iPadನಲ್ಲಿ ಹಲವು ಕ್ಯಾಲೆಂಡರ್‌ಗಳನ್ನು ಸೆಟಪ್ ಮಾಡಿ

ಕ್ಯಾಲೆಂಡರ್ ಆ್ಯಪ್‌ನಲ್ಲಿ, ವಿವಿಧ ಪ್ರಕಾರಗಳ ಇವೆಂಟ್‌ಗಳನ್ನು ಟ್ರ್ಯಾಕ್ ಮಾಡಲು ನೀವು ಒಂದಕ್ಕಿಂತ ಹೆಚ್ಚು ಕ್ಯಾಲೆಂಡರ್‌ಗಳನ್ನು ಸೆಟಪ್ ಮಾಡಬಹುದು. ನಿಮ್ಮ ಎಲ್ಲಾ ಇವೆಂಟ್‌ಗಳು ಮತ್ತು ಅಪಾಯಿಂಟ್‌ಮೆಂಟ್‌ಗಳನ್ನು ನೀವು ಒಂದೇ ಕ್ಯಾಲೆಂಡರ್‌ನಲ್ಲಿ ಟ್ರ್ಯಾಕ್ ಮಾಡಬಹುದು. ಆದರೆ ಹೆಚ್ಚುವರಿ ಕ್ಯಾಲೆಂಡರ್‌ಗಳನ್ನು ಸೆಟಪ್ ಮಾಡುವುದು ಸುಲಭ ಮತ್ತು ವ್ಯವಸ್ಥಿತವಾಗಿರಲು ಉತ್ತಮ ಮಾರ್ಗವಾಗಿದೆ.

ಯಾವ ಕ್ಯಾಲೆಂಡರ್‌ಗಳು ಸಕ್ರಿಯವಾಗಿವೆ ಎಂಬುದನ್ನು ಸೂಚಿಸುವ ಚೆಕ್‌ಮಾರ್ಕ್‌ಗಳನ್ನು ಹೊಂದಿರುವ ಕ್ಯಾಲೆಂಡರ್ ಆ್ಯಪ್‌ನ ಪಟ್ಟಿ. ಪಟ್ಟಿಯನ್ನು ಮುಚ್ಚಲು ಬಳಸುವ ಮುಗಿದಿದೆ ಬಟನ್ ಮೇಲಿನ ಬಲ ಮೂಲೆಯಲ್ಲಿದೆ. ಕ್ಯಾಲೆಂಡರ್ ಆ್ಯಪ್‌ ಸೇರಿಸಿ ಬಟನ್ ಕೆಳಗಿನ ಎಡ ಮೂಲೆಯಲ್ಲಿದೆ.

ಕ್ಯಾಲೆಂಡರ್ ಅನ್ನು ಸೆಟಪ್ ಮಾಡಿ

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ಮೇಲಿನ ಎಡಭಾಗದಲ್ಲಿರುವ ಕ್ಯಾಲೆಂಡರ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್‌‌ನ ಕೆಳಭಾಗದಲ್ಲಿರುವ ಕ್ಯಾಲೆಂಡರ್ ಅನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • iCloud ಕ್ಯಾಲೆಂಡರ್ ಅನ್ನು ರಚಿಸಿ: ಕ್ಯಾಲೆಂಡರ್ ಅನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ಕ್ಯಾಲೆಂಡರ್‌ಗೆ ಹೆಸರನ್ನು ನಮೂದಿಸಿ, ನಂತರ ಅದಕ್ಕಾಗಿ ಬಣ್ಣವನ್ನು ಆರಿಸಿ.

    • ಬಾಹ್ಯ, ಓದಲು ಮಾತ್ರ ಕ್ಯಾಲೆಂಡರ್‌ಗೆ ಸಬ್‌ಸ್ಕ್ರೈಬ್ ಮಾಡಿ: ಸಬ್‌ಸ್ಕ್ರಿಪ್ಶನ್ ಕ್ಯಾಲೆಂಡರ್ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನೀವು ಸಬ್‌ಸ್ಕ್ರೈಬ್ ಮಾಡಲು ಬಯಸುವ .ics ಫೈಲ್‌ನ URL ಅನ್ನು ನಮೂದಿಸಿ (ಮತ್ತು ಇತರ ಯಾವುದೇ ಅವಶ್ಯಕ ಸರ್ವರ್ ಮಾಹಿತಿಯನ್ನು), ನಂತರ ಹುಡುಕಿ ಎಂಬುದನ್ನು ಟ್ಯಾಪ್ ಮಾಡಿ.

    • ರಜಾದಿನದ ಕ್ಯಾಲೆಂಡರ್ ಸೇರಿಸಿ: ರಜಾದಿನದ ಕ್ಯಾಲೆಂಡರ್ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನೀವು ಸಬ್‌ಸ್ಕ್ರೈಬ್ ಮಾಡಲು ಬಯಸುವ ರಜಾದಿನದ ಕ್ಯಾಲೆಂಡರ್ ಅನ್ನು ಟ್ಯಾಪ್ ಮಾಡಿ.

      ರಜಾದಿನದ ಕ್ಯಾಲೆಂಡರ್ ಅನ್ನು ಬಳಸಿ ಎಂಬುದನ್ನು ನೋಡಿ.

ನೀವು iCalender (.ics) ಕ್ಯಾಲೆಂಡರ್‌ನ ಲಿಂಕ್ ಅನ್ನು ಟ್ಯಾಪ್ ಮಾಡುವ ಮೂಲಕ ಕೂಡ ನೀವು ಅದಕ್ಕೆ ಸಬ್‌ಸ್ಕ್ರೈಬ್ ಮಾಡಬಹುದು.

ಕ್ಯಾಲೆಂಡರ್‌ನಿಂದ ಅನ್‌ಸಬ್‌ಸ್ಕ್ರೈಬ್ ಮಾಡಿ

ನೀವು ಸಬ್‌ಸ್ಕ್ರಬ್ ಮಾಡಿಕೊಂಡಿರುವ ಕ್ಯಾಲೆಂಡರ್‌ನಿಂದ ನೀವು ಅನ್‌ಸಬ್‌ಸ್ಕ್ರೈಬ್ ಮಾಡಬಹುದು. ನೀವು ಅನ್‌ಸಬ್‌ಸ್ಕ್ರೈಬ್ ಮಾಡಿದಾಗ, ನೀವು ಕ್ಯಾಲೆಂಡರ್ ಅನ್ನು ಜಂಕ್ ಎಂದು ಸಹ ವರದಿ ಮಾಡಬಹುದು.

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ಮೇಲಿನ ಎಡಭಾಗದಲ್ಲಿರುವ ಕ್ಯಾಲೆಂಡರ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನೀವು ತೆಗೆದುಹಾಕಲು ಬಯಸುವ ಕ್ಯಾಲೆಂಡರ್‌ನ ಪಕ್ಕದಲ್ಲಿರುವ ಮಾಹಿತಿ ಬಟನ್ ಅನ್ನು ಟ್ಯಾಪ್ ಮಾಡಿ.

  3. ಅನ್‌ಸಬ್‌ಸ್ಕ್ರೈಬ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ “ಅನ್‌ಸಬ್‌ಸ್ಕ್ರೈಬ್ ಮಾಡಿ” ಅಥವಾ “ಅನ್‌ಸಬ್‌ಸ್ಕ್ರೈಬ್ ಮಾಡಿ ಮತ್ತು ಜಂಕ್ ಎಂದು ವರದಿ ಮಾಡಿ” ಎಂಬುದನ್ನು ಟ್ಯಾಪ್ ಮಾಡಿ.

    ಗಮನಿಸಿ: ನೀವು “ಅನ್‌ಸಬ್‌ಸ್ಕ್ರೈಬ್ ಮಾಡಿ ಮತ್ತು ಜಂಕ್ ಎಂದು ವರದಿ ಮಾಡಿ” ಎಂಬುದನ್ನು ಟ್ಯಾಪ್ ಮಾಡಿದಾಗ, ಕ್ಯಾಲೆಂಡರ್ ಅನ್ನು ಸಂಶಯಾಸ್ಪದ ಜಂಕ್ ಸಬ್‌ಸ್ಕ್ರಿಪ್ಶನ್ ಎಂದು Appleಗೆ ವರದಿ ಮಾಡಲಾಗುತ್ತದೆ.

ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕ್ಯಾಲೆಂಡರ್‌ಗಳನ್ನು ನೋಡಿ

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ಅನೇಕ ಕ್ಯಾಲೆಂಡರ್‌ಗಳನ್ನು ನೋಡಲು, ಕ್ಯಾಲೆಂಡರ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ನೀವು ವೀಕ್ಷಿಸಲು ಬಯಸುವ ಕ್ಯಾಲೆಂಡರ್‌ಗಳನ್ನು ಆಯ್ಕೆಮಾಡಿ.

    • ನಿಮ್ಮ ಇವೆಂಟ್‌ಗಳೊಂದಿಗೆ ರಾಷ್ಟ್ರೀಯ ರಜಾದಿನಗಳನ್ನು ಸೇರಿಸಲು US ರಜಾದಿನಗಳು ಎಂಬುದನ್ನು ಟ್ಯಾಪ್ ಮಾಡಿ.

    • ನಿಮ್ಮ ಇವೆಂಟ್‌ಗಳ ಜೊತೆಗೆ ಸಂಪರ್ಕ ಆ್ಯಪ್‌ನಿಂದ ಜನ್ಮದಿನಗಳನ್ನು ಸೇರಿಸಲು ಜನ್ಮದಿನಗಳು ಎಂಬುದನ್ನು ಟ್ಯಾಪ್ ಮಾಡಿ.

ಕ್ಯಾಲೆಂಡರ್ ಇವೆಂಟ್ ಅಲರ್ಟ್‌ಗಳನ್ನು ಆನ್ ಮಾಡಿ

ನೀವು ರಚಿಸುವ ಅಥವಾ ಸಬ್‌ಸ್ಕ್ರೈಬ್ ಮಾಡುವ ಕ್ಯಾಲೆಂಡರ್‌ಗಳಿಗಾಗಿ ನೀವು ಇವೆಂಟ್ ನೋಟಿಫಿಕೇಷನ್‌ಗಳನ್ನು ಆನ್ ಮಾಡಬಹುದು.

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ಮೇಲಿನ ಎಡಭಾಗದಲ್ಲಿರುವ ಕ್ಯಾಲೆಂಡರ್ ಬಟನ್ ಅನ್ನು ಟ್ಯಾಪ್ ಮಾಡಿ.

  3. ಕ್ಯಾಲೆಂಡರ್‌ನ ಪಕ್ಕದಲ್ಲಿರುವ ಮಾಹಿತಿ ಬಟನ್ ಅನ್ನು ಟ್ಯಾಪ್ ಮಾಡಿ.

  4. ಇವೆಂಟ್ ಅಲರ್ಟ್‌ಗಳನ್ನು ಆನ್ ಅಥವಾ ಆಫ್ ಮಾಡಿ.

  5. ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ.

ಕ್ಯಾಲೆಂಡರ್‌ನ ಬಣ್ಣವನ್ನು ಬದಲಾಯಿಸಿ

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ಮೇಲಿನ ಎಡಭಾಗದಲ್ಲಿರುವ ಕ್ಯಾಲೆಂಡರ್ ಬಟನ್ ಅನ್ನು ಟ್ಯಾಪ್ ಮಾಡಿ.

  3. ಕ್ಯಾಲೆಂಡರ್ ಪಕ್ಕದಲ್ಲಿರುವ ಮಾಹಿತಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಬಣ್ಣವನ್ನು ಆರಿಸಿ.

  4. ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ.

Googleನಂತಹ ಕೆಲವು ಕ್ಯಾಲೆಂಡರ್ ಖಾತೆಗಳಿಗಾಗಿ, ಬಣ್ಣವನ್ನು ಸರ್ವರ್ ಸೆಟ್ ಮಾಡುತ್ತದೆ.

ಇವೆಂಟ್ ಅನ್ನು ಮತ್ತೊಂದು ಕ್ಯಾಲೆಂಡರ್‌ಗೆ ಮೂವ್ ಮಾಡಿ

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ಇವೆಂಟ್ ಅನ್ನು ಟ್ಯಾಪ್ ಮಾಡಿ, ಕ್ಯಾಲೆಂಡರ್ ಆ್ಯಪ್ ಅನ್ನು ಟ್ಯಾಪ್ ಮಾಡಿ, ನಂತರ ಕ್ಯಾಲೆಂಡರ್‌ಗೆ ಇವೆಂಟ್ ಅನ್ನು ಮೂವ್ ಮಾಡಲು ಬಯಸುತ್ತೀರೋ ಅದನ್ನು ಆಯ್ಕೆಮಾಡಿ.