iPad ಅನ್ನು ಆನ್ ಅಥವಾ ಆಫ್ ಮಾಡಿ
iPad ಅನ್ನು ಆನ್ ಮಾಡಲು ಟಾಪ್ ಬಟನ್ ಬಳಸಿ. iPad ಅನ್ನು ಆಫ್ ಮಾಡಲು ನೀವು ಟಾಪ್ ಬಟನ್ (ಕೆಲವು ಮಾಡಲ್‌ಗಳಲ್ಲಿ ವಾಲ್ಯೂಮ್ ಬಟನ್‌ನ ಜೊತೆಗೆ) ಅಥವಾ ಸೆಟ್ಟಿಂಗ್ಸ್
ಬಳಸಬಹುದು.
ನೀವು ನಿರೀಕ್ಷಿಸಿದ ರೀತಿಯಲ್ಲಿ ನಿಮ್ಮ iPad ಕಾರ್ಯನಿರ್ವಹಿಸದಿದ್ದರೆ, ನೀವು ಅದನ್ನು ಆಫ್ ಮಾಡಿ ಮತ್ತೆ ಆನ್ ಮಾಡುವ ಮೂಲಕ ಅದನ್ನು ಮರುಪ್ರಾರಂಭಿಸಬಹುದು. ಅದನ್ನು ಆಫ್ ಮತ್ತು ಆನ್ ಮಾಡುವುದರಿಂದ ಸಮಸ್ಯೆಯು ಪರಿಹಾರವಾಗದಿದ್ದರೆ, ಅದನ್ನು ಬಲವಂತವಾಗಿ ಮರುಪ್ರಾರಂಭಿಸಲು ಪ್ರಯತ್ನಿಸಿ.
iPad ಅನ್ನು ಆನ್ ಅಥವಾ ಆಫ್ ಮಾಡಿ (ಟಾಪ್ ಬಟನ್‌ನಲ್ಲಿ Face ID ಅಥವಾ Touch ID ಇರುವ ಮಾಡಲ್‌ಗಳು)
ನಿಮ್ಮ iPadನಲ್ಲಿ ಹೋಮ್ ಬಟನ್ ಇಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ:
iPad ಅನ್ನು ಆನ್ ಮಾಡಿ: Apple ಲೋಗೋ ಕಾಣಿಸುವವರೆಗೆ ಟಾಪ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
iPad ಅನ್ನು ಆಫ್ ಮಾಡಿ: ಏಕಕಾಲದಲ್ಲಿ ಟಾಪ್ ಬಟನ್ ಮತ್ತು ವಾಲ್ಯೂಮ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಿ.

iPad ಅನ್ನು ಆನ್ ಅಥವಾ ಆಫ್ ಮಾಡಿ (ಹೋಮ್ ಬಟನ್ ಹೊಂದಿರುವ ಮಾಡಲ್‌ಗಳು)
iPad ಅನ್ನು ಆನ್ ಮಾಡಿ: Apple ಲೋಗೋ ಕಾಣಿಸುವವರೆಗೆ ಟಾಪ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
iPad ಅನ್ನು ಆಫ್ ಮಾಡಿ: ಟಾಪ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಿ.

ಯಾವುದೇ ಮಾಡಲ್ ಅನ್ನು ಆಫ್ ಮಾಡಲು, ನೀವು ಸೆಟ್ಟಿಂಗ್ಸ್ ಆ್ಯಪ್
> ಸಾಮಾನ್ಯ > ಶಟ್ ಡೌನ್ ಎಂಬಲ್ಲಿಗೆ ಹೋಗಿ, ನಂತರ ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಬಹುದು.