AutoMix

AutoMix ಡಿಜೆಯಂತೆ ಹಾಡುಗಳ ನಡುವೆ ತಡೆರಹಿತವಾಗಿ ಟ್ರಾನ್ಸಿಷನ್ ಮಾಡುತ್ತದೆ. iOS 26, iPadOS 26, macOS Tahoe, visionOS 26 ಅಥವಾ ನಂತರದ ಆವೃತ್ತಿಗಳನ್ನು ಹೊಂದಿರುವ iPhone, iPad, Apple silicon ಬಳಸುತ್ತಿರುವ Mac ಮತ್ತು Apple Vision Proನಲ್ಲಿನ Apple Music ಕ್ಯಾಟಲಾಗ್‌ನ ಸಂಗೀತದೊಂದಿಗೆ AutoMix ಕೆಲಸ ಮಾಡುತ್ತದೆ.

AutoMix, ಸಂಗೀತವನ್ನು ಆಧರಿಸಿ ಅತ್ಯುತ್ತಮವಾದ ಟ್ರಾನ್ಸಿಷನ್ ಅನ್ನು ಆಯ್ಕೆಮಾಡುತ್ತದೆ. ಉದಾಹರಣೆಗೆ, AutoMix ಫೀಚರ್ ಟ್ರ್ಯಾಕ್‌ನ ಆರಂಭದಲ್ಲಿ ಮತ್ತು ಕೊನೆಯಲ್ಲಿ ನಿಶ್ಯಬ್ಧತೆಯನ್ನು ತೆಗೆದುಹಾಕಬಹುದು ಅಥವಾ ಅದು ಸಂಕೀರ್ಣವಾದ ಟ್ರಾನ್ಸಿಷನ್ ಅನ್ನು ಮಾಡುವ ಬದಲು ಹೆಚ್ಚು ಸೂಕ್ತವೆನಿಸಿದಾಗ ಸರಳ ಕ್ರಾಸ್‌ಫೇಡ್ ಅನ್ನು ಮಾಡಬಹುದು.

ಗಮನಿಸಿ: ಆಲ್ಬಮ್‌ಗಳು ಮತ್ತು ಕೆಲವು ಪ್ರಕಾರಗಳು ಯಾವುದೇ ಟ್ರಾನ್ಸಿಷನ್ ಇಲ್ಲದೆ ಪ್ಲೇ ಆಗುತ್ತವೆ.

AutoMix ಡಿಫಾಲ್ಟ್ ಆಗಿ ಆನ್ ಆಗಿದೆ. ನೀವು ಅದನ್ನು ಸರದಿ ಅಥವಾ ಸೆಟ್ಟಿಂಗ್ಸ್‌ನಲ್ಲಿ ಆಫ್ ಮಾಡಬಹುದು.