iPadನಲ್ಲಿ ಫೋಲ್ಡರ್‌ಗಳಲ್ಲಿ ನಿಮ್ಮ ಆ್ಯಪ್‌ಗಳನ್ನು ವ್ಯವಸ್ಥಿತಗೊಳಿಸಿ

ನಿಮ್ಮ ಹೋಮ್ ಸ್ಕ್ರೀನ್ ಪುಟಗಳಲ್ಲಿ ಆ್ಯಪ್‌ಗಳನ್ನು ಸುಲಭವಾಗಿ ಹುಡುಕಲು ಅವುಗಳನ್ನು ಫೋಲ್ಡರ್‌ಗಳಲ್ಲಿ ವ್ಯವಸ್ಥಿತಗೊಳಿಸಿ.

ಫೋಲ್ಡರ್ ರಚಿಸಿ

  1. ಹೋಮ್ ಸ್ಕ್ರೀನ್‌ಗೆ ಹೋಗಿ.

  2. ಫೋಲ್ಡರ್ ರಚಿಸಲು, ಆ್ಯಪ್ ಅನ್ನು ಮತ್ತೊಂದು ಆ್ಯಪ್‌ನ ಮೇಲೆ ಡ್ರ್ಯಾಗ್ ಮಾಡಿ, ನಂತರ ಇತರ ಆ್ಯಪ್‌ಗಳನ್ನು ಫೋಲ್ಡರ್‌ಗೆ ಡ್ರ್ಯಾಗ್ ಮಾಡಿ.

    ಒಂದು ಫೋಲ್ಡರ್ ಅನೇಕ ಆ್ಯಪ್‌ಗಳ ಪುಟಗಳನ್ನು ಒಳಗೊಂಡಿರಬಹುದು.

  3. ಫೋಲ್ಡರ್ ಅನ್ನು ಮರುಹೆಸರಿಸಲು, ಅದನ್ನು ಒತ್ತಿ ಹಿಡಿದುಕೊಳ್ಳಿ, ಮರುಹೆಸರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಹೊಸ ಹೆಸರನ್ನು ನಮೂದಿಸಿ.

    ಆ್ಯಪ್‌ಗಳು ಜಿಗಲ್ ಮಾಡಲು ಪ್ರಾರಂಭಿಸಿದರೆ, ಹೋಮ್ ಸ್ಕ್ರೀನ್ ಹಿನ್ನೆಲೆಯನ್ನು ಟ್ಯಾಪ್ ಮಾಡಿ ಮತ್ತು ಪುನಃ ಪ್ರಯತ್ನಿಸಿ.

  4. ಪೂರ್ಣಗೊಂಡ ನಂತರ, ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ಹೋಮ್ ಸ್ಕ್ರೀನ್‌ನಲ್ಲಿನ ನಿಮ್ಮ ಆ್ಯಪ್‌ಗಳನ್ನು ವ್ಯವಸ್ಥಿತಗೊಳಿಸುವುದರಿಂದ ಆ್ಯಪ್ ಲೈಬ್ರರಿಯಲ್ಲಿರುವ ಆ್ಯಪ್‌ಗಳ ವ್ಯವಸ್ಥಿತಗೊಳಿಸುವಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ.

ನಿಮ್ಮ ಹೋಮ್ ಸ್ಕ್ರೀನ್‌ನಿಂದ ಫೋಲ್ಡರ್ ಅನ್ನು ಡಿಲೀಟ್ ಮಾಡಿ

  1. ಹೋಮ್ ಸ್ಕ್ರೀನ್‌ಗೆ ಹೋಗಿ.

  2. ಆ್ಯಪ್‌ಗಳು ಜಿಗಲ್ ಮಾಡಲು ಪ್ರಾರಂಭಿಸುವವರೆಗೆ ಹೋಮ್ ಸ್ಕ್ರೀನ್ ಹಿನ್ನೆಲೆಯನ್ನು ಅನ್ನು ಒತ್ತಿ ಹಿಡಿದುಕೊಳ್ಳಿ.

  3. ಫೋಲ್ಡರ್ ಅನ್ನು ತೆರೆಯಲು ಅದನ್ನು ಟ್ಯಾಪ್ ಮಾಡಿ, ನಂತರ ಅದರಿಂದ ಎಲ್ಲಾ ಆ್ಯಪ್‌ಗಳನ್ನು ಹೋಮ್ ಸ್ಕ್ರೀನ್‌ಗೆ ಡ್ರ್ಯಾಗ್ ಮಾಡಿ.

    ಫೋಲ್ಡರ್ ಖಾಲಿಯಾಗಿರುವಾಗ, ಅದನ್ನು ಸ್ವಯಂಚಾಲಿತವಾಗಿ ಡಿಲೀಟ್ ಮಾಡಲಾಗುತ್ತದೆ.

ಆ್ಯಪ್ ಒಂದನ್ನು ಫೋಲ್ಡರ್‌ನಿಂದ ಹೋಮ್ ಸ್ಕ್ರೀನ್‌ಗೆ ಮೂವ್ ಮಾಡುವುದು

ಹುಡುಕಲು ಮತ್ತು ತೆರೆಯಲು ಸುಲಭವಾಗುವಂತೆ ನೀವು ಆ್ಯಪ್ ಅನ್ನು ಫೋಲ್ಡರ್‌ನಿಂದ ಹೋಮ್ ಸ್ಕ್ರೀನ್ ಪುಟಕ್ಕೆ ಮೂವ್ ಮಾಡಬಹುದು.

  1. ಹೋಮ್ ಸ್ಕ್ರೀನ್‌ಗೆ ಹೋಗಿ.

  2. ಆ್ಯಪ್ ಅನ್ನು ಒಳಗೊಂಡಿರುವ ಫೋಲ್ಡರ್ ಅನ್ನು ಪತ್ತೆಮಾಡಿ, ನಂತರ ಅದನ್ನು ತೆರೆಯಲು ಫೋಲ್ಡರ್ ಅನ್ನು ಟ್ಯಾಪ್ ಮಾಡಿ.

  3. ಆ್ಯಪ್‌ಗಳು ಜಿಗಲ್ ಮಾಡಲು ಪ್ರಾರಂಭವಾಗುವವರೆಗೆ ಆ್ಯಪ್ ಅನ್ನು ಒತ್ತಿ ಹಿಡಿದುಕೊಳ್ಳಿ.

  4. ಆ್ಯಪ್ ಅನ್ನು ಫೋಲ್ಡರ್‌ನಿಂದ ಹೋಮ್ ಸ್ಕ್ರೀನ್‌ಗೆ ಡ್ರ್ಯಾಗ್ ಮಾಡಿ.