iPad ಸ್ಟೇಟಸ್ ಐಕಾನ್‌ಗಳ ಅರ್ಥವನ್ನು ತಿಳಿಯಿರಿ

ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಸ್ಟೇಟಸ್ ಬಾರ್‌ನಲ್ಲಿನ ಐಕಾನ್‌ಗಳು iPad ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ.

ಗಮನಿಸಿ: ನೀವು ಫೋಕಸ್ ಅನ್ನು ಆನ್ ಮಾಡಿದರೆ, ಅದರ ಐಕಾನ್ ಸ್ಟೇಟಸ್ ಬಾರ್‌ನಲ್ಲಿ ಕಾಣಿಸಿಕೊಳ್ಳುತ್ತದೆ.

ಸ್ಟೇಟಸ್ ಐಕಾನ್

ಅದರ ಅರ್ಥವೇನು

Wi-Fi ಸ್ಟೇಟಸ್ ಐಕಾನ್.

Wi-Fi. iPad, Wi-Fi ಇಂಟರ್ನೆಟ್ ಕನೆಕ್ಷನ್ ಅನ್ನು ಹೊಂದಿದೆ. ಇನ್ನಷ್ಟು ಬಾರ್‌ಗಳು ಇದ್ದರೆ, ಕನೆಕ್ಷನ್ ಬಲಗೊಳ್ಳುತ್ತದೆ. ಲಭ್ಯವಿರುವ ನೆಟ್‌ವರ್ಕ್‌ಗಳನ್ನು ನೋಡಿ ಮತ್ತು Wi-Fiಗೆ ಕನೆಕ್ಟ್ ಮಾಡಿ ಅನ್ನು ನೋಡಿ.

ಮೊಬೈಲ್ ಸಿಗ್ನಲ್ ಸಾಮರ್ಥ್ಯದ ಸ್ಟೇಟಸ್ ಐಕಾನ್ (ನಾಲ್ಕು ಬಾರ್‌ಗಳು).

ಮೊಬೈಲ್ ಸೇವೆಯ ಸಿಗ್ನಲ್. iPad ( Wi-Fi + Cellular ಮಾಡಲ್‌ಗಳು) ಮೊಬೈಲ್ ನೆಟ್‌ವರ್ಕ್‌ನ ವ್ಯಾಪ್ತಿಯಲ್ಲಿದೆ. ಯಾವುದೇ ಸಿಗ್ನಲ್ ಇಲ್ಲದಿದ್ದರೆ, “ಸೇವೆ ಲಭ್ಯವಿಲ್ಲ” ಎಂಬುದು ಕಾಣಿಸಿಕೊಳ್ಳುತ್ತದೆ.

ಏರ್‌ಪ್ಲೇನ್ ಮೋಡ್ ಸ್ಟೇಟಸ್ ಐಕಾನ್.

ಏರ್‌ಪ್ಲೇನ್ ಮೋಡ್. ಏರ್‌ಪ್ಲೇನ್ ಮೋಡ್ ಆನ್ ಆಗಿದೆ. ವೈರ್‌ಲೆಸ್ ಅಲ್ಲದ ಫೀಚರ್‌ಗಳು ಲಭ್ಯವಿವೆ, ಆದರೆ ವೈರ್‌ಲೆಸ್ ಫಂಕ್ಷನ್‌ಗಳನ್ನು ನಿಷ್ಕ್ರಿಯಗೊಳಿಸಬಹುದು. ಪ್ರಯಾಣಕ್ಕಾಗಿ ಸೆಟ್ಟಿಂಗ್ಸ್ ಅನ್ನು ಆಯ್ಕೆಮಾಡಿ ಎಂಬುದನ್ನು ನೋಡಿ.

5G ಸ್ಟೇಟಸ್ ಐಕಾನ್.

5G. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5G ನೆಟ್‌ವರ್ಕ್ ಲಭ್ಯವಿದೆ ಮತ್ತು ಬೆಂಬಲಿತ ಮಾಡಲ್‌ಗಳು ಆ ನೆಟ್‌ವರ್ಕ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಆಗಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ನಿಮ್ಮ iPadನೊಂದಿಗೆ 5G ಬಳಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

5G ಸ್ಟೇಟಸ್ ಐಕಾನ್.

5G UC. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5G UC ನೆಟ್‌ವರ್ಕ್ ಲಭ್ಯವಿದ್ದು, ಅದು ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5Gಯ ಹೆಚ್ಚಿನ ಫ್ರೀಕ್ವನ್ಸಿ ಆವೃತ್ತಿಯನ್ನು ಒಳಗೊಂಡಿರುತ್ತದೆ. ಬೆಂಬಲಿತ ಮಾಡಲ್‌ಗಳನ್ನು ಆ ನೆಟ್‌ವರ್ಕ್ ಮೂಲಕ ಇಂಟರ್‌ನೆಟ್‌ಗೆ ಕನೆಕ್ಟ್ ಮಾಡಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ನಿಮ್ಮ iPadನೊಂದಿಗೆ 5G ಬಳಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

5G+ ಸ್ಟೇಟಸ್ ಐಕಾನ್.

5G+. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5G+ ನೆಟ್‌ವರ್ಕ್ ಲಭ್ಯವಿದ್ದು, ಅದು ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5Gಯ ಹೆಚ್ಚಿನ ಫ್ರೀಕ್ವನ್ಸಿ ಆವೃತ್ತಿಯನ್ನು ಒಳಗೊಂಡಿರುತ್ತದೆ. ಬೆಂಬಲಿತ ಮಾಡಲ್‌ಗಳನ್ನು ಆ ನೆಟ್‌ವರ್ಕ್ ಮೂಲಕ ಇಂಟರ್‌ನೆಟ್‌ಗೆ ಕನೆಕ್ಟ್ ಮಾಡಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ನಿಮ್ಮ iPadನೊಂದಿಗೆ 5G ಬಳಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

5G UW ಸ್ಟೇಟಸ್ ಐಕಾನ್.

5G UW. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5G UW ನೆಟ್‌ವರ್ಕ್ ಲಭ್ಯವಿದ್ದು, ಅದು ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5Gಯ ಹೆಚ್ಚಿನ ಫ್ರೀಕ್ವನ್ಸಿ ಆವೃತ್ತಿಯನ್ನು ಒಳಗೊಂಡಿರುತ್ತದೆ. ಬೆಂಬಲಿತ ಮಾಡಲ್‌ಗಳನ್ನು ಆ ನೆಟ್‌ವರ್ಕ್ ಮೂಲಕ ಇಂಟರ್‌ನೆಟ್‌ಗೆ ಕನೆಕ್ಟ್ ಮಾಡಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ನಿಮ್ಮ iPadನೊಂದಿಗೆ 5G ಬಳಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

5G E ಸ್ಟೇಟಸ್ ಐಕಾನ್.

5G E. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5G E ನೆಟ್‌ವರ್ಕ್ ಲಭ್ಯವಿದೆ ಮತ್ತು ಬೆಂಬಲಿತ ಮಾಡಲ್‌ಗಳು ಆ ನೆಟ್‌ವರ್ಕ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಆಗಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

LTE ಸ್ಟೇಟಸ್ ಐಕಾನ್.

LTE.iPad ( Wi-Fi + Cellular ಮಾಡಲ್‌ಗಳು) 4G LTE ನೆಟ್‌ವರ್ಕ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಆಗಿದೆ (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

4G ಸ್ಟೇಟಸ್ ಐಕಾನ್.

4G.iPad (Wi-Fi + Cellular ಮಾಡಲ್‌ಗಳು) 4G ನೆಟ್‌ವರ್ಕ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಆಗಿದೆ (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

3G ಸ್ಟೇಟಸ್ ಐಕಾನ್.

3G.iPad (Wi-Fi + Cellular ಮಾಡಲ್‌ಗಳು) 3G ನೆಟ್‌ವರ್ಕ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಆಗಿದೆ. ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

EDGE ಸ್ಟೇಟಸ್ ಐಕಾನ್.

EDGE.iPad (Wi-Fi + Cellular ಮಾಡಲ್‌ಗಳು) EDGE ನೆಟ್‌ವರ್ಕ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಆಗಿದೆ. ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

GPRS ಸ್ಟೇಟಸ್ ಐಕಾನ್.

GPRS.iPad (Wi-Fi + Cellular ಮಾಡಲ್‌ಗಳು) GPRS ನೆಟ್‌ವರ್ಕ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಆಗಿದೆ. ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

ವೈಯಕ್ತಿಕ ಹಾಟ್‌ಸ್ಪಾಟ್ ಸ್ಟೇಟಸ್ ಐಕಾನ್.

ವೈಯಕ್ತಿಕ ಹಾಟ್‌ಸ್ಪಾಟ್ ಕನೆಕ್ಷನ್. iPad ಅನ್ನು ಮತ್ತೊಂದು ಸಾಧನದ ವೈಯಕ್ತಿಕ ಹಾಟ್‌ಸ್ಪಾಟ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಮಾಡಲಾಗಿದೆ. ವೈಯಕ್ತಿಕ ಹಾಟ್‌ಸ್ಪಾಟ್‌ಗೆ ಸೇರಿಕೊಳ್ಳಿ ಎಂಬುದನ್ನು ನೋಡಿ.

VPN ಸ್ಟೇಟಸ್ ಐಕಾನ್.

VPN. iPad ಅನ್ನು VPN ಬಳಸಿ ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಲಾಗಿದೆ.

ನ್ಯಾವಿಗೇಷನ್ ಇಂಡಿಕೇಟರ್ ಐಕಾನ್.

ನ್ಯಾವಿಗೇಷನ್. iPad ಟರ್ನ್-ಬೈ-ಟರ್ನ್ ನಿರ್ದೇಶನಗಳನ್ನು ಒದಗಿಸುತ್ತಿದೆ. ಡ್ರೈವಿಂಗ್ ನಿರ್ದೇಶನಗಳನ್ನು ಪಡೆಯಿರಿ ಎಂಬುದನ್ನು ನೋಡಿ.

ವೈಯಕ್ತಿಕ ಹಾಟ್‌ಸ್ಪಾಟ್ ಇಂಡಿಕೇಟರ್ ಐಕಾನ್.

ವೈಯಕ್ತಿಕ ಹಾಟ್‌ಸ್ಪಾಟ್. iPad ವೈಯಕ್ತಿಕ ಹಾಟ್‌ಸ್ಪಾಟ್ ಅನ್ನು ಒದಗಿಸುತ್ತಿದೆ. ವೈಯಕ್ತಿಕ ಹಾಟ್‌ಸ್ಪಾಟ್ ಮೂಲಕ ನಿಮ್ಮ ಇಂಟರ್ನೆಟ್ ಕನೆಕ್ಷನ್ ಹಂಚಿಕೊಳ್ಳಿ ಎಂಬುದನ್ನು ನೋಡಿ.

ಕರೆ ಇಂಡಿಕೇಟರ್ ಐಕಾನ್.

ಫೋನ್ ಕರೆ. iPad ಫೋನ್‌ ಕರೆಯಲ್ಲಿದೆ. ನಿಮ್ಮ iPadನಲ್ಲಿ ಫೋನ್ ಕರೆಗಳು ಮತ್ತು ಪಠ್ಯ ಸಂದೇಶಗಳನ್ನು ಅನುಮತಿಸಲು iPhone ಅನ್ನು ಬಳಸುವುದು ಅನ್ನು ನೋಡಿ.

FaceTime ಇಂಡಿಕೇಟರ್ ಐಕಾನ್.

FaceTime. iPad FaceTime ಕರೆಯಲ್ಲಿದೆ. FaceTime ಕರೆಗಳನ್ನು ಮಾಡಿ ಎಂಬುದನ್ನು ನೋಡಿ.

ರೆಕಾರ್ಡಿಂಗ್ ಇಂಡಿಕೇಟರ್ ಐಕಾನ್.

ಸ್ಕ್ರೀನ್ ರೆಕಾರ್ಡಿಂಗ್. iPad ನಿಮ್ಮ ಸ್ಕ್ರೀನ್ ಅನ್ನು ರೆಕಾರ್ಡ್ ಮಾಡುತ್ತಿದೆ. ಸ್ಕ್ರೀನ್ ರೆಕಾರ್ಡಿಂಗ್ ತೆಗೆದುಕೊಳ್ಳಿ ಎಂಬುದನ್ನು ನೋಡಿ.

ಕ್ಯಾಮರಾ ಬಳಕೆಯಲ್ಲಿದೆ ಎಂಬ ಐಕಾನ್.

ಬಳಕೆಯಲ್ಲಿರುವ ಕ್ಯಾಮರಾ. ಆ್ಯಪ್‌ವೊಂದು ನಿಮ್ಮ ಕ್ಯಾಮರಾವನ್ನು ಬಳಸುತ್ತಿದೆ. ನಿಮ್ಮ iPadನಲ್ಲಿ ಯಾವ ಆ್ಯಪ್‌ಗಳು ಕ್ಯಾಮರಾ ಮತ್ತು ಮೈಕ್ರೋಫೋನ್‌ಗೆ ಆ್ಯಕ್ಸೆಸ್ ಹೊಂದಿವೆ ಎಂಬುದನ್ನು ನಿಯಂತ್ರಿಸಿ ಅನ್ನು ನೋಡಿ.

ಮೈಕ್ರೋಫೋನ್ ಬಳಕೆಯಲ್ಲಿದೆ ಎಂಬ ಐಕಾನ್.

ಮೈಕ್ರೋಫೋನ್ ಬಳಕೆಯಲ್ಲಿದೆ. ಆ್ಯಪ್‌ವೊಂದು ನಿಮ್ಮ ಮೈಕ್ರೋಫೋನ್ ಅನ್ನು ಬಳಸುತ್ತಿದೆ. ನಿಮ್ಮ iPadನಲ್ಲಿ ಯಾವ ಆ್ಯಪ್‌ಗಳು ಕ್ಯಾಮರಾ ಮತ್ತು ಮೈಕ್ರೋಫೋನ್‌ಗೆ ಆ್ಯಕ್ಸೆಸ್ ಹೊಂದಿವೆ ಎಂಬುದನ್ನು ನಿಯಂತ್ರಿಸಿ ಅನ್ನು ನೋಡಿ.

ಸಿಂಕ್ ಆಗುತ್ತಿರುವ ಸ್ಟೇಟಸ್ ಐಕಾನ್.

ಸಿಂಕ್ ಆಗುತ್ತಿದೆ. iPad ನಿಮ್ಮ ಕಂಪ್ಯೂಟರ್‌ನೊಂದಿಗೆ ಸಿಂಕ್ ಆಗುತ್ತಿದೆ. ನಿಮ್ಮ iPad ಅನ್ನು ಇತರ ಸಾಧನಗಳೊಂದಿಗೆ ಸಿಂಕ್ ಮಾಡುವುದು ಅನ್ನು ನೋಡಿ.

ನೆಟ್‌ವರ್ಕ್ ಚಟುವಟಿಕೆ ಸ್ಟೇಟಸ್ ಐಕಾನ್.

ನೆಟ್‌ವರ್ಕ್ ಚಟುವಟಿಕೆ. ನೆಟವರ್ಕ್ ಅಥವಾ ಇತರ ಚಟುವಟಿಕೆಯಿದೆ. ಕೆಲವು ಥರ್ಡ್-ಪಾರ್ಟಿ ಆ್ಯಪ್‌ಗಳು ಆ್ಯಪ್ ಚಟುವಟಿಕೆಯನ್ನು ತೋರಿಸಲು ಈ ಐಕಾನ್ ಅನ್ನು ಬಳಸುತ್ತವೆ. ಇಂಟರ್ನೆಟ್‌ಗೆ ಕನೆಕ್ಟ್ ಮಾಡಿ ಎಂಬುದನ್ನು ನೋಡಿ

ಲಾಕ್ ಸ್ಟೇಟಸ್ ಐಕಾನ್.

ಲಾಕ್. iPad ಲಾಕ್ ಆಗಿದೆ. iPad ಅನ್ನು ಎಚ್ಚರಗೊಳಿಸಿ, ಅನ್‌ಲಾಕ್ ಮಾಡಿ ಮತ್ತು ಲಾಕ್ ಮಾಡಿ ಅನ್ನು ನೋಡಿ.

ಅಡಚಣೆ ಮಾಡಬೇಡಿ ಸ್ಟೇಟಸ್ ಐಕಾನ್.

ಅಡಚಣೆ ಮಾಡಬೇಡಿ. ಅಡಚಣೆ ಮಾಡಬೇಡಿ ಎಂಬುದನ್ನು ಆನ್ ಮಾಡಲಾಗಿದೆ. ಫೋಕಸ್ ಅನ್ನು ಆನ್ ಮಾಡಿ ಅಥವಾ ನಿಗದಿಪಡಿಸಿ ಎಂಬುದನ್ನು ನೋಡಿ.

ಓರಿಯೆಂಟೇಶನ್ ಲಾಕ್ ಸ್ಟೇಟಸ್ ಐಕಾನ್.

ಓರಿಯೆಂಟೇಶನ್ ಲಾಕ್. ಸ್ಕ್ರೀನ್ ಓರಿಯೆಂಟೇಶನ್ ಅನ್ನು ಲಾಕ್ ಮಾಡಲಾಗಿದೆ. ಸ್ಕ್ರೀನ್ ಓರಿಯೆಂಟೇಶನ್ ಅನ್ನು ಬದಲಾಯಿಸಿ ಅಥವಾ ಲಾಕ್ ಮಾಡಿ ಎಂಬುದನ್ನು ನೋಡಿ.

ಸ್ಥಳ ಸೇವೆಗಳ ಸ್ಟೇಟಸ್ ಐಕಾನ್.

ಸ್ಥಳ ಸೇವೆಗಳು. ಆ್ಯಪ್‌ವೊಂದು ಸ್ಥಳ ಸೇವೆಗಳನ್ನು ಬಳಸುತ್ತಿದೆ. ನಿಮ್ಮ iPadನ ಸ್ಥಳವನ್ನು ಯಾವ ಆ್ಯಪ್‌ಗಳು ಬಳಸಬಹುದು ಎಂಬುದನ್ನು ನಿಯಂತ್ರಿಸಿ ಅನ್ನು ನೋಡಿ.

ಅಲಾರಂ ಸ್ಟೇಟಸ್ ಐಕಾನ್.

ಅಲಾರಂ. ಅಲಾರಂ ಅನ್ನು ಸೆಟ್ ಮಾಡಲಾಗಿದೆ. ಅಲಾರಂ ಅನ್ನು ಸೆಟ್ ಮಾಡಿ ಎಂಬುದನ್ನು ನೋಡಿ.

ಹೆಡ್‌ಫೋನ್‌ಗಳು ಕನೆಕ್ಟ್ ಆಗಿವೆ ಎಂಬ ಸ್ಟೇಟಸ್ ಐಕಾನ್.

ಹೆಡ್‌ಫೋನ್‌ಗಳು ಕನೆಕ್ಟ್ ಆಗಿವೆ. iPad ಅನ್ನು Bluetooth ವ್ಯಾಪ್ತಿಯೊಳಗೆ ಆನ್ ಮಾಡಲಾಗಿರುವ Bluetooth® ಹೆಡ್‌ಫೋನ್‌ಗಳೊಂದಿಗೆ ಪೇರ್ ಮಾಡಲಾಗಿದೆ. Bluetooth ಹೆಡ್‌ಫೋನ್‌ಗಳನ್ನು ಸೆಟಪ್ ಮಾಡಿ ಮತ್ತು ಆಲಿಸಿ ಎಂಬುದನ್ನು ನೋಡಿ.

ಬ್ಯಾಟರಿ ಸ್ಟೇಟಸ್ ಐಕಾನ್.

ಬ್ಯಾಟರಿ. iPad ಬ್ಯಾಟರಿ ಮಟ್ಟವನ್ನು ತೋರಿಸುತ್ತದೆ. ಐಕಾನ್ ಹಳದಿ ಬಣ್ಣದಲ್ಲಿರುವಾಗ, ಕಡಿಮೆ ಪವರ್ ಮೋಡ್ ಆನ್ ಆಗಿರುತ್ತದೆ. iPad ಬ್ಯಾಟರಿಯ ಪ್ರಮಾಣವನ್ನು ತೋರಿಸಿ ಅನ್ನು ನೋಡಿ.

ಬ್ಯಾಟರಿ ಚಾರ್ಜಿಂಗ್ ಐಕಾನ್.

ಬ್ಯಾಟರಿ ಚಾರ್ಜಿಂಗ್. iPad ಬ್ಯಾಟರಿ ಚಾರ್ಜ್ ಆಗುತ್ತಿದೆ. ಐಕಾನ್ ಬೂದು ಬಣ್ಣದಲ್ಲಿದ್ದಾಗ, ಚಾರ್ಜಿಂಗ್ ಅನ್ನು ವಿರಾಮಗೊಂಡಿದೆ ಎಂದರ್ಥ. ಬ್ಯಾಟರಿ ಚಾರ್ಜ್ ಮಾಡಿ ಎಂಬುದನ್ನು ನೋಡಿ.

Bluetooth ಬ್ಯಾಟರಿ ಸ್ಟೇಟಸ್ ಐಕಾನ್.

Bluetooth ಬ್ಯಾಟರಿ. ಬೆಂಬಲಿತ ಪೇರ್ ಮಾಡಲಾಗಿರುವ Bluetooth ಸಾಧನದ ಬ್ಯಾಟರಿ ಮಟ್ಟವನ್ನು ತೋರಿಸುತ್ತದೆ. Bluetooth ಆ್ಯಕ್ಸೆಸರಿಗಳಿಗೆ ಕನೆಕ್ಟ್ ಮಾಡಿ ಎಂಬುದನ್ನು ನೋಡಿ.

AirPlay ಸ್ಟೇಟಸ್ ಐಕಾನ್.

AirPlay. AirPlay ಆನ್ ಆಗಿದೆ. ವೀಡಿಯೊಗಳು ಮತ್ತು ಫೋಟೋಗಳನ್ನು ಸ್ಟ್ರೀಮ್ ಮಾಡಿ ಎಂಬುದನ್ನು ನೋಡಿ.

ವಾಯ್ಸ್ ಕಂಟ್ರೋಲ್ ಐಕಾನ್.

ವಾಯ್ಸ್ ಕಂಟ್ರೋಲ್. ಸೆಟ್ಟಿಂಗ್ಸ್ >ಆಕ್ಸೆಸಬಿಲಿಟಿ ಎಂಬುದರಲ್ಲಿ ವಾಯ್ಸ್ ಕಂಟ್ರೋಲ್ ಅನ್ನು ಆನ್ ಮಾಡಲಾಗಿದೆ ಮತ್ತು ನೀವು iPadನೊಂದಿಗೆ ಸಂವಹನ ನಡೆಸಲು ನಿಮ್ಮ ಧ್ವನಿಯನ್ನು ಬಳಸಬಹುದು.

RTT ಸ್ಟೇಟಸ್ ಐಕಾನ್.

RTT. RTT ಆನ್ ಆಗಿದೆ. RTTಯನ್ನು ಸೆಟಪ್ ಮಾಡಿ ಮತ್ತು ಬಳಸಿ ಎಂಬುದನ್ನು ನೋಡಿ.