೋಡುತ್ತೀರಿ), ಇಂಪೋರ್ಟ್ ಅನ್ನು ಟ್ಯಾಪ್ ಮಾಡಿ, ನಂತರ ಆಯ್ಕೆಮಾಡಿರುವುದನ್ನು ಇಂಪೋರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಫೋಟೋಗಳು ಮತ್ತು ವೀಡಿಯೊಗಳನ್ನು ಇಂಪೋರ್ಟ್ ಮಾಡಿದ ನಂತರ, ಅವುಗಳನ್ನು ಕ್ಯಾಮರಾ, ಕಾರ್ಡ್, iPhone ಅಥವಾ iPadನಲ್ಲಿ ಇಟ್ಟುಕೊಳ್ಳಿ ಅಥವಾ ಡಿಲೀಟ್ ಮಾಡಿ.
ಕ್ಯಾಮರಾ ಅಡಾಪ್ಟರ್ ಅಥವಾ ಕಾರ್ಡ್ ರೀಡರ್ ಅನ್ನು ಡಿಸ್‌ಕನೆಕ್ಟ್ ಮಾಡಿ.
ಫೋಟೋಗಳು ಮತ್ತು ವೀಡಿಯೊಗಳನ್ನು ಬಾಹ್ಯ ಸಂಗ್ರಹಣೆಯ ಸಾಧನಕ್ಕೆ ಎಕ್ಸ್‌ಪೋರ್ಟ್ ಮಾಡಿ
ನಿಮ್ಮ iPadನಲ್ಲಿ ನೀವು ತೆಗೆದುಕೊಂಡ ಫೋಟೋಗಳು ಮತ್ತು ವೀಡಿಯೊಗಳನ್ನು ನೇರವಾಗಿ ಬಾಹ್ಯ ಡ್ರೈವ್, ಮೆಮೊರಿ ಕಾರ್ಡ್ ಅಥವಾ ಇತರೆ ಸಂಗ್ರಹಣಾ ಸಾಧನಕ್ಕೆ ನೀವು ಎಕ್ಸ್‌ಪೋರ್ಟ್ ಮಾಡಬಹುದು.
ಗಮನಿಸಿ: ಎಡಿಟ್ ಮಾಡಲಾದ ಫೋಟೋಗಳು ಮತ್ತು ವೀಡಿಯೊಗಳಿಗಾಗಿ, ಮಾರ್ಪಡಿಸಿಲ್ಲದ ಒರಿಜಿನಲ್ ಆವೃತ್ತಿಯನ್ನು ಎಕ್ಸ್‌ಪೋರ್ಟ್ ಮಾಡಲಾಗುತ್ತದೆ.
Lightning ಅಥವಾ USB-C ಕನೆಕ್ಟರ್ ಅನ್ನು ಬಳಸಿಕೊಂಡು ನಿಮ್ಮ iPad ಅನ್ನು ಸಂಗ್ರಹಣಾ ಸಾಧನಕ್ಕೆ ಕನೆಕ್ಟ್ ಮಾಡಿ ಅಥವಾ ಸಾಧನವನ್ನು ನೇರವಾಗಿ ನಿಮ್ಮ iPadಗೆ ಕನೆಕ್ಟ್ ಮಾಡಿ.
ನಿಮ್ಮ iPadನಲ್ಲಿ ಫೋಟೋಸ್ ಆ್ಯಪ್‌ಗೆ
ಹೋಗಿ.ನೀವು ಎಕ್ಸ್‌ಪೋರ್ಟ್ ಮಾಡಲು ಬಯಸುವ ಫೋಟೋಗಳು ಮತ್ತು ವೀಡಿಯೊಗಳನ್ನು ಆಯ್ಕೆಮಾಡಿ.
ಅನ್ನು ಟ್ಯಾಪ್ ಮಾಡಿ, ನಂತರ ಮಾರ್ಪಡಿಸಿಲ್ಲದ ಒರಿಜಿನಲ್ ಅನ್ನು ಎಕ್ಸ್‌ಪೋರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.ನಿಮ್ಮ ಸಂಗ್ರಹಣೆಯ ಸಾಧನವನ್ನು ಟ್ಯಾಪ್ ಮಾಡಿ (ಸ್ಥಳದ ಕೆಳಗೆ), ನಂತರ ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಆಲ್ಬಮ್ ಅನ್ನು ಲಾಕ್ ಮಾಡಿದ್ದರೆ, ಮರೆಮಾಡಿರುವ ಆಲ್ಬಮ್‌ನಲ್ಲಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ವರ್ಗಾಯಿಸಲಾಗುವುದಿಲ್ಲ. ಅನ್‌ಲಾಕ್ ಮಾಡಲು, ಸೆಟ್ಟಿಂಗ್ಸ್
> ಆ್ಯಪ್‌ಗಳು > ಫೋಟೋಸ್ ಎಂಬಲ್ಲಿಗೆ ಹೋಗಿ, ನಂತರ Face IDಯನ್ನು ಬಳಸಿ, Touch IDಯನ್ನು ಬಳಸಿ ಅಥವಾ ಪಾಸ್‌ಕೋಡ್ ಬಳಸಿ ಎಂಬುದನ್ನು ಆಫ್ ಮಾಡಿ.