ಆ್ಯಪ್ Exposé
ಆ್ಯಪ್ Exposé ಎಂಬುದು ನಿರ್ದಿಷ್ಟ ಆ್ಯಪ್‌ನ ನಿಮ್ಮ ಎಲ್ಲಾ ತೆರೆದ ವಿಂಡೋಗಳ ಡಿಸ್‌ಪ್ಲೇ ಆಗಿದೆ.
ಆ್ಯಪ್ Exposé ಅನ್ನು ತೆರೆಯಲು, ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:
Exposé ಅನ್ನು ತೆರೆದು, ಯಾವುದಾದರೂ ಒಂದು ವಿಂಡೋದಲ್ಲಿ ಆ್ಯಪ್ ಐಕಾನ್ ಅನ್ನು ಟ್ಯಾಪ್ ಮಾಡಿ.
ಹೋಮ್ ಸ್ಕ್ರೀನ್, Dock ಅಥವಾ ಆ್ಯಪ್ ಲೈಬ್ರರಿಯಲ್ಲಿರುವ ಆ್ಯಪ್‌ನ ಐಕಾನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಎಲ್ಲಾ ವಿಂಡೋಗಳನ್ನು ತೋರಿಸಿ ಎಂಬುದನ್ನು ಟ್ಯಾಪ್ ಮಾಡಿ.
ತೆರೆದ ಆ್ಯಪ್‌ನಲ್ಲಿ, ಮೆನು ಬಾರ್ ಅನ್ನು ತೆರೆಯಿರಿ, ವಿಂಡೋ ಮೆನುವನ್ನು ಟ್ಯಾಪ್ ಮಾಡಿ, ನಂತರ ಎಲ್ಲಾ ವಿಂಡೋಗಳನ್ನು ತೋರಿಸಿ ಎಂಬುದನ್ನು ಆಯ್ಕೆಮಾಡಿ.
ಹೆಚ್ಚಿನ ಆ್ಯಪ್‌ಗಳನ್ನು ನೋಡಲು, ಬಲಕ್ಕೆ ಸ್ವೈಪ್ ಮಾಡಿ. ಆ್ಯಪ್ Exposé ಅನ್ನು ಮುಚ್ಚಲು, ಸ್ಕ್ರೀನ್ ಅನ್ನು ಟ್ಯಾಪ್ ಮಾಡಿ ಅಥವಾ ಹೋಮ್ ಬಟನ್ ಅನ್ನು ಒತ್ತಿ (ಹೋಮ್ ಬಟನ್ ಹೊಂದಿರುವ iPadನಲ್ಲಿ).