iPadನಲ್ಲಿನ Mail ಆ್ಯಪ್ ಮೂಲಕ ಈಮೇಲ್ ಅನ್ನು ಕಳುಹಿಸುವುದು
ನಿಮ್ಮ ಯಾವುದೇ ಈಮೇಲ್ ಖಾತೆಯಿಂದ ನೀವು ಈಮೇಲ್ ಸಂದೇಶಗಳನ್ನು ಬರೆಯಬಹುದು, ಕಳುಹಿಸಬಹುದು ಮತ್ತು ನಿಗದಿಪಡಿಸಬಹುದು.

ಈಮೇಲ್ ಬರೆಯುವುದು ಮತ್ತು ಕಳುಹಿಸುವುದು
ನಿಮ್ಮ iPadನಲ್ಲಿ Mail ಆ್ಯಪ್‌ಗೆ
ಹೋಗಿ.
ಅನ್ನು ಟ್ಯಾಪ್ ಮಾಡಿ.ಈಮೇಲ್‌ನಲ್ಲಿ ಟ್ಯಾಪ್ ಮಾಡಿ, ನಂತರ ನಿಮ್ಮ ಸಂದೇಶವನ್ನು ಟೈಪ್ ಮಾಡಿ.
ಆನ್‌ಸ್ಕ್ರೀನ್ ಕೀಬೋರ್ಡ್‌ನೊಂದಿಗೆ, ನೀವು ಪ್ರತ್ಯೇಕ ಕೀಗಳನ್ನು ಟ್ಯಾಪ್ ಮಾಡಬಹುದು. ಅಥವಾ ಚಿಕ್ಕ QuickType ಕೀಬೋರ್ಡ್ ಅನ್ನು ಬಳಸಲು ಮೂರು ಬೆರಳುಗಳಿಂದ ಒಳಮುಖವಾಗಿ ಪಿಂಚ್ ಮಾಡಿ, ನಂತರ ನಿಮ್ಮ ಬೆರಳನ್ನು ಒಂದು ಅಕ್ಷರದಿಂದ ಇನ್ನೊಂದು ಅಕ್ಷರಕ್ಕೆ ಸ್ಲೈಡ್ ಮಾಡಿ, ಪ್ರತಿ ಪದದ ನಂತರ ನಿಮ್ಮ ಬೆರಳನ್ನು ಎತ್ತಿರಿ.
ಫಾರ್ಮ್ಯಾಟಿಂಗ್ ಅನ್ನು ಬದಲಾಯಿಸಲು, ಕೀಬೋರ್ಡ್‌ನ ಮೇಲ್ಭಾಗದಲ್ಲಿ
ಅನ್ನು ಟ್ಯಾಪ್ ಮಾಡಿ.ನೀವು ಪಠ್ಯದ ಫಾಂಟ್ ಶೈಲಿ ಮತ್ತು ಬಣ್ಣವನ್ನು ಬದಲಾಯಿಸಬಹುದು, ಬೋಲ್ಡ್ ಅಥವಾ ಇಟ್ಯಾಲಿಕ್ ಶೈಲಿಯನ್ನು ಬಳಸಬಹುದು, ಬುಲೆಟೆಡ್ ಅಥವಾ ಸಂಖ್ಯೆಗಳನ್ನು ನೀಡಿರುವ ಪಟ್ಟಿಯನ್ನು ಸೇರಿಸಬಹುದು ಮತ್ತು ಇನ್ನಷ್ಟು ಕ್ರಿಯೆಗಳನ್ನು ಮಾಡಬಹುದು.
ನಿಮ್ಮ ಸಂದೇಶವನ್ನು ಕಳುಹಿಸಲು
ಅನ್ನು ಟ್ಯಾಪ್ ಮಾಡಿ.
ಸಲಹೆ: ನೀವು ಈಮೇಲ್‌ಗಳನ್ನು ಕಂಪೋಸ್ ಮಾಡುವಾಗಲೇ ನೀವು ಸ್ಟಿಕರ್‌ಗಳನ್ನು ರಚಿಸಬಹುದು ಮತ್ತು ಅವುಗಳನ್ನು ಈಮೇಲ್‌ಗಳಿಗೆ ಸೇರಿಸಬಹುದು. iPad ಕೀಬೋರ್ಡ್‌ನ ಮೂಲಕ ಎಮೋಜಿ, Memoji ಮತ್ತು ಸ್ಟಿಕ್ಕರ್‌ಗಳನ್ನು ಸೇರಿಸಿ ಅನ್ನು ನೋಡಿ.
ಸ್ವೀಕೃತದಾರರನ್ನು ಸೇರಿಸುವುದು
ನಿಮ್ಮ iPadನಲ್ಲಿ Mail ಆ್ಯಪ್‌ಗೆ
ಹೋಗಿ.
ಅನ್ನು ಟ್ಯಾಪ್ ಮಾಡಿ, ‘ಇವರಿಗೆ’ ಎಂಬ ಫೀಲ್ಡ್ ಅನ್ನು ಟ್ಯಾಪ್ ಮಾಡಿ, ನಂತರ ಸ್ವೀಕೃತದಾರರ ಹೆಸರುಗಳನ್ನು ಟೈಪ್ ಮಾಡಿ.ನೀವು ಟೈಪ್ ಮಾಡುವಾಗ, Mail ಆ್ಯಪ್ ನಿಮ್ಮ ಸಂಪರ್ಕಗಳಿಂದ ಜನರನ್ನು ಸ್ವಯಂಚಾಲಿತವಾಗಿ ಸೂಚಿಸುತ್ತದೆ, ಜೊತೆಗೆ ಒಂದಕ್ಕಿಂತ ಹೆಚ್ಚು ಇಮೇಲ್ ವಿಳಾಸಗಳನ್ನು ಹೊಂದಿರುವ ಜನರ ಇಮೇಲ್ ವಿಳಾಸಗಳನ್ನೂ ಸೂಚಿಸುತ್ತದೆ.
ಸಂಪರ್ಕ ಆ್ಯಪ್ ಅನ್ನು ತೆರೆಯಲು ಮತ್ತು ಅಲ್ಲಿಂದ ಸ್ವೀಕೃತದಾರರನ್ನು ಸೇರಿಸಲು ನೀವು
ಅನ್ನು ಸಹ ಟ್ಯಾಪ್ ಮಾಡಬಹುದು.ನೀವು ಇತರ ಜನರಿಗೆ ಕಾಪಿಯನ್ನು ಕಳುಹಿಸಲು ಬಯಸಿದರೆ, Cc/Bcc ಫೀಲ್ಡ್ ಅನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:
Cc ಫೀಲ್ಡ್ ಅನ್ನು ಟ್ಯಾಪ್ ಮಾಡಿ, ನಂತರ ನೀವು ಯಾವ ವ್ಯಕ್ತಿಗಳಿಗೆ ಕಾಪಿಯನ್ನು ಕಳುಹಿಸಲು ಬಯಸುವಿರೋ ಅವರ ಹೆಸರುಗಳನ್ನು ನಮೂದಿಸಿ.
Bcc ಫೀಲ್ಡ್ ಅನ್ನು ಟ್ಯಾಪ್ ಮಾಡಿ, ನಂತರ ಇತರ ಸ್ವೀಕೃತದಾರರು ನೋಡಬಾರದೆಂದು ನೀವು ಬಯಸುವ ಜನರ ಹೆಸರುಗಳನ್ನು ನಮೂದಿಸಿ.
ಈಮೇಲ್ ಸಂದೇಶಕ್ಕೆ ಹೈಪರ್‌ಲಿಂಕ್ ಅನ್ನು ಸೇರಿಸುವುದು
Safar
ಅಥವಾ ಮತ್ತೊಂದು ವೆಬ್ ಬ್ರೌಸರ್‌ನಲ್ಲಿ, ವೆಬ್‌ಪುಟದ URL ಅನ್ನು ಕಾಪಿ ಮಾಡಿ.ನೀವು Mail ಆ್ಯಪ್‌ನಲ್ಲಿ
ಸಂದೇಶವನ್ನು ಕಂಪೋಸ್ ಮಾಡುವಾಗ, ನೀವು ಲಿಂಕ್ ಮಾಡಲು ಬಯಸುವ ಪಠ್ಯವನ್ನು ಹೈಲೈಟ್ ಮಾಡಿ.ಪೇಸ್ಟ್ ಎಂಬುದನ್ನು ಟ್ಯಾಪ್ ಮಾಡಿ.
ಈಮೇಲ್ ಡ್ರಾಫ್ಟ್‌ನಲ್ಲಿರುವ ಲಿಂಕ್ ಅನ್ನು ಎಡಿಟ್ ಮಾಡಿ
ನಿಮ್ಮ iPadನಲ್ಲಿ Mail ಆ್ಯಪ್‌ಗೆ
ಹೋಗಿ.ನೀವು ಬರೆಯುತ್ತಿರುವ ಸಂದೇಶದಲ್ಲಿ, ಲಿಂಕ್ ಅಥವಾ ಲಿಂಕ್ ಮಾಡಲಾದ ಪಠ್ಯವನ್ನು ಟ್ಯಾಪ್ ಮಾಡಿ, ನಂತರ
ಅನ್ನು ಟ್ಯಾಪ್ ಮಾಡಿ.ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
ಲಿಂಕ್ ಪ್ರಿವ್ಯೂ ತೋರಿಸಿ: ಹೈಪರ್‌ಲಿಂಕ್ ಮಾಡಲಾದ ಪಠ್ಯವನ್ನು ರಿಚ್ ಎಂಬೆಡೆಡ್ ವೆಬ್‌ಸೈಟ್ ಪ್ರಿವ್ಯೂ ಚಿತ್ರಕ್ಕೆ ಬದಲಾಯಿಸಿ.
ಲಿಂಕ್ ಅನ್ನು ತೆರೆಯಿರಿ: ವೆಬ್ ಬ್ರೌಸರ್‌ನಲ್ಲಿ ಆ ವೆಬ್‌ಸೈಟ್‌ಗೆ ಹೋಗಿ.
ಲಿಂಕ್ ಅನ್ನು ಎಡಿಟ್ ಮಾಡಿ: ಲಿಂಕ್‌ನ URL ಅನ್ನು ಬದಲಾಯಿಸಿ.
ಲಿಂಕ್ ಅನ್ನು ತೆಗೆದುಹಾಕಿ: ನಿಮ್ಮ ಈಮೇಲ್ ಸಂದೇಶದ ಡ್ರಾಫ್ಟ್‌ನಲ್ಲಿರುವ ಲಿಂಕ್ ಅನ್ನು ಡಿಲೀಟ್ ಮಾಡಿ.
ಪಠ್ಯದ ವಿವರಣೆಯನ್ನು ಎಡಿಟ್ ಮಾಡಿ: ಲಿಂಕ್ ಮಾಡಲಾಗಿರುವ ಪಠ್ಯವನ್ನು ಬದಲಾಯಿಸಿ.
ಫೋಟೋದಿಂದ ಇಮೇಲ್ ವಿಳಾಸವನ್ನು ಕ್ಯಾಪ್ಚರ್ ಮಾಡುವುದು
iPadನಲ್ಲಿನ ಫೋಟೋಸ್ ಆ್ಯಪ್ ಅನ್ನು ಬಳಸಿಕೊಂಡು ವ್ಯಾಪಾರದ ಕಾರ್ಡ್, ಪೋಸ್ಟರ್ ಅಥವಾ ಇತ್ಯಾದಿಗಳಲ್ಲಿ ಪ್ರಿಂಟ್ ಮಾಡಲಾಗಿರುವ ಈಮೇಲ್ ವಿಳಾಸದೊಂದಿಗೆ ಸಂವಹಿಸಲು ನೀವು ಲೈವ್ ಪಠ್ಯವನ್ನು ಬಳಸಬಹುದು. ಇದು ವಿಳಾಸವನ್ನು ಹಸ್ತಚಾಲಿತವಾಗಿ ನಮೂದಿಸದೇ ಈಮೇಲ್‌ಗಳನ್ನು ತ್ವರಿತವಾಗಿ ಪ್ರಾರಂಭಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
ನಿಮ್ಮ iPadನಲ್ಲಿ ಫೋಟೋಸ್ ಆ್ಯಪ್‌ಗೆ
ಹೋಗಿ.ಫೋಟೋವನ್ನು ತೆರೆಯಿರಿ, ನಂತರ ನೀವು ಕ್ಯಾಪ್ಚರ್ ಮಾಡಲು ಬಯಸುವ ಈಮೇಲ್ ವಿಳಾಸವನ್ನು ಟ್ಯಾಪ್ ಮಾಡಿ.
ಗುರುತಿಸಿದ ಪಠ್ಯದ ಸುತ್ತಲೂ ಹಳದಿ ಫ್ರೇಮ್ ಕಾಣಿಸಿಕೊಂಡ ನಂತರ,
ಅನ್ನು ಟ್ಯಾಪ್ ಮಾಡಿ.ಈಮೇಲ್ ವಿಳಾಸವನ್ನು ಆಯ್ಕೆ ಮಾಡಲು ಗ್ರ್ಯಾಬ್ ಪಾಯಿಂಟ್‌ಗಳನ್ನು ಟ್ಯಾಪ್ ಮಾಡಿ ಅಥವಾ ಬಳಸಿ, ನಂತರ ಹೊಸ Mail ಸಂದೇಶವನ್ನು ಟ್ಯಾಪ್ ಮಾಡಿ.
ಸಲಹೆ: ಕ್ಯಾಮರಾ ಆ್ಯಪ್ ಬಳಸಿ ಈಮೇಲ್ ವಿಳಾಸವನ್ನು ಕ್ಯಾಪ್ಚರ್ ಮಾಡಲು ನೀವು ಅದೇ Live Text ಫೀಚರ್ ಅನ್ನು ಬಳಸಬಹುದು. ನಿಮ್ಮ iPad ಕ್ಯಾಮರಾದೊಂದಿಗೆ ಲೈವ್ ಪಠ್ಯವನ್ನು ಬಳಸಿ ಅನ್ನು ನೋಡಿ.
ನಂತರ ಕಳುಹಿಸಿ ಎಂಬುದರ ಮೂಲಕ ಈಮೇಲ್ ಅನ್ನು ನಿಗದಿಪಡಿಸಿ
ನಿಮ್ಮ iPadನಲ್ಲಿ Mail ಆ್ಯಪ್‌ಗೆ
ಹೋಗಿ.ನೀವು ಬರೆಯುತ್ತಿರುವ ಸಂದೇಶದಲ್ಲಿ,
ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ನೀವು ಸಂದೇಶವನ್ನು ಯಾವಾಗ ಕಳುಹಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ.ಹೆಚ್ಚಿನ ಆಯ್ಕೆಗಳನ್ನು ನೋಡಲು, ನಂತರ ಕಳುಹಿಸಿ ಎಂಬುದನ್ನು ಟ್ಯಾಪ್ ಮಾಡಿ.
ಸ್ವಯಂಚಾಲಿತವಾಗಿ ಪ್ರತಿಯನ್ನು ನಿಮಗೆ ನೀವೇ ಕಳುಹಿಸಿಕೊಳ್ಳುವುದು
ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ
ಹೋಗಿ.ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ Mail ಎಂಬುದನ್ನು ಟ್ಯಾಪ್ ಮಾಡಿ.
“ಯಾವಾಗಲೂ ನನ್ನನ್ನು Bccಯಲ್ಲಿ ಇರಿಸಿ” ಎಂಬುದನ್ನು ಆನ್ ಮಾಡಿ (ರಚಿಸುವುದು ಎಂಬುದರ ಕೆಳಗೆ).
ಬೇರೊಂದು ಖಾತೆಯಿಂದ ಈಮೇಲ್ ಅನ್ನು ಕಳುಹಿಸಿ
ನೀವು ಒಂದಕ್ಕಿಂತ ಹೆಚ್ಚು ಈಮೇಲ್ ಖಾತೆಗಳನ್ನು ಹೊಂದಿದ್ದರೆ, ಯಾವ ಖಾತೆಯಿಂದ ಈಮೇಲ್ ಕಳುಹಿಸಬೇಕು ಎಂಬುದನ್ನು ನೀವು ನಿರ್ದಿಷ್ಟಪಡಿಸಬಹುದು.
ನಿಮ್ಮ iPadನಲ್ಲಿ Mail ಆ್ಯಪ್‌ಗೆ
ಹೋಗಿ.ನಿಮ್ಮ ಸಂದೇಶದ ಡ್ರಾಫ್ಟ್‌ನಲ್ಲಿ, Cc/Bcc, ಇವರಿಂದ ಎಂಬ ಫೀಲ್ಡ್ ಅನ್ನು ಟ್ಯಾಪ್ ಮಾಡಿ.
“ಇವರಿಂದ” ಫೀಲ್ಡ್ ಅನ್ನು ಟ್ಯಾಪ್ ಮಾಡಿ, ನಂತರ ಖಾತೆಯನ್ನು ಆಯ್ಕೆ ಮಾಡಿ.
ನಿಮ್ಮ ಈಮೇಲ್ ಅನ್ನು ಸಾರಾಂಶಗೊಳಿಸಲು, ಪ್ರೂಫ್ ರೀಡ್ ಮಾಡಲು ಮತ್ತು ಮಾರ್ಪಡಿಸಲು ಬರವಣಿಗೆ ಟೂಲ್‌ಗಳನ್ನು ಬಳಸುವುದು
Apple Intelligence* ಬಳಸಿ, ನೀವು ಒಂದು ಟ್ಯಾಪ್‌ನೊಂದಿಗೆ ಆಯ್ದ ಪಠ್ಯವನ್ನು ಸಂಕ್ಷಿಪ್ತಗೊಳಿಸಬಹುದು, ನಿಮ್ಮ ಕೆಲಸವನ್ನು ಪ್ರೂಫ್ ರೀಡ್ ಮಾಡಲು ಮತ್ತು ಸರಿಯಾದ ಪದಗಳು ಮತ್ತು ಟೋನ್ ಅನ್ನು ಹುಡುಕುವುದಕ್ಕೆ ನಿಮಗೆ ಸಹಾಯ ಮಾಡಲು ಅದೇ ಪಠ್ಯದ ವಿಭಿನ್ನ ಆವೃತ್ತಿಗಳನ್ನು ರಚಿಸಲು ಬರವಣಿಗೆಯ ಟೂಲ್‌ಗಳನ್ನು ಬಳಸಬಹುದು. Apple Intelligence ಮೂಲಕ ಬರವಣಿಗೆಯ ಟೂಲ್‌ಗಳನ್ನು ಬಳಸಿ ಎಂಬುದನ್ನು ನೋಡಿ.